Sunday, July 19, 2020

ಹನಿಗಳು.(BSR)

ಎಲ್ಲೋ ಹುಟ್ಟಿ
ಎಲ್ಲೋ ಬೆಳೆದು
ಎಲ್ಲೋ ಮರೆಯಾಗುವ
ಎಲ್ಲೆ ಇಲ್ಲದ
ಬದುಕಲಿ ಏಕೆ ನೀ
ಕೊರಗುವೆ?

ಸೇ(ಶೇ)ವ್.‌
~~~~~~~~
ನಾನೇನೂ
ಹೆಚ್ಚಿನವನಲ್ಲ!
Shaveನ
‘h’ ನ್ನು
ತೆಗೆದು
“Save”ಮಾಡುವವ.

kalಕತ್ತಾ
~~~~~~
Kal
ಕತ್ತಾ
ಆದವ
ಇಂದು
ಕಲಕತ್ತೆಯ
ದಿವಾನ.

ಊರೆಲ್ಲಾ ಸುತ್ತಿ
ಜನಾನೆಲ್ಲ ನೋಡಿ
ಇನ್ನೂ ಬದುಕುಳಿದ
ಬದುಕೆಂಬ ಬದುಕಲ್ಲಿ
ನೀನು ನೀನಾಗಿ
ಬಾಳದಿದ್ದೊಡೆ
ಬದುಕಾದರೂ ನಿನಗೇಕೆ
ನೀನು ನೀನಾಗಿರು!

ಮುನ್ನುಡಿ . . .
~~~~~~~~~~
ಮುನ್ನುಡಿಯನ್ನೇ ಬಯಸದ ಕತೆ. . .
ಇನ್ನು ʼʼಮುಂದೆ” ಬರೀ ನುಡಿದದ್ದೇ!
ಮತ್ತೇಕೆ ನುಡಿ .. ಮುನ್ನುಡಿ!

ಮುಂದಾಗಲು ಜೊತೆಗಿದೆ ಕನ್ನಡ ನುಡಿ! 

ಅವನಿಚ್ಛೆಗೆ ಬರೆದೆ
ಅವಳಿಚ್ಛೆಗೆ ಬರೆದೆ
ಅವರಿಚ್ಛೆಗೆ ಬರೆದೆ
ನಾ ಸುಮ್ಮನೆ ಬರಿದೇ ಬರೆದೆ
ನನ್ನಿಚ್ಛೆಗೆ ಬರೆಯ ಹೊರಟರೆ
ಪದಗಳು ನನ್ನಲ್ಲಿ ಉಳಿದಿರಲಿಲ್ಲ!

ಮತ್ತೆ ಮತ್ತೆ ಹುಡುಕಾಡಿದಷ್ಟೂ
ಮತ್ತೆ ಮತ್ತೆ ಸಿಗುತ್ತಾ ಹೋಗುತ್ತದೆ
ಸಿಕ್ಕಿದ್ದು ಉಳಿಯುತ್ತದೆಯೋ ಗೊತ್ತಿಲ್ಲ
ಎಂದೋ ಒಂದಿನಾs ಖಂಡಿತ ಅಳಿಯುತ್ತದೆ
ಈ ಜಗತ್ತೆಂಬ ಗತ್ತಿನಲ್ಲಿ ಶಾಶ್ವತವಾಗಿ
ನೆಲೆ ನಿಲ್ಲುವುದೆಂಬುದೂ ಯಾವುದೂ ಇಲ್ಲ...
ಏನು ಮಾಡೋಕ್ಕಾಗುತ್ತೆ!!
ಅಶಾಶ್ವತೆಗೆ ನಾವು ಶಾಶ್ವತ ಪ್ರಯತ್ನ ಮಾಡ್ತೇವೆ!
ಎಂದೋ ಒಂದಿನ ಎಲ್ಲವೂ ಅಶಾಶ್ವತವೆಂದು
ತಿಳಿದಾಗ ಇಷ್ಟು ದಿನದ ಬದುಕಿನ ಬಗ್ಗೆ
ನಾವೇ ಹಳಿಯುತ್ತೇವೆ. ನಮ್ಮನ್ನೇ ಹೀಯಾಳಿಸಿಕೊಳ್ತೇವೆ...
ಏಕೆಂದರೆ ಯಾವುದಕ್ಕೂ ನಿಖರತೆಯಿಲ್ಲ
“ಖರೆ” ಇರೋ ʼನಿಖರತೆʼಯನ್ನು ನಾವು ಹುಡುಕುವುದಿಲ್ಲ
ಹುಡುಕಲೂ ಕೆಲವೊಮ್ಮೆ(ಬಹುಪಾಲು ಎಲ್ಲಾ ಸಮಯದಲ್ಲೂ)
ಆಗಲಿಕ್ಕಿಲ್ಲ!

ದೂರು.
~~~~~~
ದೂರ  ಸರಿದವಳು
ದೂರುವಳು ಮತ್ತೆ
ದೂರಾದ ಮೇಲೂ
ದೂರುವುದು ಸರಿಯೇ?
ದೂರಲೆಂದೇ ದೂರಾದಳೇ!
ದೂರ ತಳ್ಳಿದವಳ ದುರುಗಟ್ಟಿ
ದೂರಲೆಂದುಕೊಳ್ಳಲು
ದೂರದಲ್ಲಿರುವ ಅವಳನೆಂತು
ದೂರಲಿ!

