12-10-2001 ದ್ವಿ.ವ.ಟಿ.ಸಿ.ಹೆಚ್ ಹೊಸ್ತಿಲಲ್ಲಿ. .
.
ಬಯಕೆ.
7.45
ರಾತ್ರಿ
~~~~~~
ಬಿಡುವಿನ ಬಿನ್ನಾಣದಾಗ
ಹೋದಂತಾಯ್ತೋ ಪ್ರಾಣ!
ಬಳಿ ಸಾರಿ ಬಂದ ಬಾಳ ಸಂದ್ಯಾಗs
ನೂಕು ನುಗ್ಗಲಲಿ ಕಾದಿದೆ ಮರಣ
ಹೊಸ ಉಸಿರು ತುಂಬಿರಲಿ
ಹೊಸ ಆಸೆ ಚಿಗುರುತಿರಲಿ
ಝರಿ ನಿನಾದದ ಸೊಬಗಲಿ
ಈ ಮನಸು ಮಿಂದಿರಲಿ
ಪುಟಿಯುವುದು ಕಾಣ್ ಚೈತನ್ಯ
ತರುವುದದಕೆ ಸೌಜನ್ಯ
ಹೊಸ ಗುರಿಯ ಹೊಸ್ತಿಲಲಿ
ನಿರೀಕ್ಷೆಯ ಮಾರ್ದನಿ ಮೊಳಗಲಿ!
ತಂಗಿ.. ತಂದೇನಂದ್ರ
ನಿಂಗೊಂದು ಸ್ಯಾರಿ..
ದುಡ್ಡಿಲ್ಲ . . .ಖರೇವಂದ್ರ
ಪ್ಲೀಜ್ … sorry.
ಹೌದು! ನಾನೂ ಹೋಗಿದ್ದೆ
ದಾರಿಯಾಗ ಗೆಳತಿಯ ಕಂಡಿದ್ದೆ
ಪ್ರೀತಿಯ ಪುಷ್ಪವ ನಾ ಕಾಯುತ್ತಿದ್ದೆ
ಪುಷ್-ಅಪ್ ಆಗಿ ಬಿದ್ದಿದ್ದೆ.
ಪುಕ್ ಪುಕ್ ಲೈಟ್ ಸಾಕು
ಪುಕ್ಕಟ್ಟೆ ನಾ ಗೀಚಲು
ಮನಸಲ್ಲೇ ಲೈಟ್ ಇರುತ್ತೆ
ಈ ಬಾಹ್ಯ ಕರೆಂಟ್ ಯಾಕೆ ಬೇಕು.
ಸ್ನೇಹ ಮುಳ್ಳಾಗದಿರಲಿ.
~~~~~~~~~~~~~~~~
ನೀನಿತ್ತ ಸ್ನೇಹದ ಬಗೆಗೆ
ಹತ್ತಾರು ಅರ್ಥಗಳು-ನನ್ನಲ್ಲಿ
ಸ್ನೇಹ ಭಾವವ ಮೂಡಿಸಿದವು
ಕಂಬನಿಗರೆದು ಮನಬಿಚ್ಚಿ
ಸ್ನೇಹ-ಸೇತುವಾಗಿ ಬಂದ
ಆ ನಿನ್ನ ಪತ್ರವು-
ನನ್ನ ಕಂಗಳಲ್ಲೂ ಕಣ್ಣೀರನ್ನೇ
ತಂದಿತ್ತು.
ಓ ನನ್ನ ಗೆಳತಿ..!
ಕಣ್ಣೀರೇಕೇ?
ಅಗಲಿಕೆಯ ಸಂಕೇತವೋ?
ಈ ಪತ್ರದಿಂದಲಿ.ನನ್ನಲ್ಲಿ
ಗಾಢವಾಗಿ ಬೆಳೆದಿಹುದು
ಸ್ನೇಹ-
ಹೀಗಿರಲು ನಾ ನಿನ್ನನ್ನು
ಮರೆಯಲಿ ಹೇಗೆ
ಓ ನನ್ನ ಗೆಳತಿ!
27-06-2000/1.
