Sunday, July 19, 2020

2008ರ ಕಾವ್ಯ-ಭಾಗ-2.

ಗೊಂದಲದ ಗೂಡಲಿ

ಪ್ರಶ್ನೆಗಳೇ ಹೆಚ್ಚು
ಗೂಡಲ್ಲಿ
ಪಕ್ಷಿಗಳು
ನೆಮ್ಮದಿಯಿಂದ
ಇರಬಹುದು!
ಮನುಜನಿಗೆ
ಮನಸಿದೆ...
ಅದಕೆ
ಗೊಂದಲಗಳು
ಇರಲಿಕ್ಕುಂಟು
ಸುಮ್ಮನಿದ್ದರೆ
ಗೂಡು
‘Broad’
ಆದೀತು!

ಅಷ್ಟೋ ಇಷ್ಟೋ
ಮಳೆ ಬಿದ್ದಂತಿದೆ
ಅಳೆದು ತಿಳಿಸಲು
ಮಳೆ ಅಳೆವ
ಮಾಪನದ
ಅಭಾವ ನನಗೆ...
ನೀ ಹೀಗೆ
ಕೇಳಿದರೆ
ಎಂತು ಹೇಳಲಿ?!
ನಾನೋ ಪ್ರಕೃತಿಯಲಿ
ಇದ್ದರೂ ಕರಾರುವಕ್ಕು
ತಿಳಿಸಲು ಆಗದವನು!

ಮನಸೆಳೆದ
ಹುಡುಗಿ ಒಂದು ದಿನ
ನನ್ನ ಮರ್ತು
ನನ್ನಿಂದ ನನ್ನ
ಮನಸು ಎಳ್ದು
ಹಾಕಿ ನನ್ನ
ಸುಟ್ಟು ಹಾಕ್‌ ಬಿಟ್ಲು
ತನ್ನ ಹೊಸ
ಪ್ರೇಮ ಕತೀನ
ಹುಟ್‌ ಹಾಕಿದ್ಲು!

ನಿನ್ನ ಹೊಳೆವ
ಕಂಗಳಲಿ
ಸೂರ್ಯನ ಕಿರಣವ
ಕಂಡೆ..
ಆ ಕಣ್ಣಲಿ ಜಿನುಗೋ
ಆನಂದ ಭಾಷ್ಪದಿ
ಆ ವರುಣನ ಕಂಡೆ
ನಿನ್ನ ಸ್ಪರ್ಶದಲಿ
ಅಗ್ನಿದೇವನ
ಕಂಡೆ!
ನೀನೇನು
ಸೃಷ್ಠಿ ದೇವಿಯೋ?!

ಅರಿವು.
~~~~~~
ನೀ ನನ್ನ ನಲ್ಲ
ಅಂದುಕೊಂಡೆನಲ್ಲ!
ನನ್ನ ಮನದ ಈ
ಭಾವನೆಗಳಿಗೆ ನೀ
ಪ್ರತಿಭಾವನೆಗಳನು
ಸೇರಿಸಲೇ ಇಲ್ಲ...
ಅರ್ಥವಾಯಿತೆನಗೆ
ನೀನಲ್ಲ
ನನ್ನ ನಲ್ಲ!

ಅದೆಂಥ ಅಲಂಕಾರದ
ಸಡಗರ ಕಣೆ
ನಿನಗೆ!
ನಾನೇ ನಿನ್ನ ಪತಿ
ನೀ ಎನ್ನ ಸತಿ
ನನಗೆ ಬೇಕಿಲ್ಲ ಈ
ಆಡಂಬರ
ನಾನೋ ನಿರಾಡಂಬರ!
ಒಮ್ಮೆ ಸೇರಿ ಆಗಿದೆ
ನೀ ಮದ್ವೆ ಚಪ್ಪರ!
ಹ್ಹ..ಹ್ಹ... ಇನ್ನೇಕೆ
ಈ ಅಬ್ಬರ?!

ಹೆದರದಿರಿ
ಜಗದ ಗೊಡವೆ
ನಿಮಗೇಕೆ?
ತನ್ನ ಪಾಡಿಗೆ
ಅದನು ಬಿಟ್ಟು ಬಿಡಿ
ನಿಮ್ಮ ದಾರಿ ನಿಮಗೆ!
ಯಾರೂ ಬರರು
ಕೊನೆಗೆ...
ಉನ್ನತಿ-ಅವನತಿ
ಎಲ್ಲಾ ಕಾಲವನ್ನೂ
ಕಾಡಿದ ವಿಷಯಗಳೇ!

ನನ್ನೊಳಗಿನ ನಿನ್ನನು
ನಿನ್ನೊಳಗಿನ ನನ್ನನು
ಅಗಲಿಸೋ ಪ್ರಮೇಯವೇ
ಇಲ್ಲ
ಬೇರೆಯಾಗಲು
ಇಬ್ಭಾಗವಾಗಲು-
ನಮ್ಮ ಮನಸುಗಳು
ಬೇರೆ ಬೇರೆ ಅಲ್ಲ
ಎಲ್ಲ ಕಾಲಕೂ ಅದು
ಒಂದೇ ಎಂಬುದು
ಇಬ್ಬರಿಗೂ ಗೊತ್ತಲ್ಲ!

ಕರ್ಮಗಳನು
ಅನುಭವಿಸಲೇಬೇಕು
ದೇವರ ಆಟ
ಬಲ್ಲವರಾರು?!

ಚಿಂತೆಗಿಂತ
ಚಿಂತನೆ ಮುಖ್ಯ
ಯೋಚನೆಗಿಂತ
ಆಲೋಚನೆ ಮುಖ್ಯ
ಕೆಲವು
ದೌರ್ಬಲ್ಯಗಳನು
ಮೆಟ್ಟಿದರೆ
ಬಲಶಾಲಿಗಳು
ನಾವಾಗುತ್ತೇವೆ!

ನಿಶ್ಚಿಂತೆಯಲ್ಲೂ
ಚಿಂತೆಯಿದೆ
ವಿರುದ್ಧವೆಂದರೆ
ಇದೇನೇ!
ಎಲ್ಲ ಕಾಲಕ್ಕೂ
ಇವುಗಳಿದ್ದು
ಜಗಕೆ
ಮತ್ತೆ ಮತ್ತೆ ಹುಟ್ಟಿ
ಅದನು ಪಡೆವ
ಹಂಬಲ ನಮಗಿರೆ-
ಇಲ್ಲಿ ಬಾಳುವುದು
ಶಕ್ಯ!

ದ್ವೇಷ,ಕ್ರೋಧ
ಮತ್ಸರಗಳು
ಹುಟ್ಟಿನ ಮೂಲದಿ
ಎಲ್ಲರಲ್ಲೂ
ಮನೆ ಮಾಡಿಹ
ಜೊತೆಯಾದ
ದುರ್ಗುಣಗಳು
ಅರಿತವನು
ಜಗದಗೊಡವೆಗೆ
ಹೋಗನು...
ನಮ್ಮ ಸಂತಸ
ನಮಗೆ ಮುಖ್ಯ.

ತಿಳುವಳಿಕೆ
ಉಳಿಕೆ
ಗಳಿಕೆ
ಹೆಬ್ಬಯಕೆ
ಎಂಬುದು
ಯಾವುದೂ
ಇಲ್ಲ ಇಲ್ಲಿ
ಜಗ ನಡೆವುದು
ಎಲ್ಲ
ದೇವರ ಎಣಿಕೆಯಲ್ಲಿ!

ಸಂತಸದ
ಲೋಕದ ಕಲ್ಪನೆ
ಇರುವುದು
ನಿಜವೇ ಆದರೆ
ತಡ ಏಕೆ?
ನಾಳೆಯದು ಇಂದೇ
ಆಗಲಿ
ಇಂದಿನದು ಈಗಲೇ
ಆಗಲಿ-
ಸಂಭ್ರಮ ಎಂಬುದು
ಯಾವುದೂ ಇಲ್ಲ
ಭ್ರಮೆಯ ಬದುಕೂ
ಶಾಶ್ವತ ಅಲ್ಲ!
ನಿನ್ನ ಏಳ್ಗೆಗೆ
ನೀನೇ ಶಿಲ್ಪಿ-
ನಡೆ ನೀ
ಮುನ್ನಡೆಯ
ಹಾದಿಯನು ಅಪ್ಪಿ...

ಎಲ್ಲಕ್ಕೂ ಒಂದು
ಕಾರಣಬೇಕು
ಎಲ್ಲಕೂ ಸಮಯ
ಕೂಡಿ ಬರಬೇಕು!

ಬೆಂಕಿಯ ದಳ್ಳುರಿ
ಹೊತ್ತಿ ಉರಿವ
ಕಡೆಯಲ್ಲಿ
ಪ್ರೀತಿ,ಸ್ನೇಹ,ಶಾಂತಿ
ನಿಸ್ವಾರ್ಥದ
ರೆಕ್ಕೆಗಳು ಅರಳಿ
ಜಗಕೆ ಹರಡಿ
ಸ್ವಚ್ಛ ನೀಲ
ಗಗನದಿ
ಸ್ವತಂತ್ರವಾಗಿ
ಹಾರಬಲ್ಲವು!

ಶಾಂತಿಯ
ಹಂಬಲಕೂ
ಇಂದು
ಕ್ರಾಂತಿಗಳು
ಆಗಬೇಕಾದ
ಕಾಲ.
ಯಾವುದೂ
ಸುಮ್ಮನೆ ಬಂದಿಲ್ಲ-
ಸಿಕ್ಕುವುದೂ ಇಲ್ಲ
ಮೌನದೇಣಿಯನು
ಏರಲು
ಮೌನವ ತಾಳಬೇಕು!

ಪರ್ಯಾಯ!
~~~~~~~~~
ಮೌನದಲೇ
ಇಬ್ಬರೂ
ಕರಗಿದರೆ
ಸಾಂತ್ವನದ
ನಿರೀಕ್ಷೆಯಾದರೂ
ಏಕೆ?!
ಮೌನವೇ
ಸಾಂತ್ವನದ
ಸ್ಥಾನ
ತುಂಬಲಿರಲು!

ನನ್ನಲ್ಲಿ
ಪ್ರಶ್ನೆಗಳು
ಉದಯಿಸುತ್ತವೆ...
ನಿನ್ನಲ್ಲಿ
ಉತ್ತರಗಳು
ಎಟುಕುತ್ತವೆ
ನನ್ನ
ಪ್ರಶ್ನಾರ್ಥಕ ಚಿಹ್ನೆಗೆ
ನೀ ಪೂರ್ಣ ವಿರಾಮ!
ಹೀಗಿರಲು
ನಮ್ಮ ಬದುಕು
ನಿತ್ಯ ಮುಕ್ತ.

ಇಬ್ಬರಲ್ಲೂ ಆಹಾ!
ಅದೆಂಥ ತ್ಯಾಗ
ಗುಣವನು ಕೊಟ್ಟ
ಆ ಭಗವಂತ
ಪ್ರಸಂಗ ಬಂತೆಂದು
ಪ್ರೀತಿಯ ತ್ಯಾಗಕೂ
ಸಿದ್ಧರಾದೆವಲ್ಲ!

