ಹೀಗೆ… 2006…..
~~~~~~
ಕಾಲ ಸರಿಯುತ್ತ ಸಾಗಿದಂತೆ…
ನಾ ಮುಂದೆ ಮುಂದೆ!
ಮತ್ತೆ ಹೊಸತು ಘಳಿಗೆ
ಹೊಸ ಅನ್ವೇಷಣೆ ಒಳಗೆ
ಪ್ರತಿ ಜೀವಿ ಹೋರಾಟ-
ಇರುವುದನ್ನು ಬಿಟ್ಟು ಇರದುದರೆಡೆಗೆ
ನಿತ್ಯ ಸಂತಸ-ನಿತ್ಯ ಸಂಭ್ರಮ
ಹೊಸ ಹುರುಪಿನೆಡೆಗೆ
ಪ್ರತಿ ದಿನವೂ ನಿನಗೊಂದು ಪಾಠವೇ
ಓದುತ್ತಲೇ ಸಾಗು
ಮನಸಿದ್ರೆ ಮಾರ್ಗವುಂಟು
ʼಪ್ರೀತಿʼ ಜೊತೆಗುಂಟು
ರಾಮನ ಜೊತೆಗೆ ಸೀತೆಯಂತೆ!
ಅಡಿಗಡಿಗೂ ದೈವತ್ವ-ಹೆಜ್ಜೆ ನಿನ್ನದು
ಸಾರು ಜಗದೆಲ್ಲ ತತ್ತ್ವವೂ ಒಂದೇ…
ʼದೈವʼ ದಾಟಿ ಇರಲಿಕ್ಕು ಇಲ್ಲ ʼಇನ್ನೇನೂʼ…?!
ಪ್ರತಿ ನಿತ್ಯ ಹೊಸ ಹುಟ್ಟು…
ಎಲ್ಲರಿಗೂ ಬೇಧವಿಲ್ಲದೆ ಉಂಟು!
ತಿಳಿದೆಯಾದ್ರೆ ಈ ಗುಟ್ಟು-
ʼಚಿಂತೆಗೆʼ ಜಾಗ ಇನ್ನೆಲ್ಲಿ ಉಂಟು?!
No comments:
Post a Comment