ಮ್ಯಾನೇಜ್ ಮೆಂಟ್ ಪಾಠ.
ಒಂದೇ ಆಫೀಸ್ ನಲ್ಲಿ ಕೆಲಸ ಮಾಡುವ ಸೀನಿಯರ್ ಮ್ಯಾನೇಜರ್,ಕ್ಲರ್ಕ್,ಸೇಲ್ಸ್
ರೆಪ್ರೆಸೆಂಟೇಟಿವ್ ಕಾಕತಾಳೀಯವೆಂಬಂತೆ ಒಂದೇ ಬಸ್ ಸ್ಟ್ಯಾಂಡ್ ನಲ್ಲಿ ಬಸ್ ಗಾಗಿ ಕಾಯುತ್ತಿದ್ದರು.ಸಂದರ್ಭ
ಹೀಗಿರಲು, ದಾರಿಹೋಕ ಪವರ್ ಫುಲ್ ಸ್ವಾಮೀಜಿಯ ದೃಷ್ಠಿ ಇವರ ಮೇಲೆ ಬಿದ್ದು ಹತ್ತಿರ ಬಂದು, ʼನಿಮಗೇನು
ವರ ಬೇಕು ಕೇಳ್ಕೊಳ್ಳಿʼಎಂದು ಹೇಳಿದರು.
ಕೂಡಲೇ ಕ್ಲರ್ಕ್,
”ಸ್ವಾಮಿ. . ನಾನು ಅರ್ಜೆಂಟಾಗಿ ಅಮೆರಿಕಾಗೆ ಪ್ರವಾಸ ಹೋಗಬೇಕು”
ಸ್ವಾಮೀಜಿ ತಥಾಸ್ತು ಎಂದ!
ಕ್ಲರ್ಕ್ ನ್ಯೂಯಾರ್ಕ್ ನಲ್ಲಿ ತಿರುಗಲಾರಂಭಿಸಿದ!
ಸೇಲ್ಸ್ ರಿಪ್ರೆಸೆಂಟೇಟಿವ್: “ಒಬ್ಬ ಸುಂದರಿಯೊಡನೆ ಗೋವಾ ಬೀಚಿಗೆ
ಹೋಗುವ ಅವಕಾಶ ಕಲ್ಪಿಸಿ”
ಸ್ವಾಮೀಜಿ:ತಥಾಸ್ತು!
ಅವನು ಗೋವಾ ಕಲ್ಲಂಗೂಟ್ ಬೀಚ್ ಹತ್ರ ಹೋದ.
ಸ್ವಾಮೀಜಿ:ನಿನಗೇನು ಬೇಕು ಕೇಳಪ್ಪಾ?!
ಸೀನಿಯರ್ ಮ್ಯಾನೇಜರ್ (ಅಣಕಿಸುವಂತೆ): ”ಅವರಿಬ್ಬರೂ ಇನ್ನೊಂದು ನಿಮಿಷದಲ್ಲಿ
ನನ್ನೆದುರು ಬಂದು ನಿಲ್ಲಬೇಕು, ಹಾಗೆ ಮಾಡಿ ಸಾಕು.”
ಸ್ವಾಮೀಜಿ:ತಥಾಸ್ತು!!!.
No comments:
Post a Comment