ನಾನು ಎಡೆಬಿಡದೆ
ಅವಳ ಕಡೆಗೆ
ನೋಡುವುದನು
ಅವಳೂ
ನೋಡಿ ಏನೋ
ಲೆಕ್ಕಾಚಾರ
ಹಾಕುತ್ತಾಳೆ...
ನಾನು ಮನದ
ಭಾವನೆಗಳನು
ಉಚ್ಚರಿಸಲು
ಹೆದರಿ ಹಿಂಜರಿದು
ಬಿಡುತ್ತೇನೆ...

ನನ್ನಂಥ
ಲಕ್ಷ
ಯುವತಿಯರ ನೀ
ಕಂಡಿರಬಹುದು-
ಆದರೆ,
ನನಗೆ ನೀನೇ
ಪ್ರಪಂಚ
ನಂಬಿಕೆಯೇ
ನನ್ನ ಜೀವಾಳ
ಒಲವೇ ನನ್ನ
ಬದುಕಿನ
ಬಂಡವಾಳ
ನೀ ನನ್ನ ಒಡಲಾಳ!

ನನ್ನ ಕನಸಿನ
ಕೋರ್ಟಿನಲ್ಲಿ
ನನ್ನ ಮನಸ್ಸೇ
ಜಡ್ಜ್‌
ಇಲ್ಲಿ ಯಾವ
ಅಪರಾಧಗಳೂ
ಆಗೋದಿಲ್ಲ...
ಯಾವ ಕೇಸೂ
ದಾಖಲಾಗೋದಿಲ್ಲ
ಎಲ್ಲವೂ
ಸರಿಯೇ ಈ ನನ್ನ
ಸ್ವಪ್ನ ಲೋಕದಲ್ಲಿ!
ನನ್ನ ಪದೇ ಪದೇ
ಕಾಡುವ
ಪ್ರಶ್ನೆಗಳು
ಎರಡೇ ಎರಡು...
ಪ್ರೀತಿಗಾಗಿ
ಬದುಕಬೇಕೇ?!
ಪ್ರೀತಿಯಿಂದ
ಬದುಕಬೇಕೇ?!
ಬಿಡಿಸಲಿ ಹೇಗೆ
ಈ ಪ್ರಶ್ನೆಗಳ
ಹೇಗೆ ಪಡೆಯಲಿ
ಉತ್ತರವ...

ಬದಲಾವಣೆ.                      
~~~~~~~~~
ಅಂದು-
ನೀನು ನಕ್ಕರೆ
ಹೂವು ಅರಳಿದಂತೆ...
ಇಂದು-
ನಿನ್ನ ನಗುವಿನಿಂದ
ಹೂವೂ
ಅರಳಬೇಕಿದೆ!

ನಾಳೆಯ ಚಿಂತೆ
ಎನಗಿಲ್ಲ...
ನಾನು ಎಂದೂ
ನೆಚ್ಚಿಲ್ಲ...
ನನ್ನ ಬದುಕಲಿ
ನೀ ಬಂದ ಮೇಲಂತೂ
ನಾಳೆಯನ್ನು
ಕಲ್ಪಿಸಲೂ
ನೀ ಬಿಟ್ಟೇ ಇಲ್ಲ!

ಈ ಕ್ಷಣದ ಸಂತಸ
ಸಂಭ್ರಮವೇ
ನನಗೆ ಮುಖ್ಯ
ಜೊತೆಗೆ
ನೀನಿದ್ದೀಯಲ್ಲ!
ಬೇರೆನು ನಾ
ಬಯಸಲಿ?
ಅಲ್ಲವೇ! ನೀನೇ
ಹೇಳು.

ಸುಮ್ಮಸುಮ್ಮನೆ
ಜಗಳ ಆಡುವರು
ಜನರು!
ಪಾಪ ಅವರಾದರೂ
ಏನು ಮಾಡಿಯಾರು?!
ಸತ್ಯವನ್ನು ಹೇಳಲು
ಸಮಾಜದಲ್ಲಿ ಎಲ್ಲಿ
ಬಿಟ್ಟಿದ್ದೇವೆ?
ಮನದ ಹೊರೆ ಹೀಗೆ
ಹೊರ ಬೀಳುತ್ತದೆ.

ನನ್ನ ಅರಿತವರು
ಎಲ್ಲೋ ಕೆಲವರು...
ನನ್ನ ಅರಿಯಲು
ಯಾರೂ ಬಯಸರು
ಅಷ್ಟಕ್ಕೂ
ನನ್ನನ್ನೇಕೆ
ಅವರು ಅರಿಯಬೇಕು?
ನನ್ನನು ನಾನು
ಅವರನ್ನು ಅವರೇ
ಎಷ್ಟೋ ಅರಿಯಲಿರಲು
ಈ ಅಪರಿಪೂರ್ಣ
ಜಗದಲ್ಲಿ!

ಇ-ಮೇಲ್‌ ವಿಚಾರಣೆ!
~~~~~~~~~~~~~~
ಎಲ್ಲಕ್ಕೂ
ಈ ಮೇಲ್ವಿಚಾರಣೆ
ಅತ್ಯಗತ್ಯ!
ಚಿಂತಿಸಬೇಡ
ಗೆಳತಿ,
ನಿಮ್ಮಪ್ಪ ನನ್ನ
ಇ-ಮೇಲ್ ವಿಚಾರಣೆ
ಮಾಡಿದರೆಂದು!

ನೀನ್‌
ಯಾರ್‌
ಏನು
ಇತ್ತು?
ಹೇಳೋಕೆ
ಆಗ್ದೆ
ಇದ್ರೂ
ಸುಮ್ನೆ
ಬಾಯಿ
ಮುಚ್ಕೊಂಡು
ಹೋಗುತ್ತೆ!

ಅವಳ ಮನದ
ಬೆಳಕಿಂಡಿ ತೆರೆವ
ಅಗತ್ಯವಿಲ್ಲ!
ಅವಳ ಹೃದಯದ
ಬಾನಿಂದ ಸದಾ
ಪ್ರೇಮಾಮೃತ
ಸುರಿವಾ ಮಳೆ
ಜಿನುಗುತ್ತಲೇ
ಇರುತ್ತದಲ್ಲ!

ನಿನ್ನ ಈ
ಕಂಗಳಲ್ಲೇ
ಕಂಡೆ ನಾ
ತಾಜ ಮಹಲ್ಲು!
ಪ್ರತಿ ನೋಟದಲ್ಲೂ
ನೀ ತೋರು
ತಾಜಾ ಅಮಲು.

ನನ್ನ ಮನದ
ತುಮುಲುಗಳು
ಎಲ್ಲರಿಗೂ
ಅರ್ಥವಾಗದು!
ಅದಕ್ಕೆ ನಿನ್ನ
ಮುಂದೆ
ಹೇಳ್ತಾ ಇದ್ದೀನಿ..
ಎಲ್ಲರ
ಮನಗಳಲೂ
ಕವಲುಗಳು ಇವೆ.

ನಿನ್ನ ಕಂಡ
ಕ್ಷಣದಿಂದ
ಕನಸೊಂದು
ಅರಳಿತು...
ನಿನ್ನ ಪಡೆದ
ನಂತರ,
ಬದುಕೆಲ್ಲ
ನಿನ್ನದಾಯ್ತು
ಹಾಂ!
ನನ್ನ ಈ
ಬದುಕಲೇ ನನ್ನ
ಕನಸುಗಳೂ ಇವೆ
ತೆರೆದು ನೀ ನೋಡು!
ನನ್ನ ಮನದಲ್ಲಿ
ಎದ್ದ ಬಿಸಿಲಿನ
ಆರ್ಭಟಕೆ
ನಿನ್ನ ಪ್ರೀತಿಯ
ಹೃದಯಪೂರ್ವಕ
ಮಾತೇ
ಬೀಸಣಿಕೆ.

ತತ್ತ್ವ.
~~~~
ʼಬೇಕುʼ ಮತ್ತು
ʼಬೇಕೇ ಬೇಕುʼ ಗೆ
ವ್ಯತ್ಯಾಸವಿದೆ...
ಬೇಕು ಅದು
ಅವಶ್ಯಕತೆ!
ಬೇಕೇ ಬೇಕು
ಅನ್ನೋದು
ಅತ್ಯವಶ್ಯಕತೆ!

ಕಾಲಾನೇ
ಉಲ್ಟಾ-ಪಲ್ಟಾ!
ಏತಕೋ ಈ
ಹೊಸ ಸೆಳೆತ!
ಕುದಿಯೋದು
ನಿಂತಿದೆ ರಕ್ತ...
ನಾನಾದೆ
ಸೃಷ್ಠಿಯ ಭಕ್ತ!

ಸತ್ಯ.
~~~~
ಏನಾಯ್ತೋ
ಹೇಗಾಯ್ತೋ
ಕಾಣೆ?
ಪ್ರೀತ್ಸಿದ್‌ ಸತ್ಯ
ಒಪ್ಕೊಂಡ್ರೆ
ಇಬ್ಬರಲ್ಲೂ
ಸಂತಸ-ಸಡಗರ
ದಿನನಿತ್ಯ!

