Sunday, July 19, 2020

My Poems-Part-1


ಅವಳ ಆ ಸೆಳೆತ...
~~~~~~~~~~~~
ಒಲವೇ  ಒಲವೇ ಏಕೀ ಕೋಪವೇ
ಪ್ರೇಮವೇ  ಪ್ರೇಮವೇ ಈ ಪ್ರೀತಿ ಗೆಲ್ಲುವೆ   

ರಾಜ ಹಂಸದ ನಡಿಗೆಯ ಬೀರಿ
ನನ್ನ ಮನಸನು ಸೆರೆ ಹಿಡಿದೆ
ಸಪ್ತ ಸಾಗರದ ಚೆಲುವನು ತೋರಿ
ನನ್ನ ಹೃದಯವ ನೀ ಸೆಳೆದೆ                       

ನೀನು ಚೈತ್ರಧಾರೆಯೇ..ಹೇಳು
ಅಲ್ಲ...ನಾದ ಸ್ವರವೇ ಹೇಳೇ!
ನೀನು ಕಲ್ಪತರುವೇ ಹೇಳು
ಅಲ್ಲ ಜೀವ ಬಿಂದುವೇ ಹೇಳೇ!                   

ಕನಸ ಕಡಲಲ್ಲಿ ನೀನು ಕಲರವವೇ
ಇತಿಹಾಸದ ಪುಟಗಳಲಿ ಶಿಲಾ ಬಾಲಿಕೆಯೇ
ಕಾವ್ಯ ವಾಹಿನಿಯೇ ನೀನು ಹೇಳು
ಮಿಂಚಿನ ಲತೆಯ ಸುಮ ಬಾಲೆಯೇ!          

ಪ್ರತಿ ದಿನದ ಕನಸಿನ ನಾಗಚಂದ್ರಿಕೆಯೇ
ಕಲ್ಪನೆಯ ಉಸಿರಲ್ಲಿ ಪ್ರೇಮ ಬಂಧುವೇ
ಸಂವೇದನೆ ನೀಡುವ ಕಲಾ ಬಿಂಬವೇ
ಹೇಳು ನೀನು ಶೃತಿ ಮೀಟಿದ ವೀಣೆಯೇ       
ಅನುಭವದ ರಾಶಿಯನು ಹೊಕ್ಕು ನೀನು
ಹೊಸ ಮುನ್ನುಡಿಯ ಬರೆಯುವೆಯೇನು?
ಈ ಪ್ರೀತಿಯ ಕಣಜದಲ್ಲಿ ಮಿಂದು ನೀನು
ಪ್ರೇಮದ ಸುಧೆಯನು ಹರಿಸುವೆಯೇನು? 

ಕಾಂತಿಯುಕ್ತ ಜೀವ ತುಂಬಿದ ಗೆಳತಿಯ ಆ ಕಣ್ಣೋಟ
ಅವಳ ಮುಂಗುರುಳು ಸರಿಸಿ ಸವಿದ ಈ ಕವಿಯ ಕಳ್ಳಾಟ
ನಸುನಾಚಿ ಏನೇನೋ ನೆನೆಸಿ ನಕ್ಕ ಇಬ್ಬರ ಸವಿಯೂಟ
ಸವಿದ ಸೊಬಗು ನಿತ್ಯವೂ ದೂರದಲ್ಲಿಯೂ ಹಬ್ಬದೂಟ.


ನಿನ್ನ ನಗೆಯಲಿ ಉಸಿರು
ಸ್ಪರ್ಶವನ್ನೇ ನೀಡಿ
ನನ್ನ ಉಸಿರನು ಬಿಗಿದಪ್ಪಿ
ಉಸಿರು ಒಂದಾಯ್ತು.


ಅರಿವು ಬಂದಾಯ್ತು ಸ್ವಾರ್ಥಿಗಳೇ...                                            22-11-2001. 9 pm.                   
~~~~~~~~~~~~~~~~~~~~~
ಹೊಂಚು ಹಾಕುವ ಸಂಚುಗಾರರಿಗೆ ಬರವಿಲ್ಲ-
ಸಂಚು ಹೂಡುತ ಸಂಚಕಾರ ತರುವುದೇ ಎಲ್ಲ
ತಮಗೆ ದಾರಿ ಸಿಕ್ಕರೆ ಸಾಕು ಪರರ ಕಷ್ಟವದೇಕೆ ಬೇಕು
ತಾವು ಬಯಸಿದಂತೆ ತಮಗೆ ಲಾಭವಿದ್ದರಷ್ಟೇ ಸಾಕು

ಒಂದೇ ಬಾರಿಗೆ ಯೋಜನೆ ಫಲಿಸಲಿಲ್ಲ
ಆದರೇನು ಮತ್ತೊಂದಕ್ಕೆ ಜಾರದೆ ವಿಧಿಯಿಲ್ಲ
ಏನೇ ಆದರೂ ಹಟವನು ಬಿಡದೆ
ಸರಾಗವಾಗಿಹರು ಮತ್ತೆ ಎಲ್ಲೂ ನಿಲ್ಲದೆ

ಮಧ್ಯೆಯೇನೋ ಭಂಗ ಬಂದೀತು
ಆದರೇನು ಅಕ್ಕ ಪಕ್ಕ ಆದಂತಾಯ್ತು
ಸಾಕು ಸ್ನೇಹ ಹತ್ತಿರವಾಯ್ತು
ಅವನೊಬ್ಬನನ್ನ ದೂರ ತಳ್ಳಿಯಾಯ್ತು

ಕತ್ತು ಹಿಸುಕಲಿಲ್ಲ ಅವರು
ಪರೋಕ್ಷವಾಗಿ ಕೊರಗಲ್ಲಿ ಮುಳುಗಿಸಿದರು
ಆದರೇನು ...ದಾಟುವವನಿವನಲ್ಲ
ತಂತ್ರ ಹೊಳೆದು ಸುಮ್ಮನಾದವನಲ್ಲ


ಏನು ಮಾಡುವುದದೇನು ಮಾಡುವುದು
ಮತ್ತೇ ನಗು ಬೀರಿ, ಒಳಗೆ ಕ್ರೋಧ ಮಡುಗಿಹುದು
ದಾರಿ ಹುಡುಕಿಬಿಟ್ಟರು ಮಾರ್ಗದರ್ಶಕರಿವರು
ಪರೋಪಜೀವಿಯಂತೆ ಬಂದು ದರ್ಶನ ನೀಡಿದರು.

ಪಾಠ ಸಿಕ್ಕಂತಾಯ್ತು ಎಚ್ಚರದಿಂದ ಇರಲು
ನನ್ನ ನಾ ಅರಿಯಲು ಬದುಕಲಿ ಮುಂದೆ ಸಾಗಲು
ಪಟ್ಟು ಬಿಡದೆ ಮತವಾಗಿ ನಿಂತೆ
ಆದರೂ ತಂತ್ರ ಹುಡುಕಲು ಅವರು ಮರೆತಿಲ್ಲವಂತೆ.


