Of all the stars I
admired,drenched
In various rivers and mists,
I chose only the one I love.
Since then I sleep with the
night.
Of all the waves, one wave and another
wave,
Green sea,green chill,branchings
of green,
I chose only the one wave,
The indivisible wave of your
body.
All the waterdrops,all the roots,
All the threads of light gathered
to me here;
They came to me sooner or later.
I wanted your hair, all for
myself.
From all the graces my homeland
offered
I chose only your savage heart.
-Pablo Neruda.
ನಾ
ಮೆಚ್ಚಿದಾ ತಾರೆಗಳಲ್ಲಿ, ತೇವಗೊಂಡು
ನದಿಗಳಲ್ಲಿ
ಮಂಜು ಮುಸುಕಿದಾ ಮಬ್ಬಿನಲ್ಲಿ
ನಾ
ಪ್ರೀತಿಸುವ ತಾರೆಯನ್ನೇ ಆಯ್ಕೆ ಮಾಡುವೆ
ಅದರೊಂದಿಗೆ
ನನ್ನ ರಾತ್ರಿಯನು ನಾ ಕಳೆಯುವೆ.
ನಾ
ಕಂಡ ಅಲೆಗಳ ಸಮೂಹದ ನೆನಹುವಿನಲ್ಲಿ
ರೆಂಬೆ
ಕೊಂಬೆಗಳಂತೆ ಹಸಿರು ಮುತ್ತಿದ ಸಾಗರದಲ್ಲಿ
ಒಂದೇ
ಅಲೆಯನು ಅರಸಿ ನಾನು ತೇಲುತಲಿರುವೆ
ನಿನ್ನಿಂದ
ನನ್ನ ಚಿತ್ತವನು ಬೇರ್ಪಡದಂತಿರುವುದನು ಆಯ್ದು.
ಎಲ್ಲ
ನೀರಿನ ಹನಿಗಳನು ಸೇರ್ಪಡೆ ಮಾಡಿ
ಎಲ್ಲ
ಬೇರುಗಳಲಿ ಇರುವುದನೂ ಸೂರೆ ಮಾಡಿ
ಬೆಳಕಿನ
ಕಿರಣದ ಎಳೆಗಳನ್ನೆಲ್ಲ ಇಲ್ಲಿ ಕೂಡಿ ಹಾಕುವೆ
ಈಗಲೋ
ಆಗಲೋ ಬಂದಂಥವುಗಳನೂ ಬಿಡದೆ ಲೆಕ್ಕವನಿಡುವೆ.
ನಿನ್ನ
ಸೊಬಗ ಚಿತ್ರಿಸುವ ಕೇಶರಾಶಿಯ ಬಯಸುವೆ ನಾ
ನನಗಾಗಿಯೇ,
ನನ್ನ ತಾಯ್ನೆಲದ ಸೊಗಡನದರಲ್ಲಿರಿಸಿ
ನಿನ್ನ
ಹೃದಯವನ್ನೇ ಬೇಡಿ ನಾ ನಿನ್ನ ಕಾಡಿ ಬರುವೆ
ನಿಷ್ಕಲ್ಮಶ
ಪ್ರೀತಿಯನು ನಿನ್ನೊಳು ನಿರಂತರ ಹುದುಗಿಸಿ.
No comments:
Post a Comment