ರಕ್ಷಣೆ.
~~~~~
ನಿನ್ನ ಬಂಜರು
ಬದುಕ ಗತಿ
ಬದಲಿಸಲು…
ಬೆಂಗಾವಲಾಗಿ
ನಾನು ಇರುವೆ
ನಾ ನಿನ್ನ
ಕಾವಲುಗಾರ.
ಈ ಸುರಿವ ಮಳೆಯೇ
ಅಲ್ಲವೇ ನನ್ನ-ನಿನ್ನ
ಒಂದು ಮಾಡಿದ್ದು!
ಹಾಂ! ಮತ್ತೆ
ಸುರಿಯಲಿ
ಮತ್ತೊಂದು ಅಂತಹ
ಮಳೆಯು-
ನನ್ನ-ನಿನ್ನ
ಮತ್ತೆ ಒಂದು
ಮಾಡಲು.

ಅವಳೊಮ್ಮೆ ತಿರುಗಿ
ನನ್ನ ನೊಡಲಿ
ಎಂದು ಬಯಸಿದ್ದೆ
ಮನದಲ್ಲಿ-
ಅವಳು ನಿಜಕೂ
ತಿರುಗಿ
ನೋಡುತಲಿರಲು
ನಾನು ಬೇರೆ
ಎತ್ತಲೋ ತಿರುಗಿದ್ದು
ಕಾಕತಾಳೀಯ!

ಭಾಷೆ,ಮತ,ಧರ್ಮ
ಕುಲ,ನೆಲೆಗಳ
ಅಂತರ ಇರದೆ
ಹುಟ್ಟೋ ಪ್ರೀತಿ
ತನ್ನ ಗುರಿ ಸೇರಲು
ಹವಣಿಸುವಾಗ
ಇವೆಲ್ಲ ಏಕೆ
ಮುಖ್ಯವಾಗುತ್ತೋ?!

ಅವಳು ನಿಸರ್ಗ
ಪ್ರಿಯೆ-
ಇವನು ನಿಸರ್ಗ
ಪ್ರಿಯ-
ಇಬ್ಬರ
ಆರಾಧ್ಯ ದೇವತೆ
ಪ್ರಕೃರತಿ ಮಾತೆ…
ನಿಸರ್ಗ ಒಂದೇ!
ಇವರಿಬ್ಬರೂ
ಬೇರೆ ಬೇರೆ
ಆರಾಧನೆಯ
ಮಾರ್ಗಾನೂ ಬೇರೆ!

ನನ್‌ Cell
ಹನುಮಂತ!
Ear phone
ಅವನ ಬಾಲ
Loud speaker ನಿಂದ
ಹೊಮ್ಮೋ  ಗಾನವೇ
ʼʼಶ್ರೀ ರಾಮರಕ್ಷಾ ಸ್ತೋತ್ರ”

ಸುರಿವ ಮಳೆ,
ಗುಡುಗು ಮಿಂಚು,
ಬಿಸಿಲು, ಚಳಿ, ಗಾಳಿ
ಇವುಗಳಿಂದ
ಮನುಷ್ಯ
ಕಲಿಯೋದೇನಿದೆ?
ಯಾರನ್ನೂ
ತಡಕೊಳ್ದೇ
ಬದುಕುವುದು
ಪ್ರಕೃತಿಯಿಂದ
ಕಲಿಯಬೇಕು!

ಅಮರತ್ವಕ್ಕೇ
ಇರಬೇಕು ಈ
ಸ್ನೇಹ ಅರಳಿದ್ದು-
ಎಲ್ಲೋ ನೀನು ಇದ್ದು
ಎಲ್ಲೋ ಇದ್ದೆ ನಾನು
ಆ ಬ್ರಹ್ಮಂಗೂ
ಗೊತ್ತಾಗಿರಬೇಕೇನೋ,
ನನಗೆ ನೀ
ನಿನಗೆ ನಾ
ಜೊತೆಯಾಗೇ
ಸ್ನೇಹಿತರಾಗಲಿ ಎಂದು
ಬಯಸಿ ಬಯಸಿ
ಕಳುಹಿಸಿದನೇನೋ!

ಕಾರಣ.
~~~~~~
ಪ್ರೀತಿಯನ್ನು
ಸಿಹಿಯಾಗಿ ಕೊಟ್ಟೆ
ಸಹಿ ಹಾಕಿ ಸವಿದೆ
ಮದ್ವೆಯ ಪ್ರಸ್ತಾಪ
ಬರಲು ಕಹಿಯಾಗಿ
ಹಿಂತೆಗೆವ
ಮಾತನಾಡಿದೆ…
ಅದಕೆ ನಾನೂ
ನಿನ್ನ ಕೈ ಬಿಟ್ಟೆ!

ಕಾಲವೆಂಬ
ಪರಿಧಿಗೆ
ಬದುಕೆಂಬ
ಕೇಂದ್ರ ಸಿಕ್ಕಾಗ
ತಾಳ್ಮೆಯ
ರೇಡಿಯಸ್ಸು
ವಿಪುಲವಾಗಿದ್ರೆ
ಕ್ರೇಮ…
ನಮ್ಮದಿ ತುಂಬೀತು
ಪ್ರೇಮ!

ನಾ ಪೋಣಿಸಿ
ಕೊಡುವ
ಮುತ್ತಿನ ಹಾರವನು
ನೀ ಕೊರಳಿಗೆ
ಹಾಕಿಕೊಳ್ಳಲು
ಆಗದು…
ಬೇಕಿದ್ದರೆ
ತುಟಿಗಳ ಮೇಲೆ
ಕೆನ್ನೆಯ ಮೇಲೆ
ಅದನು
ಸ್ಪರ್ಶಿಸಬಹುದಷ್ಟೇ!
ನಾನೇ ತಯಾರಕ-
ಅದಕ್ಕೆ ನನ್ನ
ಮನಕೆ ತೋಚಿದಂತೆ
ಅದನು ಪೋಣಿಸಿ
ಸಿದ್ಧ ಮಾಡಿರುವೆ!

To My Soulmate…
~~~~~~~~~~~~~
When you beat
You are my mother…
When you scold
You are my teacher…
When you Love
You are my lover…
When you hug
You are my wife…
When you kiss
I’m your child…
When you breathe
I’m your soul…
When you speak
I’m your friend…
When you care
You are my doctor…
When you drink
I’m your water
When you sleep
I’m your rest…
When you hold
I’m your heart…
When you observe
I’m your truth…
When you express
I’m your reflection…
Whats more I need?!
When you are everything for me.

ಸಂಸಾರದ ಪ್ರವಾಹದಲ್ಲಿ-
ಕೊಚ್ಚಿ ಹೋಗುತ್ತೇವೆ
ಅಲ್ಲವೇ?! ಒಂದು ದಿನ,
ನಾನು-ನೀನುಗಳು ಅಳಿದು
ಎಲ್ಲೋ ಲೀನವಾಗುತ್ತೇವೆ
ಇರುವ ಈ ಅಲ್ಪ ಬದುಕಿನಲಿ
ನಾನಾ ಕಲ್ಪನೆಗಳು
ನಾನಾ ದಾರಿಯ ದಿಕ್ಕುಗಳು
ನಾನಾ ಯಾತನೆ-ಸಂಕಷ್ಟಗಳು
ಆದರೂ ಮನಃಫೂರ್ವಕವಾಗಿ
ನಗಬಹುದಲ್ಲ…
ಮನಬಿಚ್ಚಿ ಮಾತನಾಡಬಹುದಲ್ಲ…
ಎಲ್ಲರಿಗೂ ಒಳ್ಳೆಯದೇ ಆಗಲೀಂತ
ಹರಸುತ್ತಲೇ ಇರಬಹುದಲ್ಲ…
ತಂದಿರುವುದೂ ಏನಿಲ್ಲ-
ತೆಗೆದುಕೊಂಡು ಹೋಗುವುದೂ
ಏನೂ ಇರುವುದಿಲ್ಲ!
ಕರ್ಮಗಳ ಲೆಕ್ಕಾಚಾರ
ಬೇಕಿದ್ದರೆ ಆ ʼʼದೇವರು” ಹಾಕಿಕೊಳ್ಳಲಿ
ಸಂಭ್ರಮದ ಸೊಬಗಲ್ಲಿ
ಅನುದಿನ ಸಂತಸದಲ್ಲಿ
ಇರುವುದು ಅದೆಷ್ಟು ಮಧುರ!
ಬದುಕಿಗೆ ಇಂಬು ನೀಡುವುದಲ್ಲವೇ?!
ಈ ಮಾಧುರ್ಯ. . .
ಇನ್ನೇನು ಬೇಕು . . . ಹೇಳಿ,
ನಾನೂ ನಿಮ್ಮಂತೆ
ನಾಳೆಯ ಆಶಯಗಳ ಹೆಣೆದು
ಬದುಕುವವ…
ಮೊದಲೇ ಅಲೆಮಾರಿ ಮನಸಿನವ
ಏನನ್ನೂ. . .
ಹೇಳುವಷ್ಟು… ಕೇಳುವಷ್ಟು
ಪುರುಸೊತ್ತು ಇಲ್ಲದ
ದಿನಗಳು ನನ್ನವು…
ಆದರೂ,
ಅವಳ ಜೊತೆಗೆ
ಅನುದಿನವೂ ನಾನು
ಗಂಟೆ ಗಟ್ಟಲೇ
ಮನಬಿಚ್ಚಿ
ಮಾತನಾಡುತ್ತೇನೆ…
ನನ್ನ ಬದುಕಿನ
ಬಹುಮುಖ್ಯ ಪ್ರಪಂಚ
ಅವಳೇ!
ಅದಕ್ಕೇ ನನ್ನೆಲ್ಲಾ
ಒತ್ತಡಗಳನು
ಅಮುಖ್ಯ ಮಾಡಿ ಬಿಡುತ್ತೇನೆ…
ಇಲ್ಲ-ಇಲ್ಲ-
ನನ್ನ ಒತ್ತಡಗಳನು
ಶಮನ ಮಾಡಲೆಂದೂ
ನಾನು ಅವಳ ಕೂಡೆ
ಹರಟುತ್ತೇನೆ. . .
ಈ ಸ್ವಾರ್ಥ ನಿಜವಾದರೂ
ಅವಳನ್ನು
ಮನ ತುಂಬಿ ನಾ
ಪ್ರೀತಿಸುತ್ತೇನೆ. . .
ಆಸರೆಯ ಸಾನಿಧ್ಯದಲಿ
ಸ್ವಾರ್ಥವೂ ಗೊತ್ತಿಲ್ಲದಂತೆ
ಕರಗಿ ಬಿಡುತ್ತದೆ!

ನಾಲ್ಕು ಪದಗಳಲಿ
ಹಿಡಿದು ಇಡಲು
ಆಗುವುದಿಲ್ಲ
ಎನಗೆ ಪ್ರೀತಿಯನು
ಪ್ರೇಮ ಸಮುದ್ರದಲ್ಲಿ
ನಾನೊಂದು ಹನಿ
ನಾನೊಂದು
ಸುಮ್ಮನಿದ್ದಾಗ-
ಸಿಕ್ಕ ಅಮೃತದ ಹನಿ
ಅದರ ಸವಿ ಮರೆಯಲಾಗದು…
ಮಂಜಿನಂತೆ ಕರಗದು-
ನೀರಿನಂತೆ ಹರಿವುದು
ಬೆಳಕಿನಂತೆ ಹೊಳೆವುದು
ಮಗುವಿನಂತೆ ನಗುವುದು.
ಎಲ್ಲರ ಮನದಲ್ಲಿಯೂ ಇಹುದು
ಯಾರನ್ನೂ ಬಿಡದು…
ಈ ಪ್ರೀತಿಯು
ಒಂದು ಮಾಯೆಯು!

ನೆನಪು.
~~~~~
ಸುಮ್ಮನೆ ನಿಂತಿದ್ದು
ಸುಮ್ಮನೆ ಕುಳಿತಿದ್ದು
ಒಮ್ಮೆಲೇ ಮಾತು ಹೊಮ್ಮಿ
ಇಬ್ಬರೂ ನಕ್ಕಿದ್ದು
ಆಹಾ! ಈಗಲೂ
ಸುಮ್ಮನೆ ಕುಳಿತಾಗ
ಸುಮ್ಮನೆ ನಿಂತಾಗ
ನೀನಿಲ್ಲದಿದ್ದರೂ,
ಕಾಡುತಿವೆ ನಮ್ಮ
ಆ ಸಂತಸ ದಿನಗಳ
ಸವಿನೆನಪು.

