ರೀ,ಸಂಪಾದಕರೆ
ನಾನು ಕಳುಹಿಸಿದ ಲೇಖನವನ್ನು ಮುದ್ರಿಸದೆ,ಮರಳಿ ಕಳುಹಿಸಿದ್ದೀರಿ ಏಕೆ?..
ನಾನು
ಬರಿ Some ಪಾದಕ!!
*ಪ್ರಸಾದ-ವಿಜಯ*
~~~~~~~~~~~~
ಪ್ರಸಾದ..
ಯಾವ
ಪ್ರಸಾದ?
ದುರ್ಗಾಪ್ರಸಾದ
ಯಾವ
ದುರ್ಗ?
ಚಿತ್ರ
ದುರ್ಗ.
ಯಾವ
ಚಿತ್ರ?
ತೈಲ
ಚಿತ್ರ
ಯಾವ
ತೈಲ?
ಕೇಶ
ತೈಲ
ಯಾವ
ಕೇಶ?
ಲಂಕೇಶ
ಯಾವ
ಲಂಕ?
ಶ್ರೀಲಂಕಾ
ಯಾವ
ಶ್ರೀ?
ಮಾಲಾಶ್ರೀ
ಯಾವ
ಮಾಲಾ?
ಜಯ
ಮಾಲಾ
ಯಾವ
ಜಯ?
ವಿಜಯ.
ನೇತಾರ(ಚುಟುಕು).
~~~~~~~~~~~~
ಇದ್ದರೊಬ್ಬ
ದೇಶಕ್ಕೆ ನೇತಾರ
ಅವರೇ
ನಮ್ಮ ಜವಾಹರ
ಮಕ್ಕಳ
ಮೇಲೆ ಅವರ ಪ್ರೀತಿ ಅಪಾರ
ಅವರೇ
ನಮ್ಮ ಪ್ರಧಾನಿ ವೀರ.
ಗುರುಗಳು:
ರಾಜು,ಗಾಂಧೀಜಿಯವರು ಎಂದು ಜನಿಸಿದರು?
ರಾಜು:
ನಾನು ಹುಟ್ಟುವ ಮೊದಲೇ ಸಾರ್!
ಗುರುಗಳು:
ಅದು ನನಗೂ ಗೊತ್ತು
ರಾಜು:
ಹಾಗಾದರೆ ನನ್ನನ್ನೇಕೆ ಕೇಳ್ ಬೇಕಾಗಿತ್ತು!!
ಗುರುಗಳು:
ಲೋ ಪುಟ್ಟಾ ನೀನು ಎಂದು ಹುಟ್ಟಿದೆ?
ಪುಟ್ಟ:
ನಾನು ಗಾಂಧೀ ಹುಟ್ಟಿದ ದಿನ ಹುಟ್ಟಿದೆ ಸಾರ್
ಗುರುಗಳು:
ಹಾಗೆ+ಆದರೆ ಗಾಂಧಿಯವರು ಎಂದು ಹುಟ್ಟಿದರೋ?
ಪುಟ್ಟ:
ನಾನು ಹುಟ್ಟಿದ ದಿನವೇ ಸಾರ್!!
ಸುರೇಶ:
ಲೇ ಮಹೇಶ ನಾನು ವಿಜ್ಞಾನಿಯಾದರೆ ನಿನಗೇನಾದರೂ ಲಾಭವಿದೆಯೇ?
ಮಹೇಶ:
ಖಂಡಿತ ಇದೆ ನೀನು ವಿಜ್ಞಾನಿಯಾದರೆ ಕೀರ್ತಿ ನಿನಗೆ ಹಣ ನನಗೆ.
ಗುಂಡ:
ಒಂದು ಮನಿಯಾರ್ಡರ್ ಫಾರ್ಮ್ ತೆಗೆದುಕೊಂಡು…
ರೀ… ಇದರಲ್ಲಿ ಪತ್ರ ಬರೆಯಬಹುದೇ?
ಪೋಸ್ಟ
ಮಾಸ್ಟರ್ : ನೀನ್ಯಾರಿಗೆ ತಾನೇ ಹಣ ಕಳಿಸಬೇಕೋ?
ಗುಂಡ:
ನಾನಾರಿಗೆ ತಾನೇ ಹಣ ಕಳಿಸಬೇಕ್ರೀ ಪತ್ರವಾದರೆ 25 ಪೈಸೆ.ಅದೇ ಮನಿಯಾರ್ಡರ್ ಫಾರ್ಮ್ ನಲ್ಲಿ ಬರೆದರೆ
15 ಪೈಸೆ ಉಳಿಯುವುದಲ್ಲ ಅಂತ ಕೇಳಿದೆ ಅಷ್ಟೇ.