ನಿರಾಸೆ.
~~~~~
ಕನವರಿಸಿ ಕನವರಿಸಿ
ಕನಸಿದಳು ಹುಡುಗಿ
ಆದರೇನು?!
ಪ್ರೀತಿಯ ಕನಸುಗಳು
ಅವಳಲ್ಲಿ
ಮೂಡಲೇ ಇಲ್ಲ.


ನೆನಪು.
~~~~~
ಕಿವಿಯ ಮೇಲೆ
ಕಚಗುಳಿಯಿಟ್ಟಿತು
ಹಾರುತ ಉಲಿಯುತ
ಬಂದ ನೊಣವು
ನೆನಪಿಗೆ ತರಿಸಿತ್ತು
ಮಾಸ್ತರರೊಬ್ಬರು
ಕಿವಿ ಹಿಂಡಿ ಅಳಿಸಿದ್ದು
ನೋಯಿಸಿದ್ದ ಮನವು.

ಏಕೆ?
~~~~
ಮಹಾ ಭಾರತದಲ್ಲಿ-
ಅರ್ಜುನ ಪರೀಕ್ಷೆಯಲ್ಲಿ
ಪಕ್ಷಿಯ ಕಣ್ಣಷ್ಟೇ ನೋಡಿ
ಬಾಣಬಿಟ್ಟ ಈತನ ಗುರಿಗೆ
ಸಿಕ್ಕಾಯ್ತು!
ಕಾಲೇಜಿನಲ್ಲಿ-
ವರ್ಷಪೂರ್ತಿ  ನನ್ನವಳ
ಕಣ್ಣನ್ನೇ ನೋಡಿ ಪ್ರೀತಿಸುವ
ಆಸೆ ಇದ್ರೂ ಅಯ್ಯೋ!
ಅವಳೇಕೆ ಇನ್ನೂ
ನನ್ನ ಬಲೆಗೆ ಬೀಳುತ್ತಲೇ ಇಲ್ಲ!

Version 2.0

ಏಕೆ.                                                           November 2001.
~~~~
ಅಂದು ಮಹಾಭಾರತದ
ಪರೀಕ್ಷೆಯೊಂದರಲ್ಲಿ
ಅರ್ಜುನ ಪಕ್ಷಿಯ ಕಣ್ಣಷ್ಟೇ
ನೋಡಿ ಬಾಣ ಬಿಟ್ಟ
ಗುರಿಗೆ ಸಿಕ್ಕಾಯ್ತು ನೋಡಿ
ಇಂದು ಕಾಲೇಜಿನಲ್ಲಿ
ವರ್ಷ ಪೂರ್ತಿ ನನ್ನವಳ
ಕಣ್ಗಳನ್ನೇ ನೋಡಿ
ಪ್ರೀತ್ಸೋ ಆಸೆ ಇದ್ರೂ
ಅಯ್ಯೋ! ಇವಳೇಕೆ ನನ್ನ
ಬಲೆಗೆ ಬೀಳಲೇ ಇಲ್ಲ.


ಪೆನ್‌ ಷನ್‌ ಆಯ್ತು ಅಂತ
ಕಿರಿ ಮಗ ಹೇಳ್ದ-
ನಮ್ಮಪ್ಪ ಅಂಗಡಿ
ಇಡ್ತಾನಂತ...
ಅದ್ಕ ಪೆದ್ದನಾದ್ರೂ
ಬುದ್ದಿ ತೋರ್ಸಿ ನಾ ನುಡಿದೆ
ಅದು ಅಂಗಡಿಯಲ್ಲವೋ!
ಎಲೈ ಮರುಳೇ,
ಅದು ನಿಮ್ಮ
ಹೊಟ್ಟೆ ತುಂಬಿಸೋ
ಬಾಳಿನ ಬೆಳಕಿಂಡಿ!

ಜೀವನ್‌ ಮೇಂ ಮಿತ್ರತ್ವ್‌ ಏಕ್‌ ಅನೌಖಿ ಸಂಬಂಧ್‌ ಹೈ|
ಜಹಾಂ ಹರ್‌ ದಿಲ್‌ ಮೇಂ ತಂದುರುಸ್ತಿ ಕೀ ಹವಾ ಬಹತೀ ಹೈ||

ನಾಲ್ಕಾರು ಮಾತು
ನಾ ಉಗುಳಿ
ಸದಾಭಿಪ್ರಾಯ
ಪಡೆದೆ
ಏಕೆಂದರೆ
ನಾ ಉಗುಳಿದೆನೆ
ಹೊರತು
ಉಗಿದಿದ್ದಲ್ಲ!

ಅಂತರ                                          (ಕಾದಂಬರಿಯ ಕುರಿತಂತೆ)
~~~~~~
ಅಯ್ಯೋ!ಸಾಕಾಯ್ತಪ್ಪ
ಯಾವಾಗ ಮುಗಿಯುತ್ತೋ-
ಗೊತ್ತಿಲ್ವಪ್ಪ
ಓದೋದಂತೂ ಮೊದ್ಲೇ
ಬ್ಯಾಡಪ್ಪ!
ಅಯ್ಯೋ! ಎಷ್ಟು ಚಿಕ್ಕದು
ಕಥೆಯೋ,ಚೆನ್ನದ್ದು
ಆದರೇನು ಬಂತು
ನನ್ನ ಟೈಂ
ಇನ್ನೂ ಉಳಿದ್ಬಿಡ್ತು.


....C
~~~
ಡ್ಯಾಡಿ.. ಕಷ್ಟ ನಂಗೆ P.U.C.
ಇದ್ದಂತೆ ಓಜೋನ್‌ ಗೆ C.F.C.
ಇನ್ನೆಲ್‌ ಮಾಡ್ತಾನೋ B.SC.
ಸರಿ ಆಗು ಹೋಂ-ವರ್ಕ್ನಲ್ಲೇ ಬ್ಯೂC.

ಬಾಲ ಮನಸು.
~~~~~~~~~~~
ಢಾಣಿ ತರೋದ್‌ ಮರಿ ಬ್ಯಾಡಣ್ಣ
ನಾಳೆ ಊರಿಗೆ ಬೇಗ ಬಾರಣ್ಣ
ಜಾತ್ರೆಯು ಐತಿ ಇದ್ದೇ ಹೋಗಣ್ಣ
ಅರುಣ ಬೀರಿದನು ನಗುಗಣ್ಣ.

ರಿವರ್ಸು.
~~~~~~~
ಗಂಡ ವೃತ್ತಿಯಲ್ಲಿದ್ದಾಗ-
ಹೆಂಡ್ತಿ.. ʼಎಲ್ಲಿ ಐತ್ರಿ ಪರ್ಸು”
ಗಂಡ ನಿವೃತ್ತಿಯಾದಾಗ-
ಹೆಂಡ್ತಿ..ʼದುಡ್ಡ್‌ ಕೊಡಲ್ಲಾಂದ್ರ ತಗೊಳ್ರೀ ಡಿವೋರ್ಸುʼ
ಅಂತರವಾದಾಗ ವಯಸ್ಸು
ಹಿಂಗ್ಯಾಕಾಗುತ್ತೋ ಲೈಫ್ನಲ್ಲಿ ರಿವರ್ಸುʼ