ಹತ್ತಿರ ಬಂದಾಗ ಬಳಿಗೆ,
ನಿನ್ನನೊಪ್ಪಲಿಲ್ಲ-
ಮೆಲ್ಲನೆ ಅಪ್ಪಲು
ಬಂದಾಗ ನಿನ್ನ ಸಹಿಸಲಿಲ್ಲ…
ನಿನ್ನ ಪ್ರೀತಿಯು
ನನಗಾಗ ಏಕೆ
ಅರ್ಥವಾಗಲಿಲ್ಲ!
ಆದರೆ,ಅದೇಕೋ ಏನೋ,
ಇಂದು ನೀ ಇಲ್ಲದೆ
ಬದುಕಲಾಗುತ್ತಿಲ್ಲ…
ಮನವಿಯೊಂದು
ನಿನ್ನಲಿ ನಲ್ಲೆ…
ಮನವಿಟ್ಟು ಒಮ್ಮೆ
ಮನ್ನಿಸಿ ನನ್ನ
ನೀ ಮತ್ತೆ ಈ
ಬದುಕಿನಲಿ
ಬಾರಲಾರೆಯಾ?!

ಅಂದು ಇಂದಿನಂತೆ
ಇರಲಿಲ್ಲ…
ಇಂದು ಅಂದಿನಂತೆ
ಇಲ್ಲ…
ಕಾಲಮಾನ
ಬದಲಾಗುವುದು
ಯಾರನ್ನೂ ಕಾಯದೆ
ಆದರೆ,
ನಿನ್ನ ಪ್ರೀತಿಗಾಗಿ-
ನಾನೆಷ್ಟು
ಕಾದಿಹೆನು
ಎಂಬುದು
ನನಗೂ ಗೊತ್ತಲ್ಲವೇ?!
ಇನ್ನಾದರೂ
ಕಾಯಿಸದೇ ಬಾ
ಬೇಗ ನನ್ನ ಬಳಿಗೆ…

ಹೆಂಡತಿಯ
ಯಾವ ಮಾತಿಗೂ
ಹಾಕೋದಿಲ್ಲ ನಾನು
ಸೊಪ್ಪು. . .
ತಾರದ ಹೊರತು-
ಅವಳು ನನ್ನ
ಲಿಪ್ಪಿಗೆ ತನ್ನ
ಲಿಪ್ಪು!

ಇತ್ಯರ್ಥ 
ಮಾಡದೇ ಬಿದ್ದ
ಎಷ್ಟೋ
ವಿಷಯಗಳ ಮಧ್ಯೆ
ನನ್ನ ಮನದಲ್ಲಿ
ಅವಳ ಬಗೆಗೆ
ಇದ್ದ ಪ್ರೀತಿಯನ್ನು
ಇತ್ಯರ್ಥ ಮಾಡಿಯೇ
ಬಿಟ್ಟೆ-
ಅವಳ ಒಪ್ಪಿಗೆಯ
ಇಂಗಿತವನು
ಅರಿತುಕೊಂಡು!

ನಿನ್ನ ಪ್ರೀತಿ
ಸಿಗುವ ಮೊದಲು
ಬಂಜರು ಭೂಮಿಯಂತೆ
ಇತ್ತು ಈ ನನ್ನ ಮನಸು…
ನೀ ತೋರಿದ
ಅಕ್ಕರೆಗೆ ಅದು
ಇಂದು ಹಚ್ಚ ಹಸುರಿನ
ಫಸಲು ತುಂಬಿದ
ಚಿನ್ನದಂಥ ಭೂಮಿಯಷ್ಟೇ
ಸೊಗಸು.

ಸುಮ್‌ ಸುಮ್ನೇ ಬೇಜಾರ್‌
ಮಾಡ್ಕೋ ಬಾರ್ದಂತೆ!
ಹೀಗೆ-
ಮಾಡಿಕೊಳ್ಳೋರ್ನ ಕಂಡ್ರೆ
ಆ ʼಬೇಸರʼಕ್ಕೂ-
ಬಹುಬೇಗ
ಬೇಜಾರಾಗಿ ಬಿಡುತ್ತದಂತೆ!

ಜೀವನದಲ್ಲಿ
ಎಷ್ಟೇ ಸೋತರೂ
ಎಷ್ಟೇ ನೊಂದರೂ
ದೇವರನ್ನೇ ನಾ
ನಂಬುತ್ತೇನೆ...
ಏಕೆಂದರೆ
ಅವನಿಗಿಂತ
ಸಖನು-
ನನಗೆ ಈ
ಭೂಮಿಯ ಮೇಲೆ
ಎಲ್ಲೂ-
ಇದುವರೆಗೂ
ಸಿಗಲೇ ಇಲ್ಲ!

ಇರ್ಲಿ ಬಿಡಿ-
ಹೆಸರಿನೊಳಗೆ
ಏನಿದೆ?
ಭಾವನೆಗೂ ಬೆಲೆ ಇದೆ!
ಬರೆದವನು ನಾಳೆಗೆ
ಮರೆಯಾಗುವನು. . .
ಕಾಲದ ಪಾಶದ ಒಳಗೆ!
ಭಾವನೆಗಳು
ಉಳಿಯುತ್ತವೆ ಇಲ್ಲೇ!
ಈ ಭಾವನೆಯೂ-
ಕವಿಯ ಒಂದು ಭಾವನೆಗಳ
ಗುಚ್ಛದಿಂದಲೇ
ಹೆಕ್ಕಿದ್ದು ಅಂತ
ತಿಳಿಸುವುದೇ ವಿಪರ್ಯಾಸ!

ನಿನ್ನ ಹೃದಯದ
ಲಾಕಪ್ಪಿನಲ್ಲಿ
ಬಂಧಿಯಾಗಿದ್ದಕ್ಕಾದರೂ
ಬೇಗ ನೀ
ತರಬಾರದೇ
ನಿನ್ನ ಆ ಲಿಪ್ಪು!

You are my breathe
So I’m alive
You are my dream
So in your scream
 You are my sky
So I open my eye
You are my mind
So I always bind
You are my sweet
So I open my heart
You are my dance
So I glance.

Challenge your mind. . .
~~~~~~~~~~~~~~~~~
Challenge your mind. . .
Challenge your mind. . .
 Life is a game of birth and death
Challenge your mind. . .
Challenge your mind. . .
Where there is a will there is a way
Hey  just Challenge your mind. . .
Challenge your mind. . .
If  you have a power-no need to fear
There is a life dear
Challenge your mind. . . just
Challenge your mind. . .
 A thing of beauty is joy for ever
Make up your time for-whole the year
Challenge your mind. . . just
Challenge your mind. . .
Awake my boy
Arise my boy just to Challenge your mind. . .
 just  to Challenge your mind. . .

Have a bath in the shower of thoughts
Search a path in the power of dream-
When you go towards-
What you want?! You’ll come across the depth
Of hunt try to solve the equation. . .
You  can make the sensation!
Challenge your mind. . .
Challenge your mind. . .
Just Challenge your mind. . .
Challenge your mind. . .

ಹೇಳದೇ ಕೇಳದೇ ಸಹಿ ಹಾಕಿದೆ. . .
ನಿನ್ನನು ನೋಡದೇ ಪ್ರೀತಿ ಮಾಡಿದೆ. . .
ಹೃದಯದ ಮಾತನು ತಳ್ಳಿ ಹಾಕದೆ!
ಮನಸಲಿ ಪ್ರೀತಿಯ ಗೂಡು ಕಟ್ಟಿದೆ
ಮನಸಲಿ ಪ್ರೀತಿಯ ಗೂಡು ಕಟ್ಟಿದೆ

ನೆನಪಾದೆ ನೆನಪಾದೆ ನೆನಪಲ್ಲೇ ನೆನಪಾದೆ
ಮನಸಲ್ಲಿ ಮಗುವಾದೆ ಕನಸಲ್ಲಿ ನಗುವಾದೆ. . .
ಎಲ್ಲೆಲ್ಲೂ ನೀ ಬಂದು ಬದುಕಲ್ಲಿ ಬೆಳಕಾದೆ
ನನ್ನಲ್ಲಿ ನೀ ಬಂದು ಎದೆಯಲ್ಲಿ ಹೊಳಪಾದೆ.

ಅನಂತ ಸಾಗರದಲ್ಲಿ
ಲೀನನಾಗುವ ಮುನ್ನ. . .
ನನ್ನವಳ ಪ್ರೇಮದ
ನದಿಯಲ್ಲಿ ನಾ ಕರಗಬೇಕು. . .
ಆ ನದಿಯು ಕೊನೆಗೊಮ್ಮೆ
ಸಾಗರವ ಸೇರಲೇಬೇಕು. . .
ಆ ಸಾಗರಕು ಪ್ರೀತಿಯ
ಸವಿಯ ಉಣಿಸಿದ ಭಾಗ್ಯ
ನನ್ನದಾಗಬೇಕು!

ನನ್ನ ನಿನ್ನ
ನಡುವೆ ಏಕೆ
ಇನ್ನೂ ಅಂತರ?
ಆಗಲೇ ನಿನ್ನ
ಮೊದಲ ಸ್ಪರ್ಶಕ್ಕೆ
ಮೈ ಮನದಲ್ಲೆಲ್ಲ
ಥರ ಥರ ಶುರು
ಆಗಿರುವಾಗ!

ಒಲವಿರದಾ
ಜಾಗವಿಲ್ಲ. . .
ಜಗದ ನಿಯಮ-
ಬಿಟ್ಟು
ಬದುಕುವಂತಿಲ್ಲ. . .
ಕಾಲದ ಜೊತೆಗೆ
ಸಾಗುವ ಈ ಪಯಣಕೆ
ಸಂಗಾತಿ ಇರದೆ ಚಲನೆಯಿಲ್ಲ!
ಈ ಮದುವೆಯ ಸಂಭ್ರಮದಲ್ಲಿ
ಗೆಳೆಯನಾಗಿ ಶುಭ ಕೋರದಿರೆ
ಆ ದೇವ್ರು ಮೆಚ್ಚುವುದಿಲ್ಲ!

ನಿನ್ನಲ್ಲೇ.
~~~~~~~
ನೀ ನಲ್ಲೆ. . .
ಅದಕೆ ನನ್ನೆಲ್ಲ
ವಹಿವಾಟುಗಳು
ನಿನ್ನಲ್ಲೇ
ಪ್ರೀತಿಯ ಪರಿಯಲ್ಲಿ
ನನ್ನನು ಸೆರೆ
ಮಾಡಿದವಳು
ಅಲ್ಲವೇ?
ಈ ಜೀವದ ಎಲ್ಲ
ಹಂಬಲ ನಿರೀಕ್ಷೆಗಳು
ನಿನ್ನಲ್ಲೇ!

ಅವನು
ಸಾಮಾನ್ಯನಾದವನಲ್ಲ
ಪ್ರೀತಿಯನು
ಸಾಮಾನ್ಯ
ಅಂದು ಕೊಂಡವಳಲ್ಲೂ
ಅದರ ಸುಳಿವು
ತಂದುದು
ಸಾಮಾನ್ಯ ವಿಷಯವೇನಲ್ಲ!

ನನ್ನ ಈ ಬದುಕು
ನನ್ನವಳಿಗಾಗಿ
ನನ್ನ ಈ ದುಡಿಮೆ
ಅವಳಿಗಾಗಿ
ನನ್ನದನ್ನುವುದರ ಎಲ್ಲ
ಸ್ವಾಮ್ಯತೆಗೆ
ಅವಳೇ
ವಾರಸುದಾರಳು
ಇವೆಲ್ಲ ಅವಳ
ಪ್ರೀತಿಯ ಫಲ…
ನಾನು ಬರೀ
ಶ್ರಮ ಪಟ್ಟು
ದುಡಿದೆ
ನಿಷ್ಕಾಮಕರ್ಮದಿಂದ
ಅವಳಿಂದ ಬಂದದ್ದು
ಅವಳದೇ ತಾನೇ?
ನನಗಾದರೋ
ಬೇರೆ ಯಾರಿಹರು
ಅವಳಲ್ಲದೇ!

