ಏಕೆ ಎಲ್ಲಾ ಹೀಗೆ
ಆಗುತ್ತಲಿದೆ
ಅರ್ಥವಾಗದೇ
ನಾನು ಸುಮ್ಮನಿದ್ದೇನೆ...
ನನ್ನ ಮೌನ ವೇದನೆ
ಅರಿತಾದರೂ ಆ
ದೇವರು ಎಲ್ಲ
ಸುಖಾಂತವನೇ
ಮಾಡುತ್ತಾನೆ
ಎಂದು ನಂಬಿ
ಕುಳಿತ ಕಾಂತ
ನಾನು.
ಮಾತಿಲ್ಲದೇ ಕತೆಯಿಲ್ಲದೇ
ನೀ ಅಲ್ಲಿ ನರಳುತ
ಇರುವಾಗ-
ಮಾತು ಬಂದರೂ
ಮಾತನಾಡದ ಮೂಖ
ನಾನಾಗಿರುವೆ
ಈ ಮಾತುಗಳಿಂದಲೇ
ಅಲ್ಲವೇ ನೀ ನನ್ನ
ಮನಗೆದ್ದದ್ದು ಕದ್ದದ್ದು
ನಿನ್ನ ಮೌನಕ್ಕೆ
ನನ್ನ ಮೌನವೇ
ಮಾತಿಲ್ಲದೇ ನನ್ನ
ಕೊಲ್ಲುತ್ತಿದೆ ಅಂತ
ನನಗೆ ಏಕೋ
ಇಂದು ಅನಿಸುತಿದೆ.
ಎಷ್ಟೋ ಸಾರಿ
ಜಗತ್ನಲ್ಲೇ ಇರುವ
ನನಗೆ
ಜಗತ್ತಿನ ವಿಷಯಗಳು
ಅರ್ಥವೇ ಆಗದು-
ಅದಕ್ಕೇ
ʼನಾನೂ ಅಪರಿಪೂರ್ಣʼ
ಎಲ್ಲರಂತೆಯೇ!
ಅಂದುಕೊಂಡು
ಈ ಬಾಳ ಪಯಣವನು
ಮುಂದುವರೆಸುತ್ತಿದ್ದೇನೆ.
ವಿಪರ್ಯಾಸ.
~~~~~~~~~
ಎಲ್ಲಾ ಚಿಂತೆಗಳನು
ಮರೆಯಲೆಂದು
ʼಅನಂತತೆಯʼ
ಹುಡುಕಾಟಕ್ಕೆ
ಮೊದಲಾಗಲು
ಆ ಅನಂತತೆಯೇ
ಬಹುದೊಡ್ಡ
ಚಿಂತೆಯಾಗಿ ಕಾಡಿದ್ದು
ಮಾತ್ರ ವಿಪರ್ಯಾಸವೇ
ಸರಿ.
ನನ್ನ ಬದುಕಿನ
ದುರಾದೃಷ್ಟಗಳ
ಕರಿ ನೆರಳು ನಿನಗೆ
ಸೋಕದಿರಲಿ...
ನೀ ನನ್ನ ಬಾಳ
ಸೋಪಾನ
ನೀ ಇಲ್ಲದೇ ಜೊತೆಗೆ
ಹೇಗೆ ಕಟ್ಟಲಿ
ನನ್ನ ಬದುಕಿನ
ಭಂಗಲೆ ನಿನ್ನೊಲವಿನ
ಅರಮನೆ.
ಕನಸುಗಳೆಲ್ಲ
ಭಗ್ನಗೊಂಡು
ನನ್ನ ಅವಸಾನದ
ಕ್ಷಣವನೇ
ನೆನೆಸುತ್ತ ಇರಲು,
ಹೊಸ ಕನಸಾಗಿ
ಮನದಲ್ಲಿ
ಚಿಗುರೊಡೆದೆ ನೀನು...
ನನಸಾಗಿ ನನ್ನವಳಾಗಿ
ಬರುವೆಯೆಂದುಕೊಂಡರೆ
ಕನಸಾಗಿಯೇ ನೀ
ಉಳಿದು
ದೂರವಾಗುವುದು
ಸರಿಯೇನು?!
