ಅವಳ ಪ್ರೀತಿಯಲ್ಲಿ
ನಾನಿರೋವಾಗ
ನನ್ ಗುಡಿಸಿಲೇ
ʼʼನಂದನವನ”
ಮದ್ವೆಯಾಗಿ
ಸಂಸಾರವಾದಾಗ
ನೆನಪಿಸುತ್ತೆ
ನಮ್ ದನದ ವನ!
ನಿರಂತರ ಕಾಲ ಪ್ರವಾಹದಲ್ಲಿ
ನಿಲ್ಲದಿರು ಎಲ್ಲೂ-
ಗತಿ ರಭಸವೋ...ವಿರಳವೋ...
ಗತಕಾಲವಿಲ್ಲಿ ಮರಳಿ ಬಾರದು
ನಡೆ ಮುಂದೆ!
ನಿನ್ನ ಬಳಿ ಇನ್ನೂ ಕಾಲವಿಹುದು
ಕೊನೆಯುಸಿರು
ನಿನಗಿಲ್ಲಿ ಇರುವವರೆಗೂ!
A fear in solitude…
~~~~~~~~~~~~~
“He trembled with fear!”
What a change!
Used to close eyes
Stopped breath.. a while
Senses used to fail to work-
Mouth never opened
When all are out-
Its tough for him to live
All of a sudden he cry
He roar in his mind
Or His mind used to utter-
a sound of fear…
yes! Its terrible
‘Alone’ for a while-
No He can’t…
Why its so?! He never asked
Never consulted atleast
A psychiatrist!
Since from his childhood he is ‘same’
But its our fault if we say “Insane”
He expect nothing
except a company…
He fear . . He fear . . He fear . .
In a solitude ..
Because of his ‘Nature’
No gal passed beside
No body to love
I feel he may be-
What(always) He is …
Yes! Lack of love
Lack of love . . .
Nobody loved him
Nobody cared him
Its what a reason…
He is same in all season
Though he is fifty
He is a great faculty…
To be alone
To face solitary…
Its not at all easy
“A fear embedded in his heart”
Though he is all right
He can’t…
Why God gave him
‘a fear in solitude?’
That’s’ what I think
Why can’t he think
He thought ‘No way!’
I think-there is a way…
How could I solve?!
When he is ‘alone’
I’ll be a part?!
It’s a great question
Oh! God-
“A smile of cheerfulness be-
On his face always”
Give Him moments of solitude
With no fear, No Fear.
09 May 2006…
ಪ್ರಶ್ನೆ.
~~~~~
ಕನಸಲ್ಲಿ
ನಲ್ಲೆ
ನನಸಲ್ಲಿ
ನೀನಲ್ಲೆ
ನಾ ಇಲ್ಲೆ
ಹೀಗಾದ್ರೆ
ಪ್ರೀತಿ ಇನ್ನೆಲ್ಲೇ…?!