ಎಲ್ಲ ನಾಳೆಗಳು
ಇಂದುಗಳು ಆಗೋ
ನಂಬಿಕೆಯಲ್ಲಿ
ಮಾತ್ರ ನಾನು
ಜೊತೆಯಾಗಬಲ್ಲೆ-
ಗೆಳತಿ…
ನಾಳೆಗಳನು ನಂಬಿ
ಆಸೆಗಳನು ಇಟ್ಟುಕೊಂಡು
ನೀ ಬಾರದಿರು…
ನಾನು ಇಂದಿನ
ಮತ್ತು ಈ ಕ್ಷನದ
ನಂಬಿಕೆ ಮಾತ್ರ
ಇಟ್ಟುಕೊಂಡ
ವಾಸ್ತವವಾದಿ.

ಅವಲು ನನ್ನವಳಾಗೋ
ಮುನ್ನ ಒಂದು
ಇತಿಹಾಸವನೇ
ಹೊತ್ತು ನನಗೆ
ತನ್ನ ಅರ್ಪಿಸಲಿರುವಳು
ಎಂಬುದ ನಾ ಬಲ್ಲೆ…
ಅದಕ್ಕೇ ಅವಳು
ತನ್ನ ನೆನಪುಗಳನು
ಹುಮ್ಮಸ್ಸಿನಲಿ-
ಹೇಳುವಾಗ ನಾನು
ಮಂದಹಾಸವನು
ಬೀರುತ್ತಲೇ ಇರುತ್ತೇನೆ!

ಈ ಹುಡುಗಿಯರೇ ಹೀಗೆ
ಕಾಯುತ್ತಾರೆ
ಮೊದಲ ಭೇಟಿಯಲ್ಲಿ-
ಮುಂದಿನ ಎಲ್ಲ
ಭೇಟಿಗಳಲ್ಲಿ
ಕಾಯಿಸೋದು ಹೇಗೇಂತ
ಚೆನ್ನಾಗಿ
ಗೊತ್ತಿರುತ್ತದಲ್ಲ!
ಅದಕ್ಕೇ.

ಹಗಲಿರುಳು ಹೆಗಲ್‌ ಗೆ
ಹೆಗಲ್‌ ಕೊಟ್ಟು-
ಜೊತೆಗೆ ನೀ
ನನಗೆಂದು
ಇದ್ದಾಗಲೇ
ತಿಳಿಯಿತು ಕಣೆ
ನಿನ್ನ ಮನದಾಳದಲ್ಲಿ
ನನಗೆಂದು ಇರೋ
ಪ್ರೀತಿಯು-
ಅದೆಷ್ಟು ವಿಶಾಲವೆಂಬುದು!

ನೀ ಕರೆದ ಕ್ಷಣ-
ನಾ ಬರುವೆ…
ನಾ ನಿನ್ನ ಪ್ರೀತಿಯ
ಸಖ…
ಪ್ರೀತಿಯೂ ಒಂದು
ಕರ್ತವ್ಯ…
ಅದಕೆ ನಾ
ಪ್ರಾಮಾಣಿಕವಾಗೇ
ನಿಭಾಯಿಸ್ತೀನಿ ಕಣೆ.

ನೀನು ನನ್ನ ಬದುಕಿನ
ಅಭಿಮಾನಿ
ಮನಸಿನ ಯಜಮಾನಿ.

ನಿನಗಂತಲೇ
ನಾನು ಇನ್ನೂ
ಬದುಕಿರುವೆ
ಛೇ! ಅಲ್ಲ..ಅಲ್ಲ..
ಕ್ಷಮಿಸು
ನನ್ನ ನರ ನರ,ಕಣ ಕಣ
ರಕ್ತದ ಹನಿಯಲ್ಲೂ ಇರುವ
ನಿನ್ನ “ಪ್ರೀತಿ” ನನ್ನನ್ನು
ಇನ್ನೂ ಬದುಕಿಸಿದೆ ಕಣೆ.

ಬದುಕೋಕೆ ಪ್ರೀತಿಸಬೇಕು
ಸಾಯೋಕ್ಕಲ್ಲ…
ಹುಟ್ಟಿದ್‌ ಮೇಲೆ ಒಂದಿನ
ಸಾಯಲೇಬೇಕು
ಪ್ರೀತಿ ಸಾವಿಗೆ ಕಾರಣ ಆಗಬಾರದು
Love to live..Live to love.

You can live
I’m alive
Life is a live show
I’m a showman
This show never ends
Come with me till
This man end
His show!
My darling I kept
My life for you
You’ve to get entry into it.

ನನ್ನ ಈ  ಬದುಕು
ನನ್ನವಳಿಗಾಗಿ
ನನ್ನ ಈ ದುಡಿಮೆ
ಅವಳಿಗಾಗಿ
ನನ್ನದನ್ನುವುದರ ಎಲ್ಲ
ಸ್ವಾಮ್ಯತೆಗೆ ಅವಳೇ
ವಾರಸುದಾರಳು
ಇವೆಲ್ಲ ಅವಳ ಪ್ರೀತಿಯ ಫಲ!
ನಾನು ಬರೀ
ಶ್ರಮ ಪಟ್ಟು ದುಡಿದೆ
ನಿಷ್ಕಾಮ ಕರ್ಮದಿಂದ.

ಸಂಪಾದನೆ!
~~~~~~~~
ಇಲ್ಲಿ ನನ್ನದೆಂಬುದು
ಏನೂ ಇಲ್ಲ
ನನ್ನ ಬದುಕು ಪೂರ್ತಿ
ಅವಳ ಪ್ರೇಮವನು
ಸಂಪಾದನೆ ಮಾಡುವುದರಲ್ಲೇ
ಕರಗಿ ಹೋಯಿತು!
ಬರಿಗೈಯಲ್ಲಿ
ಬಂದವನಿಗೆ ಪ್ರೀತಿಯ
ಹಂಬಲವು
ಬರಿಗೈಯಲ್ಲಿ ಕೈ ಬಿಟ್ಟಿದ್ದೇ
ಅ-ಸಹನೀಯ!

ಪ್ರತಿ(ಸಂ)ಪಾದನೆ.
~~~~~~~~~~~~
ಮಾಡಹೋದೆ
ಅವಳ ಪ್ರೀತಿಯ
ಸಂಪಾದನೆ…
ಆದರೆ…ಪ್ರೀತಿಯು
ವಿಫಲವಾಗಿ
ಮಾಡಬೇಕಾಯ್ತು
ಹಲವು ತತ್ತ್ವಗಳ
ಪ್ರತಿಪಾದನೆ!
ಗಂಡ-ಹೆಂಡತಿ
ಸಂಬಂದ ಬರೀ
ದೇಹ-ಮನಸಿನ ಮಿಲನಕ್ಕೆ
ಅಷ್ಟೇ ಅಲ್ಲ
ಅದು ಅತ್ಮಗಳ ಸಮ್ಮಿಲನ
ಆ ಸಂಬಂಧಕ್ಕೆ
ಸಾವೆಂಬುದು ಇಲ್ಲ.

ನೆನಪು.
~~~~~~
ದಿನವೂ ನಿನ್ನ ತಪ್ಪದೇ
ನೆನೆಯುತ್ತೇನೆ…
ನನ್ನ ಪರಮಾಪ್ತಳೆಂದು
ಸಹಚಾರಿಣಿಯೆಂದು-
ಸಹಧರ್ಮಿಣಿಯೆಂದು
ಸಂಗಾತಿಯೆಂದು
ಸಹವರ್ತಿಯೆಂದು
ಜನುಮದ ಜೊತೆಗಾತಿಯೆಂದು
ಗೆಳತಿಯೆಂದು-
ನೀ ಬೆಳೆಸಿ ಹೋದ
ಪ್ರೀತಿಯ ಪರಿಯನು
ಎಷ್ಟು ನೆನೆದರೂ
ಕಮ್ಮಿಯೆಂದು
ನಿನ್ನವನು ನಾನೆಂದು…
ನಿನ್ನ ನೆನಪ
ಮರೆಯಲಾಗದೆಂದು-
ನಿನ್ನ ನೆನೆಯದೇ
ನನ್ನ ದಿನ
ಮುಗಿಯದೆಂದು…
ನಿನ್ನ ನೆನೆಸುವುದೇ
ಸರ್ವೋತ್ಕೃಷ್ಟ
ಪರಮಪುಣ್ಯ
ಸಂಸ್ಕರಿತ
ಸಂಸರ್ಗದ ಮೇರು
ಬಿಂದುವೆಂದು.

“ತಲೆ ಕೆಟ್ರೆ ಮನುಷ್ಯನೇ ಅಲ್ಲ”
ಅಂತ ಮಾತು ಮಾತಿನ ಮಧ್ಯೆ
ಅನ್ನುತ್ತಿದ್ದವನು ನಾನು-
ಪ್ರೀತಿಯಿಂದ ತಲೆ ಕೆಡಿಸಿಯೂ
ನನ್ನ ಮನುಷ್ಯನಾಗೇ
ಉಳಿಸಿದವಳು ಅವಳು
ಎಲ್ಲಾ ಪ್ರೀತಿಯ ಮಹಿಮೆ!

ಮೀಸಲು…
~~~~~~~~
ಅರಳುವ ಪ್ರತಿ
ಹೂವೂ
ನನ್ನವಳಿಗೇ
ಮೀಸಲು
ಮಿನುಗುವ ಪ್ರತಿ
ತಾರೆಯೂ
ನನ್ನವಳಿಗೇ
ಮೀಸಲು…
ಅಷ್ಟೇ ಏಕೆ!
ನಮ್ಮೂರಿನಲ್ಲಿ
ಕನ್ಯೆಯರಿಗೇನೂ
ಬರವೇ?!
ಆದರೂ-
ಈ ನನ್ನ ಹೃದಯ
ಸದಾ
ನನ್ನವಳಿಗೇ
ಮೀಸಲು…

ಸೆರೆಯಾದೆ ಸೆರೆಯಾದೆ
ನಿನ್ನ ಪ್ರೀತಿಗೆ ಶರಣಾದೆ
ನಿನ್ನ ಜೊತೆಗೆ ಎಂದೂ ಜೊತೆಯಾದೆ…
ಮಗುವಾದೆ ನಗುವಾದೆ
ನಿನ್ನೊಡಲಾ ಕಡಲಾದೆ
ನಿನ್ನ ಪ್ರೀತಿಗೆ ನಾನು ಉಸಿರಾದೆ
ಲೋಕ ಕಾಯುವ ಸೃಷ್ಠಿಕರ್ತನು
ಒಮ್ಮೆ ಬಂದನು ಒಪ್ಪಿ ಹೋದನು…
ನಮ್ಮ ನೋಡುತ ನಕ್ಕು ನಲಿದನು
ಪ್ರೀತಿ ಹಂಚಲು ಸಹಿ ಹಾಕಿದನು.