ನಾನೇನು?
~~~~~~~
ಎಷ್ಟೋ ಸಾರಿ
ನಾನೇನು?
ನನಗೇ ಇನ್ನೂ
ಅರ್ಥವಾಗಿಲ್ಲ
ಇನ್ನು-
ಬೇರೆಯವರಿಗಾದರೂ
ನಾನು ಅಥವಾ
ನನಗಾದರೂ ಅವರು
ಹೇಗೆ ತಾನೇ
ಅರ್ಥವಾಗೋದು?!
ಏಕೆ?!
~~~~~
ನಿನ್ನೆ ಮೊನ್ನೆವರೆಗೂ
ಇಲ್ಲದ ಕಲಹ
ಇಂದೇಕೆ?!
ಕೇಳುವುದು ಸರಿಯೇ!
ಎದ್ದ ಕಲಹಕ್ಕೆ
ತೀರ್ಮಾನ
ಇಲ್ಲದೇ ಹೋದರೆ,
ಅಂತ್ಯವೇ ಹಾಡದಿದ್ದರೆ
ಮುಂದೇನು?! ಎಂದಾಗ-
ಆಗುವ ಎಲ್ಲಕ್ಕೂ
“ಏಕೆ?!” ಎಂದು
ಪ್ರಶ್ನಿಸಿ ಉತ್ತರ
ಹುಡುಕುತ್ತ ಹೋದರೆ
ಎಲ್ಲಾ ಸಂಶಯವೇ
ಸಿಕ್ಕು ಎಲ್ಲವೂ
ಶೂನ್ಯವಾಗುವುದು.
ಹೀಗೂ ಆಗುತ್ತದೆ.
~~~~~~~~~~~~
ʼಅವನʼ ʼಅವಳʼ
ನಡುವೆ
ʼಇವಳುʼ
ಬಂದು
ʼಅವರಿಬ್ಬರುʼ
ದೂರವಾದರು
ʼಅವನುʼ ʼಇವಳುʼ
ಒಂದಾಗಲು
ʼಅವಳುʼ
ಮರೆಯಾದಳು
ʼಇವಳುʼ ʼಇನ್ನೊಬ್ಬನುʼ
ಒಂದಾಗಲು
ʼಅವನುʼ
ಇಲ್ಲವಾದನು
ʼಇವಳುʼ
ಇರದಿದ್ದರೆ
ಅವರೆಲ್ಲ
ಇರುತ್ತಿದ್ದರು.
ನಿನ್ನನು ಅಗಲದೇ
ಇರುವುದು ಹೇಗೆ?
ಅಹುದು! ಸೇರಲೆಂದೇ
ಪ್ರೀತಿಸಿರುವಾಗ
ಅಗಲುವ ಮಾತೇಕೆ?
ನಾವು ಒಂದಾಗುವ
ನಂಬಿಕೆ ಇದ್ದ ಮೇಲೆ
ದೂರವಾಗುವ ಪ್ರಶ್ನೆ ಯಾಕೆ?
ದಿನದ ಎಲ್ಲಾ ಜಂಜಾಟಗಳ
ರಗಳೆಗಳ ಮಧ್ಯೆ
ನಿನ್ನ ನೆನಪು
ನಿನ್ನ ಕೂಡೆ ಸಿಗುವ
ಕ್ಷಣಿಕ ಸಾಂಗತ್ಯವೇ
ನನ್ನ ಎಲ್ಲ ಭಾರಗಳನು
ಯಾತನೆಗಳನು
ಮರೆಸುತ್ತದೆ.
ನೀನು ಇರದ ಮೇಲೆ
ನಾನು ಇರಲಿ ಹೇಗೆ?
ನೀನು ಬರದ ಮೇಲೆ
ನನ್ನ ಬದುಕು ಹೇಗೆ?
ನಿನ್ನನ್ನಲ್ಲದೇ ಮನಸು
ಬೇರೆ ಏನೂ ಬಯಸದು-
ಒಮ್ಮೆ ಪ್ರೀತಿ
ಅರಳಿದ ಮೇಲೆ-
ಮರೆಯುವುದಾದರೂ ಸಾಧ್ಯವೇ?!
