ದಾರಿ.
ಹೇಳದೆ ಹೋದೆ ಮಾತಿಗೆ ತಪ್ಪಿ ಹೋದೆ
ಕಂಡರೂ ಕಾಣದೆ ಜೀವಕೆ ಬೇಲಿ ಆಗಿ ಹೋದೆ.
ಪ್ರೀತಿಯ ಮನಸಲ್ಲಿ ಸುಳ್ಳುಗಳೇ
ಇಲ್ಲ
ನೋವಿನ ದವಡೆಯೊಳು ದ್ವೇಷವೇ
ಇಲ್ಲ
ಕೋಲ್ಮಿಂಚನು ತಲುಪುವ ಮಾತೇ
ಇಲ್ಲ
ಕತ್ತಲಿನ ಹಾದಿಯೊಳು ಬೆಳಕೇ
ಇಲ್ಲ
ನಿನ್ನಾ ಮರೆತರೆ ಬಾಳಿಗೆ ಅರ್ಥವೂ ಇಲ್ಲ
ನಿನ್ನ ನಾ ಮರೆವುದೇ ಬೇಕು ಜಗಕೆಲ್ಲ
ಹೀಗೆ ನಾ ನೋಡಿ ಹೋದರೆ
ಮುಳ್ಳಿಗೆ ಸಿಲುಕಿ ಸೊರಗಿದರೆ
ಪ್ರೇಮದ ಬಿಂಬವು ಬೀಳಲು
ಸಾಧ್ಯವೇ?
ನೇಸರ ಮರೆತರೂ ಮನವು ಕೊರಗುವುದು
ಹರಿಯೋ ನೀರನು ತಡೆಯುವವರಿಲ್ಲ
ನೆನಪನು ಮರೆಸುವ ಮನುಜರೇ ಇಲ್ಲ
ಹೇಳದೆ ಕೇಳದೆ ನುಗ್ಗಿ
ಮುಂದೆ
ನಿಂತರು ಉಳಿಸಿ ನಿನ್ನ ಹಿಂದೆ
ಪ್ರೀತಿಯೇ ಹೋದರೂ ಮಮತೆಯು
ಮರೆತರೂ
ಸೋಲನು ಕಾಣದೆ ನುಗ್ಗು
ಮುಂದೆ, ಬೀಳದೆ ಹಿಂದೆ.
08-11-2001 Thursday
4-15 am/pm
ಕಲ್ಪನೆಯ ತೋಟದಲಿ
ಮಿನುಗುವ ತಾರೆಗಳು
ಚೆಂದವೋ ಚೆಂದ. ಆಹಾ! ಚೆಂದ ಬಲು ಚೆಂದ
ನಗುವಿನ ಧಾರೆಯಲಿ
ಹರ್ಷದ ಸ್ಪರ್ಶವಿದೆ
ಬಾರೆ ಬಾರೆ. ಆಹಾ! ನಕ್ಕು ನಲಿಯ ಬಾರೆ
ಜನುಮದ ಭಾಗವತ
ಸಂಸ್ಕೃತಿಯ ಮಹಾರಥ
ನೋಡು ಬಾರೆ. ಆಹಾ! ಸುವ್ವಾಲೆ ಹಾಡು ಬಾರೆ
ಭಾರತದ ಭೂಮಿಯಲಿ
ಹೊಂಗಿರಣ ತುಂಬಿರಲಿ
ಹೆಮ್ಮೆಪಟ್ಟು ನೀ ಬಾರೆ. ಆಹಾ! ಕನ್ನಡ ನೀರೆ.
!?!!
ಹೃದಯದ ಭಾವನೆ ತೆರೆದಿಟ್ಟ ಜೀವಿಗೆ
ಕಲ್ಪನೆಯ ಬಿಂಬವು ತೋರಿಕೊಟ್ಟ ಗೆಳೆಯಗೆ
ನಮನ ನಮನ ನನ್ನ ಹೃದಯದ ನಮನ
ಹಾಸ್ಯ ಸವಿಯ ತಿನ್ನಲು ನನ್ನಗಿಟ್ಟ
ಪ್ರೀತಿಯ ಅಮೃತವ ಸವಿಯಲು ತಂದಿಟ್ಟ
ಆಹಾ! ಮಿಂದುಂಡು ನಿಶೆಯಲಿ ನಮನ ನನ್ನ ನಮನ.
ನಾಶವೇ ಪ್ರತಿಫಲ! ಶೂನ್ಯ ಪ್ರತಿಫಲ! ೧೧.೧೦.೨೦೦೧. ೭.೫೦ ಸಂಜೆ. hridayantaraaladinda
ಮನುಜಮತ, ವಿಶ್ವಪಥ
ವಿಶ್ವಶಾಂತಿಯೊಂದೇ ಸಹಿಷ್ಣುತೆ!
ತಿಳಿದವರೂ, ಅತಂತ್ರದ ಸುಳಿಯಲ್ಲಿ
ಏಕಿಂತೂ ಮೋಹ,ಕಲಹ-ಈರ್ಷೆ
ಒಬ್ಬರಿಗಾಗಿ ನೂರಾರು ಜನರ ಹರಣ
ಸಂಚಕಾರವೋ! ಭೂದೇವಿಗೆ-ಭಯ! ಪ್ರಾಣ?!
ಪ್ರಕೃತಿಯ ವೈತರಣಿಯ ಸೆಳವು
ಬೀಸಿ-ಬೀಡು ಬಿಟ್ಟಿದೆ ದುರ್ವಿಚಾರ
ಬಯಸುತಿದೆ ಮನವು
ಸೋತು-ಸಪ್ಪಾಗಿ ಕೂರಲೊಲ್ಲರು ಒಬ್ಬರೂ
ತಾ ಮುಂದು .. ನಾ ಮುಂದು ಅಳಿವೊಂದೇ!
ಭಾಗಿಯಾಗುವುದಿಬ್ಬರೂ…
ಕದ ತಟ್ಟಿ ತಿಳಿಹೇಳಿ ಮನಕೆ
ಅರೆಕ್ಷಣದ ಕೋಪಕೆ-ದ್ವೇಷಕೆ
ಕೆಂಡ ಮಂಡಲದೊಳು ಕಾಯಬೇಕೇ ಅವನಿ
ಉಳಿವುದೆಲ್ಲಿ?! ದುರ್ಬರವು-ಆಗುವುದೆಲ್ಲ
ಹಾನಿ.
A Month of clashes betn.USA
&Taliban.
fantaದಾಗ ಕಡ್ಡಿ ಆಡಿಸಿದ್ರ ಏನಾಗುತ್ತೆ?
ಫೆಂಟಾಸ್ಟಿಕ್ ಆಗುತ್ತೆ
ಭಾವಗೀತೆ ದಿನಾಂಕ:- ೦೬-೦೪-೨೦೦೨ ದ್ವಿ.ವ.ಟಿ.ಸಿ.ಹೆಚ್.
ಎಲ್ಲವೂ ಹೀಗೇಕಾಯ್ತು?!
ಹೀಗೇಕಾಯ್ತು ಸೃಷ್ಠಿಯ..
