ಆ-ಗ-ʼಮನʼ 2013 poems.
~~~~~~~~~
ನಿನ್ನ ಆಗಮನದಿಂದ
ನನ್ನ ಬದುಕಲ್ಲಿ
ʼಆಗʼ
ಮನದಲ್ಲಿ
ಬದುಕಿನ ಬಗ್ಗೆ
ಒಂದಿಷ್ಟು
ಗಮನ
ಬಂದಂತಾಯ್ತು
ಗೆಳತಿ!
ಮನವರಿಕೆ.
~~~~~~~~
ನಿನಗಾಗಿ
ಬದುಕಿದ್ದು ಸಾಕು!
ಅಂತ ನೀ
ಅಂದ ಕೂಡಲೇ
ತಿಳಿದ್ಹೋಯ್ತು-
ನನ್ನಲ್ಲಿ ನಿನ್ನ
ಮೆಚ್ಚಿಸೋ
ʼಮನಃಸಾಕ್ಷಿʼ
ಎಂದೋ
ನಾ
ಕಳೆದುಕೊಂಡಿಹೆನೆಂದು!
ಇನ್ನು ಸಾಕು
ಏಕೀ ರಮಿಸೋ
ಹುಸಿ ಸರಸ.
ಪ್ರೀತಿ.
~~~~~
ಸಕಲ ಸೃಷ್ಠಿ
ಪ್ರಕ್ರಿಯೆಯ
ಚಲಾವಣೆಗೆಂದು
ಆ ದೇವರು
ನೀಡಿದ
ವರ!
ಅಭಿಪ್ರಾಯ.
~~~~~~~~~
ಶಬ್ದಕೋಶದಲ್ಲಿ
ಎಷ್ಟು ಹುಡುಕಿದರೂ
ಅರ್ಥ ಸಿಕ್ಕದ
ಎಲ್ಲಾ ಪದಗಳಿಗೆ
ಪುನರ್ವಸತಿ
ಕಲ್ಪಿಸೋ ಕಾರ್ಯ
ಮಾಡಿದರೆ
ಭಾಷೆಯ ಬೆಳವಣಿಗೆ
ಸಾಧ್ಯ!
ʼಜೀವದ ಗೆಳತಿʼ
ಜನುಮದ ಒಡತಿ
ನೀನು ನನಗೀಗ!
ʼಪ್ರೀತಿಯ ಒಡವೆʼ
ಧರಿಸಿ ನೀನು ಬಳಿ ಬಂದಾಗ!
ಮೌನದ ಮಾತು
ಹೇಳುವ ಸಮಯ
ಕೂಡಿ ಬಂತೀಗ!
ಕೇಳುವ ಮನಸು
ಹೊತ್ತು ನೀನು
ನನ್ನನು ಕರೆದಾಗ.
ಮಾತಿಗೆ ಬೇಲಿ
ಹಾಕುವ ಮೌನ
ಬೇಕೇ ಬೇಕು
ಇಲ್ಲದಿರೆ ಮಾತು
ಲಗಾಮು ಇಲ್ಲದ
ಕುದುರೆಯಂತೆ
ಎಲ್ಲೆಲ್ಲೋ ದಿಕ್ಕೆಟ್ಟು
ಓಡುತ್ತದೆ!
ಏನಾಯ್ತೋ
ಏನಾಯ್ತೋ
ಒಂದೇ ಕ್ಷಣದಲಿ
ಒಲವಾಯ್ತೋ?!
ನನ್ನಲ್ಲೂ ನಿನ್ನಲ್ಲೂ
ಒಂದೇ ದಿನವೇ
ಹೀಗಾಯ್ತೋ!
ನೀ ನನ್ನ ಜೀವವೇ
ನೀ ನನ್ನ ಭಾವವೇ.
ಯಾರು ಬರೆದ ಪದ್ಯವೋ
ಇದು ಯಾರು ಬರೆದ ಗದ್ಯವೋ?!
ಅಮೃತಕ್ಕಿಂತ ಸವಿ ಸವಿಯೋ?!
ಕಣ ಕಣಕ್ಕಿಂತ ಬಲು ಹಿತವೋ!
C,C+ ಬೇಡ
Java ಬೇಡ
ಕಣ್ಣ ಮುಂದೆ ನೀನಿರಲು
ಹಸಿವೆಯೂ ಬೇಡ ನಿದಿರೆಯೂ ಬೇಡ
ಮನಸಿನ ಒಳಗೆ ನೀ ಬರಲು
ಲೋಕವೂ ಬೇಡ-ನಾಕವೂ ಬೇಡ
ನಾಲ್ಕು ದಿನವೇ ಸಾಕು ಸಾಕು
ʼʼನನ್ನ ಜೊತೆಗೆ ನೀನಿರಲು”
ʼʼನನ್ನ ಜೊತೆಗೆ ನೀನಿರಲು”
ಕುಂತಲ್ಲಿಯೂ ನಿಂತಲ್ಲಿಯೂ
ನಿನ್ನ ತುಂತುರು ಎಲ್ಲೆಲ್ಲಿಯೂ.