ಹೇಳುವುದಾದರೂ ಹೇಗೇ!
ನಿನ್ನ ನೆನೆಸದ ದಿನವಿಲ್ಲ
ಕ್ಷಣವಿಲ್ಲ-
ಹಾಗೊಂದು ವೇಳೆ
ಮರೆತಿದ್ದೇ ಆದರೆ-
ಅಂದಿಗೆ ನನಗೆ ಉಳಿವಿಲ್ಲ.
ನೀನು ಇರದ ಮೇಲೆ
ನಾನು ಇರಲಿ ಹೇಗೆ?
ನೀನು ಇರದ ಮೇಲೆ
ನಾನು ಉಳಿಯಲಿ ಹೇಗೆ?!
ನಿನಗಾಗಿ ಚಿಂತೆಯತ್ತ
ವಾಲಿದ್ದು ಸತ್ಯ ಗೊತ್ತಾ?!
ನಿನಗೂನು ಮನಸು ಐತ!
ಅದು ಅಂದ್ರ ನಂಗೂ ಇಷ್ಟ
ಏನು ಚೆಂದ ನಿನ್ನ ಕೂಡ
ಮಾಡಲು ಕೂಟ
ಉಣ್ಣಲು ಊಟ
ಸಾಗಲಿ ನಮ್ಮ ಈ
ಬದುಕಿನ ಆಟ.
ತಾರತಮ್ಯ.
~~~~~~~~~
ಎಂಥ ತಾರತಮ್ಯ!
ಪ್ರೀತಿಯಲ್ಲಿಯೂ
ಇರುವುದು ಅಂತ
ಅಂದುಕೊಂಡಿರಲಿಲ್ಲ
ನಿನಗೆ ನಿದ್ರೆ
ನನಗೇಕೆ ಮಲಗಲೂ
ಆಗುತ್ತಿಲ್ಲ...
ನಿನ್ನ ನೆನಪಿನ ಹೊದಿಕೆ
ಹೊದ್ದು
ಮಲಗಿದ್ದೇ ತಪ್ಪಾಯ್ತೇ?!
ಬಾಳಿಗೂ ಒಂದು ದಾರಿಯೂ ಉಂಟು
ಭೂಮಿಗೂ ಒಂದು ಗುರಿಯುಂಟು
ಎಲ್ಲಿಯವರೆಗೂ ಸಾಗಲೇಬೇಕು
ಮುಂದೆ ಮುಂದೆ ಹೋಗಬೇಕು
ನೀ ಇದನು ಕಲಿಯಬೇಕು
ಸಾಕು ಸಾಕು ಅನ್ನಬೇಕು
ಆಸೆಗಳು ಬೆನ್ನತ್ತಿ ಬರಲು
ಕೋಪವು ಉಕ್ಕಿ ಬರಲು
ಬೇಕು ಬೇಕು ಅನ್ನಬೇಕು
ಕಷ್ಟಗಳ ಮಳೆ ಸುರಿಯಲು
ನಿನ್ನ ಕತೆಯು ಉಳಿಯಲು
ನಿನ್ನ ಏಳ್ಗೆಗೆ ನೀನೇ ಶಿಲ್ಪಿ-ಪ್ರೀತಿಯೇ
ಶಿಲ್ಪವು
ನಿನ್ನ ದಾರಿಗೆ ನೀನೇ ಗುರುವು-ಸೇರಲು
ಕಲ್ಪವು.
ನನ್ನುಸಿರೇ ನನ್ನುಸಿರೇ
ನಿನಗಾಗಿಯೇ ಹಾತೊರೆಯುವೆ
ನನ್ನೊಲವೇ ನನ್ನೊಲವೇ
ನಿನಗಾಗಿಯೇ ಹಂಬಲಿಸುವೆ
ನೀನಿಲ್ಲದೆ ನಾನಿಲ್ಲವೋ!
ನೀ ಬಾರದೆ ಬದುಕಿಲ್ಲವೋ?!
ನಿನಗೆ ನಾ ಜೊತೆಯೋ?
ನನಗೆ ನೀ ಜೊತೆಯೋ?