ಹಾದಿಹೋಕ
ಸುಬ್ಬ.
~~~~~~~~~~~~~
ದಾರಿಯಲ್ಲಿ
ಹಾದು ಹೋಗುತ್ತಿದ್ದನೊಬ್ಬ
ಅವನ
ಹೆಸರು ಸುಬ್ಬ
ಅವನು
ಬಹಳ ಮಬ್ಬ
ಹಿಡಿದಿದ್ದ
ಕೈಯಲ್ಲೊಂದು ಕಬ್ಬ.
ವ್ಯತ್ಯಾಸ.
(ಕವನ)
~~~~~~~~~~~
ಆಗಿನ
ಸಾಹಿತ್ಯಕ್ಕೂ
ಈಗಿನ
ಸಾಹಿತ್ಯಕ್ಕೂ
ಏನು
ವ್ಯತ್ಯಾಸ?
ಆಗಿನ
ಸಾಹಿತ್ಯದಲ್ಲಿ
ಪೌರಾಣಿಕ
ಕಥೆಗಳು
ತುಂಬಿದ್ದವು..ಆದರೆ
ಈಗೀನ
ಸಾಹಿತ್ಯದಲ್ಲಿ
ಹೊಡೆದಾಟಗಳು
ತುಂಬಿವೆ.
ಬದುಕಿನ
ದಾರಿ.
~~~~~~~~~~~
ಜೀವಕ್ಕೆ
ಒಂದೇ ದಾರಿ
ಅದುವೇ
ಬದುಕಿನ ದಾರಿ
ಕೂಡಲಿ
,ಬಾಳು ಶಾಂತಿಯಿಂದ
ಹಾರೈಸುವೆ
ತುಂಬು ಹೃದಯದಿಂದ.
ಕನ್ನಡದ
ಕನ್ನಡಮ್ಮ.
~~~~~~~~~~~~~~
ಓ
ಕನ್ನಡಮ್ಮ
ನೀನೇ
ನಮ್ಮಮ್ಮ
ಜಗವ
ತುಂಬಿರುವ ಮಕ್ಕಳ ತಾಯಮ್ಮ
ಕವಿ
ಸಾಹಿತಿಯರನು ಪಡೆದಿಹೆ ನೀನು
ಇತಿಹಾಸವನು
ಹಿಡಿದಿಹೆ ನೀನು..
ವೀರ
ವನಿತೆಯರನು ಪಡೆದಿಹೆ ನೀನು
ಸ್ವಾತಂತ್ರ್ಯವನು
ಪಡೆದಿಹೆ ನೀನು..
ತುಂಗೆ
ಕಾವೇರಿಯರನು ಹರಿಯಲು ಬಿಟ್ಟಿಹೆ ನೀನು
ಓ,
ಕನ್ನಡದ ಕನ್ನಡಮ್ಮನೆ ನೀನು..
ಬೆಳೆಯಬೇಕು
ಕನ್ನಡದ ಒಲವು
ಎತ್ತಿ
ಹಿಡಿಯಬೇಕು ಅದರ ಸವಿಯು
ಕನ್ನಡದ
ಕನ್ನಡಮ್ಮನು
ಬೆಳೆಸಲಿ
ನಮ್ಮಯನು.
*ಜ್ಯೋತ್ಯೋತ್ಸವ*
~~~~~~~~~~~~
ಭಾರತ
ಮಾತೆಗೆ
ದೀಪವ
ಬೆಳಗುವ
ಜ್ಯೋತ್ಯೋತ್ಸವ
ಇದು ಜ್ಯೋತ್ಯೋತ್ಸವ
ಮಹಾನ್
ನಾಯಕರು
ಭಾರತ
ಮಾತೆಯ ಏಳಿಗೆಗಾಗಿ
ದೀಪವ
ಬೆಳಗಿದರು
ನಮ್ಮಯ
ಈ ಭುವಿಯಲಿ
ಅಚ್ಚಳಿಯದಂತೆ
ಮಾತೆಗೆ
ದೀಪವ
ಬೆಳಗುವೆವು
ಭೇದ-ಭಾವವನ್ನಳಿಸಿ
ಪ್ರೀತಿ
ಭಾವವನ್ನು ಮುಡಿಸಿ
ಸ್ನೇಹ
ಭಾವದಲಿ ತೇಲುವೆವು.
