ಕಥಾ ಪೆಟ್ಟಿಗೆಯ ರೂವಾರಿ-ಅನಿತಾ ಮನೋಹರಿ.
~~~~~~~~~~~~~~~~~~~~~~~~~~~~~~~~~~~~~
ವಿಪರೀತವಾಗಿ ಓಡುತ್ತಿರುವ ಕಾಲದ ಭರದಲ್ಲಿ ಇಂದಿನ ಮಕ್ಕಳು ದೃಕ್ ಶ್ರವಣೋಪಕರಣಗಳಿಗೆ ಮಾರು ಹೋಗಿ ತಮ್ಮನ್ನು ಅದರಲ್ಲೇ ತೊಡಗಿಸಿಕೊಂಡು, ಕಳೆದು ಹೋಗುತ್ತಿರುವ ಸ್ಥಿತಿಗತಿಗಳನ್ನು ಸ್ವಲ್ಪಮಟ್ಟಿಗಾದರೂ ಬದಲಾಯಿಸುವ ದಿಸೆಯಲ್ಲಿ ಮುಂದಾದವರು ಈ ಶಿಕ್ಷಕಿ ಅನಿತಾ ಮನೋಹರಿ.2008ರಿಂದ ಇವರು ಹಲವಾರು ಶಾಲೆಗಳಲ್ಲಿ,ತರಬೇತಿಗಳಲ್ಲಿ ತಮ್ಮನ್ನು ಸಕ್ರಿಯರಾಗಿ ತೊಡಗಿಸಿಕೊಳ್ಳುವುದರೊಂದಿಗೆ,ತಾವು ಹೋದಲ್ಲೆಲ್ಲ ಕಥಾಪೆಟ್ಟಿಗೆಯನ್ನು ತೆರೆಯುತ್ತಾರೆ.ತಾವು ಹೇಳಬಲ್ಲ ಕಥೆಗಳಿಗೆ ಪೂರಕವಾದ ಚಿತ್ರಗಳನ್ನು ಆ ಪೆಟ್ಟಿಗೆಯಲ್ಲಿ ಜೋಡಿಸುತ್ತ ಅಗತ್ಯ ಸನ್ನಿವೇಶವನ್ನು ಸೃಷ್ಟಿಸುತ್ತಾರೆ.ಕಥೆ ಹೇಳಲು ಬೇಕಾದ ಪೂರಕ ಚಿತ್ರಗಳನ್ನು ಸ್ವತಃ ಅವರೇ ಸಿದ್ಧಗೊಳಿಸಿಕೊಳ್ಳುತ್ತಾರೆ.ಮಕ್ಕಳಿಗೆ,ಶಿಕ್ಷಕರಿಗೆ ತಮ್ಮ ಕಥೆಗಳನ್ನು ಹೇಳುತ್ತ,ಕಥೆಗಳನ್ನು ಹೇಳುವ ಪರಿಯನ್ನು ಕಲಿಸುವ ಪ್ರಯತ್ನ ಮಾಡುತ್ತ ಬಂದಿದ್ದಾರೆ."ಕಥಾ ಪೆಟ್ಟಿಗೆ"ಯ ಮೂಲಕ ಇಂದಿನ ಮಕ್ಕಳ ಪೀಳಿಗೆಯೂ ಸಹ ಹಿಂದಿನವರಂತೆ ಕಥೆಗಳನ್ನು ಆಲಿಸುವ ತನ್ಮೂಲಕ ಕಲಿಯಲಿ,ಮಕ್ಕಳು ಸಾಹಿತ್ಯಾಭಿರುಚಿಯನ್ನು ಹೊಂದಲಿ ಎಂಬ ಆಶಯವನ್ನು ಅವರು ವ್ಯಕ್ತಪಡಿಸುತ್ತಾರೆ.
No comments:
Post a Comment