ಹೇಳಿ ಕೇಳಿ ಹೊಗಳಿ
ಬೀಗಿದೆ ನೋಡು
ಬಿಗುಮಾನದಿ
ಭಾವಜೀವಿಯ ಪಟ್ಟ ಬೇರೆ ಕಟ್ಟಿದೆ
ನಂತರ
ಗಳಿತವಾಯ್ತಲ್ಲ
ಈ ಸ್ನೇಹ
ಬೇಕಿದ್ದು
ಸಿಕ್ಕಾಯ್ತು
ಇದ್ದಿದ್ದು ಬಾಚಾಯ್ತು
ಇನ್ನೇಕೆ ಬೇಕಿವನು
ಜಾಡು ಕಟ್ಟಿಸಿ ವಿದಾಯ
ಹೇಳಿದ ಮೇಲೆ
ಮಾಡಿಕೊಟ್ಟು
ಇವನನ್ನು ಜಾಡ್ಯ
ಅಂಟಿದ
ಏಕಾಂಗಿಯನ್ನಾಗಿ!
2-ಕಾಡಾಟದ ಪ್ರಶ್ನೆ!
~~~~~~~~~~~~~
ಹೆಣ್ಣೇ ನೀ ಕೊಂಚ
ಓರೆಯಾಗಿ ನಿಂತೆ
ನಾ ನಿನ್ನ ನೋಡುತ್ತಲೇ
ನಿಂತೆ ನಾಚದಿರು-
ನಾ ಕಂಡಿದ್ದೊಂದು ಅಚ್ಚರಿ
ಕಣ್ಣು ಹುಬ್ಬಿನಿಂದ ಮೂಗಿನ
ಕೊನೆವರೆಗೂ ದಿಟ್ಟಿಸಿದರೆ
ಕಂಡದ್ದು 2
ಓ..ಹೋ ಕನ್ನಡ ಪ್ರೇಮ
ಎಂದರೆ ಇದೆ ಏನೋ?!
ಅಲ್ಲ ದೇವನ ಸೃಷ್ಟಿ
ಆದರೂ ದೇವರು ಈ ಹೆಣ್ಣಲ್ಲೇ
ಏಕೆ ಇಂತು ಮೀಸಲಿಟ್ಟು
ಉಳಿದ ಭಾಷೆಗಳಿಗೇಕೆ
ದ್ರೋಹವೆಸಗಿದನೋ?!
ತಿಳಿಯಲಾರದ ಯಕ್ಷಪ್ರಶ್ನೆ!
ಇಂದು.
ನೆನಪುಗಳ ಅಲೆಗಳ ಮೇಲೆ ಜೀವನ ಸಾಗಿದೆ
ಪ್ರೀತಿ-ಸ್ನೇಹಗಳ ಬೆಸುಗೆಯ ನಡುವೆ ಬಾಳು ನಿಂತಿದೆ
ಕನಸುಗಳೇ ಜೀವಾಳ ನೋವುಗಳೇ ಪಾತಾಳ
ದ್ವೇಷಗಳೇ ಕಾರ್ಮೋಡ ನಲಿವುಗಳೇ ಉಳಿಯಲಿ ನಮ್ಮ ಸಂಗಡ.
ಹನಿ ಸ್ಪೋಟಕಗಳು..
~~~~~~~~~~~~~~ 01-10-2001.
ಬಲೆ
~~~~
ನಗು ಮೊಗದ ನಲ್ಲೆ
ಕಂಡಿರಲು ನಿನ್ನ
ಮನದಲ್ಲಿ ಏನೋ ಬಲ್ಲೆ
ದನಿಗೂಡಿಸಲು ನಾ
ಪಟ್ಟಿದ್ದೆ ಶ್ರಮವನು
ಅದೇ ಕಷ್ಟ ಪಟ್ಟಿದ್ದರೆ
ಅಧ್ಯಯನದಲ್ಲಿ
ಆಗುತ್ತಿತಲೇ ಇಲ್ಲ ಫೇಲೇ.
ಬೇಡಿ ತಂದ ಭಾಗ್ಯ.
