ಸುಡದ ಗುಣ...
-----------------------------------------------------------
ಅವನು ಹೇಳಿದಂತೆ ಇವನು ಕೇಳುತ್ತಿದ್ದ.ಇವನು ಕೇಳುವನೆಂದು ಗೊತ್ತಿದ್ದರಿಂದ ಅವನು ಹೇಳುತ್ತಲೇ ಇದ್ದ.ಇವನನ್ನು ಪೇಚಿಗೆ ಸಿಲುಕಿಸಲು ಅವನು ಹಗಲಿರಲು ಹೊಂಚುಹಾಕುತಲಿದ್ದ.ಅವನು ಹೇಳಿದಂತೆ ಕೇಳಿದಾಗಲೆಲ್ಲ ಇವನ ಅದೃಷ್ಟವೋ ಏನೋ ಒಳ್ಳೆಯದೇ ಆಗುತ್ತಿತ್ತು.ಪ್ರತಿ ಬಾರಿ ಇವನು ಅವನು ಸೃಷ್ಟಿಸಿದ ಸಂಕಷ್ಟಗಳಿಂದ ಪಾರಾದಾಗಲೆಲ್ಲ ಅವನಿಗೆ ಕಸಿವಿಸಿಯಾಗುತ್ತಿತ್ತು.ತಾನು ಹೇಳಿದಂತೆಯೇ ಕೇಳಿರುವುದು ಅವನಿಗೆ ಗೊತ್ತಿತ್ತು.ಆದರೂ ಇವನ ಮೇಲೆ ಅವನು ಕತ್ತಿ ಮಸೆಯುವುದು ಬಿಡುತ್ತಿರಲಿಲ್ಲ.ಇವನು ಅವನು ಹೇಳಿದಂತೆ ಕೇಳಿದಷ್ಟೂ ಮೇಲಕ್ಕೇರುತ್ತಿದ್ದನು.ಅವನು ಹೇಳಿದಷ್ಟೂ ಹೇಗಿದ್ದನೋ ಅದೇ ಸ್ಥಿತಿಯಲ್ಲಿದ್ದನು.ಇವನಿಗೆ ಅವನೆಂದರೆ ಪ್ರಾಣ ಅದಕ್ಕೇ ಅವನ ಮಾತಿನ ಮೇಲೆ ಭಕ್ತಿ ವಿಶ್ವಾಸ.ಇವನ ನಡೆಯಿಂದ ತನ್ನಂತೆಯೇ ಎಲ್ಲ ನಡೆಯಬೇಕೆಂಬ ಅಹಂಕಾರ ಅವನಲ್ಲಿ ಮನೆ ಮಾಡುತ್ತಲೇ ಹೋಗುತ್ತಿತ್ತು.ದಿನಗಳು ಹೀಗೆಯೇ ಉರುಳುತ್ತಿದ್ದವು.ಇದನ್ನು ಅರಿತಿದ್ದ ಊರವರು ಇವನನ್ನು ಹೊಗಳುತ್ತಿದ್ದರು. ಅವನನ್ನು ತೆಗಳುತ್ತಿದ್ದರು.

ಒಮ್ಮೆ ತಿಳಿಯದೇ ಅವನು ಒಂದು ಆಳವಾದ ಪಾಳುಬಿದ್ದ ಬಾವಿಯಲ್ಲಿ ಬಿದ್ದ.ದುರಾದೃಷ್ಟವಶಾತ್ ಜೊತೆಗೆ ಇವನಿರಲಿಲ್ಲ.ಬಾವಿ ಪಾಳು ಬಿದ್ದಿದ್ದ ಕಾರಣ ಅವನು ಬಿದ್ದ ರಭಸಕ್ಕೆ ಹಿಂತಿರುಗಿ ಮೇಲೇಳಲಾಗದಷ್ಟು ಗಾಯಗಳಾಗಿ ಬದುಕುವುದು ದುಸ್ತರವೆನಿಸುವ ಸ್ಥಿತಿಯಲ್ಲಿಯೂ, ಮನಸಿನಲ್ಲಿ ಶಪಿಸುತ್ತಲಿದ್ದ.
ಇವನು ಜೊತೆಗಿದ್ದಿದ್ದರೆ ಬಹುಶಃ ನನಗೆ ಹೀಗಾಗುತ್ತಿರಲಿಲ್ಲವೇನೋ! ಇವನಿಗೆ ನಾನು ರಕ್ಷಿಸಲು ಆಜ್ಞೆ ಮಾಡಿದ್ದರೆ ನನ್ನನ್ನು ಉಳಿಸಿಯೇ ಉಳಿಸುತ್ತಿದ್ದ.
ಇವನು ಬರುವಷ್ಟರಲ್ಲಿ ಅವನಿರಲಿಲ್ಲ!
*ಕೆಲವರ ಗುಣ ಸಾವಿನ ಕ್ಷಣದಲ್ಲೂ ಬದಲಾಗದು!
No comments:
Post a Comment