ಶಾಲಾ ಕಲಿಕೆಯ ಭಾಗವಾಗಲಿ
ʼಪೈʼ ದಿನಾಚರಣೆ.
ಕೆಲವು ವಿಶಿಷ್ಟ ದಿನಗಳನ್ನು ವಿಶೇಷವಾಗಿಯೇ
ಆಚರಿಸುವುದನ್ನು ಎಲ್ಲೆಡೆ ನಾವು ನೋಡುತ್ತೇವೆ.
ಶಿಕ್ಷಕರ ಪಾಲಿಗೆ ದಿನಾಚರಣೆಗಳನ್ನು ಶಾಲೆಗಳಲ್ಲಿ ಅನುಷ್ಠಾನದ ಹೆಸರಿನಲ್ಲಿ ಸಾಕ್ಷೀಭೂತವಾಗಿ ದಾಖಲೀಕರಣ
ಸಮೇತ ಆಚರಿಸುವ ಪರಿಪಾಠವು ಜಾರಿಯಲ್ಲಿರುವುದು ಹೊಸದೇನಲ್ಲ. ಈಗಾಗಲೇ ಶಾಲೆಗಳಲ್ಲಿ ವಿವಿಧ ಸಂಘಗಳಿವೆ.
ಗಣಿತ ಕ್ಲಬ್ ನ ಭಾಗವಾಗಿ ಆಸಕ್ತಿ ಮತ್ತು ಆಸ್ಥೆಯಿಂದ ಆಚರಿಸಬಹುದಾದ ಮತ್ತೊಂದು ದಿನಾಚರಣೆಯೇ ಪೈ ದಿನಾಚರಣೆ.ಮಾರ್ಚ್
14 ಖ್ಯಾತ ಭೌತ ವಿಜ್ಞಾನಿ ಅಲ್ಬರ್ಟ್ ಐನ್ ಸ್ಟೀನ್
ನ ಜನ್ಮದಿನವೂ ಹೌದು.
ʼಪೈʼ ಗೆ
ಒಂದು ದಿನ ಏಕೆ ಬೇಕು?
ಪೈ ದಿನವನ್ನು ಪ್ರತಿ ವರ್ಷ ಮಾರ್ಚ್ 14 ರಂದು ವಿಶ್ವದಾದ್ಯಂತ ಗಣಿತ ಲೋಕದ ಪ್ರಸಿದ್ಧ ಸ್ಥಿರಾಂಕ
ಪೈ (
ಅಥವಾ pi)ಯ ವ್ಯಾಪಕತೆಯ ಜ್ಞಾಪಕಾರ್ಥವಾಗಿ ಆಚರಿಸಲಾಗುತ್ತಿದೆ. ಮಾರ್ಚ್ 14ನ್ನೇ (3/14; ತಿಂಗಳು/ದಿನಾಂಕ ನಮೂನೆಯಲ್ಲಿ
ಅರ್ಥೈಸಿಕೊಂಡಾಗ )ಆಯ್ದುಕೊಳ್ಳಲು ಕಾರಣ 3,1 ಮತ್ತು 4 ಅಂಕಿಗಳು
ಯ ದಶಮಾಂಶದ ಬೆಲೆಯ ಪ್ರಾರಂಭಿಕ ಮೂರು ಅಂಕಿಗಳಾಗಿರುವುದು.
ಇನ್ನು ಪೈ ಯ ಸೂತ್ರ
ಎಲ್ಲರಿಗೂ ಗೊತ್ತಿರುವಂತದ್ದೇ! ಕ್ರಿ.ಶ.2009 ರಲ್ಲಿ ಅಮೆರಿಕಾ
ಸಂಯುಕ್ತ ಸಂಸ್ಥಾನವು ಪೈ ದಿನಾಚರಣೆಯನ್ನು ಪ್ರೋತ್ಸಾಹಿಸಿತು.
ಪೈ ಯ ಬೆಲೆಯನ್ನು ಭಿನ್ನರಾಶಿಯಲ್ಲಿ ಸಾಮಾನ್ಯವಾಗಿ
22/7 ಎಂದು ಹೇಳುವುದರಿಂದ ಜುಲೈ 22ನ್ನು ಪೈ ಯ ಅಂದಾಜು ದಿನ(Pi Approximation Day) ಎಂದು ಗುರುತಿಸಲಾಗಿದೆ.
