Sunday, July 19, 2020

Mru'Nalini'


ಏತಕೀ ಜೀವನ?!
ಸಮ್ಮಿಲನಗಳ ಸ್ಪಂದನ
ಏತಕೀ ಸ್ಪಂದನ?!
ಮನಸಿನ ಯೋಚನೆಗಳ
ನಡುವಿನ ಅನುಸಂಧಾನ
ಏತಕೇತಕೀ...
ಭಾವಸ್ಪುರಣ
ಪ್ರೀತಿ-ಪ್ರೇಮಗಳ
ಸಂಕಲನ?!

ಮರೆಯದಂಥ
ಕೈ ಬಿಡದಂಥ
ಮಾಯೆ ಈ ಪ್ರೀತಿ
ಎಲ್ಲೇ ಹೋದರೂ
ಬೇಡ ಅಂದರೂ
ಬೆನ್ನಟ್ಟಿ ಮರಳು
ಮಾಡದೇ ಇರದು
ಈ ಪ್ರೀತಿ...
ಯಾರನ್ನೂ ಕೇಳದೇ
ಯಾರನ್ನೂ ಬಿಡದೇ
ನಿರಂತರವಾಗಿ
ಜೊತೆಗುಳಿಯುವುದೇ
ಈ ಪ್ರೀತಿ...
ಅಹುದಹುದು ಅದು
ಹಾಗೆಯೇ!
ಈ ಪ್ರೀತಿಯ
ರೀತಿ ನೀತಿ.

ನಲ್ಲೆಯ
ಸ್ಪರ್ಶಿಸದೇ
ಇದ್ದರೆ
ಪ್ರೀತಿಯಿಲ್ಲ
ಎಂದರ್ಥವಲ್ಲ
ಪ್ರೀತಿ ದೇಹಕ್ಕಲ್ಲ
ಮನಸ್ಸಿಗೆ
ಹೃದಯಕ್ಕೆ
ಆತ್ಮಕ್ಕೆ
ನನ್ನಂತರಾತ್ಮದಲಿ
ನಿನ್ನ ಪ್ರೀತಿ
ಅಜʼರಾಮʼರ.

ಓ ನನ್ನ ಮಾತುಗಳೇ
ನನ್ನೊಡಲ ಕವಿತೆಗಳೇ...
ಅವಳ ಹೃದಯದ ಕದವ
ತಟ್ಟಿ-ಒಳ ಹೋಗಿ ಬನ್ನಿ
ನನ್ನವಳ ಹೃದಯದಿ
ನನ್ನ ಪ್ರೇಮದ
ಭಾವನೆಗಳ ತುಂಬಿ ಬನ್ನಿ
ಬರುವಾಗ ಅವಳನು
ನನ್ನ ಬಳಿ ಕರೆತನ್ನಿ!

ಯಾರನ್ನೂ ನೆಚ್ಚದ
ನಾನು
ನೆಚ್ಚಿದ್ದು ಒಬ್ಬಳನ್ನೇ!
ಅವಳೇ
ನನ್ನ ಹೃದಯ
ಸಮುದ್ರದ ತೀರದಲ್ಲಿ
ಸದಾ ನನಗಾಗಿ
ಹಾತೊರೆಯುವ
ನನ್ನ ಪ್ರೀತಿಯ ಮನದನ್ನೆ!

ನೀನಿರದೆ ನನ್ನಲ್ಲಿ
ವಿರಹದಾ ವೇದನೆ
ನಿನ್ನ ಮನದಲ್ಲಿ
ನಮ್ಮ ಪ್ರೇಮ ಶೋಧನೆ
ನೀನಿಲ್ಲದೆ ಇರುವ
ಅನುಕ್ಷಣವೂ ನನ್ನಲ್ಲಿ
ಅರಣ್ಯರೋಧನೆ...
ಸದಾ ನನ್ನ
ಜೊತೆಗಿರಲು ನಿನಗೊಂದು
ನಿವೇದನೆ!

ನಿನ್ನ ನಡೆಯ
ಜೊತೆಗೆ ನನ್ನ
ಹೆಜ್ಜೆ...
ನನ್ನ ನುಡಿಯ
ಜೊತೆಗೆ ನಿನ್ನ ಗೆಜ್ಜೆ...
ಹೀಗೆ ನನಗಾಗಿ ನೀ
ನಿನಗಾಗಿ ನಾ...
ಸಮ್ಮಿಳಿತ
ಮಧು ಬನದ
ಹೂ-ದುಂಬಿಗಳಂತೆ!



ಚಿನ್ನ ಹೇಳೆ ಹೇಗಿರುವೆ?
ನೀನು ಇರದೆ ನೊಂದಿರುವೆ
ನಿನ್ನ ಹಾದಿಯನೇ ನಾ
ಕಾದಿರುವೆ...
ಬಹುಬೇಗ ನೀ ಬಾ
ನನ್ನೊಲವೇ...
ಅಕ್ಕರೆಯ ಒಲವ ತಾ
ಓ ಚೆಲುವೆ!



ನನಗಾಗಿಯೆಂದು
ನೀ ಬಳಿ ಬಂದು
ನನ್ನೆದೆಗೆ ತಾಗಿ ನಿಂದು
ತಬ್ಬಿ ಮುದ್ದಿಸಿ
ಚುಂಬಿಸುವ ಸಮಯ
ಸ್ವರ್ಗವೇ ಭುವಿಗಿಳಿದು
ಬಂದಂಥ ಅನುಭವ
ಆಹಾ! ನೆನೆದರೆ ವಿಸ್ಮಯ!

ಮಳೆಯಲ್ಲಿ ನೆನೆದರೆ
ದೇಹ ತಂಪಾಯ್ತು
ಬೆಚ್ಚನೆಯ ಹಾಸಿಗೆಯಲ್ಲಿ
ನಿನ್ನ ನಾ ನೆನೆದಾಗ
ಅದ್ಹೇಗೆ ಈ ನನ್ನ
ಮನಸ್ಸು ತೇವವಾಯ್ತು!
ಎಂಥ ರೋಚಕ
ಅಲ್ಲವೇ, ಈ ಪ್ರೀತಿ!

ನಾಳೆಯ ಬಗ್ಗೆ
ನನಗೆ ನಂಬಿಕೆ
ಕಮ್ಮಿ ಓ ಮನದನ್ನೆ...
ಅದಕೇ ಇಂದು
ಎಷ್ಟು ಸಾಧ್ಯವೋ
ಅಷ್ಟು ಕಚ್ಚಬೇಕು
ಅನಿಸುತಿದೆ ನಿನ್ನ
ಈ ಮೃದುವಾದ ಕೆನ್ನೆ!

ಬೆಚ್ಚನೆಯ ಬಯಕೆಗಳು
ಮನಸಿನಲ್ಲಿ
ಮನೆಕಟ್ಟಿದಾಗ
ಅವನ್ನು
ಅನುಭವಿಸಲು
ಹೆಂಡತಿಯ
ಜೊತೆಗಿರಲು
ನಾನೊಂದು ಮನೆಯ
ಮಾಡಬೇಕು.

ಅಂಗಲಾಚಿ ಬೇಡುವುದು
ನಿಜವಾದ ಪ್ರೀತಿಯಲ್ಲ
ನಿಜವಾದ ಪ್ರೀತಿ
ತಾನೇ ತಾನಾಗಿ
ಎರಡು ಮನಸ್ಸುಗಳ
ನಡುವೆ ಹರಳುಗಟ್ಟುತ್ತದೆ!





ತಿಳಿದೋ
ತಿಳಿಯದೆಯೋ
ಏರ್ಪಟ್ಟ ಈ
ಪ್ರೇಮ ಬಂಧನ
ಕಾಲದ ಗತಿಗೆ ಸಿಕ್ಕು-
ನರಳದಿರಲಿ...
ಆ ಸರಪಳಿಯಲಿ
ಬಾಡದಿರಲಿ...
ಮನಗಳ ನಡುವಿನ
ಈ ಮಧುರ
ಸಂಬಂಧ
ಸಮೃದ್ಧಿಯಾಗಲಿ.

ಏನೂ ಇಲ್ಲದ
ನನಗೆ
ಭೂಮಿ-ಬಾನಿನ
ಅರಿವಾದರೂ
ಇತ್ತು
ನೀ ಬಂದ ಮೇಲೆ
ಎರಡರ ಮಧ್ಯೆ
ತೇಲ್ತಾ ಇದ್ದೀನಿ!
ಇಂಥ ಸ್ಥಿತಿಗೆ
ತಂದವಳೇ-
ಹೇಳು
ನೀ ಯಾರು?!
ನಾನೋ
ಎಂದೆಂದೂ
ಇಂತಿ ನಿನ್ನ
ʼಪ್ರೀತಿಯʼ...


