Sunday, July 19, 2020

viಚಾರ.


ನಿಮ್ಮ ದಾರಿಯಲ್ಲೇ ನಡೆದೆ ಅದು ಹೆಚ್ಚು ದಿನ ಸಹ್ಯವಾಗಲಿಲ್ಲ
ನಿಮ್ಮ ದಾರಿ ತಪ್ಪಿಸಿ ನಡೆದೆ ಅದನೂ ಸಹಿಸಲಾಗಲಿಲ್ಲ
ನಿಮ್ಮ ದಾರಿಯಲ್ಲಿದ್ದಂತೆ ಇದ್ದು ದೂರವಿದ್ದರೂ ಸಹಿಸಲಿಲ್ಲ
ನಿಮ್ಮ ದಾರಿಯನ್ನೇ ಬಿಟ್ಟು ನಾ ದೂರವಿದ್ದರೂ ಸಹಿಸುತ್ತಿಲ್ಲ
ನನ್ನಿಂದ ನಿಮಗೆ ಬೇಕಾಗಿರುವುದಾದರೂ ಏನು? ಅದನು ನೀವು ಕಂಡು ಕೊಳ್ಳಿ
ನಿಮ್ಮಿಂದ ದೂರವಾಗಿ ಹೋಗುವ ದಾರಿಯನ್ನು ನಾನು ಕಂಡುಕೊಳ್ಳುತ್ತೇನೆ.


No comments:

Post a Comment