ನಾನು ನೋಡಿದ ಎಲ್ಲವನೂ ಕೆದಕಿದಾಗ
ನಿನ್ನೊಬ್ಬಳನೇ ನೋಡುತಲಿರುವ ಮೋಹ
ನಾನು ಸ್ಪರ್ಶಿಸಿದ ಎಲ್ಲವನೂ ನೆನೆಯುವಾಗ
ನಿನ್ನ ತನುವೊಂದನೇ ಹಂಬಲಿಸುವ ದಾಹ
ಸವಿದು ದಣಿದು ಮಲಗಿದಾಗಲೂ ನಿನ್ನ ಮೊಗ ನಗುವಾಗ
ನಿನ್ನತ್ತಲೇ ವಾಲುತ್ತೇನೆ ನಿನ್ನ ಮಲಗಿದ ಪರಿಗೆ
ಕರಗುತ್ತೇನೆ.
ನಾನು ಮಾಡುವುದಾದರೂ ಏನು,ಪ್ರೀತಿ,ಪ್ರೀತಿಸುವವರಿಗಾಗಿ?
ಬೇರೆಯವರೆಲ್ಲ ಹೇಗೆ ಪ್ರೀತಿಸುವರೋ ಗೊತ್ತಿಲ್ಲ ನನಗೆ
ಅಥವಾ ಹಿಂದೆ ಅವರೆಲ್ಲ ಹೇಗೆ ಪ್ರೀತಿಸುತ್ತಿದ್ದರೋ!
ನಾ ಜೀವಿಸುವೆ,ನಿನ್ನನ್ನೇ ನೋಡುತ,ನಿನ್ನನೇ ಪ್ರೀತಿಸುತ
ಪ್ರೀತಿಸುತಲೇ ಇರುವುದು ಜನ್ಮಾರಭ್ಯ ನನಗಂಟಿದ ಸ್ವಭಾವ.
“Of everything I have seen,
It’s you I want to go on seeing:
Of everything I’ve touched,
It’s your flesh I want to go on touching.
I love your orange laughter.
I am moved by the sight of you sleeping.
What am I to do,love,loved one?
I don’t know how others love
Or how people loved in the past.
I live,watching you,loving you.
Being in love is my nature.”
-Pablo
Neruda.
No comments:
Post a Comment