ಮೃಣಾಳಿನಿ.
~~~~~~~~~
ಮಾತಿಲ್ಲದೇ
ಕತೆಯಿಲ್ಲದೇ
ಕಳೆದು ಹೋಯಿತೆಷ್ಟು ಕಾಲ!
ಎಲ್ಲಿದ್ದೆ ಇಷ್ಟು ವರುಷ
ನೀನೂ ಸಮಯವ-
ಸುಮ್ಮನೇ ಕಳೆದೆಯಾ ಕಾಯುತ...
ಹೊಗಲಿ ಬಿಡು
ಈಗಲಾದರೂ ಸಿಕ್ಕೆಯಲ್ಲ!
ಇನ್ನೂ ದಿನಗಳು
ಇವೆಯಲ್ಲ!
ಈ ಮನದ ಭಾವನೆಗಳ
ವಿನಿಮಯಕೆ
ನನ್ನ ʼʼಮೃಣಾಲಿನಿ”ಯ
ಅಂತರಂಗದ
ಗರ್ಭದಲಿ ನಿರಂತರವಾಗಿ
ನೆಲೆಗೊಳ್ಳಲು...
ಪ್ರೀತಿಯ ಪಾವಿತ್ರ್ಯತೆಯಲಿ
ಆತ್ಮದೊಳು ನಾ
ಸಂಗಮಗೊಳ್ಳಲು.

ಹೇಳ ಹೆಸರಿಲ್ಲದಂತೆ
ಹೊರಟು ಹೋಗುತಲಿದೆ
ಕಾಲ
ಅದರಲ್ಲೂ ಕಳವಳ
ತಳಮಳ
ನೀನಿರದೆ ಅನುಕ್ಷಣವೂ
ಸ್ಮಶಾನ ಮೌನ!

ಪ್ರೀತಿಗೆ-
ಹಗಲಿಲ್ಲ ಇರುಳಿಲ್ಲ
ಹೊತ್ತು ಗೊತ್ತಿಲ್ಲ
ಇದರಲ್ಲಿ ಬಿದ್ದಾಗ
ಹೊತ್ತು ಹೋಗುವುದೇ
ತಿಳಿಯುವುದಿಲ್ಲ
ಕಾಲದ ಮಿತಿಗೆ
ಒಳಪಡುವವರು
ಇದರ ಹತ್ತಿರ
ಸುಳಿಯುವುದು
ಅಷ್ಟು ತರವಲ್ಲ.
ಇಂಪಿಲ್ಲ ಕಂಪಿಲ್ಲ
ಸೊಂಪಿಲ್ಲ ತಂಪಿಲ್ಲ
ಅನ್ನುತ್ತಿದ್ದನಲ್ಲ!
ಅವನಾದ ನನ್ನ ನಲ್ಲ-
ಅದಕೆ ಅವುಗಳನೆಲ್ಲ!
ಸಿಗುವಂತೆ ಮಾಡಿದೆನಲ್ಲ!
ಅವನ ಮುಂದೆ ಅರ್ಪಿಸಿದೆನಲ್ಲ-
ನನ್ನ ಮನದ ಪ್ರೀತಿಯ ಸೊಲ್ಲ!

ಅರ್ಥವಾಗದ ಎಷ್ಟೋ
ಪ್ರಶ್ನೆಗಳನ್ನು
ಹಿಡಿದುಕೊಂಡು
ನಿನ್ನ ಮುಂದೆ ಇಂದು
ಬಗೆ ಹರಿಸಿಯೇ
ಬಿಡಬೇಕೆಂದು ಕೊಂಡೇ
ನಾ ನಿನ್ನ ಬಳಿ
ಬರುತ್ತೇನೆ!
ನಿನ್ನ ಕಂಡ ಮೇಲೆ
ನೀನೇ ದೊಡ್ಡ
ಪ್ರಶ್ನೆಯಾಗಿ
ಕಂಡು ಬಿಡ್ತೀಯಾ!
ಏನು ಮಾಡಲಿ
ನಿನ್ನ ಪ್ರೀತಿಯ
ಮುಂದೆ ಸತ್ಯದ
ಸಾಕ್ಷಾತ್ಕಾರದ
ಕಲ್ಪನೆಯೂ
ಕರಗಿ ಹೋಗುತ್ತದೆ!

ಈ ಪ್ರೀತಿಯಲ್ಲಿ
ಹೊಸ ಕ್ರಾಂತಿ
ಮಾಡ ಬೇಕೂಂತ
ಅನಿಸ್ತಾ ಇದೆ
ಕಣೆ!
ನಿನ್ನದೇ
ಮುಂದಾಳತ್ವ
ನಾನೇನೇ ಇದ್ರೂ
ಬರೀ
ಕಾರ್ಯಕರ್ತ!

ಎಲ್ಲೇ ಹೋದರೂ
ದೂರವೇ ಇದ್ದರೂ,
ಚಿತ್ತದ ಗತಿಯು
ಮತ್ತೆ ಮತ್ತೆ ಎಲ್ಲೆಲ್ಲೋ ಸುತ್ತಿ
ಅವಳೆಡೆಗೆ ಹಾತೊರೆದು
ಎಲ್ಲ ತೊರೆದು ಬರುವುದು
ನನ್ನ ʼಮೃಣಾಲಿನಿʼಯ ಕಡೆಗೆ
ಎಂದಿನ ಕಾತುರತೆ
ಸುಳಿಯುವುದು ಮನದಲ್ಲಿ...
ಒಂದೇ ಉಸಿರಿನಲಿ
ಎಲ್ಲವನೂ ಹೇಳಿ
ಬರಿದು ಆಗದಿರಲಿ
ನಿನ್ನ ಮಾತಿನ ಕಣಜ
ನೀ ಎಲ್ಲೇ ಇದ್ದರೂ,
ನಾ ಬಳಿ ಬಾರದಿದ್ದರೂ,
ಮನಸು ಮಾತ್ರ ನಿನ್ನಲ್ಲೇ!
ನಾ ಎಂದೆಂದೂ ನಿನ್ನ
ಸಾಂಗತ್ಯದ ಸುತ್ತ
ಸುತ್ತುವುದು ನಿಜ
ನಿನ್ನ ಮನದಲ್ಲೇ
ಹುದುಗಿ ಹೋಗಿಹ
ʼʼಪ್ರೇಮ ಖನಿಜ”

ಹೆಣ್ಣಿನ ನಗು
ಕಲ್ಲು ಸಕ್ಕರೆಗಿಂತ ಸವಿ
ಸವಿದರೂ ಸಿಹಿ
ಸವಿಯದಿದ್ದರೂ ಸಿಹಿ
ಮುಖದಲ್ಲಿ ಏನಿಲ್ಲ
ಎಂಬುದ ನಾ ಬಲ್ಲೆ
ಅದಕೆ ಅವಳ ಆ
ನಗುವನ್ನೇ ನೆನೆನೆನೆದು
ಮರೆತೆ ನಾ ನನ್ನಲ್ಲೇ!

ನನಗಂತೂ ಯಾರೂ ಇಲ್ಲ
ನಿನ್ನವರು ಅಂತ ನಿಂಗೂ ಯಾರಿಲ್ಲ!
ತಂಟೆ-ತಕರಾರು ಅಂತ ಯಾವ ಭಯವಿಲ್ಲ
ನಾವೇಕೆ ಜಂಟಿಯಾಗಿ
ಪ್ರೇಮಕ್ಕೆ ಶ್ರೀಕಾರ ಹಾಕಬಾರದು?!
ಸವಿಸ್ತಾರ ಬದುಕ ಸವಿಯಬಾರದು!
ಪ್ರೇಮದ ʼಹೃದಯ ಗೀತೆ” ಹಾಡಬಾರದು?!!!

ದಿಕ್ಕೆಟ್ಟು ನಿಂತಾಗ
ಆಸರೆಯಾಗಿ ನಿಂತು
ನಿನ್ನನ್ನು ಮೇಲಕ್ಕೆ ತಂದು
ಈಗ ನನ್ನ ದಿಕ್ಕು ಕೆಟ್ಟು
ನಿನ್ನ ಸಂದರ್ಶನಕ್ಕೆ
ಮೌನದಲ್ಲೇ
ಕಾಯ್ತಾ ಇದ್ದೀನಲ್ಲ!
ಹಾಗಾದ್ರೆ ನಾನ್ಯಾರು?

ಪ್ರೀತಿಯ ವರ್ತನೆ
ಬಗೆ ಬಗೆ...
ಅದು ದೇಹದಲಿ
ಬೆಂಕಿಯಂಥ ಬೇಗೆ!
ಆದರೆ ಮುಖದಲ್ಲಿ
ಸದಾ ತುಂಬುವುದು
ಹೂ ನಗೆ!!
ಹೃದಯವೇ ನೀ
ನನ್ನ ಹೃದಯದಲಿ
ಉಸಿರಾಗು ಬಾ...
ಆ ಉಸಿರನು
ಹಸಿರಾಗಿಸಿ.
ಹೆಸರಾಗಿಸಲು
ಬದುಕಾಗಿ ಬಾ
ಈ ಬದುಕಿಗೆ ಬೆಳಕಾಗಿ ಬಾ
ಬೆಳಕಾಗಿ ಹೊಳಪು ತಾ!

ನೀನು ಎದುರಿಗೆ
ಇರದಾಕ್ಷಣ
ಮನದಲಿ
ಯಾತನೆಯ ಭಾವನೆ
ನಿನ್ನ ನೆನಪಲ್ಲೇ
ನಾ ಇರಲು
ನೂರೆಂಟು ಯೋಚನೆ
ಹೊತ್ತಿ ಉರಿಯಲು
ದೇಹದಲಿ ಬಗೆಬಗೆಯ
ಕಾಮನೆ...               
ನಿನ್ನ ನಾ ಕರೆದರೆ
ಆಗ ನೀ ನನಗೆ
ಬೇಕೆಂಬ ಸೂಚನೆ.

ನನ್ನ ತುಟಿಗಳನು
ಚುಂಬಿಸಲಾದರೂ
ನೀ ಜೊತೆಗೆ
ಇರಬೇಕು
ಇಲ್ಲದಿರೆ ನಿನ್ನ ಆ
ಬಿಸಿ ತುಟಿಗಳಾದರೂ
ಮಧುಪಾನ
ಮಾಡಲದೆಷ್ಟು ದಿನ ಅಂತ
ಕಾಯಬಲ್ಲವು?!

ನಾನು-ನೀನೆಂಬ
ಬೇಧ ಇಲ್ಲಿಲ್ಲ...
ನೀನು ಇರದೇ
ನಾನು ಉಳಿಯೊಲ್ಲ
ನೀನಲ್ಲದೇ
ಬೇರಾರೂ ಬೇಕಿಲ್ಲ
ಪ್ರೀತಿಯ ಸವಿಸೊಲ್ಲ
ನೀ ನುಡಿದರೆ
ನನಗಷ್ಟೇ ಸಾಕಲ್ಲ!

ಹಸಿವೆ ನಿದಿರೆಯನು
ಮರೆತು ನಿನ್ನ
ನೆನಪೊಂದೇ
ನನಗಿಂದು
ರಸದೌತಣ
ಅದುವೇ ಸೊಂಪಾದ
ನಿದ್ರೆ
ನಿನ್ನ ಪ್ರೇಮದ
ಸಾನಿಧ್ಯದಲಿ ಎಲ್ಲ
ಅಮುಖ್ಯವಾಗಿ
ನಿನ್ನ ನೆನೆವುದೇ
ಮುಕ್ತಿಯ
ಮಾರ್ಗವಾಗಿದೆ
ಎನಗೆ ಓ ಗೆಳತಿ.

ನೋಟದಲ್ಲೇ ನೀ
ನನ್ನ ಕೊಲ್ಲುವ
ಪರಿಗೆ – ನಾ
ಮರಣವಪ್ಪದಿದ್ದರೂ
ನಡುಕವಂತೂ
ಶುರುವಾಗಿದೆ-
ನಿನ್ನ ಸನಿಹವಿರದೇ
ವಿರಹದಾ ನರಕ
ನಿರ್ಮಾಣವಾಗಿದೆ
ನಿರ್ಣಯಕೆ ನೀ ಬಂದು
ನನ್ನ ವರಿಸಲು ಇಂದು
ಬೇಗ ಬರಬೇಕಿದೆ!

ಜೋಕಾಲಿಯಂತೆ
ಈ ನನ್ನ ಮನಸು
ತೂಗುತಲಿತ್ತು
ಮುಂಗುರುಳಿನಂತೆ
ಹಾರುತಲಿತ್ತು...
ಬೆಂಕಿಯಂತೆ
ಸುಡುತಲಿತ್ತು...
ನಿನ್ನ ನೆನಪು
ನನ್ನೆದೆಗೆ ಸೋಕಿದಾಗ
ನಿನ್ನಲ್ಲೇ ಅದು
ಮೈಮರೆತಿತ್ತು!

ಪ್ರೀತಿ ಬೇಕೆಂದು
ನೀ ಬಳಿ ಬಂದೆ ಅಂದು-
ಅಂದು ನನ್ನ ಬದುಕಲಿ
ನೀ ಬರುವಾಗ
ಇಲ್ಲದ ಯಾವ
ಸಂಕೋಲೆಗಳು
ಮದುವೆಯಾಗಿ
ಜೊತೆಯಾಗಿ ಬಾಳುವಾಗ
ಏತಕೆ?
ಮನಸುಗಳು
ಸೇರಿದರೆ ಮದುವೆ
ಆದಂತೆ ತಾನೇ?!
ಉತ್ತರಿಸು ಇದಕೆ
ನೀನೇ ಈಗ ನನ್ನ
ಪ್ರೀತಿಸಿದ
ಕಾರಣಕ್ಕಾಗಿ!

ಪ್ರೇಮದ ಅವಲಂಬನೆಯಲ್ಲಿ
ಲಭ್ಯ ಪ್ರಿಯವಾದ ಚುಂಬನ-
ನಲ್ಲೆಯ ಸನಿಹದಿ
ಒಪ್ಪಿಗೆಯ ಮನಸಲಿ
ನಲ್ಲನು ಚುಂಬಿಸಲು
ಅಂಗಾಂಗಗಳು ಅರಳಿ
ಪ್ರೇಮದ ಚಿಗುರು
ಹಸಿರಾಗುವುದು.

ನನ್ನ ಕೆಣಕುತ್ತಲೇ
ಹುಡುಗಿ ಸನಿಹ ಬಂದಳು
ಬರುತಲೇ ನನ್ನ ಒಪ್ಪಿ
ಅಪ್ಪಿದಳು-
ಪ್ರೀತಿಯ ಆಲಿಂಗನಕೆ
ಸೋತು-ನನ್ನ ನಾ ಮರ್ತು
ತುಟಿಗಳಿಗೆ ಚುಂಬಿಸಿ
ಸಮ್ಮತಿಸಿದೆ.


ಒಡತಿ ಒಬ್ಬಳೇ
ಮನದ ಮಹಲಿಗೆ
ಅವಳೇ ಈ ಅಂತಃಪುರದ
ಭಾವನೆಗಳ
ಸರಧಾರಿಣಿ...
ನನ್ನ ಪ್ರೀತಿಯು
ಅವಳನೇ ಬಯಸಲು
ʼಆ-ಸ್ಥಾನವʼ ಬಿಟ್ಟು
ಕೊಡುವೆನೇ?!

ಗುಟ್ಟು ಹೇಳುವೆನೆಂದು
ಬೆಟ್ಟು ಮಾಡಿ
ಬಳಿಗೆ ಕರೆದೆನೆಂದು
ಅವನ ಹತ್ತಿರ ಹೋಗಿ
ಕಿವಿಗಳನು ಅರ್ಪಿಸಲು,
ಕೆನ್ನೆಗೆ ಮುತ್ತನಿಟ್ಟು
ಹೋದನಲ್ಲ...
ಮುತ್ತೇ ನಲ್ಲನ
ಗುಟ್ಟಾಗಿತ್ತೆಂದು
ಮೊದಲೇ
ಗೊತ್ತಾಗಲಿಲ್ಲವಲ್ಲ!
ಗೊತ್ತಿದ್ದರೆ
ಅದು
ಗುಟ್ಟೆನಿಸುತ್ತಿರಲಿಲ್ಲ!
ಎರಡು ಮನಸುಗಳ
ಕಡೆಗೆ ಸೆಳೆವ ನನ್ನ
ಮನಸು
ದುರ್ಬಲವಲ್ಲ
ದುರ್ಲಭವಾಗಿ ಸಿಗುವ
ಎರಡೂ ಮನಗಳು
ತೋರುವ
ಪ್ರೀತಿಗೆ
ಮೂಖವಿಸ್ಮಿತ
ನನ್ನೀ ಮನ!

ಹಂಬಲಿಸದೇ ಸಿಕ್ಕ
ಪ್ರೀತಿ ಬೆಂಬಲಕೆ
ಜೊತೆಗುಳಿಯುತ್ತೆ
ಎಂದಿಗೂ...
ಮನೆಯವರ
ಹಂಬಲಕೆ ಜೊತೆಯಾದ
ಸತಿಯ ಪ್ರೀತಿ
ಸಂಬಳಕೆ
ಕಾಯುತ್ತಿರುತ್ತೆ!




ಅವಳಾಶಾವಾದ.
~~~~~~~~~~~
ಅಳುವುದಾದರೂ,
ನಿನ್ನೆದೆಗೆ ಒರಗಿ
ನಾ ಅಳುವೆನಲ್ಲ...
ಜಗದ ಗೊಡವೆಯೇ
ಬೇಡೆನಗೆ-
ನಿರಂತರ ನಿನ್ನ
ಜೊತೆಗೆ ಉಳಿವ
ಏಕಾಂತವೊಂದೇ
ನನಗಿದ್ದರೆ ಸಾಕು
ನೀ ಜೊತೆಗಿರುವೆ
ಎಂದಾದರೆ
ರಾತ್ರಿಯಷ್ಟೇ
ಜೀವನ ನನಗೆ
ಸಾಕು ನಲ್ಲ!