ಓ ಅಂಗನೆ ಮಾಯಾಂಗನೆ
ನೀ ನೀಡೆಯಾ ಸವಿ ಸೂಚನೆ
ನಾ ನಿನ್ನಲಿ . . ನೀ ನನ್ನಲಿ. .
ಒಂದಾಗಿಹ ಪರಿಕಲ್ಪನೆ. . .
ಈ ಮೋಹಕೆ ನೀ ಔತಣ
ನೀಡಿದ ಕ್ಷಣವೇ ಆಲೋಚನೆ
ಈ ಭಾವಕೆ ನೀ ರಿಂಗಣ
ನೀಡಿದ ಕೂಡಲೇ ಹೊಸ ಯೋಚನೆ.
ಈ ʼಸುʼದಿನ …. ಈಸು ದಿನ
ಬರಲಿಲ್ಲ ಏಕೆ ನಲ್ಲಿ?
ಇರಲಿಲ್ಲ ಏಕೆ ಇಲ್ಲೇ
ನನ್ನಲ್ಲೇ ಈ ಮನಸಲ್ಲೇ!
ಪ್ರೀತಿಯಲಿ ಕ್ಷಮೆಯಿಲ್ಲವೇ?!
ಕ್ಷಮೆಯಿರದಾ ಒಲವೆಲ್ಲಿದೆ?!
ನಾ ಕೇಳೋ ಮುನ್ನ ನೀ ಎದುರಿದ್ದೆ-
ನಿನ್ನಲಿ ನನ್ನ ತೆಗೆದುಕೊಂಡು,ಕ್ಷಮಿಸಿದ್ದೆ-
ನಾನಾಗ, ನಲಿದು ಮಲಗಿದ್ದೆ
ನನ್ನ ತಪ್ಪು ಮರೆತಿದ್ದೆ!
ಜಾದೂ ಇದೆ ಪ್ರೀತಿಯಲಿ
ಆಸೆಯಿದೆ ಕಂಗಳಲಿ
ಸುಳಿವಿಲ್ಲದೆ ಏನಾಗಿದೆ?
ಒಲವಿಂದು ಶುರುವಾಗಿದೆ
ನೀ ನನ್ನ ಜೀವ ಏನಾಗಿದೆ?!
ನೀ ನನ್ನ ಭಾವ ತಿಳಿದಾಗಿದೆ
ಹೇಳ ಬೇಕಂತ ಮನಸಾಗಿದೆ
ಬಾಳ ಬೇಕೂಂತ ಕನಸಾಗಿದೆ.
ಮನಸಿನ ಅಲೆಗಳಲಿ ಪ್ರೀತಿಯ ಪಯಣ
ಬದುಕಿನ ದಾರಿಯಲಿ ಮನಸ್ಸುಗಳ ಮಿಲನ
ಈ ಜತೆ ಹೀಗೇ ಇರಲಿ ಎಂದಿಗೂ ಶಾಶ್ವತ
ಈ ಕತೆ ಮುಗಿಯದಿರಲಿ ಅನವರತ. . .
ನಾ ಯಾರೆಂದು ನೀ
ಹುಡುಕುವ ಮೊದಲೇ
ಹೇಳಿ ಬಿಡಲೇ ನನ್ನ
ಪರಿಚಯ?!
ನನ್ನ ಪರಿಚಯ ನಿನಗಾದ
ಮೇಲೆ ಇರುವುದಿಲ್ಲವಲ್ಲ
ನನ್ನ ಗುರುತಿನ ಸಂಶಯ.
ಅಂದು ನಾನು
ನಿನ್ನಂತಿದ್ದೆ!
ಆಗ ನಿನ್ನ
ಪ್ರೀತಿ
ನನ್ನನ್ನು ಹಾಗೆ
ಇರಿಸಿತ್ತು
ಆದರೆ ಇಂದು
ನಿನಗೆ ನಾ
ಬೇಡವಾಗಿಹೆ
ಅದಕೆ ನಾನು
ಬದಲಾಗುವ
ಮನಸು ಮಾಡಿರುವೆ!
I say its a gay to meet you a day
I pray everyday let it not be delay
I may play with a clay making a toy
To spray my love in your absence every good
day.
No comments:
Post a Comment