~~~~~~~~~~~~~~
ನಾ ನಿನ್ನ ಕೈ ಹಿಡಿದೆ
ನೀ ನನ್ನ ಸನಿಹ ಬಂದೆ
ನೀ ಕೈ ಹಿಡಿದೆ
ತಿಂಗಳ್ಗೊಮ್ಮೆ ಹಣವ ತಂದೆ
ಸಾಕಾಗಲ್ಲವಲ್ಲ ಎಂದೆ
ಲಂಚ ಬೇಡೋದ ಕಲಿತ್ಕೊಂಡೆ
ಆಗಲೂ ಆಗೊಲ್ಲ ಎಂದೆ
ಬೇಡಿ ಹಾಕಲು ಪೋಲೀಸರ ಕರೆ ತಂದೆ.
ನಿಲುಗಡೆ.
~~~~~~~~
ನಿನ್ನ ನೋಡಿ ನಾನಕ್ಕೆ
ಓ ಬಂಗಾರದ ಚುಕ್ಕೆ
ಹೊಗಳಿ ಹೊಗಳಿ ಕೆಟ್ಟೆ
ಓ ಬಂಗಾರದ ಚಿಟ್ಟೆ
ಕೈ ತಪ್ಪಿ ಬಂದು ಬಿಟ್ಟೆ
ತರೋದೇ ಮರೆತ್ಬಿಟ್ಟೆ
ಗುಲಾಬಿ ಹೂ ಬುಟ್ಟಿ
ನೀ ಪ್ರೀತ್ಸೋದೇ ಬಿಟ್ ಬಿಟ್ಟಿ!
ಊಹೆ!
~~~~~
ತೆಂಗಿನಗಿಡದ ನೆರಳಲ್ಲಿ
ಕಂಡಿದ್ದೆ ಆ ದಿನ
ಹುಣಸೇ ಮರದ ನೆರಳಲ್ಲಿ
ಕಂಡಿರುವ ಈ ದಿನ
ಮಾವಿನ ಮರದ ನೆರಳಲ್ಲಿ
ಕಾಣಬಹುದೋ ನಾಳೆ!
ಎಂದಾಗ-ನನ್ನ ನಲ್ಲೆ
ಹೌದು. . . ನೀ ಹೇಗೆ ಬಲ್ಲೆ ?!
ಬಳಕೆ.
~~~~~~
ಬದಿಗಿಟ್ಟು ಮನಸಿನ
ನೂರು ಯೋಚನೆ
ಕಟ್ಟಿಸಿದೆ ನಾನೊಂದು
ಮನೆಯನ್ನ
ಬದಿಗಿಟ್ಟ ಯೋಚನೆಗಳನ್ನೇ
ಪಡೆದು ನಾನೇ
ಕವಿಯಾಗಿ
ಕಟ್ಟಿದೆನೊಂದು
ಸುಂದರ ಕವನ.
ಸಾಕ್ಷಿ.
~~~~~
ಭಾಷೆಗೊಂದು ಬಣ್ಣ
ಹಚ್ಚಿ ಕೊಡ್ತಾರೆ
ನೂರು ಆಶ್ವಾಸನೆ
ಬಿಟ್ಟರೆ ಹೋದರೆ ಸಾಕು
ಅದು ಸಹಾ ಸಿಕ್ಕುತ್ತಿಲ್ಲ
ಸೆರೆಮನೆವಾಸ ಪಡೆಯಲು
ಒಂದಾರು ನಿಶಾನೆ.
ಭಾವನೆ ಇಲ್ಲದಾ ಮೇಲೆ..
~~~~~~~~~~~~~~~~~
ಪದಪುಂಜವಿದ್ದರೇನು,
ಸುಲಲಿತ ಭಾಷೆಯಾದರೇನು-
ವಾಕ್ಯ ವ್ಯಾಕರಣ ಇದ್ದರೇನು
ಭಾವನೆಗಳೇ ಇಲ್ಲದಾ ಮೇಲೆ
ಶುದ್ಧ ಕವನವಾದೀತು ಹೇಗೆ?!
