Sunday, July 19, 2020

2011ರ ಕಾವ್ಯ.


ಒಲವೆಂದರೆ...
~~~~~~~~~~
ಒಲವೆಂದರೆ-
ಬರೀ ಭಾವನೆಗಳ ಸಮುಚ್ಛಯವಲ್ಲ
ಮೌನ ಮುರಿದು ಮಾತಿಗಿಳಿದ ಕ್ಷಣವಲ್ಲ
ನಾಳೆಗಳ ರಂಗುರಂಗಿನ ಕನಸಲ್ಲ
ಕೊಟ್ಟು-ಪಡೆವ ವಿನಿಮಯವಲ್ಲ
ಸುಖದ ಸುರಿಮಳೆಯಲ್ಲ
ದುಃಖದ ಜಡಿಮಳೆಯಲ್ಲ
ಬಾಂಧವ್ಯ ಮುರಿವ/ಬೆಸೆವ ಸರಪಳಿಯಲ್ಲ
ನಲ್ಲೆಯ ಕೈಗಿತ್ತು ಸರಿವ ಪುಷ್ಪಗುಚ್ಛವಲ್ಲ
ಮರೆಯನು ಎಂದು ಸರಿದ ವಾಗ್ದಾನವಲ್ಲ
ಗತಿಸಿದ್ದನ್ನೇ ವಿವರಿಸುವ ಇತಿಹಾಸವಲ್ಲ
ಬದುಕಿಗೆ ಬರೆಯುವ ಮುನ್ನುಡಿಯಲ್ಲ
ಸಾವಿನೊಂದಿಗೆ ಮುಗಿಸುವ ಬೆನ್ನುಡಿಯಲ್ಲ
ಬೆಂಗಾವಲಿರದ ಒಂಟಿ ಬದುಕಿಗೆ ಮಾರ್ದನಿಯಷ್ಟೇ ಅಲ್ಲ
ಹರಿದು ಹಂಚಿಹೋದ ಮನೋಃಶಕ್ತಿಗೆ ಸಾಂತ್ವನವಲ್ಲ.

ನೆಮ್ಮದಿಯ ನಾಳೆಗಳು ಬರಬಹುದೇ?
ನಾಳೆಯ ನಿರೀಕ್ಷೆ ನಿನ್ನಲಿರಲು
ಪ್ರಶ್ನೆ ಮೂಡಬಹುದೇನೋ!
ಇಂದು ನೀ ದುಃಖಿಯಾದಾಗ-ಹಾಗನ್ನಿಸಿರಬಹುದೇನೋ!

No comments:

Post a Comment