Sunday, July 19, 2020

ಜೋಕುಗಳು..


                                    ಹೊಸ  ವರ್ಷದ  ರೆಸಲ್ಯೂಷನ್‌ಗಳು.

                                         ~~~~~~~~~~~~~~~~~~~~~~~~

ರವಿ: ಹೊಸ ವರ್ಷದ ಸ್ವಾಗತಕ್ಕೆ ಏನು ತೀರ್ಮಾನ ತಗೊಂಡಿದ್ದೀಯಾ?
ಗುಂಡ: ಹೆಡ್‌ ಬಿದ್ರೆ ವಿಸ್ಕಿ, ಟೇಲ್‌ ಬಿದ್ರೆ ವೋಡ್ಕಾ, ಭೂಮಿಯ ಮೇಲೆ ಬಿದ್ರೆ ರಮ್‌ ಮತ್ತು ಗಾಳಿಯಲ್ಲೇ ಉಳಿದ್ರೆ ತಾಯಾಣೆ ಬರೋ ವರ್ಷ ಪೂರ್ತಿ ಕುಡಿಯೋದೆಲ್ಲ ಬಂದ್!!‌

ಹೆಂಡತಿ: ಹೊಸ ವರ್ಷಕ್ಕೆ ಇಷ್ಟೊಂದು ತೀರ್ಮಾನಗಳನ್ನು ಯಾಕೆ ತಗೊಂಡ್ರೀ... ಮೊದಲೇ ನಿಮಗೆ ನೆನಪಿನ ಶಕ್ತಿ ಕಡಿಮೆ...
ಗಂಡ: ಹ..ಹ್ಹ... ಅವನ್ನೆಲ್ಲ ನೆನಪಿಸೋಕೆ ಅಂತ ಆಫೀಸಿನಲ್ಲಿ ಪರ್ಸನಲ್‌  ಸೆಕ್ರೇಟರಿ “ರೋಸ್‌” ಇದ್ದಾಳಲ್ಲ!

ಮಹಾದೇವಪ್ಪ: ಹೊಸ ವರ್ಷದಲ್ಲಿ ಏನು ತೀರ್ಮಾನ ತಗೊಂಡಿದ್ದೀಯೋ?
ಷಣ್ಮುಖ: ಕಳೆದ ವರ್ಷ ಡಿಸೆಂಬರ್‌ ನಲ್ಲಿ ರಜೆ ಹಾಕ ಬೇಕೆಂದುಕೊಂಡು ವರ್ಷ ಪೂರ್ತಿ ಕೂಡಿಟ್ಟ ರಜೆಗಳು ಮಕ್ಕಳ ಗಣತಿಯ ಕಾರಣದಿಂದ ಕೈತಪ್ಪಿ ಹೋದವು! ಅದಕ್ಕೆ ಈ ವರ್ಷ ತಿಂಗಳಿಗೆ ಒಂದೆರಡರಂತೆ ಬಳಸಿ ಬಿಡ್ತೀನಿ... ಯಾವ ಟ್ರಿಪ್‌ ಅನ್ನೂ ಇನ್ಮುಂದೆ  ಡಿಸೆಂಬರ್‌ ನಲ್ಲಿ ಮಾಡೊಲ್ಲ.

ಗೌರಿ: ಹೊಸ ವರ್ಷದಲ್ಲಿ ನಿನ್ನ ತೀರ್ಮಾನ ಏನೇ?
ಗಿರಿಜ: ಈ ವರ್ಷ ಗಂಡನ ಜೊತೆ ಜೊತೆಗೆ ಸರಿ ಸಮಾನವಾಗಿ ಕುಳಿತು ಕುಡಿಯ ಬೇಕೆಂದಿಕೊಂಡಿರುವೆ
ಗೌರಿ: ಈ ನಿರ್ಧಾರ ಯಾಕೇ?!
ಗಿರಿಜ: ಅವರೊಬ್ಬರೇ ಕುಡಿಯುವಾಗ ಅವರು ಸ್ವತಂತ್ರವಾಗಿ ಇರೋದು ನನಗೆ ಸಹಿಸೋಕೆ ಆಗೊಲ್ಲ ಕಣೇ!

ವೆಂಕ್ಟ: ಹೊಸ ವರ್ಷಕ್ಕೆ ಏನು ನಿನ್ನ ಹೊಸ ತೀರ್ಮಾನ?
ಸೂರಿ: ನಾನು ಯಾವ ಕೆಲಸವನ್ನು ಹೆಂಡತಿಯನ್ನು ಕೇಳದೇ ಮಾಡಿದೀನಿ, ಒಂದಾದ್ರೂ ಉದಾಹರಣೆ ಕೊಡು ನೋಡೋಣ.

