ಪರಿವರ್ತನೆ.
~~~~~~~~~~
~~~~~~~~~~
ಆ ಮಿತ್ರರಿಬ್ಬರೂ ಚಿಕ್ಕಂದಿನಿಂದಲೂ ಪ್ರಶ್ನಿಸದೇ ಯಾವುದನ್ನೂ ಒಪ್ಪುತ್ತಿರಲಿಲ್ಲ.ಎಲ್ಲವನ್ನೂ
ವೈಜ್ಞಾನಿಕ ಮನೋಭಾವನೆಯಿಂದ ವಿಶ್ಲೇಷಿಸದೇ ತೀರ್ಮಾನಕ್ಕೆ ಬರುತ್ತಿರಲಿಲ್ಲ.ಕಾಲ ಸರಿಯಿತು. ಪ್ರತಿಭೆಗೆ
ತಕ್ಕಂತೆ ಒಳ್ಳೆಯ ಕಡೆ ಕೆಲಸ ಪಡೆದು ಮದುವೆಯೂ ಆದರು.ಫೋನಿನಲ್ಲಿ,ಎದುರು ಸಿಕ್ಕಾಗಲೂ ತಮ್ಮ ಸ್ವಭಾವ
ಮೀರಿ ಹೋದವರಲ್ಲ!
ಒಂದು ಭಾನುವಾರದ ದಿನ
ಅವರಲ್ಲಿ ಒಬ್ಬನಿಗೆ ತನ್ನ ಗೆಳೆಯನ ಮಗುವನ್ನು ನೋಡಿ ಬರಬೇಕೆನಿಸಿ ಹೋದ.ಮನೆಯಲ್ಲಿಯೇ ಇದ್ದ ಗೆಳೆಯ
ನಿದ್ರೆಗೆ ತೊಡಗಿದ್ದ ಮಗುವನ್ನು ತೊಟ್ಟಿಲಲ್ಲಿ ಹಾಕಿ ಒಂದೇ ಸಮನೆ ಬಿಟ್ಟೂ ಬಿಡದೆ ಹಾಡು ಹೇಳುತ್ತಾ
ತೂಗುತ್ತಲಿದ್ದ.
ಮಗುವನ್ನು ನೋಡಲು
ಬಂದಿದ್ದ ಗೆಳೆಯ ಕೇಳಿದ, “ಇಷ್ಟು ಸತತವಾಗಿ ಏಕೆ ತೊಟ್ಟಿಲನ್ನು ತೂಗುತ್ತಿದ್ದೀಯಾ?ಕೈ ನೋವಾಗುವುದಿಲ್ಲವೇ?ಪೆಂಡೂಲಮ್
ನ ಬಗ್ಗೆ ಓದಿಲ್ಲವೇ?ಒಂದು ಸಾರಿ ತೂಗಿದರೆ ಒಂದಿಪ್ಪತ್ತು ಬಾರಿ ತೊಟ್ಟಿಲು ತಾನೇ ತೂಗುತ್ತದೆ.”
ಅದಕ್ಕೆ ಪ್ರತಿಯಾಗಿ ಗೆಳೆಯ ಉತ್ತರ ಕೊಟ್ಟ:”ಈ ಮಗುವಿನ ಮುದ್ದು ಮುಖವನ್ನು
ನೋಡುತ್ತಾ ತೊಟ್ಟಿಲು ತೂಗುತ್ತಿದ್ದರೆ ನಾನು ಮಾಡುತ್ತಿರುವ ಕೆಲಸವೇ ನನಗೆ ನೆನಪಿರುವುದಿಲ್ಲ.ಇನ್ನು
ವೈಜ್ಞಾನಿಕ ತಳಹದಿಯ ವಿಚಾರಗಳು ಎಲ್ಲಿ ಬರಬೇಕು?ಮಗುವಿನ ಮೇಲಿನ ಮಮತೆ ಎಲ್ಲ ಜ್ಞಾನವನ್ನು ಮರೆಸಬಲ್ಲದು.”
ಪರಿಣಿತ.