ಆರ್ಕಿಮಿಡೀಸ್ ನು
ಯ
ಬೆಲೆಯನ್ನು ದಶಮಾಂಶಕ್ಕೆ ಪರಿವರ್ತಿಸಿ ಮೊದಲ ಮೂರು ಅಂಕಿಗಳನ್ನು ಗಮನಿಸಬೇಕೆಂದು ತಿಳಿಸಿದ ಕಾರಣದಿಂದ ಮಾರ್ಚ್ 14 ರಂದು ʼಪೈʼದಿನವನ್ನು
ಆಚರಿಸಲಾಗುತ್ತಿದೆ.
ಇದೇ
ದಿನ ವಿಶ್ವವಿಖ್ಯಾತ ʼಸಾಪೇಕ್ಷತಾ ಸಿದ್ದಾಂತʼ ( Theory Of Relativity )ದ ಪ್ರತಿಪಾದಕ; ರಾಶಿ-ಶಕ್ತಿ
ಸಮಾನತಾ ಸಿದ್ಧಾಂತ (E=m
)
ದ ರೂವಾರಿ ಅಲ್ಬರ್ಟ್ ಐನ್ ಸ್ಟೀನ್ ಅವರ ಜನ್ಮದಿನವೂ ಇರುವುದು ಭೌತವಿಜ್ಞಾನ ಹಾಗೂ ಗಣಿತದ ಭಾವೈಕ್ಯತೆಗೆ
ಕಾರಣವಾಗಿದೆ.
ಐತಿಹಾಸಿಕ ಹಿನ್ನೆಲೆ:-
ಮೊದಲಿಗೆ
ದೊಡ್ಡ ಪ್ರಮಾಣದಲ್ಲಿʼಪೈʼದಿನಾಚರಣೆಯನ್ನು ಆಚರಿಸಿದ ಕೀರ್ತಿ ಲ್ಯಾರಿ ಶಾ ಎಂಬುವವರಿಗೆ ಸಲ್ಲುತ್ತದೆ.ಇದನ್ನು
1988ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಆಚರಿಸಲಾಯಿತು.12ನೇ ಮಾರ್ಚ್ 2009 ರಲ್ಲಿ ಈ ದಿನಾಚರಣೆಗೆ ಅಮೆರಿಕಾ ಸಂಸ್ಥಾನವು ಯಾವುದೇ
ಅಡೆತಡೆಗಳಾಗ ಬಾರದೆಂದೆಂಬ ದೃಷ್ಟಿಯಿಂದ ʼHRES
224’ ನಿರ್ಧಾರದ ಮೂಲಕ ಪೈ ದಿನಾಚರಣೆ ವ್ಯಾಪಕ ಪ್ರೋತ್ಸಾಹ ನೀಡಿತು.
2010ರಲ್ಲಿ
ಪೈದಿನದ ಪ್ರಯುಕ್ತ ಗೂಗಲ್ ಡೂಡಲ್ ಚಿತ್ರಗಳನ್ನು
ಯ ಸಂಕೇತದಂತೆ,ಇಡೀ ವಿಶ್ವದ ಜನತೆಗೆ ಅಂರ್ಜಾಲದ ಮೂಲಕ ಪ್ರಯೋಜನ
ಪಡೆಯಲು ಅನುಕೂಲವಾಗುವಂತೆ ಪ್ರಕಟಿಸಿತು. 2014ರ ಮಾರ್ಚ್ ನ ಸಂಪೂರ್ಣ ಮಾಹೆಯನ್ನು ಪೈ ತಿಂಗಳು ಎಂದೇ
ಸಂಭ್ರಮದಿಂದ ಆಚರಿಸಲಾಯಿತು.
ಈ ದಿನವನ್ನು ವಿಭಿನ್ನವಾಗಿ ಆಚರಿಸುವವರಿದ್ದಾರೆ.