ರಾಜು: ಈ ಹೊಸ ವರ್ಷಕ್ಕೆ ನನ್ನ ರೆಸಲ್ಯೂಷನ್‌ ಲಂಚ ಪಡೆದು ಜೀವನದಲ್ಲಿ ಸಂತೋಷದಿಂದ ಇರುವುದು.
ಗುರು: ಲಂಚ ಕೊಡೋದನ್ನ ಬಿಟ್ಟು, ಲಂಚ ಪಡೆಯುವವರ ವೀಡಿಯೋ ಮಾಡಿ ನ್ಯೂಸ್‌ ಚಾನೆಲ್‌ ಗೆ ಕೊಡಬೇಕೆಂದು ಕೊಂಡಿದ್ದೇನೆ.
ರಾಜು: ಆಯ್ತು... ನಿನ್ನ ಎಲ್ಲಾ ಕೆಲಸಗಳನ್ನು ಉಚಿತವಾಗಿ ಮಾಡಿಕೊಡುತ್ತೇನೆ. ದಯವಿಟ್ಟು ನನ್ನ ಹೊಟ್ಟೆ ಮೇಲೆ ಹೊಡಿಬೇಡ.

ರವಿ: ಕಳೆದ ವರ್ಷ ನೀನು ತೆಗೆದುಕೊಂಡ ನಿರ್ಧಾರಗಳು ಈಡೇರಿದವೇ?
ಸಂತೋಷ: ಅವ್ಯಾವೂ ಅಂದುಕೊಂಡ ಹಾಗೆ ನಡೆಯಲಿಲ್ಲ. ಅದಕ್ಕೆ ಈ ವರ್ಷ ಯಾವುದೇ ತೀರ್ಮಾನ ತೆಗೆದುಕೊಳ್ಳಲೇ ಬಾರದೆಂಬ ತೀರ್ಮಾನಕ್ಕೆ ಬಂದಿದ್ದೇನೆ.

ರಮೇಶ್: ಬರಲಿರುವ ಎಲ್ಲಾ ಹೊಸ ವರ್ಷಗಳಿಗೂ ಸೇರಿ ಇದೇ ನನ್ನ ಕೊನೆಯ ರೆಸೆಲ್ಯೂಷನ್.‌
ವೆಂಕಟ್:‌ ಯಾಕೋ ಹಾಗಂತೀಯಾ? ಏನೋ ಕಾರಣ?!
ರಮೇಶ್:‌ ಮದುವೆ ಆಗ್ತಿದ್ದೀನಿ ಕಣೋ.

ಶಾಜು: ಹೆಂಡತಿ ಮಕ್ಕಳು ಅಷ್ಟೊಂದು ಅತ್ತು ಕರೆದರೂ ಅವನ್ಯಾಕೋ ಹಾಗೆ ನೋಡಿಯೂ ನೋಡದ ಹಾಗೆ ಹೋಗ್ತಿದ್ದಾನೆ?
ವಿಜಯ: ಹೊಸ ವರ್ಷದಲ್ಲಿ ಹೆಂಡತಿ-ಮಕ್ಕಳನ್ನು ಸಂಪೂರ್ಣ ತೊರೆದು ಬಿಡುವ ನಿರ್ಧಾರ ಕೈಗೊಂಡಿದ್ದಾನಂತೆ ಕಣೋ!

ವೈದ್ಯ: ಹೂಂ... ಈಗ ಆರೋಗ್ಯ ಹೇಗಿದೆ? ಅಂದ ಹಾಗೆ ಹೊಸ ವರ್ಷಕ್ಕೆ ಏನು ಹೊಸ ತೀರ್ಮಾನ ಕೈಗೊಂಡಿದ್ದೀರಾ?!
ರೋಗಿ: ಹೇಗಾದ್ರೂ ಮಾಡಿ ಈ ಹೊಟ್ಟೆ ಕರಗಿಸಿ ನಿಮ್ಮ ಆಸ್ಪತ್ರೆಗೆ ಬರೋದನ್ನ ತಪ್ಪಸಿಕೊಳ್ಳಲು ಯೋಚಿಸುತ್ತಿದ್ದೇನೆ ಡಾಕ್ಟ್ರೇ...

ಸೀತಾ: ಹೊಸ ವರ್ಷಕ್ಕೆ ಏನಾದರೂ ಹೊಸ ತೀರ್ಮಾನ ಕೈಗೊಂಡಿದ್ದೀರಾ?
ಗೀತಾ: ಗಂಡನಿಂದ ತಿಂಗಳಿಗೊಂದೊಂದು ಹೊಸ ಸೀರೆ ಕೊಡಿಸಿಕೊಳ್ಳೋದಕ್ಕಿಂತ ಒಳ್ಳೆಯ ನಿರ್ಧಾರ ಯಾವುದಾದರೂ ಇದೆ ಅಂತೀಯಾ ಸೀತಾ!

