ರಾಜು:ನಮ್ಮೆಜಮಾನಿ ಬಾಯಿಗೆ ಎಲ್ಲರೂ ಭಯಪಡ್ತಾರೆ ಗೊತ್ತಾ?
ರವಿ:ಯಾಕೆ ಅವರು ದಿನಾ ಬ್ರಷ್ ಮಾಡಲ್ವಾ!
ರವಿ:ಯಾಕೆ ಅವರು ದಿನಾ ಬ್ರಷ್ ಮಾಡಲ್ವಾ!
ರವಿ:ಟೆನ್ಷನ್ ನಿಂದಾಗಿ ಶುಗರ್ ಬರುತ್ತೆ ಕಣೋ!.
ರಾಜು:ನಿನ್ನ ಈ ಮಾತನ್ನು ನಾನು ಒಪ್ಪೊಲ್ಲ ನಿನ್ನ ಮಾತು ನಿಜವಾಗಿದ್ರೆ ಮದುವೆಯಾದ ಪ್ರತಿ ಗಂಡಸಿಗೂ ಈ ವ್ಯಾಧಿ ಬರಬೇಕಿತ್ತು ಅಲ್ವಾ!
ರಾಜು:ನಿನ್ನ ಈ ಮಾತನ್ನು ನಾನು ಒಪ್ಪೊಲ್ಲ ನಿನ್ನ ಮಾತು ನಿಜವಾಗಿದ್ರೆ ಮದುವೆಯಾದ ಪ್ರತಿ ಗಂಡಸಿಗೂ ಈ ವ್ಯಾಧಿ ಬರಬೇಕಿತ್ತು ಅಲ್ವಾ!
ಗುಂಡ ಒಬ್ಬನೇ ಹೊಟೇಲ್ ಗೆ ಹೋದ...
ಗುಂಡ:ಊಟ ಇದೆಯಾ?
ಸರ್ವರ್:ಒಂದಾ!.
ಗುಂಡ(ರೇಗುತ್ತಾ):ಬಂಡಿ ಅನ್ನ ಉಣ್ಣೋಕೆ ನಾನೇನು ಬಕಾಸುರನಾ?!ಒಂದೇ ಕೊಡು...
ಸರ್ವರ್:ಯಾಕ್ ಸಾರ್ ರೇಗ್ತೀರಾ ನನ್ನೇ ತಿನ್ನೋತರ!ಅವ್ನ ಗುಣ ಅಂತೂ ನಿಮ್ಮಲ್ಲಿ ಕಾಣ್ತಿದೆ.
ರಮಾ:ಯಾಕ್ರೀ ಉಮಾ ನೀವೇ ಮನೆಗೆಲಸ ಮಾಡಿಕೊಳ್ಳುತ್ತಾ ಇದೀರಾ ಎಲ್ಲಿ ಹೋದ್ಲು ನಿಮ್ಮ ಮನೆ ಕೆಲಸದೋಳು...?!
ಉಮಾ:ಅಯ್ಯೋ! ಅವಳ ಸಂಬಳವನ್ನು ಪ್ರತಿ ತಿಂಗಳು ಹೆಚ್ಚಿಸಬೇಕಂತೆ ಕಣ್ರೀ ಅದಕ್ಕೇ ಕೆಲಸದಿಂದ ಕಿತ್ತ್ಹಾಕಿದೆ.
ಉಮಾ:ಅಯ್ಯೋ! ಅವಳ ಸಂಬಳವನ್ನು ಪ್ರತಿ ತಿಂಗಳು ಹೆಚ್ಚಿಸಬೇಕಂತೆ ಕಣ್ರೀ ಅದಕ್ಕೇ ಕೆಲಸದಿಂದ ಕಿತ್ತ್ಹಾಕಿದೆ.
ಸರ್ಜನ್:ನರ್ವಸ್ ಆಗಬೇಡ ರಾಜ್,ಇದು ಚಿಕ್ಕ ಆಪರೇಷನ್...
ಪೇಶಂಟ್:ಥ್ಯಾಂಕ್ಯೂ ಡಾಕ್ಟರ್,ಆದ್ರೆ ನನ್ನ ಹೆಸರು ರಾಜ್ ಅಲ್ಲ!