ಓ
ವಸಂತವೇ;
ಕೊಟ್ಟೆ
ನೀ ನಮಗೆ ಮಾವು
ತಂದಿತು
ನಮಗದು ಸಾವು
ಹೆಚ್ಚಿತು
ಊರಲಿ ನೋವು
….ಕಾರಣ
ನೀ ನಮಗೆ ಕೊಡು
ಈ
ಬೇಸಿಗೆಗೆ ಉದಕವು.
ಅಯ್ಯೋ!
ಮುಂಜಾನೆಯಿಂದ
ಕುರುಡ
ಭಿಕ್ಷುಕನಂತೆ
ನಟನೆ
ಮಾಡಿದೆ..
ಅದರ
ಫಲವಾಗಿ
ಇಂದು
ಈ ಹೊಟ್ಟೆಗೆ
ಉಪವಾಸ!
ಗೆಳೆಯ.
ಚುಟುಕುಗಳು…
~~~~~~~~~~ 24-03-1997.
ನಾನು
ಎನ್ನುವೆ ಇವಗೆ ದಿನಪ
ನಭಮಂಡಲದಲ್ಲಿ
ಇವನೇ ಕೆಂಪ
ಬೇಸಗೆಯಲ್ಲಿ
ಇವನೇ ರಾಜ
ಕಾರಣ
ಕರೆಯುವರು ಇವಗೆ ರವಿರಾಜ.
ಇದ್ದ
ನಮ್ಮೂರಿನಲ್ಲಿ ಓರ್ವ ಟೊಣಪ
ಜನ
ಎನ್ನುತ್ತಿದ್ದರು ಗಣಪ
ಗಣಪನ
ಹಾಗೆ ಇವನು
ಗಣಪನ
ಸರಿಸಾಟಿ ಇವನು.
ಗಿಡಮರ
ಬೆಳೆಸೋಣ
ಎಂದರು
ಸುಂದರ ಲಾಲ್ ಬಹುಗುಣ
ಗಿಡ
ಬೆಳೆಸಿರಿ ನೀವೆಲ್ಲ
ತಿನ್ನೋಣ
ಹಣ್ಣು ನಾವೆಲ್ಲ
ಇದೇ
ನಮಗೆ ಜೀವವೆಲ್ಲ
ನನ್ನ
ಗೆಳೆಯ ಪ್ರಸನ್ನ
ತಿನ್ನುತ್ತಿದ್ದನು
ಮೊಸರನ್ನ
ಮಣ್ಣು-ಹಣ್ಣು. 26-06-1997.
~~~~~~~~~~~
ಮಗು
ತಿನ್ನುತ್ತಿತ್ತು ಮಣ್ಣು
ತಿನ್ನಬಾರದೆಂದು
ಹೇಳಿ,ಕೊಟ್ಟೆ ನಾನು ಹಣ್ಣು
ಬಿಟ್ಟಿತು
ತಿನ್ನುವುದು ಮಣ್ಣು
ದಿನ
ಬಂದು ಕಾಡಲು ಶುರು ಮಾಡಿತು ಕೊಡೋ ಹಣ್ಣು.
ಅಣ್ಣ
ಹಚ್ಚುತ್ತಿದ್ದನು ಗೋಡೆಗೆ ಸುಣ್ಣ
ಅದರತ್ತ
ಹಾಯಿಸುತ್ತಿದೆ ನನ್ನ ಕಣ್ಣ
ಕಾಲು
ಜಾರಿ ಬಿದ್ದ ಏಣಿಯಿಂದ
ನಾನು
ನೋಡುತ್ತಾ ನಿಂತೆ ಅಚ್ಚರಿಯಿಂದ.
ಈಗಿನ
ರಾಜಕಾರಣಿಗಳಿಂದ
ತುಂಬಿದೆ
ರಾಜಕೀಯ ಹಗರಣಗಳಿಂದ
ನಂಬಲೇ
ಬೇಕಿದೆ ರಾ.ಜ.ಕೀ.ಯ.ಎಂದರೆ
ರಾವಣ,
ಜರಾಸಂಧ, ಕೀಚಕ, ಯಮ ಎಂದು.
ಹನ್ನೊಂದು
ಜನ ಕ್ರಿಕೆಟ್ ಆಟಗಾರರಲ್ಲಿ ಒಬ್ಬನು ಸಚಿನ್
ಅವನೇ
ಭಾರತೀಯ ಕ್ರಿಕೆಟ್ ಟೀಂನ ಕ್ಯಾಪ್ಟನ್.
ರಾಜು-ಗಾಜು.
