Sunday, July 19, 2020

2014ರ ಕಾವ್ಯ


ಮತ್ತದೇ...
~~~~~~~
ಮತ್ತದೇ ಹುಡುಗಿ ನೆನಪು
ಮತ್ತದೇ ಕೆಲಸದ ಅಲೆದಾಟ
ಮತ್ತದೇ ನಾಳೆಗೆ ಬೇಕಾದ ಹಣಕ್ಕಾಗಿ
ದುಂಬಾಲು
ಮತ್ತದೇ ದ್ವೇಷ-ಆಸೆ-ವೈರುಧ್ಯದ
ತಾಕಲಾಟ
ಮತ್ತದೇ ಸಂತಸದ ಹುಡುಕಾಟ
ಅಹುದು ಈ ಜೀವ ಕೋಟಿಗೆ
ಅಂಟಿಕೊಂಡಿರುವ
ʼʼಮತ್ತದೇ!”

ಅವಳನು
ಕಂಡಾಗ
ನನಗೋ  ಏನೋ
ಒಂದು ತರಹದ
ಸಮಾಧಾನ!
ಇದರಿಂದ
ನಮ್ಮ
ಮನಸುಗಳಿಗೆ
ನಾವೇ
ಮಾಡಿಕೊಂಡಂತೆ
ಸನ್ಮಾನ!

No comments:

Post a Comment