ಆರೇಂಜು-ಸಿರಿಂಜು.
~~~~~~~~~~~~~~
ತಿಂಗಳಾದರೂ
ತಿಂದಿರಲಿಲ್ಲ
ನನ್ ಹೆಂಡ್ತಿ ನಾನು
ತಂದಿಟ್ಟ ಆರೆಂಜು
ಏಕೆಂದು ಕೇಳುತ್ತಲೇ,
ತಡವಿಲ್ಲದೇ
ಉತ್ತರಿಸಿದ್ಲು
ನೆನಪಿಸುತ್ತಂತೆ
ಅದನ್ನು ತಿಂದರೆ
ಚುಚ್ಚಿದಂತೆ ಸಿರಿಂಜು.
ನಿಲುವು.
~~~~~~
ನನ್ನ ಹೆಂಡತಿಯ
ನಿಲುವು ಒಂದೇ-
ಗಂಡ ಏನಾದರೂ
ಕೆಲ್ಸ ಹೇಳಲಿ
ಮಾಡಬಲ್ಲೆ
ಆದರೆ,
ಗಂಡನ ಹೆಸರು
ಮಾತ್ರ
ಹೇಳಲು ಒಲ್ಲೆ!
ನಿಲುವು.
~~~~~~~
ನನ್ ಹೆಂಡತಿಯ
ನಿಲುವು ಒಂದೇ-
ಗಂಡ ಏನಾದರೂ
ಕೇಳಲಿ ಕೊಡಬಲ್ಲೆ
ಆದರೆ ಗಂಡನ
ಹೆಸರು ಮಾತ್ರ
ಹೇಳಲು ಒಲ್ಲೆ!
ಸಂ(ವಿ)ಕ್ಷಿಪ್ತ.
~~~~~~~~~~
ಸಿಟ್ಟು ಬಂದಾಗ
ನನ್ನವಳ
ಮಾತು
ಸಂಕ್ಷಿಪ್ತ
ಮತ್ತಷ್ಟೂ
ಕೆಣಕ ಹೋದರೆ
ಆಗುವಳು
ವಿಕ್ಷಿಪ್ತ.
ಬದುಕು.
~~~~~~~
ಇದ್ರೆ ಕಷ್ಟ
ಇಲ್ದಿದ್ರೆ ನಷ್ಟ
ಇದ್ದೂ ಇಲ್ದಿದ್ರೆ
ಎಲ್ಲ ಅಸ್ಪಷ್ಟ!
ಗೋ(ಳಾ)ಲಾಟ.
~~~~~~~~~~
ಶಾಲೆಯಲ್ಲಿ
ಶಿಕ್ಷಕನು
ಮಕ್ಕಳಿಂದ
ಆಡಿಸುವನು
ಗೋಲಾಟ
ಮುಖ್ಯ ಶಿಕ್ಷಕನಿಗೋ
ಗೋಲ(ಗ್ಲೋಬ್)
ಎಲ್ಲಿ ಹಾಳಾಗುವುದೋ
ಎಂಬ
ಗೋಳಾಟ!
ಕ(ತ)ರಾಟೆ.
~~~~~~~
ಕೊಡಿಸದಿರೆ
ನನ್ನವಳಿಗೆ
ರಾಟೆ
ತೆಗೆಯುವಳು
ತರಾಟೆ
ವ್ಯರ್ಥ ನಾ
ಕಲಿತಿದ್ದರೂ
ಕರಾಟೆ!
ವಿಂಡೋ.
~~~~~~~
ತೆರೆದರೆ ಸಾಕು
Window
ಅಬ್ಬಾ!
ಅದೇನು
Wind...o!!
ಕಾ(ಮ)ರಣ.
~~~~~~~~
ಪ್ರೀತಿಗೆ
ಬೇಕಿಲ್ಲ
ಯಾವುದೇ
ಕಾರಣ
ಮದ್ವೆ ಆದ್ರೆ
ದಿನವೂ
ನಿಂಗೆ
ಮರಣ.
ಸಂಗತಿ.
~~~~~~
ನೀ NO
ನಾ NO
ಎಂದು
E-Bruನೂ
ಸೇರದಿದ್ರೆ
Jನೂ
NO!
ಬ್ಯಾಕ್ ಬೋನು.
~~~~~~~~~~~~
ಅವ್ನು ಕಳೆದುಕೊಂಡ
ತನ್ನ
ಬ್ಯಾಕ್ ಬೋನು.
ಕಾರಣವಿಷ್ಟೇ
ಅವನ
Back ಗೆ
ಇತ್ತೊಂದು
ಸಿಂಹವಿದ್ದ ಬೋನು!
ಗಾಂಧೀ-ತಾತ.
~~~~~~~~~~
ಗಾಂಧೀ ತಾತಗೆ
ಒಬ್ಬ
ತಾತ
ಅವರೇ
ಗಾಂಧೀ-ತಾತ!
ಪ್ರೀತಿ.
~~~~~
ಸಿಕ್ಕದಿದ್ರೂ
ಪರ್ವಾಗಿಲ್ಲ
ಅವಳಿಂದ
Free ಟೀ
ಸಿಕ್ರೆ
ಸಾಕು ನನಗೆ
ಅವಳ ʼಪ್ರೀತಿ.ʼ
ಕುಸ್ತಿ-ಅಸ್ಥಿ.
~~~~~~~~~
ಆಸ್ತಿಗಾಗಿ
ಮಾಡಿದರು
ಇಬ್ಬರೂ
ಕುಸ್ತಿ
ಎರಡು
ದಿನಗಳಲ್ಲಿ
ಸಿದ್ಧ ಆಗಿದ್ದವು
ಅವರ
ಅಸ್ಥಿ.
ರಿಂ(ಕಿಂ)ಗು.
~~~~~~~~
ಕೇಳ್ದಾಗೆಲ್ಲ
ಕೊಡಿಸೋಕೆ
ನಿಂಗೆ
ಗೋಲ್ಡ್ ರಿಂಗು
ಆಗ್ಬೇಕಿತ್ತು
ಕಣೇ
ನಾನೊಬ್ಬ
ಕಿಂಗು!
ಕೆಲಸ-ಸಲೀಸ.
~~~~~~~~~
ಸೇರಿದ್ರೆ ಇಬ್ರೂ-
ಕೆಲಸ
ಆಗುತ್ತೆ ಹೇಗಿದ್ರೂ
ಸಲೀಸ!
No comments:
Post a Comment