ಅ:-ಏ ವಯಸ್ಸಿಗೆ ತಕ್ಕಂತೆ ಮಾತಾಡು…
ಬ:- ಮನುಷ್ಯರಿಗೆ ತಕ್ಕಂತೆ ಮಾತಾಡು!
01-10-2001.
ಬುದ್ಧಿವಾದ.
~~~~~~~~~
ಬಿಳಿಮೊಗದ ಹುಡುಗಿ
ಫ್ಯಾಷನ್ ಗಂಧದ ಬೆಡಗಿ
ನಿನ್ನ ಸಂಗ ಮಾಡಿದವ ಕಮಂಗಿ
ಸಹಜ ಸಂಸ್ಕೃತಿ ಕಲಿಯೇ ಕೋಡಂಗಿ!
ಹುಡುಗೀರು-
ಕಾಲೇಜ್ ಕ್ಯಾಂಪಸ್ ನಲ್ಲಿ:-
ಅಯ್ಯೋ! ಪ್ರಿಯಕರ
ನೀನು ಹೇಗಾಗುವೆ
ನಾನು ಹೇಳಿದ್ನೆ
ಪ್ರೀತ್ಸೋಕೆ…
ಪಾರ್ಕ್ ನಲ್ಲಿ:-
ರೀ..ತಂದು ಕೊಟ್ರೆ ನೀವು
ಗಿಫ್ಟೊಂದ್ನ … ನಾ ನಿಮ್ಮ
ಪ್ರೀತ್ಸೋದಂತೂ ಖಂಡಿತಾ
ಇಷ್ಟೂ ಮಾಡೊಲ್ವೇ ಪ್ರೀತ್ಸೋಕೆ!
ಸಿನಿಮಾ ಹಾಲಲ್ಲಿ:-
ಬೋರ್ ಆಗುತ್ತೆ
ಕೂಲ್ಡ್ ಡ್ರಿಂಕ್ಸ್ ತನ್ರೀ
ತಂದುಕೊಡ್ತಾರೆಂದು ಬಂದ್ರೆ
ನಾಟಕ ಯಾಕ್ರೀ ಪ್ರೀತ್ಸೋಕೆ!
ಯೋಜನೆ.(ಹಂಚಿಕೆ)
~~~~~~~~~~~~~~
ಓಹೋ! ನಾಳೇ ಮ್ಯಾಚ್ನಲ್ಲಿ
ಗೆಲ್ತಾನಾ ಆ ರೋಮಿಯೋ
ಹಂಗಾದ್ರೆ ಇಂದೇ ನಾವೆಲ್ಲ
ಮಾಡೋಣ ಗಣ್ಪತ್ತಿ ಬಪ್ಪ ಮೋರೆಯಾ.
ಭೂತ.
~~~~~
ನನ್ನ ಹೆಂಡ್ತಿ ಪಂಚಭೂತ
ಅದ್ರಲ್ಲೊಂದು ಪೆಡಂಭೂತ
ಬರ್ತಿತ್ತಲ್ಲಾ… ಗುಡ್ಡದ ಭೂತ
ಅದೇ ಇರಬೇಕು ಈ ಅಮೃತ!
ಹೊಂದಾಣಿಕೆ.
~~~~~~~~~
ನೆನೆದೆ ನೆನೆದೆ ನಿನ್ನನ್ನೇ
ನಾ ಮರೆತೆ ಬಿಟ್ಟೆ ನನ್ನನ್ನೇ
ನೆನೆದು ನಿನ್ನವರನ್ನೇ
ನಾ ಮರೆತ್ಬಿಟ್ಟೆ ನನ್ನವರನ್ನೇ
ಈ ಪ್ರೀತಿ ನೀರಲ್ಲಿ ನಾನೇ
ಕಲ್ಲಾಗಿದ್ರೆ ತಡೆದಿದ್ದೆನೋ
ಆದ್ರೆ ಜೇಬ್ನೆಲ್ಲಾ ಮಾಡಿ ಕಾಲಿ
ಮೆತ್ತಗಾಗಿ ಹೊಡೆದ್ಬಿಟ್ಟೆ ಜೋಲಿ!