ಮಡಿಲಲಿ, ಕತ್ತಲ ಕನಸುಗಳು
ಹೀಗೇಕಾಯ್ತು ನೀತಿಯ
ಉಸಿರಲಿ,ಹಿತ್ತಲ ನೆನಪುಗಳು |ಪ|
ಮಂಜು ಮುತ್ತಿದ ಗಾಳಿಯಲ್ಲಿ-
ತಂಪು ತುಂಬಿದೆ
ಮುಸುಕು ಮುತ್ತಿದ ಮಬ್ಬಿನಲ್ಲಿ
ಛಾಯೆಯು ತುಂಬಿದೆ ಹೂವು ಮುದುಡಿದೆ
ಸೊರಗುತಲಿರುವ ಭೂಮಿಯಲ್ಲಿ
ಮಮತೆಯು ಚಿಗುರುತಿದೆ
ಜ್ಯೋತಿಯು ಇರದ ದೀಪದಲ್ಲಿ
ಬೆಳಕು ತಾನು ಆರಿದೆ
ಕತ್ತಲು ಇರದ ಹೊತ್ತಿನಲ್ಲಿ
ಮೋಡವು ಕವಿದಿದೆ
ಪ್ರೀತಿಯೇ ಇರದ ಮಡಿಲಿನಲ್ಲಿ
ಲತೆಯು ಒಣಗಿ ಹೋಗಿದೆ
ಮನಸೇ ಇರದ ಮನಸ್ಸಿನಲ್ಲಿ
ತ್ಯಾಗವು ಸರಿದು ಹೋಗಿದೆ
ಉಸಿರೇ ಇರದ ಹೃದಯದಲ್ಲಿ(ಜೀವದಲ್ಲಿ)
ಕೊನೆಯು ಹರಿದು ಮೊಳಗಿದೆ(ಸಾಗಿದೆ)
ಪುಸ್ತಕ ಸಂನ್ಯಾಸಿ.
ಶಾಲೆಯ ಹಂಗು ಬೇಡ
ಆಗುವೆ ನಾನು ʼಪುಸ್ತಕ ಸಂನ್ಯಾಸಿʼ
ಮನೆಯಲ್ಲಿದ್ದರೇನು ನೋಡಾ!
ಪುಸ್ತಕಗಳೇನು ಮಾಡಲಿ?!-ತಲೆ ಬಿಸಿ
ಇಂಥ ಮಗನಾದನ್ಯಾಕೋ ನನಗ
ದೇವ ಕೊಟ್ಟ್ಯಾಕ ಇಂಥ ಮಗನ
ಹೋಗ್ಲಿ ಹೊಲ್ದಾಗ ದುಡಿಯೋದಾನ ಗೊತ್ತಾ ಇವಗ
ಊರೂರು ತಿರುಗಿ ಹೊಟ್ಟಿ ಉರಿಸ್ತಾನ!
24-09-2001 10-45 AM
ನನ್ನ ಗೆಳತಿ.
ನಿನ್ನೊಳು ನಾ ತುಂಬಲೆಂದು ಬಯಸಿ
ನಿನ್ನ ಸನಿಹದಲ್ಲಿರಲೆಂದು ಸದಾ
ನಿನ್ನ ಪ್ರೇಮ ಪಲ್ಲಕಿಯಲಿ ಪ್ರತಿಷ್ಠಾಪಿಸಲು
ಮನದೊಳು ಪ್ರೀತಿಯ ಭಾವನೆಗಳೇ ಇರಲು
ಹೊರಡಿಸಲಾರೆ ನಿನ್ನ ಕಣ್ಮುಂದೆ ಒಂದನೂ
ಜಾತಿ-ಭೇದಗಳ ಮಧ್ಯೆ ಸಿಲುಕಿದೆ ಈ ಪ್ರೇಮವೂ
ಜಾತಿಯ ಮರ್ಮವೇ ಮುಳ್ಳಾಗಿ ಬಿಡುವುದು
ನಿನ್ನ ಕಂಡು ಮಾತಾಡಿದ ಕ್ಷಣಗಳೋ
ಒಂದೆರಡಲ್ಲ.. ನಿನ್ನ ಕೈ ಕುಲುಕಿದಾ ಕ್ಷಣ
ವಾಹನದಲ್ಲೊಂದು ದಿನ ನಿನ್ನ ಸ್ಪರ್ಶಿಸುವ
ಪ್ರಯತ್ನ
ಒಂಟಿ ಆಗಿ ನಿನ್ನೊಡೆ ಕೂತು ಮಾತಾಡುವ ತವಕ
ನಿನ್ನ ಭಾವಚಿತ್ರ ನೋಡಿ ಮುತ್ತಿಟ್ಟ ಕ್ಷಣಗಳು
ಮರೆಯಲಾರದಂತೆ ಮಾಡಿವೆ ನಿನ್ನನು.. ಮನದಲಿ
ತುಂಬಿರುವೆ ನೀನು
ಸುಪ್ತ ಮನಸ್ಸಿನ ಸುಪ್ತ ಮುಖದಲ್ಲೊಂದು ನಿನ್ನದು
ಏಳನೇಯದು
ದಿನಗಳು ಹೀಗೆ ಉರುಳಲು ಕಣ್ಮುಂದೆಯೂ ದೂರವಾಗುವೆ
ನೀನು
ಧ್ವನಿ ಸಾಮೀಪ್ಯಕ್ಕೇನೋ ಇದೆ ಫೋನು
ಆದರೆ ದೃಶ್ಯಬಿಂಬಕೆ ಇಲ್ಲವಲ್ಲ.. ಆದರೂ ಇದ್ದೀಯಾ
ಒಂದು ಪೋಟೋ ಹಾಗೂ ಮನಸೆಂಬ ವಿಶಾಲ ಚಿತ್ರದೊಳು
ಇದೊಂದೇ ಸಾಕು ನೆನಪಿಗೆ… ನನ್ನದು ಏಕ ಮುಖೇನ ಪ್ರೀತಿ
ಎಂದಿಗೂ ನಿಜವಾಗಿ ಮುಂದುವರೆಯದು
ಕೊನೆವರೆಗೂ ಜಪಿಸುವ ಮಣಿಯಲಿ ನೀ ತುಂಬಿರುವೆ
ಅದೇ ಸಾಕು ನನ್ನುಸಿರಿಗೆ ಕೊನೆವರೆಗೂ ಉಸಿರಾಗಲು
ಹೇ! ನನ್ನ ಗೆಳತಿ ----------;
ನೀನೇ ನನ್ನ ಹೃದಯದ ಮೀಟುವ ವೀಣೆ.
24-09-2001 3-15 PM
ತಾಯಿಯ ಸಂಕಟ. ( ಜನಪದದ ಗ್ರಾಮ್ಯ ಶೈಲಿಯ ಕವನ ) 29-09-2001-11.30 pm.or 12.30
ಸಂಕಟ ಕೇಳೇ
ನನ್ನವ್ವ
ಈ ಕೊರಗ ಏನಂತ
ಹೇಳಲಿ, ನಾ ಏನಂತ ಹೇಳಲಿ ಹಡೆದವ್ವ |ಪ|
ತುಳಿದಾನೊ ನನ
ಕಂದ ಚರಂಡಿ ನೀರನ್ನ
ಅಯ್ಯೋ! ಮೃದು
ಪಾದಾನ ಹೊಲಸು ಮಾಡ್ಯಾನ
ಏನೆಂದ ಹೇಳಲಿ
ಅವಗ, ನೋಡವ್ವ...