ಸಂ-ಕ್ರಾಂತಿ.
~~~~~~~~‌
ವರ್ಷಕ್ಕೊಮ್ಮೆ ತಪ್ಪದ
ಆಚರಿಸ್ತೀವ್ರೀs.. ಸಂಕ್ರಾಂತಿ
ಎಳ್ಳು-ಬೆಲ್ಲ ಹಂಚ್ಕೊಂಡು
ದೇಶದ್‌ some-ಕ್ರಾಂತಿ ನೆನಸ್ಕೊಂಡು.

ತಲಿ ಮ್ಯಾಲ ಕೈ ಹೊತ್ತ್ಕೊಂಡು
ಕೂರದೆ-ಏಳ್ಗೆಗೆ
ಮಾಡ್ಬೇಕು some –ಕ್ರಾಂತಿ!


ನೂರು ಜನರಿದ್ದರೆ ಕಣ್ಣಮುಂದೆ
ನೂರರದ್ದು ಒಂದೊಂದು ಕಥೆ
ಎಷ್ಟು ಪಟ್ಟರೋ ವ್ಯಥೆ
ಈ ದುಗುಡಗಳ ಬೆನ್ನ ಹಿಂದೆ
ತಿಳಿದವರದ್ದೊಂದು ರೀತಿ
ತಿಳಿಯದೆ ಅಂತರಂಗದೊಳಿರುವ
ಭಾವನೆಗಳ ಹೇಳಲಾಗದವರದೊಂದು
ಹೇಳಿದರು ಕೇಳುವ ತಾಳ್ಮೆ ಇದರವರ
ಅವರದ್ದೂ ಒಂದೊಂದು ರೀತಿ...

23-11-2001- ಶುಕ್ರವಾರ ರಾತ್ರಿ 11-30 ಕ್ಕೆ

ಕಂ-ಬಳಿ
~~~~~~
ಚಳಿಗಾಲದ ಮುಸುಕು
ಕವಿದು ಮನಸ್ಸಿಗೆ
ಬಿಸಿಯಿಲ್ಲದೆ ತವಕ
ಕೊನೆಪಕ್ಷ ಬಯಸುತಿದೆ
ಒಂದಾದರು ಕಂಬಳಿ
ಇಲ್ಲವೆಂದಾದರೆ ಓ ನಲ್ಲೆ
ಕಂಬಳಿ ತರದಿರೆಯೂ
ನಡೆದೀತು ತಾಳಲಾರೆ
ಬೇಗ come ಬಳಿ!


ವಿಪರ್ಯಾಸ.
~~~~~~~~~
ಹೋದರು ರಂಗಮಂಚಕೆ
ರಾಜಕೀಯ ಧುರೀಣರು
ಮಾಡಲು ಭಾಷಣವ
ಓಡುತ ಸಾಗಿದರು
ಜನರೆಲ್ಲರೂ ಎಲ್ಲಿಯೂ
ನಿಲ್ಲದೇ ಕೇಳಲು ಆಗದೆ
ಅವರ ಭಷಣವ!

20-06-2001. (a strange suggestion from poetic heart) indu.

ಕರಗಿದ ಕನಸು.
~~~~~~~~~~
ಕನಸು ಕರಗಿತು
ಮನಸು ಜಾರಿತು
ದುಃಖ ಅರಳಿತು
ಅಂತರಾಳದಲ್ಲಿ...

ನಲ್ಲೆ ನಿನ್ನ ನೆನಪಲ್ಲೇ
ನಾನುಳಿದು
ಆದೆ ನಾ ವಿರಹಿ
ನಿನ್ನ ನೆನಪಿರದಿರೆ
ನಾ ನಾಗುತಿದ್ದೆನೋ
ಸಂದೇಹಿ.

ನಾ ಬದುಕುತಿಹೆ ನಿನ್ನ ನೆನಪಲಿ ಓ ಇಂದು!
ಮರೆಯಲಾರದೆಯೇ ಘಳಿಗೆ ಘಳಿಗೆ ಕಳೆಯುತಿಹೆ ಇಂದು
ನೀ ಮಮತೆಯ ತೋರಿದಾ ಸಿಂಧು
ಈ ನಮ್ಮ ಬಾಳ ಪ್ರೇಮ ಬಂಧು.


ಒಲವೆಂಬ ಲತೆಯನ್ನರಿಸಿದ ಉಸಿರೇ
ಜೀವಕ್ಕೆ ಜೀವವೇ ಈ ಉಸಿರೇ
ಮನದ ಭಾವದ ಜೀವದ ಉಸಿರೇ
ನೀ ನನ್ನ ಕಾಡಿದ ಓ ಉಸಿರೇ
ಉಸಿರಾಗಿ ನೀ ಬಂದೆ
ಕನಸನ್ನು ಕೊನರಿದ ಈ ಕಲ್ಪನೆಯ ಉಸಿರೇ..

ಮತ್ತೆ... ಲೆಕ್ಕಕ್ಕಿಡಬೇಕಿದೆ ಸ್ವಾಭಿಮಾನದ ಸಂಸ್ಕಾರ.

                                                                      -ಬಿ.ರಾಮಪ್ರಾಸಾದ ಭಟ್.
 ಈ ಹೃದಯವು ಹೇಳುವ ಸ್ವರದಲ್ಲಿ
ನಿನ್ನಯ ಹಾಡದು ತುಂಬಿರಲಿ
ಈ ಕಂಬನಿ ಸಾರುವ ಮಾತಿನಲಿ
ಸ್ನೇಹದ ಕಂಗಳು ತುಂಬಿರಲಿ.