ಅರೆ ನಿರ್ಧಾರ ಸಲ್ಲ
~~~~~~~~~~~~~
ಚಾಳೀಸು ಹಾಕೋ ಹುಡುಗಿ
ನೋಡಾಕ ಏನ್ ಚಂದಾ.. ರೀ!
ಚಾಲೀಸು ಅಂದ್ರ ಸೋಡಾ ಗ್ಲಾಸು
ಕಲ್ಪನೆ ಮಾತ್ರ ಜೋಕ್ ನೋಡ್ರೀ
ನಾ ಹೇಳಿದ್ದು ಫಿಲ್ಮ್ ಹಿರೋಯಿನ್
ಹಾಕೋ ಕೂಲಿಂಗ್ ಗ್ಲಾಸನ್ನು
ಕಪ್ಪು ಗ್ಲಾಸು ಆಹಾ! ಏನ್ ಸ್ಟೈಲು
ಇದೇನಪ್ಪಾ.. ಇವ್ರ ಅಹವಾಲು.
ಗಂಡಸ್ರಿಗೇ ಸವಾಲ್.
ಕುತೂಹಲ.
~~~~~~~~
ರೂಪಾಯಿ ಮೇಲೆ ಏನ್ ಐತಿ?
ಏನಪ್ಪಾ ನಿನ್ನ ಹರಿಕತಿ!
ಕಂಪ್ಯೂಟರ್ ನಾಗ ಏನೈತಿ?
ಹುಡುಗಿ ವಿಳಾಸ ಐತೋ ..ಐನಾತಿ!
ಬದಲಾವಣೆ(ಗುಟ್ಟು)
ಹಬ್ಬ ಹರಿ ದಿನದಂದು ನನ್ನಾಕೆ
ಮಾಡಾಕ ಸಿದ್ದ ಪಂಚ ಪಕ್ವಾನ್ನ
ಉಳಿದ ದಿನದಲ್ಲಿ ನನ್ನಾಕೆ
ಮಾಡ್ತಾಳ ಪಂಚ್ … ಪಕ್ಕಾ ಅನ್ನ!
ಕಲ್ಪನೆ.
~~~~~
ಚೂಡಿದಾರ್ ನಲ್ಲಿ ನಿನ್ನ
ಕಂಡರೇನೋ ಚೆನ್ನ
ಕಂಡ್ರ ಜೀನ್ಸ್ ನಲ್ಲಿ ನಿನ್ನ
ಮರೆತ್ಬಿಡ್ತೀಯೇನೋ ನನ್ನ!
ಉದ್ದೇಶ.
~~~~~~
ನಾ ಮಾಡೋ ಬ್ಯಾಟಿಂಗೆಲ್ಲಾ
ನನ್ನವ್ಳದೇ ಬೌಲಿಂಗ್
ನಾವೇನೇ ಇದ್ರೂ ಆಡೋ ಕ್ರಿಕೆಟ್
ತೆಗೆಯೋಕೆ ಲೈಫ್ ಎಂಬ ವಿಕೆಟ್!
ಅದೇ ರಾಗ ನೋ ಚೇಂಜ್.
ಬಾಬಾ ನನ್ನ ರಾಣಿ
ಏ ತೋ ಪುರಾನಿ
ಕಮ್ ಆನ್ ಡಾರ್ಲಿಂಗ್
ಇದೋ ನಾಸ್ಟಿ ಸ್ಮೆಲ್ಲಿಂಗ್!
ಬೇಡಿಕೆ.
~~~~~~
ಓ ನನ್ನ ನಲ್ಲೆ!
ನೀ ನನ್ನ ಕೊಲ್ಲೆ
ಡಿಯರ್ ಇಂಟ್ ಲವರ್
ವೆನ್ ಡು ಯೂ ಕಮ್ ನಿಯರ್
ಕಾತರ(ನಿರೀಕ್ಷೆ)
~~~~~~~~~~
ಕಾಲಕ್ಕೇ ತಕ್ಕಂತೆ ಬದಲಾವಣೆ…
ಬಾರೆ ಬಾರೆ ಇಂಗ್ಲೀಷಿನಲ್ಲಿ
ಮಿನುಗುವ ತಾರೆ
ಬಡ್ಡಿ ನನ್ಮಕ್ಳಿಗೆಲ್ಲ
ಸುಳ್ಳು ಲೆಕ್ಕಾಚಾರ ತಾರೆ!