ಕಿಡಿಗೇಡಿ ಮಾಡಿ
ಆಟದಾಗ ಮುಳುಗ್ಯಾನ |1|
ಬ್ಯಾಸರಿಕೆ
ಇವಗ ಇಲ್ಲೇನ
ಎಷ್ಟೊಂದು ಸಂಕಟ
ಕೊಡತಾನ
ನಾನಾದರ ಹ್ಯಾಂಗ
ತಡ್ಕೊಳ್ಲಿ ನನ್ನ ಹೆತ್ತವ್ವ
ಮನಿ ಉಸಾಬರಿ
ಬ್ಯಾಡ ಅನತಾನ |2|
ನಾ ಇಲ್ಲಾಂದ್ರ
ಹ್ಯಾಂಗ ಇರುತಾನ
ತಿಳಿವಲ್ದು
ನಂಗ ನಾ ಮಾಡಿದ ಕರ್ಮಾನ
ಹ್ಯಾಂಗಾರ ಬಲಿ
ಬಿದ್ನೋ ಗೊತ್ತಿಲ್ಲ ನನ್ನವ್ವ
ಬುದ್ಧಿ ಹೇಳಾಕ
ಬರಬ್ಯಾಡ ಬೇ ಅನ್ತಾನ. |3|
ನೋಡವ್ವ-ಹೆತ್ತವ್ವ
ಈ ಮಗಳ ಬಾಳನ್ನ
ಯಾಕಾರ ಬೇಕಿತ್ತೋ
ಈ ಸಂತಾನ
ತಂದೆ ಸತ್ತ
ಮಗನ ಈ ಬಾಳ ನೋಡವ್ವ
ಸಾಯ್ತೀನಂಥ
ನಾನಂದ್ರ... ತಡಮಾಡ್ತೀಯಾಕ ಅಂದಾನ! |4| ಇಂದು ಕೃಷ್ಣ.
ಇನ್ನೂ ಕಾಲವಿದೆ!
~~~~~~~~~~~~
ಏಕೆ ಕಾಡುವುವು
ಮೊನೆಯಂತೆ
ಘಾಸಿಗೊಳಿಸಿ
ಬಿಡುವುವು ಹೃದಯಕ್ಕೆ
ಭಾವಗಳೇ ದಾಳಿಯಿಕ್ಕದಿರಿ
ಸೈನ್ಯದಂತೆ
ಗುರಿ ಸಾಧನೆಗೆ
ಹೊರಟಿರಲು ಈ ಜನ ಮನಕೆ
ಬಿಂಬಗಳು ಬಂದಾವು
ಮುಂದೆ
ಕಾತರವೇ! ಈಗಲೇ
ಏಕೆ ಸೈರಿಸಲಾರೆಯಾ?!
ಫಲಿತಕ್ಕಾಗಿ
ಅಲ್ಲವೇ.. ನಿನ್ನ ಹಿಂದೆ,
ಶ್ರಮವಿರುವುದು
ಮರೆತೆಯಾ
ದಯೆಯಿಹುದು
ಭಯವೇಕೆ ಬೇಕಿಲ್ಲ
ಗುರಿಯಿರುವುದು
ಕಾರ್ಯವೇಕೆ ಬೇಕಿಲ್ಲ
ಜಗದ ಉಸಿರು
ನೆನೆದು ನೆನೆದು
ಭಯಬಿಟ್ಟು ದಾರಿಗಾಗಿ
ನೆಟ್ಟ ಗುರಿಯ ತೆರೆದು
ಏಕೆ ಬೇಕು ಪರ
ವಿಚಾರ
ಕಣ್ಣ ಮುಂದೆ
ಕಾಣದ ಉಪಚಾರ
ಕಡು ಕತ್ತಲಲ್ಲೂ
ಕಾಣದಿರೆ ಕನಸು
ಶ್ರಮ ವಹಿಸಿರೆ
ಇನ್ನು ಕಾಣುವುದು ನನಸು
ನಿಜ ಗುರಿಯ
ನೆತ್ತಿಯಲ್ಲಿ ಕಾಣ್ವ ಪ್ರಕಾಶ
ಶೋಭಾಯಮಾನ ಕ್ಷಣಿಕ
ಹಿಂದಿಹುದು
ಏಳ್ಗೆಗಾಗಿ ಪರದಾಡಿದ ಪ್ರತಿ ಪಾಶ
ಕಾಣುವುದೆಲ್ಲ
ಮನಕ್ಕೆ ನೆನೆದ ಬಳಿಕ.
29-09-2001
- ಸಂಜೆ 6 ಕ್ಕೆ...
(ಪ್ರಥಮ ವರ್ಷದ
ಟಿ.ಸಿ.ಹೆಚ್. ಪರೀಕ್ಷೆಗಾಗಿ, ಮನಸ್ಸಿನ ಸ್ಥತಿ ನೆನೆದು ಬರೆದ ಕಾವ್ಯ.ಇತರರಿಗಿಂತ,ಏಕಾಂಗಿ ಆದ ನನಗೆ
ನನ್ನದೇ ಸಮಾಧಾನ cum ಧೈರ್ಯದ ಅಲ್ಪ ಮಾತು.)
ತಪ್ಪಿತಸ್ಥರಿಗಿದೋ...ಕ್ಷಮೆ!
ʼಎಚ್ಚರಿಕೆʼ-ಕರೆ,
ಎಲ್ಲ ಜನರ ಕಿವಿಗೆ ಬಿಡು-
ವಿಲ್ಲ,ತಲೆಯಲ್ಲಿ
ನೂರು ವಿಚಾರಗಳ ಅಲೆ
ದಾಟ,ಮನಸ್ಸಿನ
ಮೂಲೆಯನ್ನು ಕಿತ್ತು ತಿನ್ನುವು-
ದಾಗಿ;ನಡುಗಿದರು,ಹುಡುಕಿ
ತಡಕಾಡಿದರು
ಮಾರ್ಗ ಸಿಕ್ಕಿ
ಬಿಡುವುದೆಂದು;ಬಯಲಾಗಿ ಬಿಟ್ಟರೆ-
ಎನಿಸಿ,ಕ್ಷಮೆಯ
ಕರಗಳಿಗಾಗಿ ಅಪ್ಪ,ಅಣ್ಣ,
ತಾಯಿ,ದಾರಿ
ತೋರಿಸುವಿರಾಗಿ,ಕಾಲಿಗೆ ಬಿದ್ದು,
ಪ್ರಾಣವನುಳಿಸುವ
ಹಸಿರು ನಿಶಾನೆಗಾಗಿ ಕಾದು.
ʼಕ್ಷಮಾʼ-ನಿರ್ಧಾರದಲ್ಲಿರೆ
ಮತ್ತೆ ನಮ್ಮಲ್ಲೆಲ್ಲ ಬೆಳಕು
ಭೋರ್ಗರೆತದಂತೆ
ಮನದಗಲಕ್ಕು ಅವರ-
ನೆನಪು;ನರಗಳಲ್ಲೂ
ಬಿಡದೆ,ಕರುಣಿಸಿದವರ
ಮೇಲೆ ಸಂತಸದ
ಮರ್ಯಾದೆ, ಬದುಕ ಬಿಟ್ಟ ಗುಣಕೆ.