ನಿನ್ನೊಡನೆ ಇರಲು
ನಗುವಿರದ ಅಳುವಿನ
ಬಾಳು ಚಿನ್ನ
ನಗುವಲ್ಲೂ ಅಳುವಲ್ಲೂ
ನೀ ನನ್ನ ಮನಸ
ಅರಿವ ಪರಿ ಚೆನ್ನ!

ನಿನ್ನ ಸಾಂಗತ್ಯದಲಿ
ನನಗೆ ಜಗದ ನಿತ್ಯ
ಸಂಗತಿಗಳು ಬೇಕಿಲ್ಲ-
ನನ್ನ ಬದುಕನು
ನಿನಗರ್ಪಿಸಿದ ಮೇಲೆ
ಇಲ್ಲಿ ನೀ ಅಲ್ಲದೇ
ಎನಗೆ ಬೇರೇನೂ
ಬೇಕಿಲ್ಲ!

ಮನದ ತುಂಬಾ
ಭಾವನೆಗಳ ಆಕ್ರಮಣ
ಸಂಜೆಯಾದರೂ,
ನಸುಕಾದರೂ,
ಪ್ರೇಮದ ಸಂಕ್ರಮಣ
ನಿನ್ನ ಕಲ್ಪನೆಯಲ್ಲೇ
ನಡೆವ ಜೀವನ
ನಿನ್ನೊಡನೆ ಕಳೆದ
ಕ್ಷಣಗಳ ನೆನಪಿನ
ಆವರಣ!





ನಿಸ್ಸಂಶಯವಾದ
ನಿಶ್ಚಿತ ನಡು ರಾತ್ರಿಯಲಿ
ನೀ ಕಿವಿಯಲಿ
ಉಸಿರಿದ ಪ್ರೇಮದ
ಮಾತು, ಉಸಿರು
ಮೈ ಮನದಲಿ
ಎಲ್ಲೆಲ್ಲೂ ಸಂಚರಿಸಿ
ಇನ್ನು ನನ್ನಲಿ...
ನಿನ್ನೆಡೆಗೆ ಹಾತೊರೆವ
ಹಂಬಲವನು ದಿನದಿನಕೂ
ಹೆಚ್ಚಿಸುತಲಿದೆ!

ನೀ ಮನಸಲಿ
ಎಚ್ಚೆತ್ತು ನನ್ನನೇ-
ಪ್ರೀತಿಸುತಲಿದ್ದರೆ,
ಅದುವೇ ಎನಗೆ
ಸಂಪತ್ತು
ನನ್ನ ಪ್ರೇಮವನು
ಅರಿಯದೇ ಹೋದರೆ
ನನಗದೇ ಬಲು
ದೊಡ್ಡ ಆಪತ್ತು!



ಎಲ್ಲವನು ಅರಿತ
ದೇವರ ಹತ್ರ
ಕೇಳುವುದಾದರೂ
ಏನಿದೆ?
ದೇವರ ಪ್ರಾರ್ಥನೆ
ಮಾಡದೇ
ಧೈರ್ಯ ಮಾಡಿ
ಅವಳನ್ನೇ
ಪ್ರೀತಿಗಾಗಿ
ಯಾಚಿಸಿದೆ
ಅವಳು ಒಪ್ಪಿದಳು-
ದೇವರು ಸಮ್ಮತಿ
ಇಟ್ಟನೆಂದು
ನಾ ಅಂದುಕೊಂಡೆ!

ದೂರವೆಷ್ಟೇ ಇರಲಿ
ಪ್ರೀತಿಗೆ ಅದರ
ಲೆಕ್ಕವಿಲ್ಲ
ಪ್ರೀತಿಯು ಬಹುಪಾಲು
ಮಕ್ಕಳಂತೆ ಗಣಿತದಲಿ
ಮಂದ-
ಲೆಕ್ಕಾಚಾರ ಮರೆತರೆ
ಪ್ರೀತಿಯು ಬಲು ಚೆಂದ!

ಪ್ರೀತಿಯಲ್ಲಿ ಇರುವ
ಪ್ರತಿ ದಿವಸ
ಜಾತ್ರೆಯ ಉತ್ಸವ...
ಈ ಪ್ರೇಮ ಜಾತ್ರೆಯಲಿ
ನಮ್ಮ ಭಾವನೆಗಳೇ
ಜಾತ್ರೆಯ ನೋಡ
ಬಂದಂತಹ ಜನ!

ಹಳ್ಳಿಗಾಡಿನಲ್ಲಿ
ಕಲಿತ ಪ್ರೀತಿಯಿಂದ
ಎಲ್ಲರ ಕಾಣ್ವ ಗುಣ,
ನಗರದಲ್ಲೂ
ಬಳಕೆಯಾಯ್ತು...
ನನ್ನವಳಾದ ನಗರದ
ಹುಡುಗಿಗೆ ತನ್ನ
ಪ್ರೀತ್ಸೋ ಹೃದಯವೊಂದು
ಬೇಕಿತ್ತು!

ನಿನ್ನ ನಯನಗಳ
ಕಡೆಗೆ ನನ್ನ ಪಯಣ
ಆಗಲಿಂದಲೇ ಇಬ್ಬರಲೂ
ಪ್ರೇಮದ ಆಗಮನ
ನಿನ್ನ ಮನದಲಿ
ನನ್ನ ಮನ ಸೇರಿದ ದಿನ-
ಅರ್ಥ ಪಡೆಯಿತು
ನಮ್ಮಿಬ್ಬರ ತುಂಬು
ಯೌವ್ವನ.

ಉರುಳುವ ದಿನಗಳನು
ಹೇಗೆ ತಡೆಯಲು
ಆಗದೋ
ಅಂತೆಯೇ
ಮನದಲ್ಲಿ ಅರಳುವ
ಪ್ರೇಮದ
ಬಯಕೆಗಳನು
ನಿಗ್ರಹಿಸಲಾಗದು!

ಮೈನವಿರೇಳಿಸುವ
ಮನವರಳಿಸುವ
ನವಿರಾದ ಭಾವನೆ
ಮಧುರ ಯಾತನೆಯೇ
ಪ್ರೇಮ
ಪ್ರಣಯದೌತಣಕೆ
ಈ ಚಂದ್ರಮ
ಕಾದಿರಲು-ನೀ,
ಹತ್ತಿರ ಬಂದು
ಬಿಡಿಸಲಾರೆಯಾ
ಆ ಪ್ರೀತಿಯ ಮಹಿಮೆ!
ನಾ ನಿನ್ನ ಕಾಡ್ತೀನಲ್ಲಾ
ಅದಕ್ಕೆ ಏನೋ
ನೀನೂ ಕಾಡ್ತಿ-ನಲ್ಲ?!

ನಾ ಏಕೆ
ಕುಂತಿರುವೆ ಇಲ್ಲಿ
ಗೊತ್ತಿದ್ದರೂ, ಏಕೆ
ನೀ ಅಲ್ಲಿ-
ನಿನಗೆ ವಿರಹ
ನನಗೆ ದಾಹ
ನಾ ಇಹೆನು ಇಲ್ಲಿ-
ಒಂದಲ್ಲ ಒಂದು ದಿನ
ನೀ ಸದಾ ಸೇರಲೆಂದು
ನನ್ನ ಈ ಮನದಲ್ಲಿ.

ನೀ ಮಲಗುವಾಗ
ನನ್ನ ಕರೆಯುವಿಯಲ್ಲ-
ನನಗಂತೂ ನೀ
ಕರೆಯದೆ ಇರುವ
ದಿನದ ನೆನಪಿಲ್ಲ
ನೀ ಕರೆಯದಿರೆ ನಾ
ಬರದೇ ಇರುವುದಿಲ್ಲ...
ನೀ ಕರೆದರೆ ಸಂಭ್ರಮದಿ
ಬಿಡದೆ ಬರುವೆನಲ್ಲ!
ನೀ ಕರೆದಿದ್ದು ಸುಳ್ಳಲ್ಲ
ನನಗೂ ಈಗ ಬರಬೇಕು
ಅನಿಸುತಿದೆಯಲ್ಲ
ನಿನ್ನ ಮೇಲೆ ಕೈಯಾಡಿಸ
ಬೇಕೆನಿಸಿದೆಯಲ್ಲ-
ನೀ ಇರದೆ ನಾ ಇಲ್ಲ
ಈ ನಿನ್ನ ನಲ್ಲ!