~~~~~~~~~
ಶಾಲೆಗೆ
ಹೊರಡುತ್ತಿದ್ದನು ರಾಜು
ಚುಚ್ಚಿಕೊಂಡಿತು
ಅವನ ಕಾಲಿಗೆ ಗಾಜು
ಆಸ್ಪತ್ರೆ
ಸೇರಿಸಿದಾಗ, ಕೇಳಿದರು ಡಾಕ್ಟರ್ ಫೀಸು
ಇವನಿಂದ
ಖರ್ಚಾಯಿತು ತಂದೆಯ ಕಾಸು.
ಹಾಂಕಾಂಗ್.
~~~~~~~~~
ಶತಮನೋತ್ಸವದ
ಬ್ರಿಟೀಷ್
ಅಧಿಪತ್ಯದ
ಅಂಚಿನಿಂದ
ಸ್ವದೇಶಕ್ಕೆ
ಮರಳಿದ
ಧೀಮಂತ
ಗಗನ
ಚುಂಬಿಗಳ
ನಗರ
ಕಾನ್ವೆಂಟ್
ಶಾಲೆ.
~~~~~~~~~~~
ಬಡ-ಸಿರಿವಂತರ
ಖಜಾನೆಯಿಂದ
ಡೊನೇಷನ್,
ಫೀಸು
ಪಠ್ಯಪುಸ್ತಕಗಳಿಗೆ
ಹಣ
ಪಡೆದೂ
ತನ್ನ
ಸ್ವಾರ್ಥಕ್ಕೆ
ಬಳಸುವ
ಮಹಾನ್
ನಿಯಮ
ಬದ್ಧ
ಸಂಸ್ಥೆ.
ನಾಲ್ಕನೇ
ರಾಷ್ಟ್ರೀಯ ಕ್ರೀಡೆಗಳು.
~~~~~~~~~~~~~~~~~~~~~
ನಂದು,
ಎಂಬ
ಸಂಕೇತದಿಂದ
ವಿವಿಧ
ರಾಜ್ಯಗಳ ಸುತ್ತ
ಆಟೋಟ
ಪಂದ್ಯಗಳನ್ನು
ಆಡಿಸಿದ
ಮಹಾ
ಕ್ರೀಡಾ ಮಹೋತ್ಸವ.
ಸ್ವಾತಂತ್ರ್ಯ-ಕಪ್.
~~~~~~~~~~~
ಸುವರ್ಣ
ಉತ್ಸವದಲ್ಲಿನ
ಸ್ವಾತಂತ್ರ್ಯೋತ್ಸವ
ಕಪ್
ಕ್ರೀಡಾಕೂಟದಲ್ಲಿ
ಸ್ವಾರಂತ್ರ್ಯ
ನಮಗೆ
ಸಿಕ್ಕಿದ್ದು
ಆದರೆ
ಕಪ್
ಹೋಗಿದ್ದು
ಮಾತ್ರ
ಸಿರಿ
ಲಂಕಾಕ್ಕೆ.
ವಿಪರ್ಯಾಸ.
~~~~~~~~~
ನಿಜವಾದ
ಕಳ್ಳನನ್ನು
ಪತ್ತೆ
ಹಚ್ಚಿಯೂ
ಬೇಡಿ
ಹಾಕುವ ಈ
ಪೋಲಿಸರು
ಅದೇ
ಕಳ್ಳರೂ
ಆದ
ರಾಜಕಾರಣಿಗಳಿಗೇಕೆ
ಈ
ಶಿಕ್ಷೆ ಕೊಡುತ್ತಿಲ್ಲ
ಅದೇ
ಪೋಲಿಸರು
ಅಬ್ಬಾ!
ಎಂಥ ವಿಪರ್ಯಾಸ…
ಸೀತಾರಾಂ-ಕೇಸರಿ..
~~~~~~~~~~~~~~
ನರಸಿಂಹರಾಯರನ್ನು
ಕೆಳಗಿಳಿಸಿ
ಕಾಂಗ್ರೆಸ್
ಪಕ್ಷದ
ಸಿಂಹಾಸನಕ್ಕೆ
ಪಾದಾರ್ಪಣೆ
ಮಾಡಿದ
ವೀರ-ಸಿಂಗ.
೯ನೇ
ತರಗತಿಯಲ್ಲಿ ಓದುತ್ತಿದ್ದ ರವಿಕುಮಾರ್‌ನು ಸಮಾಜಶಾಸ್ರ್ತದಲ್ಲಿ ಕಾರ್ಲ್ ಮಾರ್ಕ್ಸ್‌ನ ಸಿದ್ಧಾಂತವನ್ನು
ಓದಿ ಓದಿ ಕೊನೆಗೆ ವಾರ್ಷಿಕ ಪರೀಕ್ಷೆಯಲ್ಲಿ ಪಡೆದದ್ದು ಬರೀ ಕಾಲ್ ಮಾರ್ಕ್ಸ್ ಮಾತ್ರ…
ವೀರ-ಅಪ್ಪನ್.