ಬೀಡು ಬಿಟ್ಟಿದೆ,
ನಾಡು ಕೆಟ್ಟಿದೆ ಮಂಜು-
ಕವಿಯದೆ ಎಚ್ಚೆತ್ತು
(ಭವ್ಯ) ಭಾರತವ (ಮತ್ತೇ) ಕಟ್ಟಬೇಕಿದೆ.
ನಾವು ಮರೆಯುತ್ತೇವೆ!?
~~~~~~~~~~~~~~~
ನಮ್ಮ ಬಸ್
ತಂಗುದಾಣಗಳ
ಬೆಂಚುಗಳ ಕೆಳಗೆ
ನಮ್ಮ ಮಕ್ಕಳು ಆಟವಾಡುತ್ತಾರೆ
ಅದುವೇ ಅವರ
ಮೈದಾನ!
ನಾವು ನೋಡುವುದನು
ಮರೆಯುತ್ತೇವೆ.
ನಮ್ಮಲ್ಲಿ ದಿಢೀರನೇ
ಮೂಡುವ ಹಸಿವೆಗೆ
ಹಣ ಪಡೆದು ಆಹಾರವನ್ನೀಯುವ
ಹೊಟೆಲ್ಲುಗಳ-ಫಲಹಾರ
ಗೃಹಗಳಲ್ಲಿ
ನಮ್ಮ ಮಕ್ಕಳು
ದುಡಿಯುತ್ತಾರೆ
ಅದುವೇ ಅವರ
ಜೀವನ
ನಾವು ಮಾತಾಡಿಸೋದನ್ನು
ಮರೆಯುತ್ತೇವೆ.
ನಮ್ಮೂರ ಕೇರಿಗಳ
ಪಾಳು ಗುಡಿಗಳಲ್ಲಿ
ಶಾಲೆಗಳಲ್ಲಿ
ಎಷ್ಟೋ ಅನಾಥ ಮಕ್ಕಳು
ಹೊಟ್ಟೆಗನ್ನವಿಲ್ಲದೆ
ಮೂಕ ರೋಧನದಲ್ಲಿ
ಮಲಗುತ್ತಾರೆ
ಅದು ಅವರ ಪ್ರಾರಬ್ಧವೆಂದು
ನೋಡಿಯೂ ನೋಡದಂತೆ
ಮರೆಯಾಗಿ ಮರೆಯುತ್ತೇವೆ.
ಬೇಸಿಗೆಯ ಬಿಸಿಲಿನ
ತಾಪಕೆ
ದಣಿದು ದಿನವಿಡೀ
ದಾಹದಲಿ ಬೆಂದು
ನೀರು ಕುಡಿಯಲೆಂದು
ಹೊಟೆಲುಗಳಿಗೆ
ಲಗ್ಗೆ ಇಡುತ್ತಾರೆ
ಮಕ್ಕಳು
ʼಬೇರೆ ಜಾಗವಿಲ್ಲವೇ?ʼ
ಎಂದು ಮೂದಲಿಸುತ್ತಾ
ನೀರುಣಿಸದೆ
ಅವರ ಮರೆಯುತ್ತೇವೆ.
07-05-2002-7.30pm
Bus stand BHB’s visit to hpt & bng on his visit to gadag.
ಹೇಳದಲೇ ಹಾರಿ
ಹೋಗೋ ಪ್ರಾಣ ಲಹರಿಯೇ
ಕೇಳದಲೇ ಓಡಿ
ಹೋಗೋ ಜೀವ ಧಮನಿಯೇ |ಪ|
ಹೀಗೇಕೆ ಮನಸ್ಸಲ್ಲಿ
ನರಕ ಯಾತನೆ
ಯಾರಿಗೂ ಇಲ್ಲದ
ನೋವಿನ ಸೂಚನೆ
ಕತ್ತಲಲಿ ಒಂದಾದ
ಬದುಕ ಬವಣೆ
ಹೃದಯಕ್ಕೆ ಘಾಸಿ
ಆಯ್ತು . . ಆ ಭಾವನೆ |1|
ಏತಕೋ ಏನೋ ಈ
ಬಾಳಿಗೆ
ಕನಸ್ಸಲ್ಲಿ
ನನಸಾಗೋ ಏಳಿಗೆ
ನೋವೆಲ್ಲಾ ಸಾವಿರ
ಈ ಜ್ಯೋತಿಗೆ
ಹತ್ತಾರು ದಿಕ್ಕಲಿ
ದ್ವೇಷದೋಕುಳಿ |2|
ಕಾಮನ ಬಿಲ್ಲಲಿ
ಕೆಂಬಣ್ಣ ಏತಕೆ
ಆ ಉರಿಯೋ ಸೂರ್ಯನೇ ಇದಕೆ ಸಂಚಿಕೆ
ಭೋರ್ಗರೆಯೋ
ಸಾಗರಕ್ಕೆ ಯಾರು ಕಾರಣ
ಹುಡುಗು ಮಿಂಚಲಿ
ತೇಲಿ ಬಾರೋ ಜಾಣ |3|
Indu
Krishna bhat 01-06-2002 3pm.
ಪತ್ರ ಮೈತ್ರಿ.
~~~~~~~~
ಕಾದು ಕಾದು
ಸುಸ್ತಾಯ್ತಂತೆ
ಕಾಯೋದಿನ್ಯಾತ್ಕೆ
ಎಂದುಲಿದು ಸುಮ್ಮನಾದ್ನಂತೆ
ನನ್ನ ಗೆಳೆಯನು
ಹಾಗೆ ಆದನೆಂದು
ಮನದಲಿ ನಾ ದುಃಖಿಸಿ
ಮನಸ್ಸು ಸಿದ್ಧವಾಯ್ತಂತೆ.
ಮತ್ತೆ ಬರೀತೀನಿ
ಪತ್ರಾನ!
ದೂರ ಇದ್ರೂನು
ನೀನೆಂದಿಗೂ ಹತ್ರಾನೆ!
ಹೇ! ಸ್ನೇಹಿತ
ಬೇಸರ ಬೇಡ
ನಾನೂ ಬಯಸಿದೆ
ಇವನ ನೋಯಿಸೋದ ಬೇಡ.
ಬೆದರದೆ ಬೆಚ್ಚದೆ
ಮತ್ತೆ ಅರ್ಭಟ
ದಿನಗಳುರುಳತಿರೆ
ಮತ್ತೆ ಹೊಸ ಆಟ
ಪತ್ರ ಮೈತ್ರಿ
ಯಾವ ಜನುಮದಾನುಬಂಧವೋ!
ಲೇಖನಿಯೂ ಮನಸ್ಸು
ಮಾಡ್ತು ಯಾವ ಋಣಾನುಬಂಧವೋ!
ಕನಸುಗಳಿಗೆ
ಸಾವಿಲ್ಲ!
~~~~~~~~~~~~~~
ಸವಿ ನೆನಪಿನ
ಸವಿ ಶೃತಿಗಳಲಿ ಕನಸಾಗಿ ಕಾಡಿದಳು
ಪ್ರತಿ ಹಾಳೆಯ
ಪ್ರತಿ ಬರಹದಲಿ ನನಸಾಗಿ ಬಂದವಳು
ಅವಳು ಯಾರೋ..ಹೇ..ಹೇ..
