Sunday, July 19, 2020

ಹನಿ ಕತೆ...


                                                             ಗುಮಾನಿ.
                                                     ~~~~~~~~~~~~
ಒಂದೇ ಕಂಪನಿಯಲ್ಲಿ ಕೆಲ್ಸ ಮಾಡುವ ಆರು ಜನರ ಟೀಂ ಗ್ರೂಪ್‌ ಫೋಟೋ ತೆಗೆಸಿಕೊಂಡರು.ಆ ಫೋಟೋದಲ್ಲಿ ನಾಲ್ಕು ಜನರು ಗಂಡಸರು ಇದ್ದರು.ಇಬ್ಬರು ಸುಂದರ ಯುವತಿಯರೂ ಇದ್ದು ಒಬ್ಬೊಬ್ಬರು ಒಂದೊಂದು ಬದಿಗೆ ನಿಂತಿದ್ದರು.
ವಿನಯಕೃಷ್ಣ ಆ ಫೋಟೋವನ್ನು ಫೇಸ್‌ಬುಕ್‌ ಗೆ ಅಪ್ಲೋಡ್‌ ಮಾಡಿದ. ಇದನ್ನು ನೋಡಿದ ವಿನಯನ ಹೆಂಡತಿ ತರಾಟೆಗೆ ತೆಗೆದುಕೊಂಡಳು.ʼರೀ ಯಾಕ್ರೀ ಆ ಹುಡುಗಿ ನಿಮ್ಮ ಪಕ್ಕದಲ್ಲಿ ನಿಂತಿದ್ದಾಳೆ,ಅಷ್ಟೊಂದು ಬೆಳ್ಳಗಿದ್ದಾಳೆ,ಅಲಂಕಾರ ಬೇರೆ ಮಾಡ್ಕೊಂಡಿದ್ದಾಳೆ,ಏನ್‌ ಸಮಾಚಾರ?ʼ
ಪೇಚಿಗೆ ಸಿಲುಕಿದ ವಿನಯಕೃಷ್ಣ ಕ್ಷಣ ಸಾವರಿಸಿಕೊಂಡು ತಲೆ ಓಡಿಸಿ ಉತ್ತರಿಸಿದ: ʼಲೇ,ನಿನಗೆ ಗೊತ್ತಿಲ್ವೇನೇ,ಎರಡು ಜಡೆ ಒಂದೇ ಕಡೆ ಸೇರೋಲ್ವಂತ.ಅದ್ಕೆ ನನ್ನ ಪಕ್ಕಕ್ಕೆ ನಿಂತಿದ್ದಾಳೆ.ʼ
ಹೆಂಡತಿ ಶೀಘ್ರವೇ ಉತ್ತರಿಸಿದಳು: ʼರೀ.. ಸುಳ್ಳು ಉತ್ತರ ಕೊಡಬೇಡಿ ...ಅವರಿಗೆ ಜಡೆಯಾದ್ರೂ ಎಲ್ಲಿವೆ,ಇಬ್ಬರದೂ ಬಾಬ್‌ ಕಟ್!ಓಹೋ, ಈಗ ಗೊತ್ತಾಯ್ತು ನೋಡಿ ನಿಮ್‌ ಆಫೀಸ್‌ ಟೀಂನ ನಮ್ಮ ಮದುವೆಗೆ ಯಾಕೆ ಕರೆದಿರಲಿಲ್ಲ ಅಂತ ನೀವು ಮದುವೆಯಾಗಿರೋದು ಗೊತ್ತಿಲ್ಲಾಂತ ಕಾಣುತ್ತೆ ಅದ್ಕೇ ನಿಮ್ಮ ಪಕ್ಕದಲ್ಲಿ ನಿಂತಿದ್ದಾಳೆ ಬಿನ್ನಾಣಗಿತ್ತಿ.ʼ
ವಿನಯಕೃಷ್ಣ ತನ್ನ ಫೇಸ್‌ ಬುಕ್‌ ಅಕೌಂಟ್‌ ಡಿಲೀಟ್‌ ಮಾಡಿದ.

No comments:

Post a Comment