~~~~~~~~~
ಅಪ್ಪನ
ವೀರವನ್ನು
ಕದ್ದು
ಹಾಗೂ
ಪೋಲಿಸ
ಮಂಡಳಿ
ಅವರ
ಕಣ್ಣಿಗೆ
ಮಣ್ಣೆರಚಿ
ದಂತಗಳನ್ನು
ವಿದೇಶಕ್ಕೆ
ಸಾಗಿಸುತ್ತಿರುವ
ಕರ್ನಾಟಕದ
(ಕು)ಪ್ರಸಿದ್ಧ
ಕಾಡುಗಳ್ಳ.
ಸಾಲ-ಪ್ರಾಣ.
~~~~~~~~~
ಗೊಬ್ಬರ,
ಬೀಜಕ್ಕೆಂದು
ರೈತರು
ಬ್ಯಾಂಕಿನಲ್ಲಿ
ಪಡೆಯುತ್ತಾರೆ
ಲೆಕ್ಕವಿಲ್ಲದಷ್ಟು
ಸಾಲ
ತೀರಿಸುವಾಗ
ಆಗಿರುತ್ತದೆ.
ಅಸಲಿಗೆ
ಬಡ್ಡಿ
ಬಡ್ಡಿಗೆ
ಚಕ್ರಬಡ್ಡಿ
ವ್ಯಥೆ
ಪಡುತ್ತಿರುತ್ತಾರೆ
ಮನೆಯವರು
ಹೋದಾಗ
ಅವನ
ಪ್ರಾಣ.
ಸಂಗೀತ. 12-05-1998.
~~~~~~
ಗೀತ
ಪದ್ಯಗಳನ್ನೊಳಗೊಂಡ
ರಾಗಸಂಯೋಜನೆಯಿಂದ
ಕೂಡಿದ
ಅಮೋಘ
ಗಾಯನ,
ವಾದನ
ನರ್ತನಗಳ
ಸಮೂಹ.
ರಾಜಕೀಯ
ಕಚ್ಚಾಟ.
~~~~~~~~~~~~~~
ರಾಜಕಾರಣಿಗಳು
ತಮ್ಮ
ಉನ್ನತ
ಸ್ಥಾನದ
ಕುರ್ಚಿಗೆ ಕೈ
ಹಾಕಲು
ಮಾಡುವ
ಒಳ
ಕಲಹ.
ಗೆಳೆಯ.
~~~~~~
ಗೆಳೆತನವೆಂಬ
ಮಾಯಾಲೋಕದ
ಉದ್ಯಾನವನದಲ್ಲಿ
ಪರಸ್ಪರ
ಪ್ರೀತಿ,
ವಿಶ್ವಾಸಗಳೆಂಬ
ಹೂಗಳನ್ನು
ತೋರಿಸುವ
ಮನದಾಳದಲ್ಲಿ
ಉಳಿಯುವ
ಅಮರ
ಹೃದಯಮಯಿ.
ನಕ್ಷತ್ರಗಳು.
~~~~~~~~~
ಬಾನಗಲದ
ತುಂಬಾ
ಮಿನುಗುವ
ನೋಡುಗರಿಗೆ
ನಿಲುಕದ
ಚುಕ್ಕೆಗಳು.
ಅಪ್ಪಿಕೋ.
~~~~~~~
ಗಿಡಮರಗಳನ್ನು
ಅಪ್ಪಿಕೊಂಡು
ಕಡಿಯುವುದನ್ನು
ತಡೆಯಲೂ,
ಮರಗಳನ್ನು
ಕಟುಗರ
ಕೈಯಿಂದ
ರಕ್ಷಿಸಲು
ಇರುವ
ಚಳುವಳಿ.
ಸ್ಪೂ(ಪೂ)ರ್ತಿ.
~~~~~~~~~~
ನಾನು
ಬರೆಯುವ
ಕವನಗಳಿಗೆ
ನನ್ನ
ಹೆಂಡ್ತಿನೇ
ಸ್ಪೂರ್ತಿ
ಬರೆಯದಿದ್ದರೆ
ಲಟ್ಟಣಿಗೆ
ಹಿಡಿದು
ಹಾಕುತ್ತಾಳೆ
ತಲೆಗೆ
ಏಟು
ದಿನ
ಪೂರ್ತಿ.
ಹ(ಗ)ರಣ.
