JUNE 2020 -MY POEM PUBLISHED IN SUDHA MAGAZINE...
ಚಿಕ್ಕ ಜೇಬು.
~~~~~~~~
ಇದ್ದರೆಷ್ಟು ಚೆನ್ನ
ದೊಡ್ಡ ಜೇಬು ನನಗೆ
ನೆಲ್ಲಿಕಾಯಿ ಚಿನ್ನದಷ್ಟು
ಸಿಕ್ಕಿತಿಂದು ನನಗೆ
ಕಷ್ಟಪಟ್ಟು ನಾನು
ಏರಿದ್ದೆ ಮರವನ್ನು
ಜೇಬು ಮಾತ್ರ ಚಿಕ್ಕದು
ನನಗೇ ಎಲ್ಲಾ ದಕ್ಕದು
ಆಸೆ ಬಹಳ ನನಗೆ
ಸಿಕ್ಕೋದಿತ್ತು ಎಲ್ಲ ಎನಗೆ
ಜೇಬು ಮಾತ್ರ ಚಿಕ್ಕದು
ಎಲ್ಲ ತುಂಬಲಾಗದು
ಪಾಪ! ಏನು ಮಾಡಲಿ
ನಾನು ಚಿಕ್ಕವನಲ್ಲವೇ
ನನ್ನ ಜೇಬು ಚಿಕ್ಕದು
ಸ್ವಲ್ಪ ತಿಂದರಾಗದೇ.
No comments:
Post a Comment