ಪೈ ಖಾದ್ಯವನ್ನು ತಿನ್ನುವುದರಿಂದ, ಎಸೆಯುವುದರಿಂದ, ದಶಮಾಂಶದಲ್ಲಿಯೇ ಅತಿ ದೊಡ್ಡ ಬೆಲೆ ಹೊಂದಿದ ಸ್ಥಿರಾಂಕವಾದ
ಪೈಯ ಮಹತ್ವವನ್ನು ಚರ್ಚಿಸುವುದರ ಮುಖೇನ ಶಾಲಾ-ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ
ಹೀಗೆ ನ್ಯೂಜೆರ್ಸಿಯ ಪ್ರಿನ್ಸ್‌ಟನ್ ನಗರ, ಅಲ್ಬರ್ಟ್ ಐನ್ ಸ್ಟೀನ್ರ ಜನ್ಮದಿನ ಮತ್ತು ಪೈ ದಿನವನ್ನು
ಸಮೀಕರಿಸುವ ದೃಷ್ಟಿಯಿಂದ ಈ ದಿನವನ್ನು ವಿಜೃಂಭಣೆಯಿಂದ ಆಚರಿಸುತ್ತಿದೆ. ಈ ದಿನದಂದು ಪೈ ಯ ಬೆಲೆಯ
ಬಗ್ಗೆ ಸ್ಪರ್ಧೆಗಳು,ಪೈ ಖಾದ್ಯಗಳನ್ನು ತಿನ್ನುವುದರ ಮೂಲಕ ಸಂಭ್ರಮಿಸಲಾಗುತ್ತಿದೆ. ಅಲ್ಬರ್ಟ್ ಐನ್
ಸ್ಟೀನ್ ತನ್ನ ಜೀವಿತ ಅವಧಿಯ 20 ಮಹತ್ವಪೂರ್ಣ ವರ್ಷಗಳನ್ನು ಪ್ರಿನ್ಸ್ ಟನ್ ನಗರದಲ್ಲಿಯೇ ಕಳೆದುದುರ
ಅಭಿಮಾನವೂ ಇದರಲ್ಲಿ ಸೇರಿಕೊಂಡಿದೆ.
ʼಮೆಸ್ಸಾಚುಸೆಟ್ಸ್
ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿʼಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ನಿರ್ಧಾರ ಪತ್ರಗಳನ್ನು
ಪೈ ದಿನದಂದೇ ಇ-ಮೇಲ್ ಮಾಡಲಾಗುತ್ತಿದೆ. 2012ರಲ್ಲಿಯೇ ಈ ವಿಧಾನವನ್ನು ಜಾರಿಗೆ ತಂದಿದ್ದು ಮಾರ್ಚ್
14 ಸಂಜೆ 6:28ಕ್ಕೆ ಖಾಸಗಿಯಾಗಿ ಇಲೆಕ್ಟ್ರಾನಿಕ್
ಮೇಲ್ ಮೂಲಕವೇ ಕಳಿಸುವುದಾಗಿ ಘೋಷಿಸಿದೆ.ಆ ಸಮಯವನ್ನು ತಾವ್ ಸಮಯ ಎಂದು ಕರೆಯಲಾಗಿದ್ದು ‘pi’ ಮತ್ತು
‘Tau’ ನ್ನು ಸಮಾನವಾಗಿ ಕಾಣುವುದು ಅವರ ಉದ್ದೇಶ.
ಮೊದಲನೇಯ
ಆರ್ಯಭಟ ʼಪೈʼ ಯ ಬೆಲೆಯನ್ನು ನಾಲ್ಕು ದಶಮಾಂಶ ಸ್ಥಾನಕ್ಕೆ
ಸರಿಯಾಗಿ 3.1416 ಎಂದು ನೀಡಿದುದಲ್ಲದೆ,ಈ ಬೆಲೆಯು ಸರಿಸುಮಾರಾದ ಬೆಲೆ ಎಂದು ಶ್ಲೋಕವೊಂದರಲ್ಲಿ ಹೇಳಿದ್ದಾನೆ.ಅದರ
ಅರ್ಥ ಹೀಗಿದೆ:ʼಒಂದು ನೂರಕ್ಕೆ ನಾಲ್ಕನ್ನು ಸೇರಿಸಿ, ಎಂಟರಿಂದ ಗುಣಿಸು ಮತ್ತು ಅರವತ್ತೆರಡು ಸಾವಿರವನ್ನು