~~~~~~~
ಹಣಕ್ಕಾಗಿ
ಮಾಡಿಸುತ್ತಾರೆ
ರಾಜಕಾರಣಿಗಳು
ನೂರಾರು
ಜನರ ಹರಣ
ಕೊನೆಗೊಮ್ಮೆ
ಬಲೆಗೆ
ಬೀಳುತ್ತಾರೆ
ಬಯಲಿಗೆ
ಬಂದ
ಮೇಲೆ
ಅವರು
ಮಾಡಿದ ಹಗರಣ!
ಸ್ಥಿತಿ-ಗತಿ.
~~~~~~~
ಪಾರತಂತ್ರ್ಯವನ್ನು
ಕಿತ್ತೊಗೆಯಿತು ಭಾರತ
ಆದರೂ
ಎತ್ತಿನಿಂತಿದೆ ಬಡತನದ ಪರಾತ
ನಮ್ಮಲ್ಲೇ
ಬೆಳೆದಿದೆ ಜಾತಿ-ಭೇದದ ಜಾಲ
ಇದಕ್ಕೆ
ಎಣೆಯೇ ಇಲ್ಲವೇ?...ಹರಿದು ಹಾಕಲು ಇದರ ಮೂಲ.
ಸಿಟ್ಟಲ್ಲಿ
ಅಜ್ಜ ತನ್ನ ಮಾತಲಿ ʼʼತಿನ್ನುವೆನೆಂದನು ಕಲ್ಲುʼʼ
ಥಟ್ಟನೆ
ಮೊಮ್ಮಗನೆಂದ ʼʼಇಲ್ಲವಲ್ಲ ನಿನ್ನ ಬಾಯಲಿ ಹಲ್ಲು”
ನಗು-ಅಳು.
~~~~~~~~
ಜೀವನದಲಿ
ಸುಖ
ದುಃಖಗಳು
ಬರುವುದು
ಸಹಜ
ಅಂತಹ
ಸಕಾಲದಲ್ಲಿ
ನಮ್ಮ
ಮುಖಚರ್ಯೆಯಲ್ಲಿ
ಮೂಡುವ
ಭಾವಗಳು.
ಸುಖ-ದುಃಖ.
~~~~~~~~~
ಬಾಳೆಂಬ
ಬವಣೆಯಲ್ಲಿ
ದಿನ
ನಿತ್ಯ
ಮೂಡಿ
ಬರುವ
ಆಗು
ಹೋಗುಗಳು.
ದೇಶೋದ್ಧಾರ.
~~~~~~~~~~
ಪಟ್ಟಕ್ಕೇರುವ
ಮೊದಲು
ನೀಡುತ್ತಾರೆ
ರಾಜಕಾರಣಿಗಳು
ಆಶ್ವಾಸನೆ
ದೇಶೋದ್ಧಾರವೇ
ತಮ್ಮ
ಮೊದಲ
ಕರ್ತವ್ಯವೆಂದು
ಗದ್ದುಗೆ
ಏರಿದಾ ಮೇಲೆ
ತಮ್ಮೋದ್ಧಾರವೇ
ಪರಮ
ಕರ್ತವ್ಯವೆಂದು
ತಿಳಿಸುತ್ತಾರೆ
ಮಾಡುತಲಿ
ನಾನಾ
ಹಗರಣ.
ಸಾಧನೆ.
~~~~~~
ಸದಾ
ಚಿಮ್ಮುತಿರಲಿ ಮೊಗದಲಿ ಕಳೆ
ಹೊತ್ತಗೆಯ
ಜ್ಞಾನದ ಜೊತೆ ಜೊತೆಗೆ
ಅನುಭವಗಳ
ಅರಿತು
ಸತ್
ಚಿಂತನೆಯ ಮಾಡು
ನಿನ್ನ
ಉಜ್ವಲ ಭವಿಷ್ಯಕೆ
ಮರೆಯದಿರು
ಹೆತ್ತವಳ ಮಮತೆಯ
ನಿನ್ನ
ಶ್ರಮ, ಕಾಯಕ ತರಲಿ
ದೇಶಕ್ಕೆ
ಹಿತವ!
ಗೆಳೆಯರು.
~~~~~~~~
ಎರಡು
ಹೃದಯಗಳು
ಒಂದೇ
ಆತ್ಮ
ಪರಸ್ಪರ
ಪ್ರೀತಿ-ವಿಶ್ವಾಸ
ಕಾಪಾಡಿಕೊಂಡು
ಹೋಗುವ
ಸ್ನೇಹಮಯಿಗಳು.
ಕಂಪನ.
~~~~~~
ಪ್ರಾಕೃತಿಕ
ರಚನೆಯಲ್ಲಿ
ಭಯ
ಹುಟ್ಟಿಸುವ
ಮಹಾ
ಮಾರಿ.