ಪ್ರೀತಿಗೆ ಮನಸ ಒಪ್ಪಿಸೆ…
~~~~~~~~~~~~~~~~
ಓ ಮನಸೇ ಓ ಮನಸೇ
ಪ್ರೀತಿಸು ಬಾರೆ ಪ್ರಿಯ ಮನಸೇ
ಮನಸಲ್ಲಿ ನೂರೆಂಟು ಪ್ರಶ್ನೆಗಳಿದ್ದರೂ
ಪ್ರೀತಿಯಲಿ ನೀನೊಂದು ಹೊಂಗನಸೇ
ಮನದಲ್ಲಿ ನೂರೆಂಟು ಬಯಕೆಗಳಿದ್ದರೂ
ನಿನ್ನ ಪ್ರೀತಿಯು ಸವಿಗನಸೇ
ಓ ಮನಸೇ ಓ ಮನಸೇ
ಹೊಂಗನಸೇ ಇದು ಸವಿಗನಸೇ
ಆಟೋಟದಲಿ ಇಷ್ಟ ನನಗಿಲ್ಲ
ಊಟ ಪಾಠದಲಿ ಮನಸೇ ನಿಲ್ಲೊಲ್ಲ
ನಿನ್ನ ಅಂತರಂಗವನು ಹೇಗೆ ಅರಿಯಲಿ
ಪ್ರೀತಿಯ ರಣರಂಗವನು ನಾ ಹೇಗೆ ಗೆಲ್ಲಲಿ-
ಪ್ರತಿ ಪ್ರಶ್ನೆಗೆ-ಸರಿ ಉತ್ತರ ಸಿಗದೆ ನೊಂದಿಹೆ
ನಿನ್ನ ಒಪ್ಪಿಗೆ, ಏಕೋ ಸಿಕ್ಕದೆ ಇನ್ನೂ ಕಾದಿಹೆ
ಓ ಮನಸೇ ಓ ಮನಸೇ
ಹೊಂಗನಸೇ ಇದು ಸವಿಗನಸೇ
ನಿನ್ನ ನಂಬಿಕೆ ನನ್ನದಮ್ಮ
“ಪ್ರೀತಿ”ಯೆಂದ ಮೇಲೆ “ತ್ಯಾಗ” ನಿಜವಮ್ಮ
ನಿನ್ನ ಒಂದು ನೋಟದಲಿ ನೂರು ಅರ್ಥವಿದೆ
ನಿನ್ನ ಮನಸಿನಲಿ ಅಡಿ ಜಾಗ ಬೇಕಿದೆ
ಪ್ರತಿ ಉಸಿರಲ್ಲೂ …ನಿನ್ನ ಹೆಸರನೇ ನಾನು ಹೇಳಿಹೆ
ನಿನ್ನ ಪ್ರೀತಿಗೆ … ಪರವಾನಿಗೆ ಬೇಡಿ ಬಂದಿಹೆ.
ಓ ಮನಸೇ ಓ ಮನಸೇ
ಹೊಂಗನಸೇ ಇದು ಸವಿಗನಸೇ.
ಕೈತಪ್ಪಿ ಹೋಗುವ
2010
ಪ್ರೀತಿ ಆಗದಿರಲಿ
ನಮ್ಮದು-
ನಿನಗೂ ಗೊತ್ತಲ್ಲವೇ
ಎಲ್ಲರ ಕೈತಪ್ಪಿ
ಹೋದಾಗಲೇ
ಅಲ್ಲವೇ
ನಾವಿಬ್ಬರೂ
ಪ್ರೀತಿಸಲು
ಶುರು ಮಾಡಿದ್ದು!
ನಿನಗಾಗಿ ಬರೆದೆ
ಮೊದಲ ಪ್ರೇಮ ಪದ್ಯ
ಮೀರಿಸುವಂತೆಯೇ
ಇಹುದು
ನಾ ಓದಿದ ಎಲ್ಲಾ
ಕಾದಂಬರಿಯ ಗದ್ಯ!
ನಿನ್ನ ಬಳಸಿ
ತಬ್ಬಲು ಬಂದಾಗ
ಏಕೆ
ತಬ್ಬಿಬ್ಬಾಗುವೆ
ಸರಿಯಾಗಿ ನಿನ್ನ
ಎದುರು ನಿಲ್ಲಲೂ
ಹೆದರುತ್ತಿದ್ದವನು
ಅದ್ಹೇಗೆ
ತಬ್ಬಲು ಬಂದನೋ
ಎಂದು
ಅಚ್ಚರಿಯೇ?
ಪ್ರೀತಿ ಎಲ್ಲವನ್ನೂ
ಕಲಿಸುತ್ತದೆ.
ನೀ ಬಂದ ಮೇಲೆ
ಅವಳ ನೆನೆಯೋದು
ಕೈ ಬಿಟ್ಟೆ
ನೀ ಕೈ ಹಿಡಿದು
ಜೊತೆಯಾದ ಮೇಲೆ
ನಿನಗೆ ಹೆದರಿ
ಅವಳಿಗೆ ನಿಜಕ್ಕೂ
ಕೈ ಕೊಟ್ಟೆ!