ನಗುವ ನಯನ ನೀನು
ಸುಂದರ ಕವನ ನೀನು
ಸುಂದರ ಪಯಣ ನೀನು
ನೀನಿರದೆ ಇಲ್ಲ ನಾನು
ನೀನೇ ಬಹುಮಾನ
ನೀನೇ ಹೊಂಗಿರಣ
ನೀನೇ ವ್ಯಾಕರಣ
ಆಗಲಿ ನಮ್ಮ ಸಮ್ಮಿಲನ.
ಈ ದುನಿಯಾ ಈ ದುನಿಯಾ
ಅರ್ಥವೇ ಆಗದ ಪಾಪಿ ಕಣೆ
ಈ ದುನಿಯಾ ಈ ದುನಿಯಾ
ಉತ್ತರ ನೀಡದ ದ್ವೇಷಿ ಕಣೆ
ನಿನಗಾಗಿ ನಾ ಬಂದು ಕಾಯುತ್ತಾ
ನಾ ನಿಂತು-
ಮಗುವಿನಂತೆ ಆದೆ ನನ್ನ ಮರೆತೇ
ಹೋದೆ
ಬರುವೆ ನೀನು ಎಂದು ಮನದ ಕದವ
ತೆರೆದೆ
ಹೆಜ್ಜೆಯಿಟ್ಟು ಒಳಗೆ ಬರುವೆ
ಅಂದುಕೊಂಡೆ
ಏತಕೆ ನನ್ನ ಬಳಿಗೆ ಹೀಗೆ
ಕಾಡುತ ಇರುವೆ
ಹೇಳಿ ಬಿಡು ನೀ ಹೇಳಿ ಬಿಡು
ನನ್ನನ್ನು ಬಾಳಲು ಬಿಟ್ಟು
ಬಿಡು.
ಓ ಮನಸೇ ಮೃದು ಮನಸೇ
ನೀ ಇರದೇ ಉಳಿವಿಲ್ಲ-
ಓ ಕನಸೇ ಸವಿಗನಸೇ
ನೀ ಬರದೇ ಬದುಕಿಲ್ಲ!
ಈ ಬಾಳಿನ ಹೊಂಗನಸಲಿ
ಮನಸು ಸೊಗಸಾಗಿ ಇರಲು ನೀ
ಜೊತೆಗಿರು
ನಲ್ಲೆಯಾಗಿ ಮಲ್ಲೆಯಾಗಿ ಮುಗುಳ್ನಗೆಯ
ಬಳ್ಳಿಯಾಗಿ...
ಓ ಮನಸೇ ಮೃದು ಮನಸೇ
ನೀನೀಗ ದಾರಿ ಬಿಡು
ಓ ಮನಸೇ ಪ್ರಿಯ ಮನಸೇ
ನೀ ಬೇಗ ಬಂದು ಬಿಡು
ನೀ ನನಗೆ ನಾ ನಿನಗೆ
ಕಾಯುವ ಘಳಿಗೆಯ ಮರೆಸಿಬಿಡು.
ಓ ಮನಸೇ ಓ ಮನಸೇ
ನೀ ಬಂದು ಮೈ ಮರಸೇ
ನೋವಿರದಾ ಜಾಗವನು
ಕರೆತಂದು ನೀ ಬೆಳೆಸೆ
ಸಾವಿರದ ಬದುಕನ್ನು
ಕಡತಂದು ನೀ ಉಳಿಸೆ
ಓ ಮನಸೇ ಓ ಮನಸೇ
ನೀ ಬಂದು ನನ್ನ ಹರಸೇ.
ಕಣ್ಣಲ್ಲೇ ಕಣ್ಣಲ್ಲೇ
ಸುಮ್ಮನೇ ಕೊಲ್ತಿಯಲ್ಲೇ
ಹಗಲಲ್ಲೂ ಇರುಳಲ್ಲೂ
ಬಿಡದಂಗೆ ಕಾಡ್ತಿಯಲ್ಲೇ!
ಮುಂಜಾನೆ ಮಂಜಿನಂತೆ
ತಂಗಾಳಿ ತಂಪಿನಂತೆ
ಮುಸ್ಸಂಜೆ ಮಾತಂತೆ ಇರ್ತಾಳೆ
ಕಣೋ...