ಸ್ಪೂರ್ತಿ.
~~~~~~
ಮಾತು ಬಾರದೆ
ನಿನ್ನ ನೆನೆಯುತ
ಭಾಷೆ ಅರಳುತ
ತುಂಬಿತು ನನ್ನೆದೆ

ಸುಮವೇ ನೀ
ನನ್ನೊಲವೆ ನೀ
ಬರ ಕಳೆದು
ಅಂಬರವ ಅಲೆದು
ಸೇರಿದೆ ನೀ ನನ್ನೊಡಲ

ನಿತ್ಯ ನೂತನ ನಿನ್ನ ನರ್ತನ
ಸಂಸ್ಕೃತಿಯ ಸೊಗಡಿನ ಮನ
ಉಸಿರಲ್ಲ ಆ ಭಾವ
ಬದುಕ ಬೆಳಗು ಜಾವ.

28-04-2002.
ಲಹರಿಯೇ ಲಹರಿಯೇ ನಾದದ ಲಹರಿಯೇ
ಮೀಟುವ ತಂತಿಯಲಿ ಹೊಮ್ಮಿದ ಸಂಗೀತವೇ
ಸಪ್ತ ಸ್ವರಗಳ ಸಂಗಮವೇ
ಈ ಮನಗಳಲಿ ಸಂಭ್ರಮವೇ.


ಏನೋ ಅದು ಏನೋ ಚಿಂತೆಗಳ ಕೊರೆತ
ನನ್ನ ಮನದಗಲ ಭಾವಗಳ ಅಲೆತ |ಪ|

ರಾಗ-ಒಂದು ಅನುರಾಗವು ಆದಾಗ,
ಪ್ರೀತಿ ಎದೆಯುಸಿರಲ್ಲಿ ಒಮ್ಮೆಲೆ ಕಲೆತಾಗ
ಏಳು ಸ್ವರಗಳ ಅನುಬಂಧದಲಿ ನಿನ್ನನು ಮರೆತಾಗ,
ಎದೆಯ ತಟ್ಟಿ ನಿಲ್ಲುವೆ ನಾ-ನಿನ್ನ ಕೂಗಲು
ಆಸೆ ಬಿಚ್ಚಿ ಹೇಳುವೆ ನಾ ನಿನ್ನ ನೋಡಲು |1|

ಪ್ರೀತಿ ಹನಿಯಲ್ಲಿ ಜೇನು ತುಂಬಿದೆಯೋ
ಒಡಲ ಉಸಿರಲ್ಲಿ ಆ ಪ್ರೀತಿ ತುಂಬಿದೆಯೋ
ಕಂಗಳ ಮಾತಿನ ಮೌನದಲಿ ಮನಸೇ ತುಂಬಿದೆಯೋ
ಒಲವು ನಮ್ಮ ಬದುಕಲ್ಲಿ ಹಾಸು ಹೋಗಲು
ಸ್ಪೂರ್ತಿ ಅದಕೆ ನಕ್ಕು ದಾರಿ ತೋರಲಿ     |2|

ಅಮ್ಮ ಹೇಳಿದ ಪ್ರತಿ ಮಾತದು ನೆನಪಿದೆಯೋ
ಹರಿಯೋ ನೀರಲ್ಲಿ ತೇಲಾಡಿದ ಹಕ್ಕಿಯ ಜ್ಞಾಪಕವೋ
ಹಾರುತಲಿರುವ ಮಾತಿನ ಚಕಮಕಿ ಕೀರ್ತಿಯ ಜ್ಞಾಪಕವೋ
ಮಮತೆ ನಮ್ಮ ಮನಸಲಿ ಹಸಿರಾಗಲು
ನೆನಪು ಮಾತ್ರ ಅದಕ್ಕೆ ದಾರಿ ತೋರಲು |3|

ಒಂದು ಎದ್ದಾಗ-
ಮತ್ತೊಂದು ಮಲಗಿರುತ್ತದೆ
ಮಗದೊಂದು ಮುದುಡುತ್ತದೆ.
ಒಂದು ಮಲಗಿದ್ದಾಗ-
ಮತ್ತೊಂದು ಏಳುತ್ತದೆ
ಮಗದೊಂದು ಅರಳುತ್ತದೆ.

ಬದುಕು.
~~~~~~
ಮರಳುಗಾಡಿನ ಮರೀಚಿಕೆಯಂತೆ
ಈ ಬದುಕು; ಅರ್ಥ ಹುಡುಕಲು
ಹತ್ತಿರ ಹೋದಷ್ಟೂ ದೂರ ಸರಿಯುತ್ತದೆ
ಸತ್ಯ ಗುಪ್ತವಾಗುತ್ತದೆ.. ಮತ್ತೆ ದಾರಿ-
ಮಾಡಿಕೊಡುತ್ತದೆ  ಅನ್ವೇಷಣೆಗೆ
ಕಂಡರೂ ಕಾಣದಂತೆ ಪ್ರತಿಫಲಿಸುತ್ತದೆ
ಮತ್ತೆ ಕಷ್ಟವಾಗುತ್ತದೆ.. ಮುಕ್ತಿಯ
ಕಾಣುವುದೊಂದೇ ಬದುಕ ಗುರಿ..
ಸಾವಿನಲ್ಲಿ ಬದುಕು ಲೀನವಾಗುತ್ತದೆ.

ತಿಳಿದೋ ತಿಳಿಯದೋ
ಮೊಗ್ಗರಳಿ ಹೂವಾಯ್ತು..
ಸುತ್ತಲೆಲ್ಲ ಕತ್ತಲು-
ಪರಿಮಳವ ಬೀರಿತ್ತು...
ಮನಸೆಲ್ಲ ಎಚ್ಚೆತ್ತು...

25-08-2002.   ಸಂಜೆ 4.15ಕ್ಕೆ.

ಏನೆನ್ನಲಿ ನಿನ್ನ ನಿರ್ಲಿಪ್ತತೆಗೆ...?!
~~~~~~~~~~~~~~~~~~~~
ನೆನೆಯುವರಿಲ್ಲವೋ ... ನಿನ್ನನು
ಇರುವುದ ನೀ ನೀಡಿದೊಡೆ ಎಲ್ಲವನು
ತ್ಯಾಗ ಗುಣವೆಂದೇ ಮೆರೆದೆಯಲ್ಲವೇನು?!
ಬರಡು ಮಾಡಿಕೊಂಡೆ ನಿನ್ನೊಡಲನು


ಈಗ ಹೇಳು ಎಲ್ಲರೂ ಮರೆತರಲ್ಲವೇ?!
ನಿನ್ನ ಸಂಪತ್ತೆಲ್ಲ ಸಾವಿರ ಮನ ಸೇರಲಿಲ್ಲವೇ?!
ಮತ್ತೇಕೆ ಒಂಟಿಯಾಗಿ ನಿಂತೆ ನೀನಿಲ್ಲೇ
ನೀತಿಯನಂತೂ ಬಿಡುವುದಿಲ್ಲವಲ್ಲೇ!

ನಿನ್ನ ಮಕ್ಕಳೆಲ್ಲ ಉರುಳಿ ಅಂದು ನಿನ್ನ ಸಂತಸಕೆ
ಪುಟ್ಟ-ದೊಡ್ಡ ಕಾಲುಗಳೆನ್ನದೆ ತುಳಿದರು ಅವರ ಹರ್ಷಕೆ
ಯುದ್ಧಭೂಮಿಯಲಿ ಸೋತು ಬಿದ್ದ ಹೆಣಗಳಂತೆ
ಹೂತು ಹೋಗಿದ್ದವು-ಬೀಜಗಳೆಲ್ಲವಿದ್ದವು ಮೂಳೆಗಳಂತೆ

ಮತ್ತೇ ದಿನಗಳುರುಳಿ ಬರಲಿ ನಾಳೆ
ಆಗುವೆ ನೀನೇ ಎಲ್ಲರ ಮನದವಳೇ!
ಅರಳಿ ನಿಂತು ಕರೆಯುವ ಮತ್ತೇ ಎಲ್ಲ ಕುಲವನು
ನಿನ್ನವರಾಗುವ ಪರಿವಿಗೆ ನಾನು ಹೇಳಲಿ ಏನು?

ಇಂದು ಕೃಷ್ಣ ಭಟ್.

( ನಮ್ಮ ಹಾಸ್ಟೆಲ್‌ ನ ಆ ನೇರಳೆ ಮರವನ್ನು ಈಗ ಕಂಡು)‌

ರಮೇಶನಿಗೆ ಪಾಠಕ್ಕೆ ಬರೆದು ಕೊಟ್ಟು ಶಿಶು ಕವನ. 28/08/2002. 10.30ಕ್ಕೆ.

ಟಿಕ್‌... ಟಿಕ್‌ ಎನ್ನುವ ಗಡಿಯಾರ
ಸಮಯವ ತಿಳಿಸುವ ಸುಕುಮಾರ
ಕಾಲವ ತಿಳಿಯಲು ನೀ ಬೇಕು
ನಿನ್ನ ನೋಡಿ ನಾವು ಜೀವಿಸಬೇಕು.

13-08-2002.  5.20 ಸಂಜೆ.

ರೆಪ್ಪೆಗಳು ಹೇಳುವ ಒಂದೊಂದು ಮಾತಿನಲ್ಲಿ
ನನ್ನ ಪ್ರೀತಿಯು - ನಿನ್ನ ಪ್ರೀತಿಯು
ಒಂದೇ ಸಾಲಲಿ ಬದುಕಿನ ರೀತಿಯು
ಯುಗಗಳೇ ಕಳೆದರೂ ಪ್ರೇಮ ಶಾಶ್ವತ!
ಮನಸೇ ನೊಂದರೂ ಭಾವ ಜೀವಿತ.
ಐ.ಕೆ.


ನನ್ನ ಅಮ್ಮ!
~~~~~~~~~
ಅಮ್ಮ ಅಮ್ಮ ನನ್ನ ಅಮ್ಮ
ಎಲ್ಲಿ ನೀನು ಇರುವೆ ಅಮ್ಮ
ನನ್ನ ಬಿಟ್ಟು ದೂರ ನೀನು
ಎಲ್ಲಿ ಹೋಗಿರುವೆ ನನ್ನ ಅಮ್ಮ
                                    ... ಎಲ್ಲಿ ಹೋಗಿರುವೆ ಹೇಳಮ್ಮ