ಸುಮ್ಮನೆ ಕುಂತಾಗ
ಕಣ್ಮುಂದೆ ಬರುವ ನೀನು
ಬಂದಿರುವ ಖುಷಿಯಲ್ಲಿ
ನನ್ನನ್ನೇ ಮರೆತಿರಲು
ಅರೆಘಳಿಗೆ-
ಮರೆಯಾಗುವ ಪರಿಗೆ
ನೀ ಬೆರಗಾಗಿ
ಕುಳಿತಿರುವೆ ಸುಮ್ಮನೆ
ಕಣ್ಮುಂದೆ ನೀ ಬರಲೆಂದು!
ನನ್ನಂತೆಯೇ ನೀನು
ಎಂದರಿತು ನಿನ್ನ ನಾ
ಪ್ರೀತಿಸಲಿಲ್ಲ...
ನಿನ್ನ ನಾ ಮೋಹಿಸಿದ
ಮೇಲೆ
ನೀ ನನ್ನಂತೆಯೇ
ಏಕಾದೆ
ಎಂಬುದು ನನಗೆ ಇನ್ನೂ
ತಿಳಿದೇ ಇಲ್ಲ!
ಕನಸಲ್ಲಿ ಕನವರಿಸುವೆ
ನಿನ್ನ-Confuse ಮಾಡಿ
ಹೊರಟೋದೆ ನನ್ನ
ಅದಕೆ ಈ ಮನಸು ನಿನ್ನ
ಜೊತೆಗೆ Fuse ಆಗೋಕೆ
ಕಾಯ್ತಾ ಇದೆ ಬೇಗ
ಬರಬಾರದೆ ಚಿನ್ನ!
ಒಲವಿನ ಓಲೆ
ಬರೆಯಲಿಲ್ಲ...
ಅವಳ ಜೊತೆ
ನಾ ತಿರುಗಲಿಲ್ಲ
ಅವಳ ನಾ
ನೋಡಲೇ ಇಲ್ಲ
ಆದರೂ
ಒಲವು ಅರಳಿಸಿದ
ʼಪ್ರೇಮಿಗಳ ದಿನವʼ
ನೆನೆದು
ಅವಳಿಗೆ ಶುಭ ಕೋರಲು
ನಾ ಮರೆಯಲಿಲ್ಲ!
ಅವಳ
ನೆನೆಯದ ದಿನವಲ್ಲ!
ಅವಳಿಲ್ಲದ
ದಿನಗಳಲ್ಲಿ
ದಿನವಾಗುತ್ತಿತ್ತು
ತನ್ನ ಪಾಡಿಗೆ ತಾ-
ಅವಳು ಬಂದು
ಹೋದ ಮೇಲಿನ ಈ
ದಿನಗಳು, ಅವಳ
ನೆನೆಯದೇ ದಿನಗಳು
ಸರಿಯುವುದೇ ಇಲ್ಲ!
Once it was hidden...
Nobody knew of present
Everything in this world-
Comes on its own way
As the time ripens...
Wipes out the bad...
A closure path towards
New year...my journey starts
As it is the same for every
Organism...
I go I go with it
Where ever it intends to take me
On its path...
....In the hands of time.
ಪ್ರೇಮ ಮಾತಾಗುತ್ತೆ...
ಎದೆಯೊಡಳಲ್ಲಿ ಬಚ್ಚಿಟ್ಟ
ಭಾವನೆಗಳಿಗೆಲ್ಲ ಜೀವ ಬಂದಾಗ...
ಒಮ್ಮೊಮ್ಮೆ ಬೇಜಾರ್ ಮಯ!
ಮತ್ತೊಮ್ಮೆ ಬೇಜಾರು ಮಾಯ!!
ಜಾರುವ ಮನಸಿನ ಈ ಪರಿಗೆ
ಬೇಜಾರಾಗದೆ ಬೆರಗಾದೆ ನಾ...