ಲೆಕ್ಕಾಚಾರ.
~~~~~~~~
ಇದ್ರೆ ನೀ ನನ್ನ ಹತ್ರ
ಮೆಂಟೇನ್ ಆಗುತ್ತೆ ಛತ್ರ
ನೀ ನಂಗ ಕೈಕೊಟ್ರೆ
ಎಲ್ ಐ ಸಿ ಸಿಗೊಲ್ಲ ನಾ ಸತ್ರ.
ಭಯ.
~~~~~
ಪ್ರೀತಿಯೇ ನಿನ್ನ ಹೆಸರು
ಜ್ಯೋತಿಯೇ ನಿನ್ನುಸಿರು
ಹೇಗೆ ತಾನೇ ಪ್ರೇಮಿಸ್ತೀ
ಉಸಿರು ತೆಗೆದ್ರೆ ನನ್ನ ಸುಟ್ಟು ಹಾಕ್ತಿ.
ಅರಿವಿಲ್ಲದ ರುಚಿ.
~~~~~~~~~~~~
ಜೋರ್ ಬೋರ್ ಲಡ್ಕಿ
ಬಳ್ಳಾರಿ ಅಡ್ಕಿ
ತಿನ್ನಾಕ ಬಾಯಾಗ ಹಾಕ್ತಿ
ಆಹಾ! ಎಂಥಾ ರುಚಿ ಕೊಡ್ತಿ.
ಪರಿಹಾರ.
~~~~~~~
ನೀ ನಿಲ್ಲದ ಬಾಳು ಸೊನ್ನೆ
ನೀ ಕುಂತಿದ್ದಲ್ಲ ಅಲ್ಲಿ ಮೊನ್ನೆ
ಕೆಂಪಾಗಿದ್ದೇಕೋ? ನಿನ್ನ ಕೆನ್ನೆ
ಮಾಡಿದ್ರಾಯ್ತು(ಓನರ್ ನಿನ್ನೆ) Mಒದು ಸೊನ್ನೆ!
ವಿಷಯ
ಸ್ವಾರಿ! ಸ್ವಾ…ರೀ
ಯಾ ಕ್ರೀ
ಸ್ವಾತಿ… ರೀ
ಯಾವಳ್ ರೀ!
ನೆನಪಿನ ಕನ್ಯೆ(ಕಾರಣ)
~~~~~~~~~~~~~~
ನೆನಪು ಬಂದರೂ
ಕನಸು ಬಾರದು
ಮನವು ಕೊರೆದರೂ
ಸನಿಹ ಬಾರದು
ಬಾರಳಯ್ಯ ಅವಳು
ಏಕೆಂದರೆ ನನ್ನವಳು
ನೆನಪಲ್ಲಿ ಕನಸಾಗಿ
ಕಾಡುವವಳು!
ಚಿಟ್ಟೆ ಚಿಟ್ಟೆ ಬಂಗಾರದ ಚಿಟ್ಟೆ
ನನ್ನ ಮನದಲ್ಲಿ ಪ್ರೀತಿಯಾ ನೀ ತಂದಿಟ್ಟೆ
ಈ ಗೆಳೆತನದ ಹಾದಿಯೋ ಹೀಗೆ
ಮನಸನ್ನು ಗೆಲ್ಲುತ್ತದೆ
ಕನಸನ್ನು ಕಟ್ಟುತ್ತದೆ.
ಸಮಾಧಾನ.
~~~~~~~~~
ಸತ್ ಹೋದ್ರೆ ಏನಂತೆ
ನಾ ಒಂದಿನ!
ಬಿಟ್ ಹೋಗೀನಲ್ಲ
ಸಾಕು ಇಲ್ಲೇ ಇವಳನ್ನ!