ಯಾರ ದೆಸೆಯಿಂದ ಪ್ರೇಮದ ಕುಡಿಯು. . .
ಎಲ್ಲಿ ಚಿಗುರೊಡೆಯುವುದೋ?!
ಯಾರ ಮನದಲ್ಲಿ ಅದು ಸ್ಥಾಪಿತಗೊಳ್ಳುವುದೋ. . .
ಎಲ್ಲಿ ಅದರ ಉಗಮವೋ?!
ಯಾರ ಬಾಳಪುಟದಲ್ಲಿ ಪ್ರೀತಿಯು ನೆಲೆಗೊಂಡಿಹುದೋ. . .
ಎಲ್ಲಿ ಅದು ಹೆಮ್ಮರವಾಗುವುದೋ?!
ಯಾರ ಹೃದಯವು ಪ್ರೇಮಕ್ಕೆ ಆಹ್ವಾನವನ್ನೀಯುವುದೋ. . .
ಎಲ್ಲಿ ಅದು ಕಲ್ಲು ಸಕ್ಕರೆಯಾಗಿ ಸಿಹಿಯಾಗುವುದೋ?!
ಯಾರ ಅಂತರಂಗದ ಗೂಡೊಳಗೆ ಬಂಧಿಯಾಗುವುದೋ?!
ಎಲ್ಲಿ ತನ್ನ ಸ್ವಚ್ಛಂದ ಲೋಕದಲಿ ವಿಹರಿಸುವುದೋ. . .
ಅಲ್ಲಿ ನನ್ನ ಮನವೂ ಸದಾ ಸ್ಪಂದಿಸುವುದು. . .
ಅವಳ ಒಡಲಿನಲ್ಲಿ ನನ್ನ ಪ್ರೀತಿಯ ಹಕ್ಕಿಯೂ-
ಗರಿ ಬಿಚ್ಚಿ ಹಾರುವುದು!

ನಾನು ಎಲ್ಲವನ್ನೂ
ಅವಳ ಬಳಿ
ಹೇಳುತ್ತೇನೆ. . .
ಅವಳಿಗೂ ತನ್ನ ಮನದ
ಭಾವನೆಗಳನು
ಹಂಚಿಕೊಳ್ಳಲು
ಅವಕಾಶ
ನೀಡುತ್ತೇನೆ
ಕೆಲವನ್ನು
ಹೇಳುತ್ತಾಳೆ
ಮತ್ತೆ… ಅಂತ
ದುಂಬಾಲು ಬೀಳುತ್ತೇನೆ
“ಹೇಳೊಲ್ಲ” ಅಂತ
ಸುಮ್ಮನಾಗುತ್ತಾಳೆ
ಯಾಕೆ ಅಂತ
ಕೇಳಿದರೆ!
ನಾನು ಹೆಣ್ಣಲ್ಲವೇ?!
ಅಂತ ನಾಚಿ,
ಮಾತು ಮರೆಸಿ
ಮಲಗಿಸುತ್ತಾಳೆ!

ಅವಳು ಪಕ್ಕ
ಇದ್ದಾಗ
ಸದಾಕಾಲ ನಾನು
ಎಚ್ಚರ!
ಅವಳ
ರಕ್ಷಣೆಯ
ಹೊಣೆಗಾರಿಕೆಯೇ
ನನ್ನ ಜೀವನದ
ಬಹು ಮುಖ್ಯ ಅಂಶ!

ಅವಳ ಮಾತಿಗೆ
ಮರುಳಾದ
ನನಗೆ ದೇವರು
ಅವಳ ಕರುಣಿಸಿ
ಮದುವೆ ಆಗುವಂತೆ
ಹರಸಿದ
ಮದ್ವೆ ಆಗಿ ಕೆಲವು
ದಿನಗಳಲ್ಲಿ
ಅವಳನ್ನು
ಮೂಕಿಯನ್ನಾಗಿಸಿ
ನನ್ನ ಹೃದಯ
ಹಿಂಡಿ ಜೀವನವ
ಕೊಂದ!

ಏನಾಗಬೇಕೆಂದಿರುತ್ತದೆಯೋ
ಅದೇ ಆಗುತ್ತದೆ!
ಹೌದು ಈ ಮಾತು ಸತ್ಯ. . .
ಅವಳ ಜೊತೆ ನನ್ನ
ಪ್ರೇಮ ಸಂಬಂಧ
ಕುದುರಬೇಕಿತ್ತು
ಎಂಬುದು ದೈವ ಲಿಖಿತ!
ಎಂದು ನನಗೆ ಅರ್ಥ
ಆಗಿ ಹೋಯ್ತು.

ಎದ್ದ ಘಳಿಗೆಯಿಂದ
ಮಲಗುವ ತನಕ
ಎಡೆಬಿಡದೇ  ಅವಳು
ಮಾತನಾಡುತ್ತಲೇ ಇರುತ್ತಾಳೆ
ಮಲಗುವಾಗ ಒಮ್ಮೆ
ಕೇಳುತ್ತೇನೆ ಹಾಗೇ
ಒಮ್ಮೆ ಅವಲೋಕನ ಮಾಡು
ಅಂತ. . . ಮತ್ತೊಮ್ಮೆ
ಹೇಳು ಅಂತ!
ಆದರೆ, ಎಲ್ಲ
ಮರೆತಿರುತ್ತಾಳೆ
ಭುಜಕ್ಕೆ ಒರಗಿ
ಮಗುವಂತೆ ಮಲಗುತ್ತಾಳೆ.

ಕುಂತಲ್ಲಿ ಕೂರೋ ಹಾಗಿಲ್ಲ
ನಿಂತಲ್ಲಿ ನಿಲ್ಲೋಹಾಗಿಲ್ಲ
ಯಾಕಪ್ಪ ಈ ಪ್ರೀತಿ
ಅನ್ನೋ ಹಾಗಿಲ್ಲ. . .
ಪ್ರೀತಿಸಿದ ಮೇಲೆ
ಎಲ್ಲ ಸಹಿಸದೇ
ಬೇರೆ ದಾರಿಯೆಂಬುದು ಇಲ್ಲ!

ತನ್ನ ಜೀವನದಲ್ಲಿ
ʼʼಸಾವಿರದ ಒಂದು
ಸಮಸ್ಯೆ” ಅಂತ
ಬುದ್ಧನ ಹತ್ರ
ಪರಿಹಾರ ಕೇಳಿದ್ರೆ-
ʼಸಾವಿರದ-ಒಂದು ಮನೆʼʼಯಿಂದ
ಸಾಸಿವೆ ತಾ. . .
ಅಂತ ಕಿಸಾ ಗೋತಮಿಗೆ
ಹೇಳಿದಂತೆ ಅವನಿಗೂ
ಹೇಳಿದರಂತೆ!

ಪುಟಗಟ್ಟಲೇ
ಬರೆಯಬೇಕೆಂದೇನೂ
ಇಲ್ಲ ನಲ್ಲೆಯ
ಮನಸೂರೆಗೊಳ್ಳಲು. . .
ಪುಟ್ಟ ಪದಗಳಲಿ
ಪ್ರಫುಲ್ಲತೆ ತುಂಬಿದ
ನಿರ್ಮಲ ಪ್ರೀತಿ
ತುಂಬಿದ್ದರೆ ಸಾಕು!

ʼಕೈಗೆ ಸಿಕ್ಕಳು!ʼ
ಅಂತ ಸಂಭ್ರಮ
ಪಡುವಷ್ಟರಲ್ಲಿ
ತಪ್ಪಿಸಿಕೊಂಡು
ಹಾರಿ ಹೋಗುತ್ತಾಳೆ. . .
ಏಕೆ ನೀ ಹೀಗೆ ಅಂತ
ಕಾರಣ ಕೇಳಿದರೆ
“ನನಗೆ ರೆಕ್ಕೆ ಇಲ್ಲ”
ಅಂತ ಸುಳ್ಳೇ
ಸಬೂಬು ಹೇಳುತ್ತಾಳೆ!

ಹುಡುಗಿಯರ ಬಣ್ಣ
ಗೊತ್ತಿಲ್ಲವೆಂದೇನೂ ಅಲ್ಲ. . .
ಆದರೂ, ಪ್ರೀತಿಯಲ್ಲಿ
ಯಾಕೆ
ಬಿದ್ದೆಯೆನ್ನುತ್ತೀಯಾ?
ಪ್ರೇಮದ ರಂಗು
ಚೆಲ್ಲಿದವಳು ಆ ಹುಡುಗಿಯೇ
ಅದಕೆ ಹೋಳಿ ಆಡದೇ
ಸುಮ್ಮನಿರಲು ಆಗಲಿಲ್ಲ!

ಅವಳ ಮಾತಿನ
ವೈಖರಿಯೇ ಹಾಗೆ!
ನಿಮಿಷ ಮಾತಾಡಿದರೂ
ಗಂಟೆಗಟ್ಟಲೇ
ಮಾತನಾಡಿದಂತೆ!
ಗಂಟೆ ಹೊತ್ತು
ಹರಟಿದರೂ-
ನಿಮಿಷ ಮಾತ್ರ
ಮಾತನಾಡಿದಂತೆ!
ಅವಳ ಮಾತಿನಲ್ಲಿ
ಭಾವನೆಗಳಿವೆ
ಅದಕೆ,ನನಗೆ
ಭ್ರಮೆ!
ಆದರೂ ಮಾತಿನ
ಮಾಧುರ್ಯಕ್ಕೆ
ನಿಜಕೂ
ಸೋತವನೇ ನಾನು
ಅದರಲ್ಲಿ ದೂಸರಾ
ಮಾತಿಲ್ಲ. . .
ಬೇಕಿದ್ರೆ
ಈ ದುನಿಯಾ ಮೇಲಾಣೆ
ಈ ಜಿಂದಗಿ ಮೇಲಾಣೆ!

ʼಸತ್ಯʼ ಅಂದ್ರೆ ಏನ್‌ ಗೊತ್ತಾ?
ಅದರ ಅರ್ಥ ಹುಡುಕಿದ್ದೀಯಾ?!
ಹೃದಯದ ಮಾತು
ನಾಲಿಗೆಯಿಂದ-
ಯಥಾವತ್ತಾಗಿ,
ಬಂದ್ರೆ ಅದು ಸತ್ಯ
ಅನ್ನಲಾಗೋದಿಲ್ಲ. . .
ಎಲ್ಲಾ ಸುಳ್ಳೆಂದಲ್ಲ
ಕೆಲವು ಕವಿಗಳು
ಇನ್ನೂ ಜೀವಂತ ಇದ್ದಾರೆ-
ಇಲ್ದೇ ಇರೋದ್ನೂ ಇರೋ ಹಾಗೆ
ಸತ್ಯದಂಗೇ. .
ಸರಾಸಗಟವಾಗಿ
ಜನಮನಕೆ ಒಪ್ಪಿಸೋರು!