ಸರ್ಜನ್:ಗೊತ್ತು...ನನ್ ಹೆಸರು ರಾಜ್!
ಸನ್ಯಾಸಿ ೧:ಯಾಕೆ ಹತಾಶರಾಗಿ ಹೋಗ್ತಿದ್ದೀರಾ ಗುರುದೇವ?!ಬನ್ನಿ ತಪಸ್ಸು ಮಾಡೋ ಸಮಯವಾಯಿತು ಈಗ...
ಸನ್ಯಾಸಿ ೨:ಹತ್ತು ವರ್ಷದಿಂದ ತಪಸ್ಸು ಮಾಡಿದ್ರೂ ದೇವರು ಪ್ರತ್ಯಕ್ಷವಾಗಲಿಲ್ಲ ಸುಮ್ನೇ ಎಂ.ಎಲ್.ಏ.ಇಲ್ಲವೇ ಎಂ.ಪಿ ಎಲೆಕ್ಷನ್ ಗೆ ಸ್ಪರ್ಧಿಸಿ ನೋಡ್ತೀನಿ ಗೆದ್ದರೆ ಜೀವನ ಪರ್ಯಂತ ಸುಖವಾಗಿರಬಹುದು!
ರಾಮು:ಈ ಹುಚ್ಚರ ವೈದ್ಯ ಆಸ್ಪತ್ರೆಯನ್ನು ಬಂದ್ ಮಾಡ್ತಿರಲಿಲ್ಲವಲ್ಲ....ಏನಾಯ್ತೋ ಏನೋ?!.
ಮೋಹನ:ಅಧಿಕ ಸಂಖ್ಯೆಯಲ್ಲಿ ಟ್ರೀಟ್ ಮೆಂಟ್ ಗೆ ಬರುತ್ತಿದ್ದ ಹುಚ್ಚರನ್ನು ನೋಡಿ ನೋಡಿ ಕೊನೆಗೆ ಅವರೇ ಈಗ ಬೇರೆ ಹುಚ್ಚರ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದಾರೆ ಸಾರ್ ಪಾಪ!
ರವಿ:ನಿಜ ಹೇಳು ಅನುಷಾ ನೀನು ನನ್ನನ್ನೇ ಪ್ರೀತಿಸ್ತೀಯ ತಾನೇ?
ಅನುಷಾ:ಈ ಹುಡುಗರಿಗೆ ಏಕೆ ಇಂತಹ ಅನುಮಾನನೋ ಗೊತ್ತಿಲ್ಲಪ್ಪ,ಆ ಮುರುಳಿ ಕೂಡಾ ಪದೇ ಪದೇ ಇದೇ ಪ್ರಶ್ನೆ ಕೇಳಿ ಕೇಳಿ ನನ್ನ ಜೀವಾ ತಿನ್ತಾನೆ ಕಣೋ!
ಸರ್ಜನ್:ನರ್ವಸ್ ಆಗಬೇಡ ರಾಜ್,ಇದು ಚಿಕ್ಕ ಆಪರೇಷನ್...
ಪೇಶಂಟ್:ಥ್ಯಾಂಕ್ಯೂ ಡಾಕ್ಟರ್,ಆದ್ರೆ ನನ್ನ ಹೆಸರು ರಾಜ್ ಅಲ್ಲ!
ಸರ್ಜನ್:ಗೊತ್ತು...ನನ್ ಹೆಸರು ರಾಜ್!
ಕುಕ್ಕು...
----------
ಯಜಮಾನನೂ ಸಂಭ್ರಮದಲ್ಲಿದ್ದ
ಮಾಣಿಯೂ ನಿಶ್ಚಿಂತನಿದ್ದ
ಇದ್ದಕ್ಕಿದ್ದಂತೆ 25 ಮಸಾಲೆ ದೋಸೆಗೆ ಆರ್ಡರ್ ಹೇಳಿದಾಗ ಅಡುಗೆಕೋಣೆಯಲ್ಲಿ
ಕುಕ್ ನ ಕಣ್ಣಗಳು ಮಾತ್ರ ಸಿಟ್ಟಿನಿಂದ ಕುಕ್ಕುತ್ತಿದ್ದವು.
*ಬಿ.ರಾಮಪ್ರಸಾದ ಭಟ್.
No comments:
Post a Comment