ಎಂದೂ ಬತ್ತುವುದಿಲ್ಲ...
~~~~~~~~~~~~~~~~
ನೀ ನನ್ನವಳು ಎಂದು
ತಿಳಿದ ಕ್ಷಣದಿಂದ
ನನ್ನಲಿ ಒಡಮೂಡಿದ ಪ್ರೀತಿ
ಎಂದೂ ಬತ್ತುವುದಿಲ್ಲ...
ನೀ ನನ್ನ ಸೇರುವ ಕ್ಷಣ
ಅದೆಂದು ಕಾದಿದೆಯೋ
ತಿಳಿಯದ ವಾಸ್ತವವಾದ್ದರಿಂದ
ಬಯಕೆಗಳು ನನ್ನಲ್ಲಿ
ಎಂದೂ ಬತ್ತುವುದಿಲ್ಲ...
ನಿನಗಾಗಿ ಎಂದು ನಾ
ಕಾಯುತ್ತಲೇ ಇರುವಾಗ
ನೂರುವರ್ಷಗಳೇ ಆದರೂ,
ನಿನ್ನ ಮೇಲಿನ ಈ ಪ್ರೀತಿ
ಎಂದೂ ಬತ್ತುವುದಿಲ್ಲ...
ಸೋಲು-ಗೆಲುವಿನ
ಗೊಂದಲಗಳಲ್ಲೇ ನರಳುವ
ಈ ಪ್ರೀತಿ ಅದೆಷ್ಟೇ
ಕಾಡಿದರೂ, ನನ್ನ ಪ್ರೀತಿ
ಎಂದೂ ಬತ್ತುವುದಿಲ್ಲ...
ಮನದಲ್ಲಿಯೇ ಇದ್ದರೂ
ಅದು ಎಂದೂ ಬತ್ತುವುದಿಲ್ಲ
ಎಂದೂ ಬತ್ತುವುದಿಲ್ಲ...

ಎದೆಯ ರೋಮದ ಮೇಲೆ
ನೀ ಬೆರಳಾಡಿಸಿ
ನನ್ನ ಬಿಗಿದಪ್ಪಿದಾಗ
ಜಗವೆನಗೆ ಮರೆತಂತಿತ್ತು
ಕಲ್ಪನೆಯ ಸಾಮ್ರಾಜ್ಯವ
ನನಸಲ್ಲಿ ಕಂಡಂತಾಗಿತ್ತು
ನೀ ಪಕ್ಕ ಎನ್ನೊಡನೆ
ಇರಲು ಎಲ್ಲವೂ ಒಡನೆಯೇ
ಕೈಗೂಡುವುದು-
ಪ್ರೇಮಾಮೃತದ ಪಾನ
ಹೀರಿದ ಮೇಲೆ ಸ್ವರ್ಗವನು,
ಭೂಮಿಯಲ್ಲಿ ನೋಡಿದಂತಾಗಿತ್ತು
ನನ್ನಾಸೆಯೆಲ್ಲ ನೀ ತೀರಿಸುವಾಗ
ನಿನಗರ್ಪಿತನಾಗಿದ್ದೆ-
ನಿನ್ನವನೇ ನಾ ಆಗಿದ್ದೆ!
ಅವಳ ನೆನಪಲ್ಲಿ
ಬದುಕಿದ್ದು ಸತ್ಯ
ಅವಳು ಬರೀ
ನೆನಪಾಗಿ
ಉಳಿವಂಥವಳಲ್ಲ
ನನ್ನ ಬದುಕೇ
ಅವಳಾಗಿದ್ದಳು
ಈ ಬದುಕ ಬೆಳಗಲು
ಈಗ ಅವಳು
ನೆನಪಾಗಿದ್ದಾಳೆ ಅಷ್ಟೇ!

ಮೊದಲೇ ಅಲೆಮಾರಿಯಂತೆ
ಇದ್ದ ನನ್ನ ಬದುಕಲ್ಲಿ
ಅವಳು ಅಲೆದಾಡಿಸೋ
ಮಾರಿಯಂತೆ ಬಂದಳು
ಇನ್ನು ಎನಗಿಲ್ಲ ಮುಕ್ತಿ
ಅವಳಲಿ ಮೊದಲೇ
ಇಲ್ಲ ಪತಿ-ಭಕ್ತಿ!

ನಮ್ಮೆರಡು ಆತ್ಮಗಳ
ನಡುವಿನ ಈ
ಅಮರ ಮಧುರ ಸಂಗಮ
ಕಂಡು
ನಸುನಾಚಿ ನಕ್ಕು
ಸುಮ್ಮನೆ
ಮರೆಯಾದ ಆ
ಬಾನ ಚಂದ್ರಮ!

ನೀ ನನ್ನ ಜೊತೆಗಿರಲು
ನಗುವೊಂದೇ ಸಾಕು
ನೀ ನನ್ನ ಬಳಿಯಿರಲು
ಬೇರೆ ಇನ್ನೇನು ಬೇಕು?!
ಹೇಳೇ ಸತಿ ನೀನೇ ಸಖಿ
ನನಗೆಂದು ನೀ ಬೇಕಾಗಿದೆ
ಈ ಜೀವವು ನಿನದಾಗಿದೆ
ಹೀಗೇತಕೆ ಈ ಮನದಲಿ
ನೀ ಇದ್ದರೆ ಆಹಾ! ಕಚಗುಳಿ
ನೀ ನನ್ನ ಭಾವ
ಮರೆಮಾಚು ನೋವ
ನೀ ನನ್ನ ಪ್ರಾಣ
ನಿನ್ನಿಂದ ಮೌನ!

ನೀ ಮಳೆಯಲ್ಲಿ
ನೆನೆದರೆ
ಶೀತ ನನಗಿಲ್ಲಿ
ನೀ ಬಿಸಿಲಲ್ಲಿ
ನಡೆದರೆ
ಬೆವರು ನಂಗಿಲ್ಲಿ
ನೀ ಚಳಿಯಲ್ಲಿ
ನಿಂತರೆ
ನಡುಕ ನನಗಿಲ್ಲಿ
ಒಲವೇ ನನ್ನನು
ಉಳಿಸಲಾದರೂ,
ನೀ ಬಿಸಿಲು, ಮಳೆ,
ಚಳಿಗಳಿಂದ
ದೂರ ಇರಲಾರೆಯಾ?!

ಸುಮ್ಮನೆ ನಾ
ಸುಮ್ನೇ
ಇರಬೇಕೆಂದು
ಅಂದುಕೊಳ್ತೀನಿ...
ಆದರೇಕೋ
ನಿನ್ನ ನೆನಪು
ನನ್ನ ಸುಮ್ಮನಿರಲು
ಬಿಡುವುದಿಲ್ಲ
ನೀ ಸುಮ್ಮನೆ ಇರದೆ
ಪ್ರೀತಿಸಿದ್ದಕ್ಕೆ
ನಂಗೂ
ಸುಮ್ಮನಿರಲು
ಆಗುವುದಿಲ್ಲ!


ಅವಳು:- ನಿನ್ನ ಬಿಟ್ಟು ಇರಲಾರೆನು ನಾನು
ಅವನು:- ಇರಬೇಡ ನೀನು
               ಆದದ್ದಾಗಲಿ ಹೋಗೋದ್‌ ಹೋಗ್ಲಿ
               ನಮ್ಮಿಬ್ಬರ ಮದ್ವೆ ಆದಷ್ಟ್‌ ಬೇಗ ಆಗ್ಲಿ.

ಕಾಲ ಓಡಿದರೂ
ಭೂಮಿ ತಿರುಗಿದರೂ
ನಿನ್ನ ಬಿಟ್ಟು,ಇರೆನು ನಾನು
ಎಂದೆಂದಿಗೂ... ಎಂದೆಂದಿಗೂ...

ಈ ನನ್ನ ಜೀವನ
ನಿನ್ನ ಪ್ರೀತಿಯ ವರದಾನ
ಹಗಲಿರಳು ನೀ ಜೊತೆಗಿರಲು
ದಿನನಿತ್ಯ ನನ್ನ ಬದುಕು
ವಿನೂತನ ಸಂಕ್ರಮಣ.

ಢವಗುಟ್ಟುವ ಈ
ಹೃದಯದ ಪ್ರತಿ
ಬಡಿತದಲ್ಲೂ
ನಿನ್ನದೇ ಹೆಸರು
ಗುನುಗುತಿಹುದು...
ಅದರಿಂದಲೇ,-
ಪ್ರೀತಿ ನನ್ನ
ಬದುಕಿಸಿದೆ ಇನ್ನೂ
ಅಂತ ಮನಸಲಿ
ಅನಿಸುತಿಹುದು!

ಈ ಜಗದ ನಿಯಮದಲಿ
ಆದೆ ನಾ ಬಂಧಿ
ನಿನ್ನ ಪ್ರೇಮದಿ ಆದೆ
ನಾ ಖೈದಿ...
ನಿರಪರಾಧಿ ಎಂದು
ನಾ ಸುಮ್ಮನೆ
ಹೇಳಲಾರೆ, ನಿನ್ನ
ಹೃದಯವನು
ಕದ್ದಿದ್ದು ಸುಳ್ಳೆಂದು
ನಾ ಒಪ್ಪಲಾರೆ.

ಅನುಕ್ಷಣ ಉತ್ಸಾಹ
ಪ್ರತಿ ಕ್ಷಣ ಉಲ್ಲಾಸ
ನಲ್ಲೆ ನಿನ್ನ ಗಲ್ಲಕೆ
ಮುತ್ತು ಕೊಟ್ಟು
ಹೋಗಲು ಮನಸು
ಹಂಬಲಿಸುವಾಗ
ಎದೆಯ ಪ್ರತಿ ರೋಮದಲ್ಲೂ
ರೋಮಾಂಚನದ
ಸಂತೋಷ!

ಪ್ರೀತಿಯ ಬೆನ್ನತ್ತಿ
ಹೋದವರು ಬಹಳ
ಪ್ರೀತಿಗೆ ಬೆಂಕಿ
ಹಚ್ಚಲು ಹೋಗಿ
ಗೆದ್ದವರು ವಿರಳ
ಬಾಳ ಪಯಣದಲಿ
ಪ್ರೀತಿಯ ದೆಸೆಯಿಂದ
ದುಃಖವೇ ಹೊರತು,
ಪ್ರೀತಿ ದುಃಖ
ನೀಡಿದ್ದು ನಾ
ಎಂದೂ ಕಾಣಲೇ ಇಲ್ಲ!

ಹೃದಯದಲಿ
ವಿರಹದಾ ದಳ್ಳುರಿ
ಹೊತ್ತಿ ಉರಿಯುತಿದೆ
ನಿನ್ನ ಸನಿಹಕೆ
ಮೆರವಣಿಗೆಯನು
ಹಿಡಿದು ಕಾದು ನಿಂತಿಹೆ
ಈಗಲೋ ಆಗಲೋ
ಖಂಡಿತ ಬರುವೆ ನೀ
ಅದಕೆಂದೇ ಕಾದಿರುವೆ ನಾ!



ಆರಕ್ಕೇರದ ಮೂರಕ್ಕಿಳಿಯದ
ದಿನದ ಲೆಕ್ಕಾಚಾರದ
ಮಧ್ಯೆ ಬದುಕಿದ್ದವ
ನಾನು-
ಅವಳ ಪ್ರೀತಿ ನನ್ನಲ್ಲಿ
ಸೇರಿ ಮಾಡಿದ ಮೋಡಿ
ಅಪಾರ
ಆಗಲೇ ಆದುದು ನಾ
ಕೋಟಿ ಗಳಿಸುವ
ಸರ್ದಾರ!

ಉಷಾಃಕಾಲಕ್ಕೆ
ಸೂರ್ಯನ ನಲ್ಮೆಯ
ಕಿರಣ ಸ್ಪರ್ಶ
ಬೀಳುತ್ತಲೇ
ʼಆ ದಿನಗಳಲ್ಲಿʼ
ಏಳುತ್ತಿದ್ದೆ...
ಈಗ ಏಕೋ
ಅದರ
ಅವಶ್ಯಕತೆಯಿಲ್ಲ
ನಲ್ಲೆಯ
ಬೆಚ್ಚನೆಯ
ಕನಸುಗಳು
ಸೂರ್ಯನುದಯಕೂ
ಮೊದಲೇ ನನ್ನನು
ಹಾಸಿಗೆ ಬಿಟ್ಟು
ಎಬ್ಬಿಸಿ ಬಿಟ್ಟಿರುತ್ತವೆ!

ನಿನ್ನೊಡಲ ಕಡಲಲಿ
ಪ್ರೀತಿ
ಭೋರ್ಗರೆದು ಧಾವಿಸಿ
ಬರುತಿದೆ
ನನ್ನ ಮನದ
ತೀರದ ಕಡೆಗೆ...
ಮನಸಿಂದ
ಮನಸಿನೆಡೆಗೆ
ತುಡಿವ ಈ ಕಲೆ
ಹೆಣೆದವ
ಸೃಷ್ಠಿಕರ್ತನೇ
ತಾನೇ?!

ನಿರಾಶೆ.
~~~~~~
ನಾನೂ ಪ್ರೀತಿಸಬೇಕೆಂದಿದ್ದೆ
ಅಂಥವಳು ನನಗೆ
ಸಿಕ್ಕಲೇ ಇಲ್ಲ...
ತಾಜಮಹಲನ್ನು ಕಟ್ಟಿಸ-
ಬೇಕೆಂದು ಕಾದಿದ್ದೇನೆ
ಏಕೋ ನನ್ನವಳು
ಬೇಗ ಸಾಯುತ್ತಲೇ ಇಲ್ಲ!

ಅಲೆಮಾರಿ.
~~~~~~~~~
ಅಲೆಯಂತಿದ್ದ ನನ್ನ
ಬದುಕಲ್ಲಿ
ಅವಳು ಮಾರಿಯಂತೆ
ಬಂದಳು
ಇನ್ನು ಎನಗಿಲ್ಲ ಮುಕ್ತಿ
ಅವಳಲ್ಲಿ ಇಲ್ಲ ಯುಕ್ತಿ.

ನಾನೂ ಕಾಯುತ್ತಿದ್ದೇನೆ
ನೀನೂ ಕಾಯುತ್ತಿರುವೆ
ಹೌದು
ಈ ಪ್ರೀತಿಯೇ
ಹಾಗೆ-
ಎಂಥವರನ್ನೇ
ಆಗಲಿ
ಕಾಯಿಸುತ್ತಲೇ
ಇರುತ್ತದೆ!



ನೀ ಬರದ
ಸುಳಿವೆನಗೆ
ಬರಗಾಲ
ನೀ ಸುಳಿದು
ಮುತ್ತು ಸುರಿವುದೇ
ಮಳೆಗಾಲ
ನೀ ತಬ್ಬಿ
ಜೊತೆಗಿರುವುದೇ
ಚಳಿಗಾಲ...
ಕಾಲದ ಸೆಳೆತಕೆ
ಪ್ರೇಮವೂ ಬಂಧಿ ಕಣೆ
ನಮ್ಮಿಬ್ಬರಂತೆ.

ಅವಳಿಗೆ ಬೇಕಿತ್ತು
ತಿಳಿಯಲು ತನ್ನ
ಬಗ್ಗೆ ಅವನ
“ಅಭಿ-ಪ್ರಾಯ”
ಆದರೆ,
ಅವನಿಗೆ ಬೇಕಿದ್ದು
ಬರೀ ಅವಳ
ಪ್ರಾಯ!



ಅರ್ಥವೇ ಆಗದ
ಎಷ್ಟೋ
ವಿಷಯಗಳಲ್ಲಿ
ಪ್ರೇಮವೂ ಒಂದು!
ಎಲ್ಲಾ ವಿಷಯಗಳನು
ಅರಿತರೂ
ಪ್ರೇಮದ ಆಂತರ್ಯ
ಅಷ್ಟು-
ಸುಲಭವಾಗಿ
ಅರಿವಿಗೆ ಬಾರದು!
ಅರಿವೇ
ಪ್ರೇಮವಾದರೆ
ಎಲ್ಲಾ ಸುಗಮವು...


ನನಗೂ ನಿನಗೂ
ಬಿಡಿಸಲಾಗದ ಬಂಧನ
ಅದಕೆ ಸದಾ
ಬಂಧಿಸಿದೆ ನಿನ್ನನು
ನನ್ನಲಿ ಈ
ಬಾಹು ಬಂಧನ!



ನಲ್ಲೆಯ ಮನದಲ್ಲಿ
ಅವನು ಇರುವುದು
ನಿಜವೆಂಬುದನು
ಅರಿಯಲೆಂದೋ
ಏನೋ(?!)
ಪರೀಕ್ಷೆಯನ್ನಿಟ್ಟ-
ಇವನು ಸೀತೆಯನು
ಅಗ್ನಿ ಪರೀಕ್ಷೆಗೆ
ದೂಡಿದ
ರಾಮನಂತವನೇ
ಎಂದರಿತ ಅವಳು
ಇನಿಯನನ್ನೇ
ಮಾರು ದೂರವಿಟ್ಟಲು!

ನನ್ನ cell ಗೆ
ವೈರಸ್ಸುಗಳ ಕಾಟ
ಇಲ್ಲ
ಮಿಸ್‌ call ಕೊಟ್ಟು
ಕಾಡುವ
ವಯಸ್ಸಿನ
ಕನ್ಯೆಯರೇ ಜಾಸ್ತಿ
ಯಾಕಂದ್ರೆ
ಅದಕಿನ್ನೂ
ಯೌವ್ವನ!
ಪ್ರೀತಿಯಲ್ಲಿ ಕ್ಷಮೆಯಿಲ್ಲವೇ?!
ಕ್ಷಮೆಯಿರದಾ ಒಲವೆಲ್ಲಿದೆ?!
ನಾ ಕೇಳೋ ಮುನ್ನ ನೀ
ಎದುರಿದ್ದೆ-
ನಿನ್ನಲಿ ನನ್ನ ತೆಗೆದುಕೊಂಡು
ಕ್ಷಮಿಸಿದ್ದೆ-
ನಾನಾಗ, ನಲಿದು ಮಲಗಿದ್ದೆ
ನನ್ನ ತಪ್ಪು ಮರೆತಿದ್ದೆ.

ತಿಂಗಳು ಉರುಳುತ
ಇರಲು,
ಕಂಗಳು ನಿನ್ನನ್ನೇ
ನೆನೆಸಿವೆ
ಬೆಳದಿಂಗಳು ಬೆಳಗಲು
ನಿನ್ನ ಕಂಗಳಲಿ
ನನ್ನ ಕಂಗಳನು
ಸೇರಿಸಲು ನಾನೊಮ್ಮೆ
ನಿನ್ನಲ್ಲಿಗೆ ಬರಬೇಕಿದೆ.

ನಿನ್ನ ಮನಸಲಿ
ನಾನು ನಿನ್ನವನೇ
ನನ್ನ ಮನಸಲಿ
ನೀನು ನನ್ನವಳೇ
ನನಗಾಗಿ ನೀನು
ನಿನಗಾಗಿ ನಾನು
ನಾನು ನೀನಾದ ಮೇಲೆ
ನೀನು ನಾನಲ್ಲವೇ
ನಾವು ಒಂದೇ ಅಲ್ಲವೇ!

ನಿನ್ನ ಮನಕೆ
ನನ್ನ ಮೇಲೆ
ಅದೆಷ್ಟು ನಂಬಿಕೆ!
ನಾ ನಿಜಕೂ
ಬೆರಗಾದೆ...
ನಿನ್ನ ನಂಬಿಕೆಯ
ನಾನು ಎಂದೂ
ಮಣ್ಣು
ಮಾಡಲಾರೆನು
ಅಂಥ ಸ್ಥಿತಿ ಬಂದರೆ
ಗೆಳತಿ, ಆ ದೇವರು
ನನ್ನನು ಮಣ್ಣು
ಮಾಡಿ ಬಿಡಲಿ!

ನಿನ್ನ ಪ್ರೀತಿಸುವ
ಮುನ್ನ ನಾನು
ನನ್ನನ್ನೇ
ಪ್ರೀತಿಸುತ್ತಿದ್ದೆ-
ಗೆಳತಿ,
ಅಲ್ಲಿಯವರೆಗೂ
ಸ್ವರ್ಥವೇ ಪ್ರೀತಿ
ಎಂದು ಭ್ರಮಿಸುವ
ಗತಿ!
ನಿನ್ನ
ಪ್ರೇಮಾವಲಂಬನೆಯಿಂದ
ಈಗ ತ್ಯಾಗದ ಸ್ಥಿತಿ-ಗತಿ!

ಬೇಸರ ಕಾಡದೇ
ಇರಲಿಲ್ಲ,
ನೇಸರ ಸುಡದೇ
ಬಿಡಲಿಲ್ಲ
ಕೇಸರಿ ಘರ್ಜಿಸದೇ
ಉಳಿಯಲಿಲ್ಲ
ಸಂಗಾತಿ ನಿನ್ನ
ನೆನಪು  ನನ್ನ
ರಾತ್ರಿ ಇಡೀ
ಮಲಗಲು
ಬಿಡಲೇ ಇಲ್ಲ!

ಪ್ರಿಯಕರನಿಗೆ
ಪ್ರಿಯತಮೆಯ
ಜೊತೆಗೆ ಕಳೆದ
ಪ್ರೇಮದ ಕ್ಷಣಗಳು
ಮರೆಯಲು
ಸಾಧ್ಯವೇ?
ಬಾಹು ಬಂಧನದಲಿ
ಕಳೆದ ಕೆಲವೇ
ಕ್ಷಣಗಳು
ಸಾವು ಬಂತೆಂದು
ನೆನಪಾಗದಿರಲುಂಟೇ?!

ನಲ್ಲ!
~~~~
ಮನಸು ಸಾವಿರ
ಬಾರಿ ಹೇಳಿಯಾಯಿತು
ಇವನು ಗೆಳೆಯʼನಲ್ಲʼ
ಮನಸಲಿ ತುಂಬಾ
ಸನಿಹದಲಿ ಕುಂತಿಹʼನಲ್ಲʼ-
ಗೆಳೆಯ-ʼನಲ್ಲʼನಾದʼನಲ್ಲʼ!