ರಾಜಕಾರಣಿ: ನನ್ನ ಕ್ಷೇತ್ರದಲ್ಲಿದ್ದುಕೊಂಡೇ ಜನ ಸೇವೆ ಮಾಡಲು ಈ ವರ್ಷ ನಾನಾ ಯೋಜನೆ ಹಮ್ಮಿಕೊಂಡಿದ್ದೇನೆ...
ಹೆಂಡತಿ: ಚುನಾವಣೆಯಲ್ಲಿ ಸೋತ ಮೇಲೆ ಇಂಥಾ ನಿರ್ಧಾರ ಕೈಗೊಳ್ಳಬೇಕಾದ್ದೇ!

                                               ಹಾಲಿನ ಬೆಲೆ ಹೆಚ್ಚಳ ಜೋಕ್ಸ್ !!!
                                             ~~~~~~~~~~~~~~~~~~~~~

ಹೆಂಡತಿ: ರೀ ವಾಮನರಾಯರ ಮನೆಗೆ ಫಂಕ್ಷನ್‌ ಗೆ ಹೋಗೋದು ಮರೆತು ಬಿಟ್ರಾ, ಏಳಿ ಬೇಗ ರೆಡಿ ಆಗಿ...
ಗಂಡ: ಹೋಗೆ ಅವನು ಮೊದಲೇ ಜಿಪುಣ, ಹಾಲಿನ ಬೆಲೆ ಜಾಸ್ತಿ ಅಂತ ಒಂದು ಕಪ್‌ ಟೀ ಮಾಡಿಸ್ತಾನೆ ಅಂತ ಗ್ಯಾರೆಂಟಿ ಇಲ್ಲ; ಹೋಗಿ ಏನು ಮಾಡೋದು!

ರಾಣಿ: ಪಕ್ಕದ ಮನೆ ಆಂಟಿ ಹತ್ರ ಹೋಗಿ ಬರ್ತೀಯೇನೇ...
ರಾಜಿ: ಅಮ್ಮ ನಂಗೊತ್ತಿತ್ತು ಈ ಕೆಲಸ ಹೇಳ್ತೀಯ ಅಂತ; ಅದ್ಕೇ ಮೊದಲೇ ಪಕ್ಕದ ಮನೆಗೆ ಹೋಗಿ ಚಹಾ ಮಾಡಲು ಹಾಲು ಕೈಗಡ ತಂದಿಟ್ಟಿರುವೆ.

ವೆಂಕಮ್ಮ: ಹಾಲಿನ ಬೆಲೆ ಎಷ್ಟು ಹೆಚ್ಚಳವಾದ್ರೂ ಅವ್ರ ಮನೇಲಿ ಹಾಲಿನಲ್ಲೇ ಟೀ ಮಾಡ್ತಾರೆ ಕಣ್ರೀ...
ಶಾಂತಮ್ಮ: ಮಾಡದೇ ಏನು... ಆಕೆ ಗಂಡ ಹಾಲಿನ ಡೈರಿಯಲ್ಲೇ ಕೆಲ್ಸ ಮಾಡೋದು ಅಲ್ವಾ ಎಲ್ಲಾ ಉಚಿತವಾಗಿಯೇ ಸಿಗುತ್ತೆ!

ರಾಜು: ಒಂದು ಪಾಕೆಟ್‌ ನೀರು ಕೊಡಿ...
ಅಂಗಡಿಯವ: ತಮ್ಮ... ನಮ್ದು ಹಾಲಿನ ಅಂಗಡಿ .. ಇಲ್ಲಿ ನೀರು ಸಿಗೊಲ್ಲ ..

ರಾಜು: ಅಯ್ಯೋ! ಗೊತ್ತು ಬಿಡಿ.., ಮೊದಲೆಲ್ಲಾ ನೀವು ಕೊಡೋ ಹಾಲಿನ ಪಾಕೇಟ್‌ನಲ್ಲಿ ಸ್ವಲ್ಪವಾದ್ರೂ ಹಾಲು ಇರುತ್ತಿತ್ತು. ಈಗ ಬರೀ  ನೀರೇ ಇರುತ್ತಲ್ಲ.. ಅದಕ್ಕೇ ಹಾಗೆ ಕೇಳಿದೆಯಷ್ಟೇ!
                                                             

No comments:

Post a Comment