ʼʼ ಕೆಲವು ಶತ್ರುಗಳು ಮಿತ್ರಾಗುತ್ತಾರೆ, ಮಿತ್ರರು ಶತ್ರುಗಳಾಗುತ್ತಾರೆ.
ಹೀಗೆ ಸ್ಥಿತ ಚಿತ್ತ ಇಲ್ಲದ ಮನುಷ್ಯರನ್ನು ನಂಬಲಾಗದು.”
-ಮಹಾಭಾರತ.
“ಎಲ್ಲಿಯವರೆಗೂ ನಮ್ಮಲ್ಲಿ ದೇಶಭಕ್ತಿಯ ಮನೋಭಾವವು ಹೋಗಲಾರದೋ;
ಅಲ್ಲಿಯವರೆಗೂ ವಿಶ್ವಶಾಂತಿ ಎನ್ನುವುದು ಜಗದಲ್ಲಿ ಸ್ಥಿರವಾಗಿ ನೆಲೆ ನಿಲ್ಲಲಾರದು”
-ಜಾರ್ಜ್ ಬರ್ನಾರ್ಡ್ ಷಾ!
ತಂಗಿ: ಅಣ್ಣಾ ನಂಗೆ 500/- ಬೇಕು ಬೇಗ ಕೊಡು
ಅಣ್ಣ:ನಿನ್ನ ಗಂಡ ದಿವಾಳಿ ಆಗ್ಲಿ ಆಗ ಬೇಕಾದರೆ ನಾನೇ ಕೊಡ್ತೀನಿ
ತಂಗಿ: ನಂಗಿನ್ನೂ ಮದ್ವೇನೇ ಆಗ್ಲಿಲ್ಲ
ಅಣ್ಣ: ಆದ್ಮೇಲೆ ಕಣೆ ಹೇಳಿದ್ದು
ತಂಗಿ: ನನ್ನ ಗಂಡ ದಿವಾಳಿ ಆಗ್ತಾನೆ ಅಂತ ನೀನು ಹೇಗೆ ಹೇಳ್ತೀಯಾ?
ಅಣ್ಣ: ಅಯ್ಯೋ! ಪೆದ್ದಿ ನಿನ್ನ ಗಂಡನ್ನ ದಿವಾಳಿ ಮಾಡೋ
ಭೂಪ ನಾನೇ
ಆಮೇಲೆ ನೀನು ನನ್ನೇ ತಾನೇ ಕೇಳಬೇಕು..ಅಗ ಬೇಕಾದ್ರೆ ಕೊಡೋಣ!
07-09-2001. Summary of poem ‘If’
-Rudyard
Kipling.
The poet lists out a number of reactions and
attitudes a man could develop to make his life worth living.these qualities
would help a man to become a mature and wise being.
A man should not loose his mental balance
when all the others blame him for the futures.
One should trust oneself when the others
doubt.
He should have a patience(passion) and not
speak lies, and not hate any body,though he is wise and good and show it off.
He should not become a slave to his dreams
and thoughts but should have control over his thoughts and emotions.
He should not exult in his
triumphs(victories,over joy in his victotious) and break down at times of
distress(disaster) he must take everything that comes to him with calm and un
perturbed mind.
People twist the truth and add colour to
it.some times,they destroy things a man has taken a long time to build when
such things happens. One should have the courage to bare such things.even then,
he incure heavy loss.he shouldn’t say a word about it. He must “set his
heart”(courage) and mind to work hard despite, the discouraging situations.
He should win the hearts of people and be in
touch with great men.but should not loose his contact with the common man. He
should become aman……
17-07-2001.
Dear….
throng the amid.
I am mad…!
Mad for emotions,behaviours attitudes.
fairly unsolved feelings Sorrow
thing-dominent over human emotions. . .
Certain aspects of life,never allow to dwell
in a clean slate calculations of human behaviours goes on counting,but , how a
man could achieve success? In this technological e-mail world.
Is Almighty,…. Bless people
Yet .. friendship remain long lasting
Yours
lovingly
E-mail mouse..
No comments:
Post a Comment