29-04-1971 ರ ಶ್ರೀ ಶಂಕರ ಜಯಂತಿಗಾಗಿ
ಬಿಡುಗಡೆ ಮಾಡಿದ ಶ್ರೀ ಶಂಕರಲೀಲಾ
ಸಂಕ್ಷೇಪ ಲೇಖಕರು ಶ್ರೀ N.ಶ್ಯಾಮಣ್ಣ ಪುರಾಣಿಕ ರವರ ಕೃತಿಗೆ ಪ್ರಕಾಶಕರಾಗಿ ಬಳ್ಳಾರಿ ಜಿಲ್ಲೆ
ಹೊಸಪೇಟೆ, ನಾರಾಯಣ ದೇವರಕೇರಿ ಶ್ರೀ ಶಂಕರ ಜಯಂತೀ
ಉತ್ಸವದ ಕಾರ್ಯದರ್ಶಿ
ಶ್ರೀ ಮಾನ್ ಬಿ.ನಾರಾಯಣಭಟ್ಟರು 19/235 ತೇರು ಬೀದಿ,ರವರು ಬರೆದುಕೊಟ್ಟ ಮುನ್ನುಡಿ.
ಮುನ್ನುಡಿ.
ಮಂಗಳಂ ದೇಶಿಕೇಂದ್ರಾಯ
ಮಹನೀಯ ಗುಣಾಬ್ಧಯೇ |
ಈಶ್ವರಸ್ಯಾವತಾರಾಯ ಶಂಕರಾರ್ಯಾಯ
ಮಂಗಳಂ||
ರಾಮನಗರದ ಪುರಾಣಿಕ ಯನ್.ಶ್ಯಾಮಣ್ಣನವರು ತಮ್ಮ
71 ವರ್ಷದ ವಯಸ್ಸಿನಲ್ಲೂ ಬಹಳ ಉತ್ಸಾಹದಿಂದ ಇದುವರೆವಿಗೂ ಶ್ರೀ ಶಂಕರಾಚಾರ್ಯ ವಿರಚಿತ ಹನುಮದ್ಭುಜಂಗ
ಸ್ತೋತ್ರ ನೂರೆಂಟು ನಾಮಗಳ(ಅಕ್ಷರ ಮಾಲಿಕಾ ಪ್ರಕಾರ) ಶ್ರೀರಾಮ ನಾಮಾವಳಿ,ಶ್ರೀ ಗಣಪತಿ ನಾಮಾವಳಿ,ಶ್ರೀ
ಸಾಂಬ ಶಿವ ನಾಮಾವಳಿ ಮತ್ತು ಜಗದ್ಗುರು ಪೀಠದ ಗುರು
ಪರಂಪರಾಸ್ತೋತ್ರಗಳು ಅಲ್ಲದೆ ಶ್ರೀ ತಿರುಪತಿ ವೆಂಕಟಾಚಲ ಮಹಿಮೆ, ಶ್ರೀ ಪರಶುರಾಮಾವತಾರ,ಶ್ರೀ ವಿಶ್ವಾಮಿತ್ರ,ಶ್ರೀ
ಕೃಷ್ಣಾರ್ಜುನರ ಯುದ್ಧ ಎಂಬ ನಾಲ್ಕು ಪುಸ್ತಕ ರೂಪವಾಗಿ ಮುದ್ರಿಸಿ,ಪ್ರಕಟಿಸಿ ತಮ್ಮ ಭಕ್ತಿಯನ್ನು ವ್ಯಕ್ತ
ಪಡಿಸಿ,ಇತರರೂ ಇದರಂತೆ ಆಚರಿಸಲೆಂದು ಉಚಿತವಾಗಿ ಪುಸ್ತಕಗಳನ್ನು ಹಂಚಿ,ಜನರಿಗೆ ಮಾಡಿದ ಉಪಕಾರವು,ಇಂಥ
ಅಧರ್ಮದ ಕಲಿಕಾಲದಲ್ಲಿ ಧರ್ಮಜಾಗ್ರತೆಗೆ ಮಾಡುವ ಇವರ ಪ್ರಯತ್ನವು ಸ್ತುತ್ಯವಾದದ್ದು. ಇವರು ಗುರುಗಳಲ್ಲಿ
ಅನನ್ಯ ಭಕ್ತಿಯಿಂದ ಅನೇಕ ಶಂಕರ ವಿಜಯಗಳನ್ನು ತಾವು ಓದಿ ನೋಡಿ,ಬೇರೆ ಯಾರಿಗೂ ಓದಿದವರಿಗೆ ಹೊಳೆಯದೇ