ನನಗೆ ತಿಳಿಯದೆ ಹೋದಳು(ಬಂದಳು)
ಕೋಗಿಲೆಯ ಗಾನದಲಿ
ಜೊತೆಯಾದವಳು |ಮೊ.ಎ.ಸಾಲು|
ಇಂಚರದ ನಾದದಲಿ
ಮಿಂಚಾಗಿ ಕಾಡಿದಳು
ಮೀಟುವ ವೀಣೆಯಲಿ
ಇಂಪನ್ನೇ ತಂದಳು
ಹರಿಯೋ ನೀರಿನಲಿ
..ಅಲೆಯಾಗಿ ಸಾಗಿದಳು
ತಂಪಾದ ಮನದಲಿ
ಅಮೃತದ ಹನಿಯಾದಳು. |ಮೊ.ಎ.ಸಾಲು|
ಚಲಿಸುವ ಮೇಘದಲಿ
ಸುಮವಾಗಿ ಅರಳಿದಳು
ಕತ್ತಲಿನ ಬಾನಿನಲಿ
ಕಿರಣವೇ ತಾನಾದಳು
ಹಾರಾಡೋ ಹಕ್ಕಿಯ
ಮನಸನ್ನೆ ಸೆಳೆದವಳು
ಹಾರುತಾ ಮುಗಿಲಲ್ಲಿ
ಮಾಯವಾಗಿ ಹೋದಳು. |ಮೊ.ಎ.ಸಾಲು|
(ಮೌನವೇ ಮಾತಾದಾಗ-ಮೋಹನನ
ಪ್ರತಿಕ್ರಿಯೆಯೇ ಸ್ಪೂರ್ತಿ-೨೫-೧೧-೨೦೦೧.) ಇಂದು ಕೃಷ್ಣ.
ಮೌನದ ಹಿಂದೆ
ಏನಿದೆ?!
ಮೌನದಲ್ಲೂ ಮಾತು
ಮಾತನಾಡುತ್ತದೆ
ಮನಸೊಳು ಭಾವನೆಗಳುಕ್ಕುತ್ತವೆ
ಕನಸಾದರೋ
.. ಅರಳುತ್ತದೆ
ಕಂಬನಿಯೋ ಉದುರುತ್ತದೆ
ನೆನಪುಗಳು ನಿನಾದವೆಬ್ಬಿಸುತ್ತವೆ
ಕಲ್ಪನೆಗಳು
ಕೊನರುತ್ತವೆ
ದಿಗಂತದಗಲ ಮನ
ಚಾಚುತ್ತದೆ.
ಕಲ್ಲು ಹೃದಯದೊಳು
ಝೇಂಕಾರ ಹೊಮ್ಮುತ್ತದೆ
ತಂತಿ ಹರಿದಿಟ್ಟ
ವೀಣೆಯೊಳು ಶೃತಿ ಮೀಟುತ್ತದೆ
ಹೆಜ್ಜೆ ಹೆಜ್ಜೆಗೂ
ಮೌನವೇ ಬೆಳಕಾದರೆ
ಸ್ನೇಹವು ಜರಿಯುತ್ತದೆ
ಪಿಸು ಮಾತಿನ
ಧಾಟಿಯೊಳು ಮನವು ಕೊರಗುತ್ತದೆ
ಖೇದದಲೆಗಳೆದ್ದು
ಕೊನೆಗೋ .. ದಡವ ಸೇರುತ್ತವೆ.
ಬೆಳಕು ಹರಿಯದೆ
ನರನಾಡಿಗಳಲಿ ಶಕ್ತಿ ಕುಂದುತ್ತದೆ
ಶಕ್ತಿ ಕಳೆಯದೆ
ಯುಕ್ತಿ ಬಳಸಲು ಮನ ಬಯಸುತ್ತದೆ
ಆದರೇನು ಫಲವಿಲ್ಲ...
ಜೀವನವೆಲ್ಲ ಕಳೆದಿದೆ
ಮಾತುಗಳು ಪುಟಿದರೂ...
ಜೀವ ಸವೆದಿದೆ
ಹೇಳಹೊರಟರೆ
ಈ ಮನ- ಆ ಮನ ಮೌನವೇ ಬಯಸುತಿದೆ
ಮೌನದಿಂದ ಪ್ರಾರಂಭದ
ಈ ಧಾಟಿಗೆ ಆ ಧಾಟಿಯ ಸ್ಪಂದನ
ಮೌನಕ್ಕೆ ಮೌನವೇ
ಉತ್ತರ ಅದುವೇ ನಮಗೆ ಭೂಷಣ.
ಭಾವಗಳು.
25-08-2001.
ಕ್ಷಣ ಕಾಲದ
ಭಾವಗಳು
ಪ್ರತಿ ಘಳಿಗೆಯಲ್ಲೂ
ಹೊಸ ಭಾವಗಳು
ಅನುಭವವ ನೀಡಿ
ಮರೆಯಾಗುವುವು
ನೆನಪಿನಂತರಾಳವನು
ಸೇರಬಯಸುವುವು
ಆದರೆ, ಜಗತ್ತೊಂದು
ಶೂನ್ಯ-
ನೆನಪಿರಿಸಲಾದೀತೇ
ಮನಕೆ ಆಗಿ ಅನನ್ಯ-
ಬಿಡಲಾರವು ಮನದ
ಏರಿಳಿತಗಳು
ಅಷ್ಟೋಪಾದಿಯೊಳು
ಕಾಡೋ ಅಪಭೃಂಶುಗಳು
ಕಾರ್ಮುಗಿಲಲ್ಲಿ
ಕಾಮನಬಿಲ್ಲಿನ ಕಲ್ಪನೆ
ಮೇಘರಾಜನಿಗೆ
ಮಳೆರಾಯ ನೀಡಿದನೋ ಸೂಚನೆ
ಬದುಕ ಸಾಗುತಿರಲು,
ಪ್ರತಿ ನೋವ ಕಲ್ಪ ಮರೆಸಿ
ಜಗಜ್ಜಾಹಿರವೀ
ಭಾವಗಳು ಕೊನೆಗೆ ಅಷ್ಟೈಶ್ವರ್ಯವ ಮೆರಿಸಿ
ಈ ಬದುಕ ಬಂಡಿಯಲಿ
ಸವಿ ಭಾವಗಳು.
ಒಂದು ಕನಸಿನ
ಸ್ವರವು ಇಂದು ನನಸಾಗಿದೆ
ಒಂದು ಮನಸಿನ
ಸೂತ್ರವು ಇಂದು ಮಡಿಲಾಗಿದೆ |ಪ|
ಮನಸಿನ ಭಾವನೆ
ತೆರೆದಿಡಲು
ಸೂಚನೆ
ನನ್ನೊಡಲಲಿ
ಕಲ್ಪನೆ
ಇದೋ ಪ್ರೀತಿಯ(ಸ್ನೇಹದ)
ಯಾಚನೆ!