ಕಮಲ.
~~~~~~
ಕೆಸರಲ್ಲಿ
ಜನಿಸಿ
ಜನರನ್ನು
ತನ್ನತ್ತ
ಸೆಳೆಯುವ
ಸುವಾಸಿತ ಪುಷ್ಪ.
Version
2.0
ತಾನು
ಕೆಸರಲ್ಲಿ
ಜನಿಸಿ
ಸುಂದರವಾಗಿ
ಅರಳಿ
ಜನರನ್ನು
ಮೂಕ
ವಿಸ್ಮಿತರನ್ನಾಗಿ
ಮಾಡುವ
ಸುವಾಸಿತ
ಪುಷ್ಪ.
ಅರವಿಂದ.
~~~~~~~~
ಕೆಸರ
ಕೊಳದಲ್ಲಿ
ದಿನನಿತ್ಯ
ಪ್ರಾತಃಕಾಲದಲ್ಲಿ
ಮೊಗ್ಗುಗಳು
ಹೂವಾಗಿ
ಅರಳಿ
ನಿಶೆಯ
ಸರಾಗಿನಲ್ಲಿ
ಬಾಡಿ
ಹೋಗೋ ಸಸ್ಯ.
ನನ್ನ
ನಾಯಿಮರಿ.
~~~~~~~~~~~~~~
ನನ್ನ
ಪುಟ್ಟ ನಾಯಿ ಮರಿ
ನಾಯಿ
ಮರಿ
ನನ್ನ
ಮೇಲೆ ಕೋಪವೇ?
ಹೇಗೋ
ನಾಳೆ ಶಾಲೆಗೆ ರಜಾ
ಹೋಗಿ
ಬರುವ
ಶಾಪಿಂಗ್
ಗೆ
ಓಡಿ
ಹೋಗುವೇಕೆ
ನನ್ನ
ಬಿಟ್ಟು ದೂರ ದೂರ?
ಓ
ನನ್ನ ಪ್ರೀತಿಯ ನಾಯಿಮರಿ
ಉತ್ತರಿಸು
ನನ್ನೀ ಪ್ರಶ್ನೆಗಳಿಗೆ
ಕೋಪವ
ಮರೆತು
ಊಟ
ಮಾಡು ಮೆಲ್ಲಗೆ.
ಮಳೆಯ
ತುಂತುರು
ಹನಿಗಳು
ಬಂದು
ಎಲೆಗಳ
ಮೇಲೆ
ಕುಳಿತಾಗ
ಇಬ್ಬನಿಯ
ಆ
ಹನಿಗಳು
ಎಲೆಯ
ಮೇಲೆ
ಮುತ್ತಿನಂಥ
ಹನಿಗಳು
ಸೂರ್ಯ
ರಶ್ಮಿಯು
ಬಿದ್ದಾಗ
ಮಾಯವಾಗಿ
ಸೌಂದರ್ಯ
ಕಳೆದುಕೊಂಡವು.
ಹನಿಗವನಗಳು:-
~~~~~~~~~~~
ಕವನ.
~~~~~
ಮನದಾಳದ
ಸಾಗರದಿಂದ
ಅಲೆಗಳಾಗಿ
ಹರಿದು
ಬರುವ
(ಅ)ಕಾಲ್ಪನಿಕ
ವಿಚಾರ.
ಗ್ರಂಥ-ಲಯ.
~~~~~~~~~
ನಮ್ಮೂರಿನಲ್ಲೂ
ಇರುವುದು
ಗ್ರಂಥಾಲಯ
ಆದರೆ
ಇಲ್ಲಿ
ಗ್ರಂಥಗಳ-ಲಯ.
ಪಕ್ಷಾಂತರ.
~~~~~~~~
ಈಗಿನ
ರಾಜಕಾರಣಿಗಳು
ಹೋಗುತ್ತಾರೆ
ಪರಪಕ್ಷಕ್ಕೆ
ಆ
ಪಕ್ಷವೂ ತಮ್ಮ
ಹಿಂದಿನ
ಪಕ್ಷದಂತೆಯೇ
ಎಂದು
ತಿಳಿದಾಗ
ಪಟ್ಟುಕೊಳ್ತಾರೆ
ತುಂಬಾ
ಬೇಸರ.
ಪ್ರಖರ-ಪ್ರಕಾರ.