ಮಮತೆಯು ನೆನಪು
ನೀನೇ ಬರೀ ನೆನಪು
ನೆನಪೇ ನನ್ನ ಉಸಿರು ಅಮ್ಮ
ನೆನಪಲ್ಲೇ ಹೇಗೆ ಇರಲಮ್ಮ
                                      ...ನೆನಪಲ್ಲೇ ಹೇಗೆ ಇರಲಮ್ಮ
ನಿನ್ನ ನೋವು ನನಗಿರಲಮ್ಮ
ಮತ್ತೆ ನೀನು ಬಳಿ ಬಾರಮ್ಮ
ದೇವರ ನಾನು ಕೇಳೇ ಬಿಡುವೆ
ಜೊತೆಗೆ ಬದುಕಲು ಬಾರಮ್ಮ
                                         ... ಜೊತೆಗೆ ಬದುಕಲು ನೀ ಬಾರಮ್ಮ

ಸ್ನೇಹವು ತೋರಿದ ಓ ಅಮ್ಮ
ಪ್ರೀತಿಯ ತೋರಿದ ಓ ಅಮ್ಮ
ನೀನೇ ನನ್ನ ಮುದ್ದಿನ ಅಮ್ಮ
ನೀನೇ ಮರೆತರೆ ಹೇಗಮ್ಮ?!
                                             ...ನೀನೇ ಮರೆತರೆ ಹೇಗಮ್ಮ?!
ಇಂದು ರಾಮಕೃಷ್ಣ ಭಟ್.‌ 07-04-2002. ಮುಂಜಾನೆ 10.

ಈ ಕಲ್ಪನೆಯ ಕಾವ್ಯದ ಗೊಡವೆ ಅಂದೇಕೆಯೋ! ಎಂಬುದು-ಇಂದು-ಇದೊಂದು ಪ್ರಶ್ನಾರ್ಥಕ ಪರಿಕಲ್ಪನೆ.....

                         ಕಲ್ಪನೆ.                                                                             *18-07-2001.
                      ~~~~~~~
ಕಲ್ಪನೆಗೆ ಕೈಕೊಟ್ಟಾಗ ಕೈ ಕಲ್ಪವೃಕ್ಷ
ಕಲ್ಪನೆಗೆ ಕೈ-ಕೊಟ್ಟಾಗ ಕೈಯೆಲ್ಲ ಕಲ್ಲು ತುಂಬಿದ ವೃಕ್ಷ.