ನೂರು ಮನಸಿನ
ಕಲರವವು
ಒಂದು ಮನಸಿಗೆ
ಕಲಹವನು
ಎಂದೇ ಆಗಲಿ
ಬರದಿರಲಿ
ಬಾಳಲಿ ಸಂತಸ
ಎಂದಿಗೂ ತುಂಬಿರಲಿ
ದೋಣಿ ತುಂಬಿದ
ಪಯಣದಲಿ
ನೇಸರ ಮುಳುಗಲು
ಕಾದಿರಲು
ಜೀವವು ಉಳಿದರೆ
ಸಾಕೆಂದು
ಈ ಮನವು ಬಯಸುತಿದೆ
ನಗುವೇ ನಮ್ಮಲಿ
ಉಸಿರಾಗಿ
ಬಾಳದು ಎಂದಿಗೂ
ಹಸಿರಾಗಿ
ಕಾಡದೆ ಕಲ್ಮಶ
ನಮ್ಮೊಳಗೆ
ಒಮ್ಮತಕ್ಕಾಗಿ
ಕಾದಿರುವೆ.
About
Hatredness in 1st year tch hatredness betn.ourselves-03-09-2001. 6pm
Venki-Raju Mishap.
ಹೇಗೆ ಸಹಿಸಲಿ?!
03-12-2000.
~~~~~~~~~~~
ನೊಂದಿಹ ಈ ನನ್ನ
ಮನ ಬಯಸುತಿದೆ ಕೇವಲ ಸಾಂತ್ವನ
ಪ್ರವೇಶಿಸುತಿದೆ
ದುಃಖವ ತೊರೆದು ಮೌನವೆಂಬ ವನ
ಕೇಳುತಿಹುದಲ್ಲಿ
ಎಲ್ಲದರ ಮರೆವಿನ ಗಾನ
ಯಾರಾದರೂ ಮಾಡಬಹುದು
ಸಮಾಧಾನ; ಮರೆಯಲು ಸಾಧ್ಯವೇ ನನ್ನ ಮನ
ಇಲ್ಲವೇನು;
ಮನ ನಿಗ್ರಹಿಸಿ ಬದುಕಲೆನಗೆ ಸಿಹಿ ಗುಳಿಗೆ
ಬದುಕಿನ ಆಗು
ಹೋಗುಗಳ ಲೆಕ್ಕಿಸಿ . . . ತರುತಲಿ ನೆನಪಿಗೆ
ಚಿಮ್ಮಿಸಲೆನ್ನ
ಮೊಗದಲಿ ಹೂ ನಗೆ?!
ನಿಷ್ಕಳಂಕ ನಾನೆಂಬುದು
ನನ್ನ ಮನಕ್ಕೆ ಮಾತ್ರ ಗೊತ್ತು
ಆದರೆ ಸಮಾಜದ
ಕಟು ಮಾತಿಗೆ ಬೇಸತ್ತು
ದಿಗಿಲಾಗಿ
. . ಒಂದು ಕ್ಷಣ ಮನದಲ್ಲನಿಸುತ್ತಿತ್ತು
ಕಾದಿದೆಯೋ ಹೇಗೋ
... ನನಗೆ ಆಪತ್ತು
ಹೇಗೋ ಸಾಗುತಲಿದೆ
ಈ ಜೀವನ
ಆ ದುಗುಡದ ಮಡುವಿನಿಂದ
ಬರಲೊಲ್ಲದು ಈ ನನ್ನ ಮನ
ಬದುಕಲ್ಲಿ ಕಾಣಬೇಕಿರುವ(ಬಯಸಿದ)
ಸುಖವ ಕಾಣಲಿಲ್ಲವಲ್ಲ
ಕೊರಗದು ಅಚ್ಚಳಿಯದೇ
ಹಾಗೆಯೇ ಉಳಿದು ಬಿಟ್ಟಿದೆಯಲ್ಲ
ಇಲ್ಲವಾದರೇನು?
ಮತ್ತೆ ಆ ನನ್ನ ಪೂಜ್ಯ ಮಾತೆ ಧರೆಗಿಳಿದು ಬರುವುದಿಲ್ಲವಲ್ಲ.
ನೀನೇ ಇಲ್ಲದ
ಬಾಳಿನಲಿ
ನಾನು ಹೇಗೆ
ಬದುಕಲಿ
ನಿನ್ನ ಅಗಲಿಕೆಯ
ನಂತರ ಚೇತರಿಕೆಯಲಿ,
ನಿನ್ನ ಮರೆಯುತಲಿ
. . . ಈ ಅನುಬಂಧವ ತೊರೆದು
ಒಂಟಿತನವ ನಾ
ಹೇಗೆ ಸಹಿಸಲಿ?!
ಪ್ರೀತಿಯ ಹವಣಿಕೆ. 29-11-2000.
~~~~~~~~~~~~~
ಮನದಿ ಭಾವಗಳ
ಭೋರ್ಗರೆತದಲಿ ಕುದಿದು
ಲೋಕದ ರೀತಿ-ನೀತಿ;ಪರರ
ನಿಂದಿಸಿ
ನಿನ್ನೆಲ್ಲಾ
ಭಾವಗಳ ಮರೆಮಾಚಿ
ದೂರದಿ,ಮಲೆಯ
ತರುವಿನ ಛಾಯೆಯಲಿ,
ಒಂಟಿಯಾಗಿ ನಿಂತು,
ಬೇಸತ್ತು...
ತಾಯ ಪ್ರೀತಿಗೆ
ಹವಣಿಸಿದ
ನೀ ಕಂಬನಿ ಸುರಿಸಿದೆ
.. ಓ ಗೆಳೆಯ!
ನಿನಗಿರುವಳು
ತಾಯಿಯು;-ಕಾಣ್ವೆ
ಇಂದಲ್ಲಾ ನಾಳೆ;
ದಿನಗಳುರುಳಿದ ಮೇಲೆ
ಆ ಮಮತೆಯ ಕ್ಷಣವ
ಮತ್ತೇ ಶೋಭಿಸುವುದು
ಬಾಳಲಿ
ರವಿತೇಜದಂಥ
ಕಾಂತಿ ಎಂದಿನಂತೆ!
ನೀನೊಮ್ಮೆ ಯೋಚಿಸು
ಎಲೇ ಜೀವವೇ;
ತಾಯ ಪ್ರೀತಿಯ
ಅನುಬಂಧವು
ಛಿದ್ರ-ಛಿದ್ರವಾಗಿದೆ
ನನ್ನ ಬಾಳಲಿ..ಎಲ್ಲಿ ಕಾಣಲಿ ನಂದನವ?
ಹರಸುವವರೆಲ್ಲರೂ..
ಹೆಣ್ಣ ಬಾಳು ಆಗಲಿ ಬಂಗಾರ
ಹರಸಲೆನಗೆ ಇಲ್ಲವಲ್ಲ
ಆ ನನ್ನ ಹೆತ್ತ ಮಾತೆ
ಈ ಧರೆಯಲಿ;
ತಾಯ ಹರಕೆಯ
ಮೆರೆದು
ತಾಯ ಮಮತೆಯ
ಮುರಿದು
ನಿಲ್ಲಲಾರದು
ಯಾವ ಪ್ರೀತಿ-ಪ್ರೇಮವು ಇಲ್ಲಿ
ಈ ಜೀವ ಸಂಕುಲದಿ.