~~~~~~~~~~~
ಬಾನಲಿ
ಮೂಡುವನು ಪ್ರತಿದಿನ ನೇಸರ
ಅವನ
ಕಿರಣಗಳಲ್ಲಿ ಬಹಳ ಪ್ರಕಾರ
ಆದರೂ
ಕಿರಣಗಳಂತೂ ತುಂಬಾ ಪ್ರಖರ
ಅದು
ತಪ್ಪು ವಿಜ್ಞಾನಿಗಳ ಪ್ರಕಾರ
ಏಕೆಂದರೆ
ಅದಕ್ಕಿಂತ ಉಂಟು
ಮತ್ತೊಂದು
ನಕ್ಷತ್ರ ತುಂಬಾ ಪ್ರಖರ.
ಮಂಗಳ.
~~~~~~
ಅಂಗಳಕ್ಕಿಳಿದ
ಮಂಗಳಳನ್ನು
ತಡೆದು
ನಿಲ್ಲಿಸಿ
ಹೇಗೆ
ಮೊಳ
ಎಂದು
ಕೇಳಿದ್ದೇ ತಡ
ಹೋಗೋ,ಮೂಳ
ಎಂದು
ಬೈಯ್ದಾಗಲೇ
ಅರಿವಾದದ್ದು
ಅವಳು
ಮಂಗಳಳಲ್ಲ
ಮಂಗಗಳ
ಮಾರಿ ಎಂದು!
ಓ!
ಮೇಘರಾಜ. 19-04-2000.
~~~~~~~~~~~
ಓ…
ಮೇಘರಾಜ
ನಿನ್ನ
ಆ ಕರಾಳ ಮೊಗವ ತೋರಿ
ಧರೆಗೆ
ಚೆಲ್ಲುವೆ ಧಾರಾಕಾರ ವರ್ಷವ
ನಮಗಿದೋ
ತಂದಿದೆ ನೋಡಾ… ಹರ್ಷವ
ಹಸಿರಲೆಗಳು
ಚಿಗುರಿವೆ
ಹೂಗೊಂಚಲುಗಳು
ಗಿಡದಲಿ ಅರಳಿವೆ
ಪ್ರಕೃತಿಯ
ರಚನೆ ಸೃಷ್ಠಿಯ ಕೊಡುಗೆ
ಬಂದಂತಿದೆ
ನಮಗೆ ನಾಕವೇ ಭುವಿಗೆ
ಭಗವಂತನ
ಈ ಕ್ರಿಯೆಗೆ
ನಮ್ಮಯ
ಆರಾಧನೆಯ ಪ್ರತಿಕ್ರಿಯೆ
ನಿನ್ನಯ
ಸಕಾಲಿಕ ನೆರವು
ಜಗಕ್ಕೆಲ್ಲಾ
ಒಳಿತಿನ ಫಲವು
ನೀನು
ಮಾಡಿದೆ ಇಂತಹ ಸುಂದರ ವಾತಾವರಣ
ಇಲ್ಲಿ
ಹುಟ್ಟಿ ಬಂದುದಕೆ ಮಾಡುವೆವು ನಾವು ನಿನ್ನ ಗುಣಗಾನ.
ಸಾಗುತಲಿದೆ
ಪ್ರಯತ್ನ. 01-07-2000.
~~~~~~~~~~~~~~~
ಬೆಟ್ಟದಷ್ಟು
ಆಸೆ ಇದೆ
ಮನದ
ತುಂಬಾ ತುಂಬಿದೆ
ಎತ್ತಲೋ
ಸಾಗಿದೆ
ಸಾಧನೆಯ
ಹವಣಿಕೆಯಿದೆ
ಕಾರ್ಯವೇನೋ
ಸಾಗಿದೆ
ಪರಿಶ್ರಮವಿಲ್ಲದೇ,
ಮನವದು
ನೊಂದಿದೆ
ಕಾತರತೆ
ಇನ್ನೂ ತುಂಬಿದೆ
ಕಾರ್ಯ
ಸಾಧನೆಯ ತುಡಿತ
ಮನದ
ಭಾವನೆಗಳಿಗೆ ಒಡ್ಡುವೆ ಹಿಡಿತ
ಈಡೇರಲಿರುವ
ಆಕಾಂಕ್ಷೆಗಳು ಮನಭರಿತ
ಏರದಿರಲಿ
ನನ್ನ ಹೃದಯ ಬಡಿತ
ಅರಸಿ
ಹೋಗುವೆ ನಾ ಕಾರ್ಯ ಸಾಧನೆಯ ಪಥ
ಆಗುವೆ
ನಾ ಕಾರ್ಯಗತ
ದುಡಿಯುವೆ
ಅದಕ್ಕಾಗಿ ಸತತ
ಎಲ್ಲರಿಗೂ
ಇದರ ಲಾಭ ಅನವರತ.
No comments:
Post a Comment