ಮಳೆಯಲ್ಲಿ ನೆಂದಂತೆ
ಕನಸಲ್ಲಿ ಮಿಂದಂತೆ
ಉಸಿರಲ್ಲಿ ಬೆರತಂತೆ ಬರ್ತಾಳೆ
ಕಣೋ...
ನೀನೇ ನನ್ನ ನೀನೇ ನನ್ನ ಕ್ಯಾಲಿಫೋರ್ನಿಯಾ
ನಿನ್ನ ಬಿಟ್ಟ ಜಗತ್ತೆಲ್ಲ
ಬರೀ ಮೇನಿಯಾ
ಒಂದೇ ಲಿಕ್ಕಿನಲ್ಲಿ ಕೊಲ್ಲು
ನನ್ನನ್ನ
ಒಂದೇ ಟಚ್ಚಿನಲ್ಲಿ ಗೆಲ್ಲು
ನನ್ನನ್ನ
ಜೊತೆಗೆ ನೀನೇ ಇರಲೇ ಬೇಕು
ಕಾರಣ ಏನೋ ಗೊತ್ತಿಲ್ಲ.
. !
ಕಣ್ಣಲಿ ಕಣ್ಣು ಸೇರಿದ ಮೇಲೆ
ನಿದಿರೆ ಯಾಕೋ ಬರ್ತಿಲ್ಲ...
ಕಣ್ಣು ಕಣ್ಣು ಸೇರಿದ ಕ್ಷಣವೇ
ಲೋಕ ನಿಂತೋಯ್ತು!
ಮನಸು ಮನಸು ಬೆರೆತ ಘಳಿಗೆ
ಪ್ರೀತಿ ಬಂದಾಯ್ತು!
ಮಾತು ಮರೆತ್ಹೋಯ್ತು-
ಮೌನ ಹೆಚ್ಚಾಯ್ತು
ಆಸೆ ಎದೆಯಲ್ಲಿ ಹುಟ್ಟಿ ಬೆಳೆದಾಯ್ತು
ಲೋಕದ ಚಿಂತೆಯೇ ಇಲ್ಲದೇ ನಾನಿದ್ದೆ
ಪ್ರೀತಿಯ ಗೊಡವೆಯೇ ಬೇಡಾ
ಅಂತಿದ್ದೆ
ಅಯ್ಯೋ! ಅಂದು ನಾನು ಏಕೆ
ಹಾಗಿದ್ದೆ
ಇವಳು ಸಿಕ್ಕದೇ ಇದ್ದರೆ ಹಾಗೇ
ಇರುತಿದ್ದೆ
ಇವಳು ಸಿಕ್ಕದೇ ಇದ್ದರೆ ಸುಮ್ಮನೇ
ಇರುತ್ತಿದ್ದೆ
ಸುಮ್ಮನೇ ಇರುತ್ತಿದ್ದೆ.
ಮರೆಯದ ಕವಿತೆ ಬರೆಯುವ ಆಸೆ
ಬಂತೀ ಮನದಲ್ಲಿ-
ಪ್ರೀತಿಯ ಒರತೆ ಚಿಮ್ಮುವ
ಆಸೆ
ಬಂತೀ ಎದೆಯಲ್ಲಿ
ಬದುಕಿನ ಹಣತೆ ಉರಿಯುವ ಸರಿತೆ
ಬಂತೀ ನೆನಪಲ್ಲಿ-
ಓ! ಬಂತೀ ನಗುವಲ್ಲಿ.
. .
ಸತ್ತೆ ಸತ್ತೆ ಸತ್ತೆ ಸತ್ತೆ
ನಾನು ಸತ್ತೆ
ನಿನ್ನಾ ಅಂದ ಚೆಂದ ನೋಡಿ
ನಾನು ಸತ್ತೆ
ಬಿದ್ದೆ ಬಿದ್ದೆ ಬಿದ್ದೆ
ಬಿದ್ದೆ ನಾನು ಬಿದ್ದೆ
ನಿನ್ನ ಪ್ರೀತಿ ಸವಿಯೋ ಆಸೇಲಿ
ಬಿದ್ದೆ.
No comments:
Post a Comment