ಕಲ್ಪನೆಯ ನೆನೆದರೆ ಕನಸೊಂದು ಸುಮ
ಕಲ್ಪನೆ ಅರಳಿದರೆ ಕನಸೊಂದು ಸುಮ
ಕರುನಾಡಿನಲ್ಲೊಂದು ಕಪ್ಪುಚುಕ್ಕೆ
ಅದೊಂದು ಕಲ್ಪನೆಯಾಗಿ ಸಿಕ್ಕುಬಿದ್ದ ಹಕ್ಕಿಯ ರೆಕ್ಕೆ
ಜೋತು ಬಿದ್ದರೆ ಒಂದೇ ನಂಟಿಗೆ
ಕಂಟಕವೋ...! ಕಾದಿದೆ ನಿನ್ನ ಬಾಳಿಗೆ
ತಲೆಯೆತ್ತಿ ನೋಡಿದರೆ ಅದೊಂದು ಕಲ್ಪನೆ
ಮನಸು ತೆರೆದು ಉಸಿರೆರೆದರೊಂದು ಕಲ್ಪನೆ
ಕಲ್ಪನೆಯ ಸಾಮ್ರಾಜ್ಯಾಧಿಪತಿಯಾಗೋದೊಂದು ಕಲ್ಪನೆ
ಸದಾ ಕಲ್ಪನೆ-ಆಗುಳಿಯಲಿ ಅರಳದ ನೆನೆ
ಕಲ್ಪಿಸಲಾಗದ ಕಲ್ಪನೆಗಳದ್ದೊಂದು ಕಲ್ಪನೆ
ಮನದಲ್ಲಿ ಮೂಡದಿರೆ ಭಾವ-ಮನಸೇ! ಕಾರಣ ನೀನೇ
ಉಸಿರೆಲ್ಲ ನಿಂತು ನಾನಿಂತೆನೆಂಬ ಕಲ್ಪಿಸಲಾಗದ ಕಲ್ಪನೆ
ಕಲ್ಪನೆಗೆ ಕೈ ಚಾಚಿ ಕಲ್ಪತರುವಾಗಿ ನಿಲ್ಲುವುದೊಂದು ಕಲೆ
ಕಲ್ಪನೆಗಳಿರಬೇಕು ನಿಜ! ಅವು ಬಾಳಿನ ದೀವಿಗೆಗೆ ಸೆಲೆ
ಕಾಡ್ಗಿಚ್ಚು ಹಬ್ಬಿದಂತೆ ಕವಿ ಕಂಡು ಗೋಗರೆದ್ದೊಂದು ಕಲ್ಪನೆ
ಸುಮಭಾವಗಳೆಲ್ಲ ಮುಸುಕಿ ಕಣ್ಣೀರಿಟ್ಟಿದ್ದೊಂದು ಕಲ್ಪನೆ
ಹೂ ನಗೆಯ ಬೀರಿ ಹುಡುಗಿ ತಾನೇ ಕರೆದಿದ್ದೊಂದು ಕಲ್ಪನೆ
ಕರೆಗೋಗೊಟ್ಟು ಹುಡುಗ ಸಮೀಪಿಸಿದ್ದೊಂದು ಯಾತನೆ!
ಕಮರಿ ಹೋದ ಆಸೆಗಳಿಗೆ ಕನವರಿಸಿದ ಕಲ್ಪನೆ
ಕಲ್ಪನೆಯಿದೋ! ಬಾಳಿಗೊಂದು ಅರ್ಪಣೆ
ನಿಸರ್ಗ ಕವಿದಾಗ ಕಂಡಿದ್ದೋ .. ಒಂದು ಕಲ್ಪನೆ
ಕಲ್ಪನೆಗೆ ಹೆಸರಾಗಿ ಸೋಜಿಗವ ನೀಡುತ್ತ
ʼʼಹೆದ್ದಾರಿಗುಂಟ” ಸಾಗಿತ್ತು ʼʼಕಲ್ಪನೆʼʼ ಬೀಗಿತ್ತು
ದುಃಖ ದುಮ್ಮಾನಗಳ ಮಡಿಲಿನಲ್ಲಿ
ರುಧಿರ-ಕೆಂಗಾವಿನ ಬಿಸಿಯಲ್ಲಿ
ಸೋತು-ನಿರಾಶದಾಯಕ-ರೋಧನ
ಕಲ್ಪಿಸಲಾಗಲಿಕ್ಕಿಲ್ಲ ಅನುಭವವಿರದ ಮನ
ಬೆಂಬಿಡದ ಭಾವಗಳು ಬದುಕ ಬಿಡದೆ
ಭಾವಗಳ ಹಿಂದೆ ಓಡಿ ಹೋಗಿದ್ದೆ.
ಮನಸು ಮನಸುಗಳ ನಡುವೆ ಸೇತುವೆ
ಕಟ್ಟಲಾಗುವುದು ಹೇಗೆ?... ಕಲ್ಪನೆಯ ಗೊಡವೆ
ಹಂಚಿಕೆ ಸಿಕ್ಕಲಿಲ್ಲ ಆ ಬದುಕಲ್ಲೇ ನೆಲೆ ನಿಲ್ಲ ಬಲ್ಲ
ಬದುಕಿಗಾಗಿ ಪರದಾಡಿ ಕಲ್ಪಿಸಲಾಗದ ಕಲ್ಪನೆ ಸಲ್ಲ!
ಎಲ್ಲೆಲ್ಲು ಕಾರ್ಮುಗಿಲು ಕವಿದಿರಲು
ಮಳೆಯಿಲ್ಲ!ನಿರಾಶೆ!ಹತಾಶೆ ತುಂಬಲು
ನಿರೀಕ್ಷೆಯ ಉತ್ತುಂಗದಲ್ಲಿ ಕಾದು [ಲೆಂಕೋ (Lencho)] ಕುಳಿತು –
ಮಳೆ-ಬಂತು, ಅದರ ಪರಿವೆಯಿಲ್ಲ! ಕಲ್ಪನೆ ನಿರತ
ಊರು ಮುಳುಗಿತ್ತು-ಪೈರು ಸೊರಗಿತ್ತು
ತಾನಿರುವುದನ್ನು ಕಲ್ಪನೆಯ ಮನ ಕಂಡು ಮರುಗಿ ಹೋಗಿತ್ತು.
ಜೀವಿಗಳ ಉಸಿರಿದೋ ಕಲ್ಪನೆ
ಜರ್ಜರಿತ ಮನಕಿದು ಆಸರೆ-ಜುಮ್ಮನೆ
ಪಾಶ-ಸ್ಪರ್ಶ-ವಿರದ-ಹರುಷ-ಸಮರಸ
ಎಲ್ಲೆಲ್ಲೂ ಕಲ್ಪನೆಗಳ ಸಾಮರಸ್ಯ-ಅಬ್ಬಾ! ಏನೀ ಸಂತಸ
ವಸುಂಧರೆಯೊಳು ಸುಂದರ ನೀರೆ ಸುಧೆಯಾಗಿ ಹರಿದಳು
ನಿನಾದ-ಸಪ್ಪಳ ಪ್ರಕೃತಿ ಹೊಳೆದಿತ್ತು..ಪಟ ಪಟ ಓಡಿದಳು
ಸಾರಂಗ ನಯನಕ್ಕೆ ಸರಳು ಚುಚ್ಚಲು ಹೂಡಿದ್ದ ಸರಳು
ತಲುಪಲಿಲ್ಲ ಶಬ್ಧವೇದಿ ಕೊರಗಿದ್ದು ಕಲ್ಪನೆ-ಮನವೆಲ್ಲ ಪಾಳು
ಜೋಗಿ-ಜಂಗಮರ ಅಂತರಾಳ ಅರಿಯುವುದು ಕಲ್ಪನೆ
ನಾಸ್ತಿಕ ಮಹನೀಯರಿಗೆ ಕಲ್ಪಿಸಲಾಗದು ಈ ಕಲ್ಪನೆ
ಬಾಳೆಲ್ಲ ಸುಮಧುರ ಯಾತನೆ-ಸಂಕೀರ್ತನೆ
ಕಲ್ಪನೆಯ ಹೊಂಗಿರಣದಲ್ಲಿ ಮಾಡಿದ್ದೇ ಸಾಧನೆ!
ಎಲೆಗಳುದುರಿದ ಮರದಲ್ಲಿ ಮರಕುಟಿಕ ಹಕ್ಕಿ ಮನೆಮಾಡಿದ್ದೊಂದು ಕಲ್ಲನೆ
ಸಾಲ-ಸೋಲವನೆ ಮಾಡಿ ಸಾಲ ತೀರಿಸಲಾಗದೆ ಸಾವಿಗೀಡಾಗಿದ್ದೊಂದು ಕಲ್ಪನೆ
ಕಲ್ಪನೆ-ಪರಿಕಲ್ಪನೆಗಳೆಲ್ಲ ಸೇರಿ ಬದುಕ ಮೆಟ್ಟಿಲೇರಿ
ಒಂದು ಮನಸು ಒಂದು ಕನಸು ಪಣಕ್ಕಿಟ್ಟ ಹತ್ತು ಹಲವು ಕೂಸು..


ಎಲ್ಲಿ ನೋಡಿದರಲ್ಲಿ ಹಕ್ಕಿಗಳೇ                                                                              23-05-2002.
ಹಾರುತ್ತಿದ್ದವು...
ಕಣ್ಣಿಗೆ ಹಬ್ಬದ ಊಟವನ್ನೇ
ಹಾಕಿದ್ದವು...

ಹಕ್ಕಿಯಂತೆ ಹಾರಬೇಕು
ಜಗದಲ್ಲಿ-
ಯಾವ ಚಿಂತೆಯೂ ಇಲ್ಲ
ಅವಕ್ಕಿಲ್ಲಿ...

ಚಿಲಿಪಿಲಿ ಗುನುಗುತ್ತಾ
ಹಾರುತ್ತವೆ ಅವೆಲ್ಲ...
ಬಾನಲ್ಲಿ ಸುತ್ತೊಂದು
ಹೊಡೆಯುತ್ತವೆ ದಿನವೆಲ್ಲ...