ಜೊತೆಗೊಬ್ಬಳು
ಇರಬೇಕು ಎಂಬ
ಭ್ರಾಮಕ
ಕಲ್ಪನೆಯಿಂದಲೇ
ʼಮಾಯೆʼಯ
ಕಲ್ಪನೆಯೆಂಬುದು
ಹುಟ್ಟಿರಬೇಕು
ಈ ಜಗದಲಿ!
ಅದಕ್ಕೆ ಮಾಯೆಯ
ಸೆಳೆತಕೆ ಸಿಕ್ಕಾಗ
ನಾನೂ
ಭ್ರಮಿತನಾಗುತ್ತೇನೆ!

ಜತೆಯಾಗ ಬಂದವಳು
ದೂರ ಹೋದಳೇಕೆ?
ಜತೆಯಾದವಳು
ಹತ್ತಿರಕೆ ಬರಲೇ ಇಲ್ಲ ಏಕೆ?!
ಪ್ರೇಮದ ಜನ್ಮ ರಹಸ್ಯ
ಅರಿತವರಿಲ್ಲ
ಅದಕ್ಕೆ-
ಎಷ್ಟೋ ಬಾರಿ ಈ
ಹುಡುಗೀರು
ಅರ್ಥವೇ ಆಗೋದಿಲ್ಲ!

ನಿನ್ನೆಯವರೆಗೂ
ಮಳೆಯಲ್ಲೂ ಜೊತೆಗೆ
ನೆನೆಯುತ್ತಿದ್ದವಳು
ಬರೀ ಮನದಲ್ಲಿ
ನಾ ನೆನೆಸಲು
ಸೀಮಿತವಾಗಿದ್ದಾಳೆ...
ಏನು ನೆನೆದು ಈ
ತೀರ್ಮಾನವೋ?!
ಅವಳನೆಷ್ಟು
ನೆನೆದರೂ, ನನಗೂ
ತಿಳಿಯುತ್ತಿಲ್ಲ!

ನೆನಪಾಯ್ತೆಂದು
ನಾ ನಿನ್ನ
ಅನುದಿನವೂ
ನೆನೆಯುತ್ತೇನೆ!
ನಿನಗೂ ನಾ
ನೆನೆಸಿದ್ದು
ನೆನಪಾಗುತ್ತದೆ
ಪ್ರತಿಕ್ರಿಯೆ ನೀ
ನೀಡದಿದ್ದರೆ
ನಮ್ಮ ಪ್ರೀತಿ
ಸುಳ್ಳು ಅದ್ಹೇಗೆ ಆದೀತು?!
ಹೋಗು..ಹೋಗು..