ಇನ್ನೆಂದೂ ಬಾರಳು
.. ಆ ನನ್ನ ಒಲವಿನ ಮಾತೆ
ಈ ಹೃದಯದ ಮಿಡಿತ
ಕೇಳಲು,ನೋಡಲು ಈ ಸುತೆಯನು.
ಅವಳ ಚಿತ್ತಾರದಾś
ಚಿಗುರು ಮುಖದ ಕಾಂತಿ
ನನ್ನೆಲ್ಲವ
ಮರೆಯುತ ನಾ ಕಾಣ್ವೆ ದಿನಂಪ್ರತಿ
ನನ್ನ ಕನಸಿನ
ಬುತ್ತಿಯಲಿ
ಆ ಪ್ರೀತಿ
.. ಆ ಮಮತೆ ಕಾಣ್ವೆ(ಪಡೆವೆ) ಇಲ್ಲಿ
ಕರೆಯುವಳು ನನ್ನನು
ರಜನಿಯ ತಮದಲಿ ತನ್ನೆಡೆ
ನೀ ಬಾಳಲಾರೆಯಾśś . . ಸಹನೆಯ
ಹೊತ್ತು .. ಓ ನನ್ನ ಗೆಳೆಯ!
ಪಾಡು.
~~~~~~
ತೊರೆ ಬತ್ತಿ
ಬದುಕು ಬರಿದು...
ಆಸೆ ಬತ್ತಿ
ಎದೆ ಹೊತ್ತಿ ಉರಿವುದು
ಹಾಹಾಕಾರ-ದಾಹಗಳ
ಸುಳಿಗಳ ನಡುವೆ
ಹನಿಯೊಂದೇ ಮುತ್ತಿನಂತೆ
ಬೇಕು ಅದರ ಗೊಡವೆ
ನೋವು-ನಲಿವುಗಳ
ಸಂಗಮ ಧರೆಯೊಳು-
ಬರ ಪವಡಿಸಿ
ಬಿಡಲು ಊರಿ ಕಾಲು,
ನೆಲೆ ನಿಂತು
ಅನಾವೃಷ್ಟಿಯ ಕಾಟ
ಕೆಲವರೋ! ಮಾಡುತಿಹರು
ಸಿಹಿಯೂಟ
ಭಯ-ಭೀತ ಜನರ
ಭೀಕರ ಪಾಡು
ಮೊಳಗುತಿದೆ
ಹೃದಯದಿಂದ ಹಸಿವಿನ ಹಾಡು
ಆಲಿಸಿ ಮರುಕ
ಪಟ್ಟವರೆಷ್ಟೋ!
ಅದಕೆಂದೇ ಹೇಳುವುದುಂಟು-
ʼಸೃಷ್ಠಿ-ವೈಚಿತ್ರ್ಯ
ಧೋರಣೆಗಳ ಬೆಂಗಾಡುʼ
ಬೀಗು-ಬಿಗುಮಾನಗಳ
ಕಾಡು
ಧರಣಿ ಮರಗುತಿಹಳು
ಮೌಲ್ಯಗಳೋ ಉಜಾಡು
ಜೀವನದ ಹಂಗು
ತೊರೆದು ಮನಗಳೆಲ್ಲ-
ಕಾಡ್ಗಿಚ್ಚಿನ
ಸೆಲೆಯೊಳು ಸಿಲುಕಿಹವು ಎಲ್ಲ
ಕರುಣೆ ಬಾರದೆ
ಮೊರೆಗೆ ಮರುಗಿ
ದೇವರು ತಾನೊಬ್ಬನೇ
ಅಹಮ್ಮಲಿ ಬೀಗಿ
ಪಾಡು ತಾನು
ಬಂದೊದಗಿ
ಕಾವಲಿಲ್ಲ ಈ
ಬದುಕಿಗೆ.
ಕೋರಿಕೆ
~~~~~~~
ಹೇಳು ಬಾರೋ
ಗೆಳೆಯನೇ ತಿಳಿ ಮಾತುಗಳನು
ಕಷ್ಟವಾದರೂ
ಮರೆತು ಹಳೆಯ ದ್ವೇಷವನು
ಮರೆವೆಯಾ ಗೆಳೆಯನೇ
ಈ ಹೃದಯವನು
ಎಂದಿಗೂ ನಿಲುಕದೇ
ಮತ್ತೆ ಬಿಟ್ಟ ಸ್ನೇಹವನು
ಮನಸಲ್ಲಿ ದ್ವೇಷದ
ಜ್ವಾಲಾಮುಖಿಯೇನು
ಆತುರಾತುರವಾಗಿ
ತಿಳಿಯದೆ ಆಗಿದ್ದಾದರೂ ಏನು!
ನನ್ನ ನೋವುಗಳು
ಅವು ನನ್ನೇ ನುಂಗಿದರೆ
ಮರಳಿ ಬಾರದೆ
ಹೋದರೆ ಹೇಗೆ ಬದುಕುವೆ ನಾ
ಆ ಸಾವಿನಾಚೆ
ಈ ಜನ್ಮದಾಚೆ ಮನಸೆಲ್ಲಿ
ಹೋಗುವುದು ತಿಳಿಯದಾದೆ
ನಾ..
ಈ ಜೀವನ ಒಂದು
ನಿಲ್ದಾಣವಂತೆ
ನಿಲ್ಲಲಾರದ
ವಾಹನಕ್ಕೆ ಕಾದು ಕೂತರೇನಂತೆ
ನಿಲ್ಲಬಾರದು
ನಾವು ಎಂದಿಗೂ ಇಲ್ಲಿ
ಮರೆತು ಎಲ್ಲ
ನಮ್ಮ ಸ್ನೇಹ ಮುಂದೆ ಸಾಗಲಿ.
ಸುನೀತ-2
(12+2 SONNET)
ಗತಿಸಿ ಹೋಗದವರು!
~~~~~~~~~~~~~~~
ಮನಸು ಬಿರಿಯದೆ;
ಕನಸು ಕಟ್ಟದೆ ಸುಮ್ಮ-
ನೆ ಕುಳಿತರು,
ಗುರಿಯ ಮುಟ್ಟದೆ ಅಳ-
ಲಿಲ್ಲ- ಎದೆಯ
ಆಸೆಗಳನು ಬಚ್ಚಿಟ್ಟರು ಮೆಲ್ಲಗೆ,
ತಾವು ಬಂದಿಹ
ದಾರಿಯ ಮರೆತು ಸಾವಿಗಪ್ಪದೆ
ಮೊಗದಲ್ಲಿ ವಿಚಿತ್ರ
ನೋಟ ಬಿಂಬವ ತೊಟ್ಟು-
-ಬಿಟ್ಟು ಕಿರುಚದೆ,
ಕರಾಳ ಛಾಯೆ ಹರಡಲು
ಸುಪ್ತ ಪಾಪ
ಗುಣಗಳನು ನೆನಪಿಸದೆ, ಓಡಿ-
ದರು, ಕೊನೆಗೆ
ಫಲಿಸಿದ್ದೇನೂ ಲೆಕ್ಕಿಸದೆ.