ಗುರ್ತಿಸದೇ ಇರುವ ಲೀಲಾ ವಿಶೇಷಗಳನ್ನು ಕಂಡು ಹಿಡಿದು,ವಿಮರ್ಶಾತ್ಮಕ ಸೂಕ್ಷ್ಮದೃಷ್ಟಿಯಿಂದ ಶಂಕರಚರಿತ್ರದಲ್ಲಿ
ಬಂದ ಘಟನೆಗಳನ್ನೆಲ್ಲಾ ದಾರದಲ್ಲಿ ಮುತ್ತುಗಳನ್ನು ಪೋಣಿಸುವಂತೆ ಆರಿಸಿ-ಆರಿಸಿ,ಶೇಖರಿಸಿ ರಚಿಸಿದ ಪುಟ್ಟ
ಶಂಕರಲೀಲಾ ಪುಸ್ತಕವನ್ನು ಆದ್ಯಂತ ನೋಡಲಾಗಿ ನನಗೆ ತುಂಬಾ ಆನಂದವಾಯಿತು.ನಾವು ನಮ್ಮ ಉತ್ಸವಸಭೆಯಿಂದ
ಸಂಕ್ಷಿಪ್ತ ಶಂಕರವಿಜಯ(110 ಪುಟ) ಸಂಕ್ಷೇಪ ಶಂಕರ ವಿಜಯ (125 ಪುಟ) ಪ್ರಕಟಿಸಿದ್ದೇವೆ. ಅವು ಈಗಿನ
ಕಾಲದವರಿಗೆ ದೊಡ್ಡ ಪುಸ್ತಕಗಳಾಗಿವೆ.ಈಗಿನ ಓದುಗರಿಗೆ ಬೇಸರ,ಸಣ್ಣದಾಗಿರಬೇಕು, ರುಚಿಕರವಾಗಿರಬೇಕು,
ಸರಳವಾಗಿ ತಮ್ಮ ಬುದ್ದಿಮಟ್ಟಕ್ಕೆ ತಕ್ಕದಾಗಿರಬೇಕು,ಕಠಿಣವಾಗಿರಬಾರದು, ವೇದಾಂತ ವೈರಾಗ್ಯವಾಗಿರಬಾರದು.
ಇವೆಲ್ಲಾ ಗುಣಗಳು ಇವರ ಶಂಕರಲೀಲಾದಲ್ಲಿ ಸೇರಿವೆ. ಪುಸ್ತಕ ಸಣ್ಣದು,ಒಂದು ತಾಸಿನಲ್ಲಿ ಓದಿ ಮುಗಿಸಬಹುದು,ಕಠಿಣವಲ್ಲ,ಬಹು
ಸ್ವಾರಸ್ಯವಾಗಿರುತ್ತೆ,ವಿಮರ್ಶಾತ್ಮಕ ಮತ್ತು ಬೋಧಪ್ರದವಾಗಿದೆ,ಶಂಕರರ ಮಾತೃ ಭಕ್ತಿ-ಗುರು ಭಕ್ತಿ ಇತ್ಯಾದಿ
ರತ್ನಪ್ರಾಯವಾದ ಗುಣಗಳು ತುಂಬಿ ತುಳುಕುತ್ತಿವೆ.ಪುಸ್ತಕ ಓದಿದವರಿಗೆ ಆನಂದವನ್ನುಂಟು ಮಾಡುತ್ತಿರುವುದರಿಂದ
ನಾವು ಪ್ರತ್ಯೇಕ ಹೇಳಲು ಕಾರಣವಿಲ್ಲ. ಗುರು ಸೇವಾತತ್ಪರರಾಗಿ ನಿತ್ಯ ಪುರಾಣ ಹೇಳುತ್ತಾ ಈ ರೀತಿ ನಿಷ್ಕಾಮಾಸಕ್ತರಾದ
ಯನ್.ಶಾಮಣ್ಣನವರಿಗೆ ಪುಸ್ತಕ ಪ್ರಕಟಿಸಲು ಧನ ಸಹಾಯ ಮಾಡಿ, ಈ ಧರ್ಮಕಾರ್ಯದಲ್ಲಿ ಭಾಗವಹಿಸಿ, ಶಂಕರ
ಗುರು ಕೃಪಾಕ್ಕೆ ಪಾತ್ರರಾಗಬೇಕೆಂದು ಕೋರುವ,
ಶಂಕರ ಕಿಂಕರ
19/235 ತೇರು ಬೀದಿ,ಹೊಸಪೇಟೆ. ಬಿ.ನಾರಾಯಣ ಭಟ್ಟ
ನಾರಾಯಣದೇವರ ಕೇರಿ ಶಂಕರ
ಜಯಂತೀ. ಉತ್ಸವ
ಕಾರ್ಯದರ್ಶಿ.
No comments:
Post a Comment