ಅಲೆಮಾರಿ.
~~~~~~~
ʼಅಲೆʼಯಂತಿದ್ದ
ನನ್ನ ಬದುಕಲ್ಲಿ
ಅವಳು ʼಮಾರಿʼಯಂತೆ
ಬಂದ ಮೇಲೆ
ನಿತ್ಯ ಅಲೆಮಾರಿ ನಾನಾದೆ!

ನಿನ್ನ ಅಪ್ಪುಗೆಯಲ್ಲಿ
ನನ್ನ ಪ್ರೀತಿಯ
ಉಸಿರು ನಿನ್ನುಸಿರಲಿ
ಉಸಿರಾಗಿ
ಹೆಸರಾಗಿದೆ-
ಪ್ರೇಮದ ಪರಿಮಳವು
ಎಲ್ಲೆಡೆ ಪಸರಿಸಿ
ನಮ್ಮ ಮಿಲನಕೆ
ಅರ್ಥ ತಾ ತಂದು
ಕೊಟ್ಟು
ಎಲ್ಲೆಡೆ ಮೆರೆದಿದೆ.

ನೀ ಅಲ್ಲಿ
ನಾ ಇಲ್ಲಿ
ಪ್ರೀತಿ ಮನಸಲ್ಲಿ
ಸಂಪರ್ಕಕ್ಕೆ ಈ
ಫೋನಿನ ಎಲ್ಲೆ-
ಓ ನನ್ನ ನಲ್ಲೆ
ಹೀಗೇ ಆದರೆ
ಸಂಸಾರ ಇನ್ನೆಲ್ಲಿ?!

ನಿನ್ನ ಕಡು ಕಪ್ಪು
ಕಂಗಳಲಿ ನನ್ನ
ಕಂಗಳನು ಸೇರಿಸಿ
ಈ ಜಗವ ನೋಡಲು
ಎಲ್ಲೆಲ್ಲೋ ಬೆಳಕಿನ
ಮೆರುಗು ತುಂಬಿ
ತುಳುಕುತಿದೆ-
ಇಬ್ಬರು
ಕಣ್ಮುಚ್ಚಿ ಈ
ಜಗವ ಮರೆತಿರೆ
ಪ್ರೀತಿಯು
ಹಿರಿ ಹಿರಿ ಹಿಗ್ಗಿ ತಾ
ಬಳುಕುತಿದೆ.

ನಾನಾ ಎದೆಯ
ಅಂತಃಪುರದಲ್ಲಿ
ನಿನ್ನೆದೆ ದರ್ಬಾರು
ನಿನ್ನ ಪ್ರೇಮದ
ಆಡಳಿತದಲ್ಲಿ
ನಾನು ಕಾಯಿದೆ
ಪಾಲಿಸುವ
ಅನುಯಾಯಿ
ಅನುರಾಗದ
ಸೂತ್ರಗಳನು
ಪಾಲಿಸುವ
ಆಜ್ಞಾನುವರ್ತಿ.

ಮಳೆಯ ತಂಪನೇ
ಹೋಲುತಲಿತ್ತು
ನಿನ್ನ ಹಾಡಿನ ಇಂಪು
ಆಹಾ! ಅದೆಷ್ಟು
ಸೊಂಪು
ಅದೆಷ್ಟು! ಕಂಪು...
ನನ್ನ ಮನಸಿನ
ಕದವನು
ತಟ್ಟಿ
ಮರೆಸಿ ಹೋಯಿತು
ನಿರ್ವಿಣ್ಣತೆಯ ಜೋಂಪು!

ನನ್ನ ಪ್ರೇಮದ
ಪುಟ ಪುಟವು
ಬರೆದರೆ
ಬಹು ದೊಡ್ಡ
ಸಂಪುಟವು...
ಎಲ್ಲ ಕ್ಷಣಗಳು
ಕಳೆದದ್ದು
ವಾಸ್ತವದಷ್ಟೇ
ಸ್ಪುಟವು!
ಅಸ್ಪಷ್ಟತೆಯಿರದ
ಅನಂತ
ಬಾವುಟವು.

ದಿನಗಳು ಉರುಳುವುದು
ಗೊತ್ತೇ ಆಗುತ್ತಿಲ್ಲ
ನನ್ನ ಸಮಯವೆಲ್ಲ
ನಿನ್ನ ನೆನಪುಗಳೇ
ನುಂಗಿ ಹಾಕುತಿರುವಾಗ
ನನಗೆ ಯಾವ
ಪರಿಧಿಯೂ ಬೇಕಿಲ್ಲ
ನಿನ್ನ ಸಾನಿಧ್ಯವೊಂದೇ
ಜನ್ಮಪೂರ್ತಿ
ಎಗೆ ಸಾಕಲ್ಲ!

ಬೇಕಿತ್ತು ನನಗೆ
ದಿನವೂ ಗಳಿಕೆ
ಇನ್ನೇಕೆ?
ಎಲ್ಲ
ಮರೆಸಿ ಬಿಟ್ಟಿತು
ನನ್ನಲಿ
ನಿನ್ನ
ಅಗಲಿಕೆ!

ಸಣ್ಣ ಸಣ್ಣ
ವಿಷಯಕ್ಕೂ
ಸಿಡಿಮಿಡಿಗೊಳ್ಳುವ
ನನ್ನಾಕೆಯ
ಕೋಪವ ತಣಿಸಲು
ಲಲ್ಲೆಗರೆದು
ದೀರ್ಘವಾದ
ಚುಂಬನವೇ ಕೊಡಬೇಕು
ಬಿಗಿಯಾದ
ಅಪ್ಪುಗೆಯೇ ಆಗಬೇಕು!

ನಿನ್ನ ಅಗಲಿಕೆಯ
ದುಃಖವೇ ಸಾಕು
ಎನಗೆ
ಸಾವನ್ನಪ್ಪಲು
ಮತ್ತೆ
ಸ್ವರ್ಗದಲ್ಲಿ ಬಂದು
ನಿನ್ನ ದಿನವೂ
ಅಪ್ಪಲು!
ನಿನ್ನೆಲ್ಲ
ಮಾತುಗಳನು
ಪೋಣಿಸಿ
ನಿನ್ನ ಕೊರಳಲ್ಲೇ
ಇರುವ
ಸರವಾಗುವ ಹಂಬಲ
ಮುಗಿಯದ ನಿನ್ನ
ಮಾತುಗಳನು
ಮುಗಿಸುವ ಬುದ್ಧಿಯ
ಇಂಗಿತಕೆ ಇಲ್ಲ
ನನ್ನ ಮನಸ್ಸಿನ
ಬೆಂಬಲ!

ನಿನ್ನ ಒಡಲ ಮಾತು
ಬಾಂದನಿಗಿಂತಲೂ
ಸುಸ್ಪಷ್ಟ-ಸುಮಧುರ
ಅದಕೆಂದೇ ನನ್ನ
ಮನದ ಬಾನುಲಿಯಲಿ
ಅನುಕ್ಷಣವೂ
ಮಾರ್ದನಿಸುತ್ತಿರುತ್ತದೆ!




ತೀರವೇ ಸಿಕ್ಕದಾ
ಜೀವನ ವಾಹಿನಿಯಲಿ
ನನ್ನ ಈ ಪ್ರೇಮದ
ದೋಣಿ ಸಾಗುತಿದೆ
ಮುಳುಗುವ
ಭಯವಿರದೆ
ಅಳಿಯುವ
ಅಂಜಿಕೆಯಿರದೆ-
ಅನುಕ್ಷಣ
ಅನಂತತೆಯೆಡೆಗೆ
ತೇಲುತಲಿದೆ!

ಕ್ಯಾಂಪಸ್ಸಿನಲ್ಲಿ
ಸುತ್ತಲಿಲ್ಲ
ನಿನ್ನ ಹಿಂದೆ
ಬೀಳಲಿಲ್ಲ
ನನ್ನೇ ನಾನು
ಗಮನಿಸಿರಲಿಲ್ಲ
ಏನೊಂದನೂ
ಬಯಸಿರಲಿಲ್ಲ-
ಸದ್ದು-ಗದ್ದಲ
ಇರದೆ ಹೊರಡಿತು
ನಿನ್ನ ಮೇಲೆ
ಪ್ರೀತಿ
ಮನದ ಹಾಳೆಯಲಿ
ಅಚ್ಚಾಯಿತು!

ನನ್ನ ಬದುಕಿನ
ದಿಕ್ಕು ತಪ್ಪಿಸಿ
ನಿನ್ನ ಪ್ರೀತಿಗೆ
ನನ್ನನೊಪ್ಪಿಸಿ
ದಿಕ್ಕು ದೆಸೆಯು
ಇರದೆ-
ಅಪ್ಪಿ-ತಪ್ಪಿಯೂ
ಕಣ್ಣಿಗೆ
ಬೀಳದಂತೆ
ಎಲ್ಲಿ ಮಾಯವಾದೆ?!
ಹೇಳು ಈಗ
ನಾ ನಿನಗಾಗಿಯೆಂದು-
ಇನ್ನೆಷ್ಟು ಕಾಯಲಿ?!

ಭೋರ್ಗರೆವ
ಸಾಗರದ
ಹಾಲಿನ ನೊರೆಯಂತೆ
ನಿನ್ನ ಆ
ತುಂಬು ನಗು
ನನ್ನ ಮನದ
ತೀರಕೆ
ಅನುಕ್ಷಣವೂ
ಸೇರುತಲೇ
ಇರುವುದು
ಪ್ರೇಮದ
ಅಲೆಗಳು
ನಿರಂತರ
ನಿತ್ಯ ನೂತನ!

ಮಾತು ಮರೆಸಿದೆ
ಮೌನ ಮೆರೆಸಿದೆ
ಚಿನ್ನ ನಿನ್ನ ಪ್ರೀತಿ!
ಒಡಲಾಗಿದೆ
ಕಡಲಾಗಿದೆ
ನಿನ್ನ ಮಡಿಲಲಿ
ಎಲ್ಲಾ ಬದಲಾಗಿದೆ.

ಅಪರೂಪಕ್ಕೊಮ್ಮೆ
ಬರ್ತಾರೆ
ʼಸ್ಲಂ ಬಾಲʼನಂಥವರು
ಈ ನಾಡಿನಲ್ಲಿ...
ಉಳಿದಂತೆ-
ʼಸ್ಲಿಂ ಬಾಲೆʼಯರೇ
ಜಾಸ್ತಿ
ಈ ಕಾಲದಲ್ಲಿ!
ಹೊಚ್ಚ ಹೊಸತು
ಬಂಗಾರ ಲೋಕದಲ್ಲಿ
ವಿಹರಿಸಿದಂತೆ ಭಾಸ...
ನಿನ್ನ ಜೊತೆಗೆ
ನಾ ಸಾಗಿದಲ್ಲೆಲ್ಲ-
ಅಳಿಸಿ ಬದುಕಿನ
ಎಲ್ಲಾ ನೀರಸತೆ...
ಹೂ ಪರಿಮಳವ
ಪಸರಿಸುವಂತಿತ್ತು-
ನಿನ್ನ ಕೂಡೆ ಸರಸ
ಬದುಕಿನುದ್ದಕ್ಕೂ
ಏನೆಲ್ಲಾ ಕಳೆದರೂ
ಎಲ್ಲ ಮರಳಿ
ಕೊಡುವುದು ಪ್ರೇಮ...

ನೀ ನನಗೆ
ಸಿಗುವುದಿಲ್ಲ-
ಎಂದು ಗೊತ್ತಾಗಿದ್ದು
ಚೆನ್ನಾಯ್ತು...
ನಿನ್ನ ಒಂದು ಸಾರಿ
ನೋಡಿದ
ನೆನಪನ್ನು
ಸಾವಿನ ತುದಿವರೆಗೂ
ನೆನಪಿಟ್ಟುಕೊಳ್ಳುವಂತೆ
ಮಾಡಿಯಾಯ್ತು!

ನಾ ಹೇಳುವುದೆಲ್ಲ
ನೀ ಕೇಳಲೆಂದೇ...
ಆದರೆ, ನೀ ಕೇಳದಿರುವುದು
ನಿನ್ನ ತಪ್ಪಲ್ಲ-
ನಿನ್ನ ʼಕಿವುಡಿʼಯಾಗಿ
ಮಾಡಿದ್ದು
ದೇವರು ಮಾಡಿದ
ಅನ್ಯಾಯ...
ನಿನಗೆ ಕೇಳದೆಂದು
ತಿಳಿದರೂ-
ಹೇಳುವೆನಲ್ಲ...
ಅದು ನನ್ನಲ್ಲಿ
ಪ್ರೇಮದ ಗುಂಗಲ್ಲಿ
ಮಾಡಿದ ಹುಚ್ಚುತನದ
ಪ್ರಭಾವ.

ಯಾರೋ
ನಿನ್ನ ಹಿಂದೆ
ನಿಂತು ಕೊಂಡು
ಇವನೆಲ್ಲಾ
ಮಾಡಿಸುತ್ತಿದ್ದಾರಾ?!
ಗೊತ್ತಿಲ್ಲ...
ಏಕೋ
ʼಪ್ರೇಮʼಕ್ಕೆ ಕಾರಣ
ಸಿಗದಿದ್ದಾಗ
ನನಗೆ
ಹೀಗೆ ಅನ್ನಿಸುತ್ತದೆ!

ʼಯಾವುದೂ ಸರಿಯಿಲ್ಲ!ʼ
ಅನ್ನುವ
ಧೋರಣೆಯವನಲ್ಲಿ
ಪ್ರೇಮವು ಅರಳಲೇ
ಇಲ್ಲ...
ಯಾಕೋ-
ಅವನಿಗೆ ಪ್ರೇಮವೂ
ʼಸರಿ ಅನ್ನಿಸಲೇ ಇಲ್ಲʼ

ಏನೂ
ಗೊತ್ತಿಲ್ಲದ
ಈ ಜಗತ್ತಿಗೆ
ಬಂದ ಮೇಲೆ
ಅಂತೂ-
ʼಪ್ರೀತಿ”ಯಿಂದ
ಎಲ್ಲ ಗೊತ್ತಾಯ್ತು
ಪ್ರೀತಿಯೇ
ಬದುಕಿನ
ನಿಜವಾದ
ಸಂತೃಪ್ತಿ!

ನಗುವ ನಯನದ
ಅಂಚಿನಿಂದ
ಚಿಮ್ಮಿದ ಕಣ್‌ ಹನಿ
ಮುತ್ತಿನಂತೆ!
ಆದರೆ,
ತುಟಿಯಂಚಿನಿಂದ
ಚಿಮ್ಮುವ ನಗೆಯೋ
ಮತ್ತು ಹೆಚ್ಚಿಸಲಂತೆ!

Future ಗೊತ್ತಿಲ್ಲದ
ನನ್ನ
Feature
ಅವ್ಳ ಹೃದಯದಲ್ಲಿ
ಪ್ರೇಮದ
Picture
ಚಿತ್ರಿಸಲು
ಕಾರಣವಂತೆ!

ನಾನು ಒಂಟಿಯಾಗಿ
ಇರೆನು ಎಂದು
ಅವಳಿಗೆ ಗೊತ್ತು
ಅದಕೆ
ಜಂಟಿಯಾಗಲು
ನನ್ನ ಗಂಟು ಬಿದ್ದಳು!

ಹಗಲು ರಾತ್ರಿಯ
ಗತಿಯ ತಾ
ನೆನೆಯದೇ
ಸೃಷ್ಠಿ ವಿಲೀನ
ತನ್ನ ರೀತಿಯಲ್ಲಿ...
ಸುಖ-ದುಃಖ
ಸಹಜ ಈ
ಬದುಕಿನಲಿ
ಆದರೂ,
ನಗುತಿರು ನೀ
ಇಂದು
ಜನ್ಮದಿನದ
ಸಂಭ್ರಮದಲ್ಲಿ...

ನಿನ್ನ ನೋಡದೆ ಎಷ್ಟೋ
ಯುಗವಾಯ್ತು!
ಅಚ್ಚರಿಯಾಯ್ತೇ?
ದಿನಗಳು ಎಲ್ಲ
ಯುಗದ ಸಮಾನ
ಅನುಕ್ಷಣವೂ ನೀ
ಜೊತೆಗೆ ಇಲ್ಲದಿರುವಾಗ!

ಕುಲ ಯಾವುದಾದರೇನು?!
ಪ್ರೇಮಿಸಿದ ಮೇಲೆ
ನಲ್ಲೆ ನಲ್ಲನನ್ನು
ನಲ್ಲ ನಲ್ಲೆಯನ್ನು
ಸೇರುವ ಅಧಮ್ಯ
ವ್ಯಾಕುಲತೆ
ಮನದಲ್ಲಿ ಮನೆ
ಮಾಡಿರಬೇಕು.

ಕುಸುಮ ಅರಳುವುದಕ್ಕೂ
ನಿನ್ನ ಆಗಮನಕ್ಕೂ
ಯಾವ ಸಂಬಂಧವಿಲ್ಲ
ಆದರೆ, ಮಂದಹಾಸ
ಮಾತ್ರ
ಇಬ್ಬರಲ್ಲೂ ಸರ್ವ ಸಮ!
ಅದ್ಹೇಗೆ ಎಂಬುದು
ನನಗೆ
ಆರ್ಥವಾಗುವುದೇ ಇಲ್ಲ!

ನೀತಿಯ ಪಾಠ
ಎನಗೆ ಬೇಕಿಲ್ಲ...
ನಿನ್ನ ಪ್ರೀತಿಯ
ಪರಿಪಾಠ
ಮನದಲ್ಲಿ
ಹಾಸು ಹೊಕ್ಕು ನಾ
ನಿನ್ನ ಮಡಿಲಲಿ
ತಲೆಯಿಟ್ಟು
ಮಲಗಿದಾಗ!

ನನ್ನದು
ಒಂದೇ ವಾದ
ನನ್ನ ಪ್ರೇಮ
ವಿವಾದಕ್ಕೆ
ಈಡಾಗುವುದು
ಬೇಡ!

ನನ್ನೆಲ್ಲಾ ಕವನಗಳು
ಚೆಲ್ಲಾಪಿಲ್ಲಿಯಾಗಿ
ಬಿದ್ದಾಗ ನೀ
ಬಂದು ಅದನು
ʼವನʼ ಮಾಡಿದೆ!
ಅದಕೆ ಇಂದು
ವಿಹಾರಕ್ಕೆಂದು
ಜನ ಎಲ್ಲೆಲ್ಲಿಂದಲೋ
ಧಾವಿಸಿ ಬರುತ್ತಾರೆ
ಬಂದವರು
ಓದಿ ನಲಿಯುತ್ತಾರೆ!

ನೀ ನನಗೆ
ಸಿಗಲು
ಆಗ ನಾ
ಭಯ ಬೀಳುವುದಿಲ್ಲ
ನೀ ಸಿಗುವೆಯೋ?
ಇಲ್ಲವೋ
ಎಂಬುದೇ
ಯಕ್ಷ ಪ್ರಶ್ನೆಯಾಗಿ
ಕಾಡಿದಾಗ
ಭವಿಷ್ಯದ
ಭಯಕೆ
ನಾನೂ ಹೊರತಲ್ಲ
ಭಯ ನನ್ನನೂ
ಬಿಟ್ಟಿಲ್ಲ!

ಅಚಾನಕ್ಕಾಗಿ
ಸಿಕ್ಕ ಅವಳ
ಕಣ್ಣಲ್ಲಿ
ಚಕ್ಕನೆ
ನೋಟವ
ಬೆರೆಸಿದ್ದು ಅವಳು
ಅರಿತಳು
ಅವಳಿಗೂ ಇಷ್ಟವೇ
ಅದಕ್ಕೆ ಪ್ರೇಮದ
ಔತಣಕೆ
ಕೂಡಲೇ
ಆಮಂತ್ರಣ
ಇಟ್ಟಳು.

ಇರುವ ಸುಖವನು ಬಿಟ್ಟು
ಇರುವಂತೆ ತೋರುವ
ಕಣ್ಮುಂದೆ ಕಾಣದ
ಇಲ್ಲದ ಸುಖದ
ಯಾಚನೆ ಏಕೆ ನಲ್ಲೆ?!
ಏಕೆ-ಎಂದೂ
ಅನ್ನಿಸಲೇ ಇಲ್ಲವೇ
ಅದು ಇದೆಯೆಂದು
ಈ ನಮ್ಮ
ಪ್ರೀತಿಯಲ್ಲೇ!

ಬಾಯಾರಿಕೆ
ಅಂತ ನಾ
ತಡಬಡಾಯಿಸುತ್ತಿರಲು
ಬಾ ಅಂತ
ಕರೆದವಳು
ಯಾರೀಕೆ?!
ಇನ್ನು
ಗೊತ್ತೇ ಆಗುತ್ತಿಲ್ಲ!

ಯಾರೀಕೇ?
ಯಾರೀಕೇ?
ʼಬಾʼಯಾರಿಕೆʼ
ಅಂದಾಗಲೆಲ್ಲ
ಔದಾರ್ಯದಿಂದ
ಬಾಯ್ತುಂಬ
ನೀರು ಹಾಕಿ
ದಾಹ
ತಣಿಸುವಾಕಿ!
ಬಾಯಾರಿಕೆ
ಆಗದಂತೆ ತಡೆ
ಹಿಡಿಯುವಾಕಿ!!

ಅವಳನ್ನು
ಕಂಡಾಗ
ನನಗೋ
ಏನೋ
ಒಂದು ತರಹದ
ಸಮಾಧಾನ!
ಇದರಿಂದ
ನನ್ನ ಮನಸಿಗೆ
ನಾನೇ
ಮಾಡಿಕೊಂಡಂತೆ
ಸನ್ಮಾನ!

ಮತ್ತದೇ ಹುಡುಗಿ ನೆನಪು
ಮತ್ತದೇ ಕೆಲಸದ ಅಲೆದಾಟ
ಮತ್ತದೇ ನಾಳೆಗೆ ಬೇಕಾದ ಹಣಕ್ಕಾಗಿ
ದುಂಬಾಲು...
ಮತ್ತದೇ ದ್ವೇಷ-ಆಸೆ-ವೈರುಧ್ಯದ
ತಾಕಾಲಾಟ
ಮತ್ತದೇ ಸಂತಸದ ಹುಡುಕಾಟ
ಅಹುದು ಈ ಜೀವಕೋಟಿಗೆ
ಅಂಟಿಕೊಂಡಿರುವ
ʼಮತ್ತದೇ!ʼ

ನನಗೂ ನಿನಗೂ
ಬಿಡಿಸಲಾಗದ ಬಂಧನ
ಅದಕೆ ಸದಾ
ಬಂಧಿಸಿದೆ ನಿನ್ನನು
ನನ್ನಲಿ ಈ
ಬಾಹು ಬಂಧನ!



ಓರೆಕೋರೆಯ
ರೇಖೆಗಳಿಂದ
ರಚಿಸಿದ್ದು ಚಿತ್ರ
ಪ್ರೀತಿ ಪ್ರೇಮಗಳಿಂದ
ಬದಲಾದೀತು
ಜಗದ ವಿಚಿತ್ರ
ನೀ ದೂರವಿದ್ದರೂ
ನಿನ್ನ ಮಾತುಗಳಿಂದ
ನಾ ಎಂದಿಗೂ ಹತ್ರ.


ನೀ ರೆಕ್ಕೆಯಾದರೆ
ನಾ ಗಾಳಿಯಾಗುವೆ
ನೀ ನಕ್ಕರೆ
ನಾ ಮಗುವಾಗುವೆ
ಸಂಗಾತಿ ನಿನ್ನ
ಸಾನಿಧ್ಯ ಸಿಕ್ಕರೆ
ಹಗಲಲ್ಲೂ ಇರುಳಲ್ಲೂ
ಅನುಕ್ಷಣವೂ ನಾ
ನಿನ್ನ ಕಾವಲುಗಾರ!




ನೀ ಜೊತೆಯಿರಲು
ಬೇಕಿಲ್ಲ ನನಗೆ
ಜಗದ ಅವಲೋಕನ
ನೀ ದೂರವಾದಾಗ
ನನಗೆ ಉಳಿಯುವುದು
ಪ್ರೇಮದ ಅಂತರಾವಲೋಕನ
ಇದಕೆ ಒಂದೇ ಕಾರಣ
ನೀ ನನ್ನ
ಜೀವನ-ನಯನ!

ನೀ ಕಂಬನಿ
ಸುರಿಸಿದರೆ ನನ್ನ
ಹೃದಯದ
ನೆತ್ತರು ಸುಡುವುದು
ಗೆಳತಿ…
ನನಗೆ ತೊಂದರೆಯೆಂದಲ್ಲ
ನಿನ್ನ ಕಂಗಳಲಿ
ನಾ ಕಂಬನಿಯ
ಸಹಿಸೋದಿಲ್ಲ.





ಎಲ್ಲೆಡೆ CAR-BARನದ್ದೇ
ಕಾರುಬಾರು
ಇರಬಹುದು!
ಆದರೆ ನನ್ನ
ಹೃದಯದ ಮೇಲೆ
ನನ್ನ ಹೆಂಡತಿ
ಪ್ರೀತಿಯಿಂದ ಮಾಡಿದ
ಕಾರುಬಾರುನಷ್ಟು
ಅವು ಮಾಡಿರಲಾರವು.

ಅವಳು ಇರದಾ
ಬದುಕಿನಲ್ಲಿ-
ಸೂರ್ಯನಿರದಾ
ಬೆಳಕಿನಂತೆ
ಮಳೆಯೇ ಇರದಾ
ತಂಪಿನಂತೆ
ಗಾಳಿಯೇ ಇರದಾ
ಉಸಿರಿನಂತೆ
ನಾನು ಸ್ತಬ್ಧ
ಎಲ್ಲಾ ನಿಶ್ಯಬ್ಧ
ಎಲ್ಲಾ ನಿಷಿದ್ಧ!



ವಾಸ್ತವ.
~~~~~~
ಪಲ್ಲವಿಯೇ ಇರದೇ
ಚರಣವಿರಬಹುದು
ಚರಣಗಳೇ ಇರದೇ
ಪಲ್ಲವಿಯೊಂದೇ
ಹಾಡಾಗಬಹುದು
ಜಗದ ಚಿಂತೆಯಲ್ಲಿ
ಪ್ರೀತಿ ಇರದೇ
ಹೋದರೆ ಎಲ್ಲವೂ
ಶೂನ್ಯವೇ ಆಗುವುದು!