ಬದುಕ ಪಾಠವ,
ಜೀವನದ ನೋವು-
ಗಳ, ಕಾಣುವವರಿವರಲ್ಲ
- ಎಂದಿಗೂ ಕಟ್ಟಪ್ಪಣೆ! ಮನ
-ಸ್ಸಿಲ್ಲ ಇವರಿಗೆ,
ಜಾತಿ-ಭೇಧ, ದುರ್ಗುಣಗಳೆಲ್ಲ ಜಾಡು-
ಕಟ್ಟಿದೆ; ಛಿದ್ರ-ವಿಚಿತ್ರ
ಕಲ್ಪನೆಗೂ ನಿಲುಕದೆ
ರೋಧನ ಮೊಳಗಲಿ,
ಮೌಲ್ಯ ಸೊರಗಲಿ ಎನ್ನುವ
ಬದುಕ ಬಂಡಿಯಲಿ
ಇವರು ಗತಿಸಿ ಹೋಗದವರು.
10-07-2001 TUESDAY
12PM.
PREVIOUS
TITLE "ನಿರ್ವಿಕಾರಿಗಳು"
THOUGHT NOT SUITABLE..FOR THAT LAST TWO LINES WERE AS
"ಬೆಂದು
ಬಸವಳಿದರೂ ಬುದ್ದಿ
ಬಾರದವರಿವರು
ಮುಸ್ಸಂಜೆಯ ಸವಿನೋಟದಲ್ಲಿ
ಸಂತಸ ಕಾಣದವರು"
ಹೊಸ ಹಾದಿಯ
ಹೊಸ ನಿರೀಕ್ಷೆಯಲ್ಲಿ...
~~~~~~~~~~~~~~~~~~~~~~~~
ಹೊಸ ಅಲೆಗಳಂತಹ
ಕಲ್ಪನೆಗಳು
ನಿಲುಕಲಿರುವ
ಹೊಸ ಭಾವಗಳು
ಬದಲಾಗಬಹುದಾದ
ನೋಟಗಳು
ಹೊಸ ಧಾಟಿಯ ಕ್ರಿಯೆಗಳು
ನಿರಂತರಾನುಭವದ ಸ್ಪರ್ಶ ತುಮುಲುಗಳು
ಎಲ್ಲೋ ಮೂಲೆಯಲ್ಲಿ ಅವೇ ಹಳೆಯ ನೆನಪುಗಳು
ನೆನಪಿನಲ್ಲಿ ಪಾಲು ಪಡೆದ ಮರೆಯದ ಘಟನೆಗಳು
ಬೆಂಕಿಯ ಕಥೆಯಿಂದ ಪ್ರಾರಂಭವಾದ
ಇತಿಹಾಸದ ಪುರಾವೆ ಹುಡುಕುವ ಮಾರ್ಗಗಳು
ಅವೇ ಹಳೆಯ ಕಟ್ಟು ಪಾಡುಗಳು
ವಕ್ರತೆ ಪರಾಕಾಷ್ಠತೆಯ ಭಾವೋದ್ರೇಕದ
ಅಲೆಗಳ ಮೇಲೆ ಕಂಬನಿ ಬರಿಸದೆ
ಫಲಾಪೇಕ್ಷೆಗಳ ಬಗೆಗಿನ ಸ್ಪೂರ್ತಿಯ ಸೆಲೆಗಳು
ಕಾದಿರುವ ಮನಗಳಲಿ ಹೊಸ ನಿರೀಕ್ಷೆಗಳು
ತುಂಬಿ ಬರಿಸಲಾಗದ ಮನದ ನೋವುಗಳ
ಮರೆಸಿ ಹೊಸ ಹಾದಿಯ ಆರಂಭದಲಿ
ನವ ಚೈತನ್ಯದ ಕಾತರತೆಗೆ ಫಲ ಎಂದು?!
ಅದೇ ಹಾದಿಯ ಕುಸುಮದ ನಿರೀಕ್ಷೆಯಲ್ಲಿ
ಅದುವೇ ಭರವಸೆಯ ಹಾದಿ.
ತಪ್ಪಿದ ಹತೋಟಿ. 29-12-2002. 8pm(ಅಪಾರ್ಥ ಬೇಡ!)
~~~~~~~~~~~~~
ಮನಸೇ… ಓ ಮನಸೇ
ಮರೆತೆಯೇನೆ
ಮೈಮರೆತು ಕ್ಷಣಕಾಲ
ಬೇಗುದಿಯಲಿ ನೂಕಿದೆ
ಈ ಕಾಯವನು;
ಶುದ್ಧ ಭಾವಗಳನೆಲ್ಲ
ಅಳಿಸಿ ನಿನ್ನೊಳು
ಕ್ಷಣಕಾಲ ವಿಕೃತಿಯ
ಕೂಪಕೆ ತಳ್ಳಿದೆ
ಈ ಮನವನು;
ಕಂಡೂ ಕಾಣದಂತೆ
ಮರೆಮಾಡಿ ಎಲ್ಲವ
ಓರೆ ನೋಟದಲ್ಲಿ ಹುಡುಕುವ
ಕಂಗಳನು ಬಾಚಿ
ಮುದುಡಿಸಿದೆ ಕಾಯವನು;
ಹಗಲಲ್ಲಿ ಕತ್ತಲನ್ನು
ಮನದುಂಬಿ ಕಪ್ಪು ಛಾಯೆಯ
ಉಸಿರೆಲ್ಲ ತುಮುಲ
ಭಾವವೆಲ್ಲ ಶೂನ್ಯ
ತಂದಿಟ್ಟೆ ದುಗುಡವನು!
ಕೈ-ಲಾಸ.
~~~~~~~
ʼಕಾಯಕವೇ ಕೈಲಾಸʼ
ಎಂದು
ಮಿತಿಮೀರಿ ಕೆಲಸ
ಮಾಡಿದ್ದಕ್ಕೆ ಆಯ್ತು
ಅವನ ಕೈಲಾಸ್
ಪರಿಣಾಮವಾಗಿ ಸೇರಿದ
ಕೈಲಾಸ.
ಚಿಕ್ಕ ಜೇಬು. ಶಿಶು ಗೀತೆ.
~~~~~~~~
ಇದ್ದರೆಷ್ಟು
ಚೆನ್ನ
ದೊಡ್ಡ ಜೇಬು
ನನಗೆ
ನೆಲ್ಲಿಕಾಯಿ
ಚಿನ್ನದಷ್ಟು
ಸಿಕ್ಕಿತಿಂದು
ನನಗೆ
ಕಷ್ಟಪಟ್ಟು
ನಾನು
ಏರಿದ್ದೆ ಮರವನ್ನು
ಜೇಬು ಮಾತ್ರ
ಚಿಕ್ಕದು
ನನಗೇ ಎಲ್ಲಾ
ದಕ್ಕದು
ಆಸೆ ಬಹಳ ನನಗೆ
ಸಿಕ್ಕೋದಿತ್ತು
ಎಲ್ಲ ಎನಗೆ
ಜೇಬು ಮಾತ್ರ
ಚಿಕ್ಕದು
ಎಲ್ಲ ತುಂಬಲಾಗದು
ಪಾಪ! ಏನು ಮಾಡಲಿ
ನಾನು ಚಿಕ್ಕವನಲ್ಲವೇ
ನನ್ನ ಜೇಬು
ಚಿಕ್ಕದು
ಸ್ವಲ್ಪ ತಿಂದರಾಗದೇ.
No comments:
Post a Comment