ಮತ್ತೆ ಮತ್ತೆ
ಕಣ್ಮುಂದೆ ನೀ
ಬಂದದ್ದು
ನನ್ನ ಕಾಡಲೋ!
ನೆನಪಾಗುಳಿದ
ಕಾರಣಕ್ಕೋ!
ಏಕೋ ಏನೋ
ಮರೆಯಲು ಆಗದ
ಭಾವನೆಯೇ
ನೆನಪೇನೋ ಎಂಬಂತೆ
ಕಾಡುತಿದೆ ಇಂದು!
ಎಲೆಮರೆಯ
ಕಾಯಂತೆ ದೂರವೇ
ಉಳಿದು
ನೀನೇಕೆ ನನ್ನ
ಪ್ರೀತಿಸಿದೆ ಅಂದು
ಒಂದಾಗೋ ಯೋಗ
ಬರದಿದ್ದರೂ
ಕೊರಗಾಗಿ ಕಾಡದೇ
ಬಿಡದು ಅದು
ಎಂದೆಂದೂ
ಇಂದು ಸಿಕ್ಕವಳು
ಮತ್ತೆ ಇನ್ನೆಂದು
ಸಿಗುವೆಯೋ?
ಯಕ್ಷ ಪ್ರಶ್ನೆಗಳಿಗೆ
ಕೊನೆ ಇಲ್ಲ-
ನಿರೀಕ್ಷೆಯ ಗುರಿ ಹೊತ್ತು
ಎಂದೆಂದೂ ಕಾಯುತ್ತೇನೆ
ನಿನಗಾಗಿ ನಾನು...
ಹೀಗೆ ಹೋಗಿ ಹಾಗೆ
ಮರಳುವಷ್ಟರಲ್ಲಿ
ಒಂದೇ ನೋಟದಲ್ಲಿ
ಅವಳು ಮರಳು
ಮಾಡಿದಳು
ನನ್ನೆಲ್ಲಾ ಕೆಲ್ಸಗಳಿಗೆ
ಅರೆಘಳಿಗೆ
ಮರಳೆರಚಿ
ಮರಳುವ ಖಾತ್ರಿ
ಇರದೆ ಹಿಂಬಾಲಿಸಿದೆ...
ಎಷ್ಟೋ ಜಂಜಾಟಗಳ
ಮಧ್ಯೆ
ಅಪರೂಪಕ್ಕೊಮ್ಮೆ
ಸಂದೇಶಗಳ ಮುಖೇನ
ಸಂಪರ್ಕಕ್ಕೆ ಬರುತ್ತೇವೆ
ಎಲ್ಲಾ ಕ್ಷಣಿಕ ಸುಖಗಳ
ಜಗದಿ-
ಅಷ್ಟಕ್ಕೆ ನಾ
ಸಂಭ್ರಮಿಸುತ್ತೇನೆ!
ಮತ್ತೆ ಮತ್ತೆ ನಾವು
ಹೊಸಬರಾಗುತ್ತೇವೆ
ಕೆಲ ದಿನಗಳು
ಸಂಪರ್ಕವಿಲ್ಲದೇ
ದೂರವೇ ಉಳಿದು!
ಮತ್ತೆ ಹೊಸ ಬಾಂಧವ್ಯ
ಕಟ್ಟಿಕೊಂಡು ಹಳೆಯದನ್ನು
ಮರೆಯುತ್ತೇವೆ!
Its the time to build. . .
~~~~~~~~~~~~~~~~
Its the time to build your life
When all about you are losing
their hopes...
Its the time to have rest
When all studded in their own
Unending transactions...
Its the time to
go a long path
When all the energy with in you
is
of no use to the world...
Its the place to investigate
When the glory of ‘that’ lingers
day and
night in thou mind...
Its the suggestion to accept
When there is no alternative
for the problem in which you strucked!
Its the time to play
When the whole life seems like
a ‘game’ with
struggle...
25-04-2011.
No comments:
Post a Comment