ನಾನು
ನನ್ನವಳಿಗಾಗಿ
ಕಾಯುತ್ತೇನೆ
ಅಂದರೆ ನಾನು
ನನಗಾಗಿ ಕಾದಂತೆ!
ನನ್ನವಳೇ
ನನ್ನೊಳಗಿನವಳು
ಅವಳು
ನಾನಾದ ಮೇಲೆ
ನಾನು ನನಗೇ ಕಾದಂತೆ!



ಮುಗಿಲೆತ್ತರದಲ್ಲೂ
ನಿನ್ನ ಪ್ರೀತಿಯ
ಅರ್ಚನೆ,
ನಿನ್ನ ಹೆಸರಿನ
ಸಂಕೀರ್ತನೆ ಮೊಳಗಿದೆ…
ಅಚ್ಚರಿ ಪಡದಿರು
ನಿನ್ನ ಪ್ರೀತಿಯಲಿ
ನಾನಿರಲು
ಎಲ್ಲೆಲ್ಲೂ ನೀನೇ
ಇರುವಂತೆ
ಸಂಭ್ರಮಿಸುತಿದೆ.

ಸಾಯಿಸದೇ
ಸತಾಯಿಸದೇ
ನನ್ನ ಪ್ರೀತ್ಸೆ…
ಕಾಯಿಸದೇ
ನೋಯಿಸದೇ
ನನ್ನ ಪ್ರೀತ್ಸೆ…
ಪ್ರೀತಿಗಾಗಿ ಪ್ರೀತ್ಸೆ
ನನಗಾಗಿ ಪ್ರೀತ್ಸೆ
ನಿನಗಾಗಿ ಪ್ರೀತ್ಸೆ
ನಮಗಾಗಿ ಪ್ರೀತ್ಸೆ.

ನೀ ನನಗೆ ನಿನ್ನ
ಮನಸಿನಲಿ
ಸ್ಥಳ ಕೊಟ್ಟ ಮೇಲೆ
ನಾ ಹೇಗೆ
ಪರಸ್ಥಳದಿಂದ
ಬಂದವನಾಗುತ್ತೇನೆ
ಅಲೆಮಾರಿಯೂ ಅಲ್ಲ
ನಾನಿನ್ನು ನಿನ್ನವನೇ
ನಿನ್ನ ಜೊತೆ ಸಿಕ್ಕು
ನಾನು ಪ್ರೇಮ
SOME-ಬಂಧಿಯೇ!