ಸಂಖ್ಯೆಗಳನು
ಗುಣಿಸಿ ಲೆಕ್ಕಿಸಿ
ಉತ್ತರಿಸಲು
ಬಲ್ಲವನಿಗೆ
ಗುಣಶಾಲಿಯೆಂದು
ಬಿರುದು ನೀಡಲು
ಬರುವುದಿಲ್ಲ!
ಎಲ್ಲರ
ಬುದ್ಧಿವಂತಿಕೆಗೆ
ಗುಣವೇ ಕಾರಣ
ಎನ್ನುವುದು-
ಸಮಂಜಸವಲ್ಲ!

ಯಾರ ಮಾತನು
ಗಣಿಸದವನು
ಪರೀಕ್ಷೆ
ಫಲಿತಾಂಶದಲ್ಲಿ
ಗಣಿತ ವಿಷಯದಲ್ಲಿ
ನೂರಕ್ಕೆ ನೂರು ಪಡೆದ
ಸತ್ಯ ಪರಿಶ್ರಮವಿದ್ರೆ
ಯಾರನ್ನೂ ಗಣಿಸಬೇಕಿಲ್ಲ!

“ತಾಳಿದವನು ಬಾಳಿಯಾನು”
ಎಂಬ ಗಾದೆ ಮಾತನ್ನು
ನಾನೇಕೋ ನಂಬದೇ
ತಾಳಲು ಆಗದೇ
ತಾಳಿ ಕಟ್ಟಿದೆ ಅವಳ
ಕೊರಳಿಗೆ-
ಆವಾಗಲೇ ನೋಡಿ
ನಾನು ನಿಜಕೂ
ಬಾಳಲು ಆರಂಭ
ಮಾಡಿದ್ದು.