ಸೂರ್ಯ ಹುಟ್ಟುವ ಮೊದಲೇ
ಗೂಡಿಂದ ಹಾರುತ್ತವೆ...
ಚಂದ್ರ ಹುಟ್ಟುವ ಮೊದಲೇ
ಗೂಡಿಗೆ ಬರುತ್ತವೆ...

ಸ್ವತಂತ್ರ ಎಂದರೆ ಇದೆಯೇನೇ!
ಹಕ್ಕಿಯಂತೆ ಹಾರೋ ಸೊಬಗೇನೇ-
ಎಲ್ಲರಿಗೂ ಬೇಕಿಂಥಹ ಉಲ್ಲಾಸ
ಇದ ನೋಡುತ್ತ ಅಂತೆಯೇ ಹಾರುವುದೇ ಸಂತಸ.
ಬೇಸಿಗೆಯ ಬಿರು ಬಿಸಿಲಿನ ಧಗೆಯಲ್ಲಿ
ಗೆಳೆಯರ ತಂಡ ಊರಾಚೆಯೆಡೆಯಲ್ಲಿ
ಊರ ಕಾಯ್ವ ಭಲೇ ಹನುಮಂತನ ಗುಡಿದಾಟಿ
ಹೋಗುವಾಗ ಮನದಲ್ಲಡಗಿತ್ತು ಅಚಲ ಭಕ್ತಿ.

ಬಿರು ಬಿಸಿಲಿನಾಗೆ ಮರೀಚಿಕೆಗಳಂತೆ
ಸಾಗಿತ್ತು ಕುರಿಗಳ ಹಿಂಡು
ಕುರುಬನ ಗೋಳು-
“ಹೇಗೆ ಸಾಕಲಿ! ಹಾಕಲಿಲ್ಲ ಕಾಲಲಿ ಚಪ್ಪಲಿ”
ಬಿಸಿಲಿನ ಬೇಗೆಗೆ ಸುಡುತಿದೆ ಬದುಕು
ದುಡುಕುವಂತಿಲ್ಲ, ಏನನೂ ಹುಡುಕುವಂತಿಲ್ಲ
ಬೆಂಗಾಡಿನಲ್ಲಿ ಬಾಳನು ನೂಕುವುದ ಕಂಡು
ಮಳೆರಾಯ ಸುರಿಸಬಾರದೇ ಇರುವ ನೀರನ್ನೆಲ್ಲಾ ಕೊಂಡು.


ಕೋಲನು ಹಿಡಿದು ಕರಡಿಯ ತಂದು
ಬಂದನು ಬಂದನು ಕರಡಿಯವನು
ಬನ್ನಿ ಬನ್ನಿ ಮಕ್ಕಳ ಕೂಡಿಸಿ,ಭಯವನು ಬಿಟ್ಟು
ಸುತ್ತಿಸಿ ಕರೆ ತರುವೆ ನಿಮ್ಮಯ ಮಗುವನ್ನು

ಕೈಯಲಿ ಕಡಗ ಹೆಗಲಲಿ ಕಂಬಳಿ
ಕಣ್ಣನು ಅರಳಿಸಿ ತೋರುವ ಮೋಜಿನ ಸುಳಿ
ಕರಡಿಯ ಕಂಡರೆ ಮಕ್ಕಳಿಗದೋ ಆಟ!
ಪುಕ್ಕಲ ಹುಡುಗರದೋ ಓಟವೋ ಓಟ.
ಉಂಟೇ ನಿಮ್ಮ ಮನೆಯಲ್ಲಿ
ಪುಟ್ಟ ಪಾಪುವ ತನ್ನಿರಿ ಇಲ್ಲಿ
ಕರಡಿಯ ಮೇಲೆ ಕುಳ್ಳಿರಿಸಿ ರಾಜನ ಮಾಡುವೆ
ಅಣ್ಣನ ಕಳಿಸಿ ಮಂತ್ರಿಯ ಮಾಡುವೆ

ಒಂದೋ ಎರಡೋ ಎನ್ನುವೆ
ಅಳುವುದು ನೀನು ನಿಲ್ಸಣ್ಣ
ಭಯ್ಯಾ..ಭಾಯಿ ಎನ್ನುವೆ
ಕರೆಯೋ ನಿನ್ನೆಡೆ ಕರಡಿಯನ್ನ

ಕರಡಿಯ ಕುಣಿತವ ನೋಡೋ ಜಾಣ
ನಾಳೆ ತೋರಲು ತರುವೆ ಮಂಗಣ್ಣ
ಜೈ ಎನ್ನು ಭಲ್ಲೂಕನಿಗೆ
ಅವನ ಮೇಲೆ ಕುಂತ ರಾಜನಿಗೆ!


ಕನ್ನಡ ನುಡಿ.                                                                                                        26-05-2001.
~~~~~~~~~~
ಬರೆದೆನೋ ಮುನ್ನುಡಿ
ನುಡಿ-ಕನ್ನಡದ ಸಿಹಿ ನುಡಿ
ಆಹಾ! ಅಮೃತದ ಸವಿ ನುಡಿ
ಓಹೋ! ಕನ್ನಡ ನುಡಿ ಕನ್ನಡಿ

ಕೀರ್ತಿಯು ನಿನ್ನದು ನೂರ್ಮಡಿ
ನೀ ನನ್ನ ತಾಯ್ನುಡಿ
ಆಹಾ! ಸವಿ ನಿನ್ನದು ರಸ ಗುಡಿ
ನಮ್ಮುಸಿರಿನ ಮಾರ್ನುಡಿ

ನಾಲಿಗೆಯ ತುದಿಯಲ್ಲಿ ಹೊರಳಾಡಿ
ಜಾರಿ ಬಿದ್ದರೂ ಓ ಜೀವನಾಡಿ
ನುಡಿವ ಮನಸಿಗದು ಹಿತನುಡಿ
ಅನುಕ್ಷಣವೂ ನಿನ್ನದು ಹೊನ್ನುಡಿ.

ಓ ನನ್ನ ಮನಸೇ!                                                                              26-05-2001 ಸಂಜೆ 7ಕ್ಕೆ.
~~~~~~~~~~~
ಕಣ್ಣೆರೆಡು ಕುರುಡಾಗಿ
ನಿನ್ನನ್ನು ಕಾಣದೇ ಪರಿತಪಿಸುತಿರುವೆ
ಓ ಮನಸೇ,
ಉಸಿರೆಲ್ಲ ಬಿಗಿದು
ನಿನ್ನನ್ನೇ ನೆನೆದು ಬಂದಿರುವೆ, ಮನಸೇ
ಓ ನನ್ನ ಮನಸೇ.