ಹಾರೈಕೆ.
~~~~~~
ಚಲಿಸದ ಕಾಲದ
ನದಿಯಲ್ಲಿ
ನಿನ್ನ-ನನ್ನ
ಪ್ರೇಮದ ದೋಣಿ
ಎಡೆಬಿಡದೆ
ಸಾಗಲಿ
ಪ್ರೀತಿಗೆ ಅಂತ್ಯವಿಲ್ಲ
ಎಂಬುದನು
ಮತ್ತೊಮ್ಮೆಅದು
ಈ ಜಗಕೆ
ಸಾರಲಿ…

ನೀ ಸನಿಹದಿ ಇರಲು
ಈ ಮನವು
ಬೇರೇನೂ ಬೇಡದು
ನಿನ್ನಲಿ ಅಲ್ಲದೇ
ಬೇರೆ ಯಾರನೂ
ನೆಚ್ಚದು-
ನಿನ್ನ ಪ್ರೀತಿಯ
ಮಡಿಲಲಿ ತನ್ನನೇ
ಮರೆಯುವುದು
ಜಗದ ಸೋಜಿಗಕೆ
ಕಾರಣವಾಗಿಹುದು!

ಏತಕೀ ಜೀವನ?!
ಸಮ್ಮಿಲನಗಳ ಸ್ಪಂದನ
ಏತಕೀ ಸ್ಪಂದನ?!
ಮನಸಿನ ಯೋಚನೆಗಳ
ನಡುವಿನ ಅನುಸಂಧಾನ
ಏತಕೇತಕೀ...
ಭಾವಸ್ಪುರಣ
ಪ್ರೀತಿ-ಪ್ರೇಮಗಳ
ಸಂಕಲನ?!
ಮರೆಯದಂಥ
ಕೈ ಬಿಡದಂಥ
ಮಾಯೆ ಈ ಪ್ರೀತಿ
ಎಲ್ಲೇ ಹೋದರೂ
ಬೇಡ ಅಂದರೂ
ಬೆನ್ನಟ್ಟಿ ಮರಳು
ಮಾಡದೇ ಇರದು
ಈ ಪ್ರೀತಿ...
ಯಾರನ್ನೂ ಕೇಳದೇ
ಯಾರನ್ನೂ ಬಿಡದೇ
ನಿರಂತರವಾಗಿ
ಜೊತೆಗುಳಿಯುವುದೇ
ಈ ಪ್ರೀತಿ...
ಅಹುದಹುದು ಅದು
ಹಾಗೆಯೇ!
ಈ ಪ್ರೀತಿಯ
ರೀತಿ ನೀತಿ.

ನಲ್ಲೆಯ
ಸ್ಪರ್ಶಿಸದೇ
ಇದ್ದರೆ
ಪ್ರೀತಿಯಿಲ್ಲ
ಎಂದರ್ಥವಲ್ಲ
ಪ್ರೀತಿ ದೇಹಕ್ಕಲ್ಲ
ಮನಸ್ಸಿಗೆ
ಹೃದಯಕ್ಕೆ
ಆತ್ಮಕ್ಕೆ
ನನ್ನಂತರಾತ್ಮದಲಿ
ನಿನ್ನ ಪ್ರೀತಿ
ಅಜʼರಾಮʼರ.

ಓ ನನ್ನ ಮಾತುಗಳೇ
ನನ್ನೊಡಲ ಕವಿತೆಗಳೇ...
ಅವಳ ಹೃದಯದ ಕದವ
ತಟ್ಟಿ-ಒಳ ಹೋಗಿ ಬನ್ನಿ
ನನ್ನವಳ ಹೃದಯದಿ
ನನ್ನ ಪ್ರೇಮದ
ಭಾವನೆಗಳ ತುಂಬಿ ಬನ್ನಿ
ಬರುವಾಗ ಅವಳನು
ನನ್ನ ಬಳಿ ಕರೆತನ್ನಿ!

ಯಾರನ್ನೂ ನೆಚ್ಚದ
ನಾನು
ನೆಚ್ಚಿದ್ದು ಒಬ್ಬಳನ್ನೇ!
ಅವಳೇ
ನನ್ನ ಹೃದಯ
ಸಮುದ್ರದ ತೀರದಲ್ಲಿ
ಸದಾ ನನಗಾಗಿ
ಹಾತೊರೆಯುವ
ನನ್ನ ಪ್ರೀತಿಯ ಮನದನ್ನೆ!

ನೀನಿರದೆ ನನ್ನಲ್ಲಿ
ವಿರಹದಾ ವೇದನೆ
ನಿನ್ನ ಮನದಲ್ಲಿ
ನಮ್ಮ ಪ್ರೇಮ ಶೋಧನೆ
ನೀನಿಲ್ಲದೆ ಇರುವ
ಅನುಕ್ಷಣವೂ ನನ್ನಲ್ಲಿ
ಅರಣ್ಯರೋಧನೆ...
ಸದಾ ನನ್ನ
ಜೊತೆಗಿರಲು ನಿನಗೊಂದು
ನಿವೇದನೆ!

ನಿನ್ನ ನಡೆಯ
ಜೊತೆಗೆ ನನ್ನ
ಹೆಜ್ಜೆ...
ನನ್ನ ನುಡಿಯ
ಜೊತೆಗೆ ನಿನ್ನ ಗೆಜ್ಜೆ...
ಹೀಗೆ ನನಗಾಗಿ ನೀ
ನಿನಗಾಗಿ ನಾ...
ಸಮ್ಮಿಳಿತ
ಮಧು ಬನದ
ಹೂ-ದುಂಬಿಗಳಂತೆ!

ಚಿನ್ನ ಹೇಳೆ ಹೇಗಿರುವೆ?
ನೀನು ಇರದೆ ನೊಂದಿರುವೆ
ನಿನ್ನ ಹಾದಿಯನೇ ನಾ
ಕಾದಿರುವೆ...
ಬಹುಬೇಗ ನೀ ಬಾ
ನನ್ನೊಲವೇ...
ಅಕ್ಕರೆಯ ಒಲವ ತಾ
ಓ ಚೆಲುವೆ!

ನನಗಾಗಿಯೆಂದು
ನೀ ಬಳಿ ಬಂದು
ನನ್ನೆದೆಗೆ ತಾಗಿ ನಿಂದು
ತಬ್ಬಿ ಮುದ್ದಿಸಿ
ಚುಂಬಿಸುವ ಸಮಯ
ಸ್ವರ್ಗವೇ ಭುವಿಗಿಳಿದು
ಬಂದಂಥ ಅನುಭವ
ಆಹಾ! ನೆನೆದರೆ ವಿಸ್ಮಯ!

ಮಳೆಯಲ್ಲಿ ನೆನೆದರೆ
ದೇಹ ತಂಪಾಯ್ತು
ಬೆಚ್ಚನೆಯ ಹಾಸಿಗೆಯಲ್ಲಿ
ನಿನ್ನ ನಾ ನೆನೆದಾಗ
ಅದ್ಹೇಗೆ ಈ ನನ್ನ
ಮನಸ್ಸು ತೇವವಾಯ್ತು!
ಎಂಥ ರೋಚಕ
ಅಲ್ಲವೇ, ಈ ಪ್ರೀತಿ!

ನಾಳೆಯ ಬಗ್ಗೆ
ನನಗೆ ನಂಬಿಕೆ
ಕಮ್ಮಿ ಓ ಮನದನ್ನೆ...
ಅದಕೇ ಇಂದು
ಎಷ್ಟು ಸಾಧ್ಯವೋ
ಅಷ್ಟು ಕಚ್ಚಬೇಕು
ಅನಿಸುತಿದೆ ನಿನ್ನ
ಈ ಮೃದುವಾದ ಕೆನ್ನೆ!

ಬೆಚ್ಚನೆಯ ಬಯಕೆಗಳು
ಮನಸಿನಲ್ಲಿ
ಮನೆಕಟ್ಟಿದಾಗ
ಅವನ್ನು
ಅನುಭವಿಸಲು
ಹೆಂಡತಿಯ
ಜೊತೆಗಿರಲು
ನಾನೊಂದು ಮನೆಯ
ಮಾಡಬೇಕು.

ಅಂಗಲಾಚಿ ಬೇಡುವುದು
ನಿಜವಾದ ಪ್ರೀತಿಯಲ್ಲ
ನಿಜವಾದ ಪ್ರೀತಿ
ತಾನೇ ತಾನಾಗಿ
ಎರಡು ಮನಸ್ಸುಗಳ
ನಡುವೆ ಹರಳುಗಟ್ಟುತ್ತದೆ!

ತಿಳಿದೋ
ತಿಳಿಯದೆಯೋ
ಏರ್ಪಟ್ಟ ಈ
ಪ್ರೇಮ ಬಂಧನ
ಕಾಲದ ಗತಿಗೆ ಸಿಕ್ಕು-
ನರಳದಿರಲಿ...
ಆ ಸರಪಳಿಯಲಿ
ಬಾಡದಿರಲಿ...
ಮನಗಳ ನಡುವಿನ
ಈ ಮಧುರ
ಸಂಬಂಧ
ಸಮೃದ್ಧಿಯಾಗಲಿ.




ಏನೂ ಇಲ್ಲದ
ನನಗೆ
ಭೂಮಿ-ಬಾನಿನ
ಅರಿವಾದರೂ
ಇತ್ತು
ನೀ ಬಂದ ಮೇಲೆ
ಎರಡರ ಮಧ್ಯೆ
ತೇಲ್ತಾ ಇದ್ದೀನಿ!
ಇಂಥ ಸ್ಥಿತಿಗೆ
ತಂದವಳೇ-
ಹೇಳು
ನೀ ಯಾರು?!
ನಾನೋ
ಎಂದೆಂದೂ
ಇಂತಿ ನಿನ್ನ
ʼಪ್ರೀತಿಯʼ...

ಮೃಣಾಳಿನಿ.
~~~~~~~~~
ಮಾತಿಲ್ಲದೇ
ಕತೆಯಿಲ್ಲದೇ
ಕಳೆದು ಹೋಯಿತೆಷ್ಟು ಕಾಲ!
ಎಲ್ಲಿದ್ದೆ ಇಷ್ಟು ವರುಷ
ನೀನೂ ಸಮಯವ-
ಸುಮ್ಮನೇ ಕಳೆದೆಯಾ ಕಾಯುತ...
ಹೊಗಲಿ ಬಿಡು
ಈಗಲಾದರೂ ಸಿಕ್ಕೆಯಲ್ಲ!
ಇನ್ನೂ ದಿನಗಳು
ಇವೆಯಲ್ಲ!
ಈ ಮನದ ಭಾವನೆಗಳ
ವಿನಿಮಯಕೆ
ನನ್ನ ʼʼಮೃಣಾಲಿನಿ”ಯ
ಅಂತರಂಗದ
ಗರ್ಭದಲಿ ನಿರಂತರವಾಗಿ
ನೆಲೆಗೊಳ್ಳಲು...
ಪ್ರೀತಿಯ ಪಾವಿತ್ರ್ಯತೆಯಲಿ
ಆತ್ಮದೊಳು ನಾ
ಸಂಗಮಗೊಳ್ಳಲು.

ಹೇಳ ಹೆಸರಿಲ್ಲದಂತೆ
ಹೊರಟು ಹೋಗುತಲಿದೆ
ಕಾಲ
ಅದರಲ್ಲೂ ಕಳವಳ
ತಳಮಳ
ನೀನಿರದೆ ಅನುಕ್ಷಣವೂ
ಸ್ಮಶಾನ ಮೌನ!


ಪ್ರೀತಿಗೆ-
ಹಗಲಿಲ್ಲ ಇರುಳಿಲ್ಲ
ಹೊತ್ತು ಗೊತ್ತಿಲ್ಲ
ಇದರಲ್ಲಿ ಬಿದ್ದಾಗ
ಹೊತ್ತು ಹೋಗುವುದೇ
ತಿಳಿಯುವುದಿಲ್ಲ
ಕಾಲದ ಮಿತಿಗೆ
ಒಳಪಡುವವರು
ಇದರ ಹತ್ತಿರ
ಸುಳಿಯುವುದು
ಅಷ್ಟು ತರವಲ್ಲ!

ಇಂಪಿಲ್ಲ ಕಂಪಿಲ್ಲ
ಸೊಂಪಿಲ್ಲ ತಂಪಿಲ್ಲ
ಅನ್ನುತ್ತಿದ್ದನಲ್ಲ!
ಅವನಾದ ನನ್ನ ನಲ್ಲ-
ಅದಕೆ ಅವುಗಳನೆಲ್ಲ!
ಸಿಗುವಂತೆ ಮಾಡಿದೆನಲ್ಲ!
ಅವನ ಮುಂದೆ ಅರ್ಪಿಸಿದೆನಲ್ಲ-
ನನ್ನ ಮನದ ಪ್ರೀತಿಯ ಸೊಲ್ಲ!

ಅರ್ಥವಾಗದ ಎಷ್ಟೋ
ಪ್ರಶ್ನೆಗಳನ್ನು
ಹಿಡಿದುಕೊಂಡು
ನಿನ್ನ ಮುಂದೆ ಇಂದು
ಬಗೆ ಹರಿಸಿಯೇ
ಬಿಡಬೇಕೆಂದು ಕೊಂಡೇ
ನಾ ನಿನ್ನ ಬಳಿ
ಬರುತ್ತೇನೆ!
ನಿನ್ನ ಕಂಡ ಮೇಲೆ
ನೀನೇ ದೊಡ್ಡ
ಪ್ರಶ್ನೆಯಾಗಿ
ಕಂಡು ಬಿಡ್ತೀಯಾ!
ಏನು ಮಾಡಲಿ
ನಿನ್ನ ಪ್ರೀತಿಯ
ಮುಂದೆ ಸತ್ಯದ
ಸಾಕ್ಷಾತ್ಕಾರದ
ಕಲ್ಪನೆಯೂ
ಕರಗಿ ಹೋಗುತ್ತದೆ!

ಈ ಪ್ರೀತಿಯಲ್ಲಿ
ಹೊಸ ಕ್ರಾಂತಿ
ಮಾಡ ಬೇಕೂಂತ
ಅನಿಸ್ತಾ ಇದೆ
ಕಣೆ!
ನಿನ್ನದೇ
ಮುಂದಾಳತ್ವ
ನಾನೇನೇ ಇದ್ರೂ
ಬರೀ
ಕಾರ್ಯಕರ್ತ!

ಎಲ್ಲೇ ಹೋದರೂ
ದೂರವೇ ಇದ್ದರೂ,
ಚಿತ್ತದ ಗತಿಯು
ಮತ್ತೆ ಮತ್ತೆ ಎಲ್ಲೆಲ್ಲೋ ಸುತ್ತಿ
ಅವಳೆಡೆಗೆ ಹಾತೊರೆದು
ಎಲ್ಲ ತೊರೆದು ಬರುವುದು
ನನ್ನ ʼಮೃಣಾಲಿನಿʼಯ ಕಡೆಗೆ
ಎಂದಿನ ಕಾತುರತೆ
ಸುಳಿಯುವುದು ಮನದಲ್ಲಿ...
ಒಂದೇ ಉಸಿರಿನಲಿ
ಎಲ್ಲವನೂ ಹೇಳಿ
ಬರಿದು ಆಗದಿರಲಿ
ನಿನ್ನ ಮಾತಿನ ಕಣಜ
ನೀ ಎಲ್ಲೇ ಇದ್ದರೂ,
ನಾ ಬಳಿ ಬಾರದಿದ್ದರೂ,
ಮನಸು ಮಾತ್ರ ನಿನ್ನಲ್ಲೇ!
ನಾ ಎಂದೆಂದೂ ನಿನ್ನ
ಸಾಂಗತ್ಯದ ಸುತ್ತ
ಸುತ್ತುವುದು ನಿಜ
ನಿನ್ನ ಮನದಲ್ಲೇ
ಹುದುಗಿ ಹೋಗಿಹ
ʼʼಪ್ರೇಮ ಖನಿಜ”

ಹೆಣ್ಣಿನ ನಗು
ಕಲ್ಲು ಸಕ್ಕರೆಗಿಂತ ಸವಿ
ಸವಿದರೂ ಸಿಹಿ
ಸವಿಯದಿದ್ದರೂ ಸಿಹಿ
ಮುಖದಲ್ಲಿ ಏನಿಲ್ಲ
ಎಂಬುದ ನಾ ಬಲ್ಲೆ
ಅದಕೆ ಅವಳ ಆ
ನಗುವನ್ನೇ ನೆನೆನೆನೆದು
ಮರೆತೆ ನಾ ನನ್ನಲ್ಲೇ!

ನನಗಂತೂ ಯಾರೂ ಇಲ್ಲ
ನಿನ್ನವರು ಅಂತ ನಿಂಗೂ ಯಾರಿಲ್ಲ!
ತಂಟೆ-ತಕರಾರು ಅಂತ ಯಾವ ಭಯವಿಲ್ಲ
ನಾವೇಕೆ ಜಂಟಿಯಾಗಿ
ಪ್ರೇಮಕ್ಕೆ ಶ್ರೀಕಾರ ಹಾಕಬಾರದು?!
ಸವಿಸ್ತಾರ ಬದುಕ ಸವಿಯಬಾರದು!
ಪ್ರೇಮದ ʼಹೃದಯ ಗೀತೆ” ಹಾಡಬಾರದು?!!!


ದಿಕ್ಕೆಟ್ಟು ನಿಂತಾಗ
ಆಸರೆಯಾಗಿ ನಿಂತು
ನಿನ್ನನ್ನು ಮೇಲಕ್ಕೆ ತಂದು
ಈಗ ನನ್ನ ದಿಕ್ಕು ಕೆಟ್ಟು
ನಿನ್ನ ಸಂದರ್ಶನಕ್ಕೆ
ಮೌನದಲ್ಲೇ
ಕಾಯ್ತಾ ಇದ್ದೀನಲ್ಲ!
ಹಾಗಾದ್ರೆ ನಾನ್ಯಾರು?

ಪ್ರೀತಿಯ ವರ್ತನೆ
ಬಗೆ ಬಗೆ...
ಅದು ದೇಹದಲಿ
ಬೆಂಕಿಯಂಥ ಬೇಗೆ!
ಆದರೆ ಮುಖದಲ್ಲಿ
ಸದಾ ತುಂಬುವುದು
ಹೂ ನಗೆ!!

No comments:

Post a Comment