~~~~~~~~
ರಭಸದಿಂದ ಬಾರ್ ನೊಳಗೆ ನುಗ್ಗಿದ ಪೈಲ್ವಾನ್,ಅಲ್ಲಿ ಕುಳಿತು ಕುಡಿಯುವುದರಲ್ಲಿ
ಮಗ್ನರಾಗಿದ್ದವರನ್ನೆಲ್ಲ ನೋಡಿ,ಒಂದೇ ಸಮನೆ ಗಟ್ಟಿಯಾಗಿ ಅರಚಿದ.ʼನೀವೆಲ್ಲರೂ ಬಾರ್ ಗೆ ದಿನಾ ಬಂದು
ಕಂಠಪೂರ್ತಿ ಕುಡೀತೀರಿ ಅಂತ ಕೇಳಿದ್ದೀನಿ.ನಿಮ್ಮಲ್ಲಿ ಯಾರಾದರೂ ಎರಡು ಫುಲ್ ಬಾಟ್ಲಿ ವಿಸ್ಕಿ ಗಟಗಟ
ಅಂತ ಕುಡಿದರೆ ಸಾವಿರ ರೂಪಾಯಿ ಕೊಡ್ತೀನಿ.ʼಅಂತ ರಾಜಾರೋಷವಾಗಿ ಘೋಷಿಸಿದ.
ಕೂಡಲೇ ಬಾರ್ ನಿಂದ
ತುಂಬಾ ಅವಸರದಲ್ಲಿ ಒಬ್ಬ ವ್ಯಕ್ತಿ ಹೊರಹೋದ.ಅರ್ಧಗಂಟೆ ನಂತರ ಆ ವ್ಯಕ್ತಿ ಮತ್ತೆ ಬಾರ್ ಒಳಗೆ ಬಂದು:ಸಾರ್
ಆ ಪಂದ್ಯದಲ್ಲಿ ಪಾಲ್ಗೊಳ್ಳಲು ಇನ್ನೂ ಅವಕಾಶ ಇದೆಯಾ?!ʼ ಅಂತ ಕೇಳಿದ.
ʼಇದೆʼಎಂದ ಪೈಲ್ವಾನ್.ಸರಿ
ಅಂತ ಒಂದೆಡೆ ಕುಳಿತು ಎರಡು ಬಾಟ್ಲಿ ವಿಸ್ಕಿ ಖಾಲಿ ಮಾಡಿದ.ಬಾರ್ ನಲ್ಲಿ ಕುಳಿತವರೆಲ್ಲ ಅವನನ್ನು
ಮೆಚ್ಚಿ ಎದ್ದು ನಿಂತು ಚಪ್ಪಾಳೆ ತಟ್ಟಿದರು.ಈತನ್ಮಧ್ಯೆ ಪೈಲ್ವಾನ್ ಆಶ್ಚರ್ಯದಿಂದ ಬಂದು ಸಾವಿರ ರೂಪಾಯಿ
ನೋಟನ್ನು ಕೈಗಿತ್ತು,ʼಭೇಷ್. . ಭೇಷ್. .ನಂಗೊಂದು ಸಂದೇಹ.ನೀವು ಹೊರಗ್ಹೋಗಿ ಅರ್ಧ ಗಂಟೆ ಆದ ಮೇಲೆ
ಬಂದ್ರಲ್ಲ!ಎಲ್ಲಿಗೆ ಹೋಗಿದ್ರಿ ಅಂತ ಕೇಳ್ಬೋದಾ?!ʼ
ʼಓ ಅದಾ! ನಾನು ಈ
ಬೀದಿಯ ಕೊನೆಗಿರೋ ಬಾರ್ ಗೆ ಹೋಗಿ,”ನಾನು ಅಷ್ಟು ಕುಡಿಯಬಲ್ಲೆನಾ ಅಂತ ಎರಡು ಬಾಟ್ಲಿ ವಿಸ್ಕಿ ಕುಡಿದು
ನೋಡಿದೆ”ಎಂದನಾತ ತೂರಾಡುತ್ತಾ!
No comments:
Post a Comment