ಸೇರಿಸು; ಇದು ಸರಿಸುಮಾರಾಗಿ ಇಪ್ಪತ್ತು ಸಾವಿರ ವ್ಯಾಸವಿರುವ ವೃತ್ತದ ಪರಿಧಿಗೆ ಸಮನಾಗಿರುತ್ತದೆ.ʼ
ಕೇರಳ
ರಾಜ್ಯದ ಕಡಲ ತೀರದ ಕೊಚ್ಚಿಯ ಹತ್ತಿರದ ಸಂಗಮ ಗ್ರಾಮದಲ್ಲಿ ಜನಿಸಿದ ಮಾಧವನು (ಕ್ರಿ.ಶ.1350-1425)
ಯ
ಬೆಲೆಯನ್ನು ಹನ್ನೊಂದು ದಶಮಾಂಶ ಸ್ಥಾನಕ್ಕೆ ಸರಿಯಾಗಿ ಲೆಕ್ಕಿಸಿ
3.14159265359 ಎಂದು ಹೇಳಿದ್ದಾನೆ. 20ನೇಯ ಶತಮಾನದ ಶ್ರೇಷ್ಠ ಸೃಜನಶೀಲ ಗಣಿತಜ್ಞರಾದ ಶ್ರೀನಿವಾಸ
ರಾಮಾನುಜನ್ ಪೈಯ ಬೆಲೆಯನ್ನು ನೀಡಿದ್ದಾರೆ. ಕಂಪ್ಯೂಟರ್
ಬಳಸಿ ಪೈ ಬೆಲೆಯನ್ನು ಹತ್ತು ಲಕ್ಷ ಸ್ಥಾನದವರೆಗೆ ಕಂಡುಹಿಡಿಯಲಾಗಿದೆ.ಎರಡು ಸಾವಿರ ವರ್ಷಕ್ಕೂ ಹಿಂದೆಯೇ
ಪರಿಚಿತವಿದ್ದ ಪೈಯ ಬೆಲೆಯು ಮೊದಲ ಬಾರಿ ಕಾಣಿಸಿದ್ದು ಕ್ರಿ.ಶ.1706ರಲ್ಲಿ ಖ್ಯಾತ ಗಣಿತ ಮೇಧಾವಿ ಸರ್
ವಿಲಿಯಂ ಜೋನ್ಸ್ ಬರೆದ “ ಸಿನೋಪ್ಸಿಸ್ ಪಲ್ಮರಿಯೋರಮ್ ಮ್ಯಾಥೆಸಿಯೋಸ್” ಎಂಬ ಪುಸ್ತಕದಲ್ಲಿ ಮೊದಲಬಾರಿಗೆ
ಲ್ಯಾಟಿನ್ ಲಿಪ್ಯಕ್ಷರದಲ್ಲಿ ಬಳಕೆಯಾದುದನ್ನು ನೋಡುತ್ತೇವೆ. ಗಣಿತದಲ್ಲಿ ಭದ್ರವಾಗಿ,ವ್ಯಾಪಕವಾಗಿ
ಬಳಕೆ ಪ್ರಾರಂಭ ವಾದದ್ದು ತೀರಾ ಇತ್ತೀಚಿನ ಎಂಭತ್ತು ವರ್ಷಗಳಿಂದಷ್ಟೇ!ಸರ್ ವಿಲಿಯಂ ಜೋನ್ಸ್ ರ ಆ
ಪುಸ್ತಕವು ಆ ಕಾಲದ ಐಸಾಕ್ ನ್ಯೂಟನ್ ಮತ್ತು ಎಡ್ಮಂಡ್ ಹ್ಯಾಲಿಯವರ ಗಮನ ಸೆಳೆದಿತ್ತು.
ಇಷ್ಟೊಂದು ವೈಶಿಷ್ಟಪೂರ್ಣ ಅಂಶವುಳ್ಳ ಪೈಯ ದಿನಾಚರಣೆಯು ಶಾಲಾ ಗಣಿತ ಕಲಿಕೆಯ ಅವಿಭಾಜ್ಯ ಅಂಗವಾಗಬೇಕು.
ಮಕ್ಕಳು ಪೈಯ ಬಗೆಗಿನ ವಿಚಾರಗಳನ್ನು ಈ ಸಂದರ್ಭದಲ್ಲಿ ಚರ್ಚಿಸಬೇಕು,ವಿಮರ್ಶಿಸಿ ಕಲಿಯುವಂತಾಗಬೇಕೆಂಬುದನ್ನು ಶಿಕ್ಷಕರು ಗಮನಹರಿಸಿ ಶಾಲೆಗಳಲ್ಲಿ
ಆಚರಿಸುವುದೊಳ್ಳೆಯದಾಗಿದೆ.
No comments:
Post a Comment