         ಅಭಿಸಾರಿಕೆ.
~~~~~~~~~~~~~~~~
 ಕಳೆದು ಹೋದ
ನೆನಪುಗಳ
ಗುಂಗಲ್ಲೇ ಉಳಿದ-
ಜೀವನ ಕಳೆಯಬಾರದು

ಮರೆತು ಹೋದ
ಪುಟಗಳನು
ಮತ್ತೆ ಮತ್ತೆ ತೆರೆದು
ನೋಡಬಾರದು

ಅರಿಯದೇ ಆಗಿ ಹೋದುದಕೆ
ಸಮಯದ ಸರಪಳಿಯಲ್ಲಿ
ಸಿಕ್ಕು ನರಳಬಾರದು

ಸಿಕ್ಕ ಪ್ರೀತಿಯನು
ಒಪ್ಪಿ ಬಿಗಿದಪ್ಪಿ
ಬದುಕದೇ ಇರಬಾರದು.

ಮರೆತು ಹೋದ
ಪುಟಗಳನು
ಮತ್ತೆ ತೆರೆಯಬಾರದು
ಬದುಕಿನಲಿ ಮತ್ತೆ
ಪ್ರೇಮದ ಚಿಗುರನು
ಮೊಳಗಿಸಿದವರನು
ಎಂದಿಗೂ
ಮರೆಯ ಬಾರದು.

ನಿನ್ನಲ್ಲಿನ
ಅಂತಃಕರಣಕೆ
ಪ್ರೀತಿಯೇ ಕಾರಣ
ನಿನ್ನಲ್ಲಿನ
ಆಕರ್ಷಣೆಗೆ
ಮೋಹವೇ ಕಾರಣ
ನಿನ್ನ ಆಂತರ್ಯದ
ಅವಿರ್ಭಾವಕೆ
ನನ್ನೊಳಗೆ
ನಿನ್ನ ಅರಿಯುವ
ಹಂಬಲವೇ ಕಾರಣ!

ಬದುಕಿನಲ್ಲಿ
ಏಳು ಬೀಳುಗಳು ಸಹಜ
ಹೇಳು ನೀ ಅವಕ್ಕೆ
ಇತಿಶ್ರೀ...
ನನ್ನೀ ಬದುಕಿನಲಿ
ಹೊಸದಾಗಿ ಬಂದು
ಕೊನೆವರೆಗೂ
ಜೊತೆಯಾಗಿ ಉಳಿಯಲೆಂದು
ಬಂದ ಓ ನನ್ನ
ಕಾವ್ಯಶ್ರೀ. . .

ಅನುಕ್ಷಣದ
ಅನುದಿನದ
ಅನವರತ
ಅನುರಣಿತ
ಮೋಹಕ್ಕೆ
ಸಿಲುಕಿಯಾಯ್ತು
ಮೊದಲಬಾರಿ
ನಿನ್ನ ಕಂಡ ಆ
ಮೊದಲ ಕ್ಷಣದಲ್ಲಿ. . .

No comments:

Post a Comment