ಮೂಗು ತೂರಿಸಬಾರದು!...
--------------------------------------------------
28ರ ಹರೆಯದ ಹೆಂಡತಿ 36ರ ಹರೆಯದ ಗಂಡ.ಹೆಂಡತಿ ಎರಡನೇ ಬಾರಿ ಗರ್ಭಿಣಿ.ತಾನು ನಿವೃತ್ತಿ ಹೊಂದುವ ವೇಳೆಗೆ ಮಗನೋ ಮಗಳೋ ಒಟ್ನಲ್ಲಿ ಕೈಗೆ ಬರುವಂತಾಗ ಬೇಕೆಂಬ ಯೋ(ಜ)ಚನೆಯಲ್ಲಿ ಕಾಲ ತಳ್ಳುವ ದಿನಗಳವು.
ಸುದ್ದಿ ತಿಳಿದಿದ್ದ ಪಕ್ಕದ್ಮನೆ ಆಂಟಿ ಮಗಳೊಂದಿಗೆ ಮನೆಯ ಕಟ್ಟೆಗೆ ಕುಳಿತ ಆತನ ಹೆಂಡತಿಯನ್ನು ಕೇಳಿದಳು.
"ಮೊದಲನೇ ಮಗಳಿಗೆ ಈಗ ಎಷ್ಟು ವರ್ಷ?"
"ಎರಡೂ ವರೆ ವರ್ಷ ಆಂಟಿ..." ನೇರ ಉತ್ತರ ಕೊಟ್ಟಳಾಕೆ.
"ಅಲ್ಲಮ್ಮ ಇಷ್ಟು ಅವಸರವೇನಿತ್ತು...ಸ್ವಲ್ಪ ಒಂದಷ್ಟು ವರ್ಷ ಕಾಯಬಹುದಿತ್ತಲ್ಲ ಎರಡನೇ ಮಗುವಿಗೆ...ನಿನಗೆ ನಿಮ್ಮೆಜಮಾನ್ರು ಕಾಪರ್-ಟೀ ಹಾಕಿಸಬಹುದಿತ್ತಲ್ಲ!"
ಗಂಡನ ವಿಚಾರಕ್ಕೆ ತಲೆದೂಗಿಯೇ ಗರ್ಭಿಣಿಯಾಗಿದ್ದ ಅವನ ಆಕೆ ಉತ್ತರಿಸಿದಳು:"ಇಲ್ಲಾ ರೀ ಆಂಟಿ ನಮ್ಮೆಜಮಾನ್ರು ತಾಮ್ರ-ಗೀಮ್ರ ಬೇಡ ಬೇಕಿದ್ರೆ ಬಂಗಾರದ್ದೇ ಮಾಡ್ಸಿ ಹಾಕ್ಸ್ತೀನಿ ಅಂದ್ರು...ಬೇಡಾಂತ ಸುಮ್ನೇ ಬಿಟ್ಟೆ..."
ಇನ್ನೊಬ್ಬರ ವೈಯಕ್ತಿಕ ವಿಚಾರದಲ್ಲಿ ತಲೆಹಾಕಬಾರದೆಂಬುದನ್ನು ಆಂಟಿ ಕೊನೆಗೂ ಕಲಿತರು!.

No comments:
Post a Comment