ನನ್ನವಳ ನೆನಪು.
~~~~~~~~~~~~
ಕನಸಿನ ರಾತ್ರಿಗೂ
ಕೊನೆಯುಂಟು!
ಆದರೆ ನನ್ನವಳ
ನೆನಪುಗಳಿಗೆ ಅಲ್ಲ
ನನ್ನವಳ
ನೆನಪು-ಗ(ಘ)ಳಿಗೆಯಲ್ಲಿ
ಹೇಳಿ ಮುಗಿಸುವ
ಕನಸಲ್ಲ. . .
ನಿತ್ಯ ಸ್ಪುರಿಸುವ
ಜೀವಂತ ಬೆಳಕು ಅವಳು!

ಸಾಕೆಂದು ಬೇಕುಗಳಿಗೆ
ಬ್ರೇಕು ಹಾಕಿದರೆ
ಆಸೆಗಳಿಗೆ ಕಡಿವಾಣ
ಹಾಕಲಾದೀತೇ?!
ಹುಟ್ಟಿನಿಂದ
ಸಾವಿನವರೆಗೂ
ಅವುಗಳನು ಮನದಲ್ಲಿ
ಪುಟ್ಟ ಮಗುವಿನಂತೆ
ಪುಟಿಯುತ್ತಲೇ ಇರುತ್ತವೆ!

ಸಾಕು-ಬೇಕುಗಳ
ಜೋಕಾಲಿಯಲ್ಲಿ
ಕುಳಿತು ಜೀಕುವ
ʼನಾಗರ ಪಂಚಮಿʼ
ಹಬ್ಬದಂಥ ಬದುಕು
ನಮ್ಮದು…
ಅಬ್ಬರ ಜಾಸ್ತಿ
ಆದರೆ ಆ ಹಾವೇ(ಬದುಕು)
ನಮ್ಮನ್ನು ಕಚ್ಚಿ ಬಿಡುತ್ತದೆ!

ಹುಟ್ಟಿನ ನಂತರ
ಒಂದು ಕ್ಷಣದಲ್ಲಿ
ಸಾವಿದೆ. . .
ಸೋಲಿನ ನಂತರ
ಒಂದು ಪಂದ್ಯದಲ್ಲಿ
ಗೆಲುವಿದೆ. . .
ನೋವಿನ ನಂತರ
ಒಂದು ಘಳಿಗೆಯಲ್ಲಿ
ನಲಿವಿದೆ. . .
ದುಸ್ತರವೀ ಬದುಕು
ಎಂದು ಓಡದಿರು
ಎಲೈ ಮನವೇ,
ತಾಳು!ತಾಳು!!ತಾಳು!!!
ನಗುವಿನಿಂದಲಿ
ನೀ ಬಾಳು.

ನಾನೊಬ್ಬ ಮರೆಗುಳಿ
ಎಲ್ಲವನು
ಮರು ಘಳಿಗೆಯಲ್ಲಿಯೇ
ಮರೆತು ಬಿಡುತ್ತೇನೆ!
ನಿನ್ನ ಮಾತುಗಳು
ನೆನಪಿನಲ್ಲಿ ಉಳಿಯುವುದಿಲ್ಲ
ಹಾಗೆಂದು,
ನಿನ್ನ ಪ್ರೀತಿಯನ್ನು
ಮರೆಯುತ್ತೇನೆ
ಅಂದುಕೊಳ್ಳದಿರು ನಲ್ಲೆ-
ಮರೆವಿಗೆ ಮಿದುಳು
ಕಾರಣ. . .
ಪ್ರೀತಿ ಹೃದಯದ
ಪಿಸುಮಾತು
ಮರೆಯಲಿ ಹೇಗೆ?
ಒಮ್ಮೆ ಅದು ಗೂಡು
ಕಟ್ಟಿದ ಮೇಲೆ.

ಪ್ರೀತಿ ಕೊಟ್ಟಷ್ಟೂ-
ಬೇಡುತ್ತೆ ಕಣೆ. . .
ದೂರದಲ್ಲಿ ಇರುವ
ನಿನ್ನ ನಗುವನು
ದಿನವೂ ನೋಡಲು
ಮನಸು ಬೇಡುತ್ತೆ. . .
ಏನು ಮಾಡಲಿ?!
ಅದು ಅಪರೂಪ!
ಕೊನೆಪಕ್ಷ sms ಆದ್ರೂ
ಮಾಡು ಚಿನ್ನ. . .
ಅದುವೇ ನನ್ನ ಪಾಲಿಗೆ
ಪರಮಾನ್ನ!

ನಿನ್ನ ನೆನಪುಗಳಲ್ಲೂ
ಮನಸು ನರ್ತಿಸಿ
ನನ್ನ ಬಳಿ ಸುಳಿದಂತೆ
ಆಗುತ್ತದೆ. . .
ಅಂತಹ ಶಕ್ತಿಯನ್ನು
ನೀ ತುಂಬಿರುವೆ
ಈ ಪ್ರೀತಿಯಿಂದ. . .
ಈ ಮನಸಿನ ರಂಗಸ್ಥಳದಲ್ಲಿ
ನಿನ್ನ ನೆನಪೊಂದು
ಅಭೂತಪೂರ್ವ
ಪಾತ್ರಧಾರಿ.

ಮೊದಲ ಸ್ಪರ್ಶದ
ಮಧುರ ನೆನಪು
ಮರೆಯಲಾಗದು
ಕಣ್ಮುಚ್ಚಿದರೆ
ಸಾಕು ಬಿಡದೇ
ಪ್ರತಿಫಲಿಸುವುದು
ಮನಸಿನ ಪರದೆ ಮೇಲೆ. . .
ಅಲ್ಲೂ ನಿಚ್ಛಳ
ನಿನ್ನ ಪ್ರತಿಬಿಂಬದ
ಮಧುರ ವರ್ಣನೆ!

ಜೊತೆಗೆ ನೀನು ಇರದೇ,
ಮಲಗಲಿ ಹೇಗೆ?
ನಿನ್ನ ನೋಟ,ರೂಪ
ಸ್ಪರ್ಶ,ಸನಿಹ,ಆಲಿಂಗನ
ಚುಂಬನ,ಬಾಹುಬಂಧನ
ಜೊತೆಗಿರದೇ-
ಅವುಗಳ ವಾಸನೆ ಬಳಿ ಇರದೇ
ಈ ಮನಸಿಗೆ ಹರುಷವಿರದೇ
ಸುಖದ ಕನಸಲ್ಲೇ
ಮಲಗುವುದು ಹೇಗೇ?
ನೀ ಬಂದರೆ ಕಣ್ರೆಪ್ಪೆಗಳು
ಮುಚಿಕೊಳ್ಳಲೂಬಹುದು,
ಸುಖದ ಅಮಲಿನಲ್ಲಿ ನಾನು
ಮಿಂದು ಬೆವರಲೂಬಹುದು
ರಾತ್ರಿ ಸವಿಯಾಗಲೂಬಹುದು!

ಬದುಕಲು ಆಗದೇ
ಸತ್ತು ಹೋದ ಹೇಡಿ
ಎಂದು ಅನಿಸಿಕೊಳ್ಳಲು
ಆಗದೇ. . .
ನಾನು ಇನ್ನೂ
ಉಳಿದಿದ್ದೇನೆ. . .
ನಾನು ಇದ್ದು ಸತ್ತಿದ್ದೇನೆ!
ಸತ್ತಂತೆಯೇ ಇದ್ದೇನೆ. . .
ಎಷ್ಟು ಜನರಿಗಾದರೂ
ಗೊತ್ತು?!-ನಾನು
ಸತ್ತಿದ್ದೇನೆ ಎಂದು
ಬದುಕಿದ್ದೇನೆ ಎಂಬ
ಸುಳ್ಳು ಭ್ರಮೆಯಲ್ಲಿ
ಇದ್ದಾರೆ ಅವರು
ಬರೀ ಈ ನನ್ನ
ತೃಣ ಸಮಾನ ದೇಹವನು
ನೋಡುತ್ತ-
ಮನಸ್ಸಿನಲ್ಲೆ ಆಗಲೇ
ಎಂದೋ ನಾ
ಸತ್ತುಹೋಗಿದ್ದೇನೆ!

ವ್ಯರ್ಥ ಕಾಲಕ್ಷೇಪದ
ಆಕ್ಷೇಪಣೆಯನು
ಎದುರಿಸಲಾಗದೇ-
ನನ್ನತನದ
ಉಳಿವಿಗಾಗಿ
ಎಲ್ಲರಿಂದ
ದೂರವಾಗಬೇಕಾಯ್ತು…
ಅದರಲ್ಲೇ ನಗುನಗುತ
ಸಂತಸಪಡುತ
ಸಾಧನೆಯ ದಿಕ್ಕನು
ಅರಸಬೇಕಾಯ್ತು!

ಅವಳು ಮನದಲ್ಲಿ
ಹೆಜ್ಜೆಯಿಟ್ಟ
ಘಳಿಗೆಯಿಂದ
ನನ್ನ ಬದುಕಿನ
ಪಯಣದಲ್ಲಿ
ಹೋರಾಟದ ಕಿಡಿ
ಟಿಸಿಲೊಡೆಯಿತು
ಹೋರಾಟದ ಬೆಂಕಿಯ ಕಿಡಿ
ಧಮನಿ ಧಮನಿಯಲ್ಲೂ
ಪ್ರಜ್ವಲಿಸಿ
ಏಳಿಗೆಯ ಹೂವನು
ಅರಳಿಸಿತು.

ನೀನೆಬ್ಬಿಸಿದ
ಪ್ರೀತಿಯ ಅಲೆಗಳಲಿ
ತೇಲಲೂ ಆಗದೇ
ಎದುರಿಸಲೂ ಆಗದೇ
ಶರಣಾಗತನಾದೆ!
ಅದಕೆ ಆ ದೇವರು
ನಿನ್ನ ನಿರಂತರ
ಪ್ರೀತಿಯ ಸಾನಿಧ್ಯಕೆ
ಹೋಗಲೆಂದು
ಮುಳುಗಿಸಿ ಬಿಟ್ಟ!

ಅರಿಯದ ಕಂದಮ್ಮಗಳಿಗೆ
ಅರಿವಾಗುತ್ತೆ. . .
ಈ ಕಾಲದಲ್ಲಿ
ಪ್ರೀತಿಯೆಂದರೆ
ಏನೂಂತ!
ಏನು ಹೇಳಿ
ಏನು ಪ್ರಯೋಜನ
ಸಾವಿರ ಸಾರಿ ಹೇಳಿದರೂ
ಅವಳಿಗೆ
ಅರ್ಥವಾಗದೇ ಹೋಯ್ತು
ನನ್ನ ಮನದ ನಿಜ ಪ್ರೀತಿ!

ದೂರದೆಲ್ಲಿಂದಲೋ
ಆಸೆಯಿಟ್ಟುಕೊಂಡು
ಬಂದ ನಲ್ಲನನ್ನು
ಸುಮ್ಮನೆ ತಬ್ಬಿ
ಮುತ್ತಿಟ್ಟರೆ ಸಾಕು
ಅವನು ನಿಜಕು
ಜಗದ ದುಃಖ ಚಿಂತೆ
ಮರೆಯುತ್ತಾನೆ. . .
ಅವಳ ಮನದಲ್ಲೇ
ಪರವಶನಾಗಿ ಬಿಡುತ್ತಾನೆ!

ಕೊಂಚವೂ
ನಾಚಿಕೆ ಇಲ್ಲದೇ
ಎಲ್ಲವನೂ ಅವಳ
ಮುಂದೆ
ತಿಳಿಸಿ ಬಿಡುತ್ತೇನೆ
ಅದರ ಪ್ರಭಾವವೇ
ಇರಬೇಕು ಈ ನಡುವೆ
ಅವಳು ಸ್ತ್ರೀ ಸಹಜ
ನಾಚಿಕೆಯನ್ನೇ ಮರೆತಿದ್ದಾಳೆ.

ಕತ್ತಲೆಯ ಚಲನೆ
ವೇಗವಾದಷ್ಟೂ
ಹೆಂಡತಿಯ ಮನದ
ಬಡಿತದಿ ಏರುಪೇರು-
ನಸುಕಿನ ಭರದಲಿ
ನಲ್ಲ ಕೈತಪ್ಪಿ
ಹೋಗುವನಲ್ಲ!
ಬಿಗಿತವನು
ಸಡಿಲಿಸುವನಲ್ಲ
ಎಂದು!

ಸೋಲದೇ ಪ್ರೀತಿಯ
ಕೊಡಲು
ಆಗುವುದಿಲ್ಲ
ಪ್ರೀತಿಯನು ಗೆಲ್ಲಲು
ನಾನು ಅವಳ
ಮನಸಿನ ಮೈದಾನದಲ್ಲಿ
ಸೋಲಬೇಕಾಯ್ತು!
ಪ್ರೀತಿಯ ಹಂಬಲವೇ
ಅಲ್ಲವೇ
ನನ್ನ ಸೋಲು-ಗೆಲುವಿಗೆ
ಕಾರಣ!

ಅವಳೋ? ಇವಳೋ?
ಅಂತ ಬರೀ
ಗೊಂದಲದಲ್ಲಿರಲು
ನಿಜ ಪ್ರೀತಿ ಹೊತ್ತು
ನನಗಾಗಿ. . .
ನನ್ನ ಬರುವನೇ
ಕಾದವಳೇ ನನ್ನ
ಸತಿಯಾಗಿ ಈ
ನನ್ನ ಬಾಳನು
ಬೆಳಗುತಿಹಳು!

ಅಂಧಕಾರದ ಹಲವು
ಮಜಲುಗಳನು
ನಾ ದಾಟಿ ಬಂದಾಗ
ಪ್ರೇಮದ ಪಂಜು
ಹಿಡಿದು ಅವಳು
ನನಗಾಗಿ ಕಾದು
ನಿಂತಿದ್ದಳು.

ಈ ತುಂಬು ಬಾಳನು
ತುಂತುಂಬಿ
ಸವಿಯಬೇಕು. . .
ಅದಕೆ ಅವಳು
ಹೂವಾದರೆ.
ಅವಳ ಅಂತರಂಗದ
ತೋಟದಿ ನಾ
ದುಂಬಿಯಾಗಬೇಕು!

ಎಲ್ಲಕ್ಕೂ
ಮುಜುಗರಪಡುತ್ತಿದ್ದ
ಅವಳು ತನ್ನ
ಪ್ರೀತಿಯ
ವಿಷಯವನು
ಮನಬಿಚ್ಚಿ ಹೇಳಿದ್ದೇ
ವಿಪರ್ಯಾಸ!

ನೀನು ತುಂಬೋ
ಸ್ಥಾನವನು
ಬೇರಾವ ಹೆಣ್ಣು
ತುಂಬಲಾರಳು
ಅದಕೆ ನಾ ನಿನ್ನ
ಮನಃಪೂರ್ವಕವಾಗಿ
ನನ್ನ ಸತಿಯೆಂದು
ಒಪ್ಪಿ ಅಪ್ಪಿಕೊಂಡಿದ್ದು!

ಅಂದ ಚೆಂದವನೆಲ್ಲ
ಹೆಣ್ಣಿನಲ್ಲೇ
ಇಟ್ಟನಲ್ಲ!
ಅದಕೆ ಆ ಸೌಂದರ್ಯ
ಸವಿಯೋ ಆಸೆಗೆ
ಎಲ್ಲ ಗಂಡಸರು
ಹೆಣ್ಣಿನ ನಲ್ಲರಾಗಲು
ಬಯಸುತ್ತಾರಲ್ಲ!]ʼ

ಅವಳಂತೆ
ಕಾಡುವವಳು
ಬೇರೆಲ್ಲೂ ಇರಲಿಕ್ಕಿಲ್ಲ
ಅದಕ್ಕೆ ನನ್ನ ಕಾಡಿಯೇ
ಹೃದಯವನು ಹೊಕ್ಕು
ಅಲ್ಲೇ ಕೊನೆವರೆಗೂ
ಇರಲೆಂದು ನನ್ನ
ಒಪ್ಪಿಸಿದಳಲ್ಲ-
ನೀ ನನ್ನ ನಲ್ಲ
ಎಂದು ಕರೆದು
ಮರಳು
ಮಾಡಿಬಿಟ್ಟಳಲ್ಲ!

ನಿನಗೆ ನಾ ಸೋತೆ ಎಂದು
ಅವಳ ಮುಂದೆ
ಹೇಳಿದಾಗೆಲ್ಲ-
ಇಲ್ಲ ಇಲ್ಲ ಸೋತು
ಗೆದ್ದಿದ್ದೀರಿ ಅಂತಲೇ
ಹೇಳುತ್ತಾಳೆ!
ನನ್ನ ಹಿರಿಮೆಯನೇ
ಹೆಚ್ಚಿಸಲು ಬಯಸುತ್ತಾಳೆ
ಅದಕೆ ಸರಳತೆಯಿಂದಲೇ
ಇಷ್ಟವಾಗುತ್ತಾಳೆ!

ನನ್ನ ಪ್ರೀತಿ
ನಿಜವಾದುದು ಅದಕೆ
ಅವಳನು ನಾ
ಸತ್ತಮೇಲೂ
ಪ್ರೀತಿಸುತ್ತೇನೆ!
ಅವಳನ್ನು
ಮದುವೆ ಆದ
ದಿನವೇ ನಾನು
ಸತ್ತೆನಲ್ಲ!

ನನ್ನ ಮನದ
ಕದವ ತಟ್ಟಿ
ಒಳ ಬಂದು
ಬಿಗಿದಪ್ಪಿ
ಹೇಳಿದಳವಳು
ನನ್ನ ಪ್ರೀತಿಸುತ್ತೇನೆ
ಎಂದು-
ಬಾಗಿಲನು ಮುಚ್ಚಿ ಬಿಡಿ
ಎಂದಳು ಮತ್ತೆ
ಇನ್ನೆಂದೂ
ಹೊರ ಹೋಗುವ
ಪ್ರಮೇಯವೇ
ಇಲ್ಲವೆಂದೂ!

ಈ ಪ್ರೀತಿ ಒಂದು
ಇಂಜೆಕ್ಷನ್‌
ನಾ ಸೂಜಿಯಂತೆ!
ಒಳಗೆ ಹೋಗುವಾಗ
ಅಷ್ಟೇನೂ
ನೋವಾಗದು. . .
ಕೈ ಬಿಟ್ಟು
ಹೊರಬಂದ ಮೇಲೆ
ನೋವು ಶುರುವಾಗೋದು!

ಅವಳ ಮೊದಲ
ಸ್ಪರ್ಶದ ಹರ್ಷದ
ಹೊನಲಲ್ಲಿ
ತೇಲುವಾಗ-
ಜಗದ
ಕಷ್ಟ ಕೋಟಲೆಗಳ
ಕೋಟೆ
ನೆಲಸಮವಾಗಿ
ಕರಗಿ ಹೋದುದೇ
ಅರಿವಿಗೆ ಬಾರದಂತೆ
ಪವಾಡವೇ
ಆಗಿ ಹೋಯ್ತು!

ಇನಿಯನ
ಇಂಗಿತವನು ಅರಿತು
ಇನ್ನಿಲ್ಲದಂತೆ
ಅವನ ಆಸೆ
ಆಕಾಂಕ್ಷೆಗಳ
ಹಸಿವನು
ಇಂಗಿಸುತ್ತಾಳೆ
ನಿಜ ಸತಿ!

ಸೂರ್ಯಕಾಂತಿಯೂ
ಅವಳೇ
ಚಂದ್ರಕಾಂತಿಯೂ
ಅವಳೇ
ಅಂದಗಾತಿಯೂ
ಅವಳೇ
ಚೆಂದಗಾತಿಯೂ
ಅವಳೇ
ಒಂದು ನಿಜ ಸಂಗತಿ
ಎಂದರೆ-
ನನ್ನ ಬಾಳ ಸಂಗಾತಿ
ಅವಳೇ.

ಅವಳು ʼಕಿಸಕ್‌ʼ ಅಂತ
ಯಾಕೆ ನಕ್ಲು
ಗೊತ್ತಾ?!
ಹೇಳದೇ ಕೇಳದೇ
ಏಕಾಂತದಲ್ಲಿದ್ದಾಗ
ಅವಳ ಕಾಂತ
kiss
ಮಾಡಿಬಿಟ್ಟನಂತೆ!

No comments:

Post a Comment