ಕನಸುಗಳೆಲ್ಲ ನೆನೆದು
ಮನದಲ್ಲೇ ಉಳಿದು
ನಿನ್ನನ್ನು ಕಾಣದು ಓ ಮನಸೇ
ಏನೆಂದುಕೊಂಡೆಯೋ ಓ ಮನಸೇ..
ಓ ನನ್ನ ಮನಸೇ

ಹೋರಾಟದ ಹಾದಿಯಿಲ್ಲ
ಉಸಿರಾಟದ ಸುಳಿವಿಲ್ಲ
ಭೋರ್ಗರೆತದ ಸೆಲೆಯಿಲ್ಲ, ಓ ಮನಸೇ
ಮನದಲ್ಲಿ ಮಿಡಿತವೇ ಇಲ್ಲ
ಓ ನನ್ನ ಮನಸೇ

ಭಯವೆಲ್ಲ ಮನೆಕಟ್ಟಿ ನನ್ನಲ್ಲಿ
ನಾ ಹೇಗೆ ಹೊರಬರಲಿ
ಎದೆಯಲ್ಲಿ ಕಂಪನ ತುಂಬಿರಲು ನನ್ನಲ್ಲಿ
ಮರೆಯಾಗಿ ಬಿಡುವೆ ಏಕೆ ಓ ಮನಸೇ,
ಧೈರ್ಯವ ನೀಡೆ ಓ ಮನಸೇ
ಓ ನನ್ನ ಮನಸೇ!

ಓ ನನ್ನ ಮನಸೇ ನನಗಾಗಿ ನೀ ಹರಸೇ...
ನನಗಾಗಿ ನೀ ಹರಸೇ ಓ ನನ್ನ ಮನಸೇ...

26-05-2001.

ಕಲ್ಪನೆಯ ತೀರದಲಿ ಹೊಸ ಉಸಿರು ತುಂಬಿರಲಿ
ಚಿಗುರಿನ ಚೈತ್ರವೇ ಸಿಂಧು
ಚಾಪದ ತಂಪಲಿ ಇಂದು...

ಧಾರೆ ತಾನು ಕಮರಿಗೆ ಧುಮುಕಿ
ಹರಿದು ಬಂದಿಹಳು
ಧರಣಿಯ ತಣಿಸಿಹಳು

ಈ ನಾಡು ನುಡಿಯಲಿ ಮುಳುಗಿದೆ ನನ ಮನಸು
ಈ ಮಣ್ಣಲಿ ಚಿಗುರಿದೆ ಹೊಸ ಕನಸು..

ಕನ್ನಡಮ್ಮನ ರಥದಲ್ಲಿ..
~~~~~~~~~~~~~~~
ಭುವನೇಶ್ವರಿಯ ರಥದೊಳು ಹೊನ್ನುಡಿ
ಕನ್ನಡ ಕಲರವ ಹೊಂದಿದೆ ಹಲ್ಮಿಡಿ
ಎಲ್ಲೆಡೆ ತುಂಬಿರುವ ನಲ್ನುಡಿ
                                             ಅದುವೇ ನಮ್ಮ ಕನ್ನಡ ನುಡಿ.

ಸಂಗಮ ಬಿಂಬದ ಬೆಳಕಿಂಡಿ
ತುಂಗೆ ಭದ್ರೆ ತೀರದ ಒಳನುಡಿ
ಕಾವೇರಿಯಿಂದಲಿ ಕನ್ನಡ ಗುಡಿ
                                              ಅದುವೇ ನಮ್ಮ ಕನ್ನಡ ನುಡಿ.

ನುಡಿ ಎಲೆ ಜೀವ ಎಂದಿಗೂ ಕನ್ನಡದ ಸವಿ ನುಡಿ.


ಹಿಂದಿ-ಕನ್ನಡ..
ಸಾರೆ ಲೋಗ್‌ ಕಹತೇ ಹೈಂ.ಬಂದರ್‌ ಹೂಂ ಮೈ!
ಇಸ್‌ ಸಂಸಾರ್‌ ಕಿ ಮಂದಿರ್‌ ಮೇಂ
ಉನಕೇ ಕಹನಾ ತೋ ಸಹಿ ಹೈಂ
ಹಾಂ!ಹಾಂ! ಮೈಂ ತೋ ಆವಾರಾ, ಘುಮ್ಮಕ್ಕಡ್‌ ಜೀವನ್‌ ಕೀ ಹರ್‌ ದಿಶಾ ಮೇಂ!....

ಭಾವೋದ್ವೇಗದ ಕಂಪನ ಎನಗಿರಲು
ಏಕಿಂತು ಸುಹಾಸ ಬೀರುವೆ ಓ ನಲ್ಲೇ!
ಮನಸಿನ ಸುತ್ತ ಸೊಂಪಾಗಿ ಸುತ್ತಿರಲು
ಆಸೆಗಳು,ಸುಮಧುರ ಭಾವಗಳು ನನ್ನಲ್ಲೇ
ಬೇರು ಸಹಿತ ಕಿತ್ತೆಸೆಯ ಬೇಕೆಂದಿರುವೆ ಏನು
ಅದು ಹೇಗೆ ಸಾಧ್ಯ? ನನ್ನವಳು ನೀನೆಂದು
ಮರೆತಿರುವಿಯೇನೇ...


ಕೋಟಿ ಕೋಟಿ ತಾರೆಗಳ ಮಧ್ಯೆ ಕಂಡಿದ್ದೊಂದು ಚಂದ್ರಮ
 ಆ ಮೊಗವ ನೋಡಿ ಮನದಲ್ಲೆಲ್ಲಲ್ಲೂ ಸಂಭ್ರಮ
ನಿನ್ನ ಕಂಡ ಮಧುರ ನೋಟ.. ನೋಟದಲ್ಲೇನೋ ಆಟ
ಬದುಕಿನ ಎಲ್ಲಾ ಆಟವ ಮರೆತು ಕಂಡೆ ಆ ಮೊದಲ ನೋಟ.


ಮನದಲ್ಲಿ ಹತ್ತಾರು  ಪ್ರೇಮ ಸ್ವರಗಳ ಬಿತ್ತರಿಸಿದೆ
ಓ ಕೋಮಲಾಂಗಿ
ನಿನ್ನ ಮನಸ್ಸೂ ಅಷ್ಟೇ ಕೋಮಲ ಎಂದು ತಿಳಿದೆ
ನನ್ನ ಪ್ರೀತಿಸೋ ಸಹೃದಯವೊಂದು ಕಾದಿದೆ ಎಂದು
ಈ ಪ್ರೇಮ ಕಹಳೆಯ ಸಪ್ತ ಸಾಗರಾಚೆಗೂ ಊದಿದೆ
ಎದೆಯ ಬಿರಿದ ಭಾವಗಳೆಲ್ಲ ನಾ ಮರೆಯುತ ಹೋದೆ.


ಹೀಗೊಂದು...                                                                                                         19-09-2001.
~~~~~~~~~~
ಬಿಟ್ಟು ಹೊಂಟಾರ ನಮ್ಮನೆಲ್ಲಾ
ಈ ಜನರ ಬಳಗಾನೆಲ್ಲಾ   |ಪ|

ಟಿ.ಸಿ.ಹೆಚ್.‌ ಮುಗ್ದಾದಂತ ಮರೆಬ್ಯಾಡ್ರೋ ನಮ್ಮ
ನೆನಪೊಂದು ಇರಲಿ ಮನದಾಗ!
ಮರೆಯ ಬ್ಯಾಡ್ರೋ ನಮ್ಮ ನೋಡಿದ್ರೂ ನೋಡದ್ಹಾಂಗ   
ಎಲ್ಲ್ಯಾದ್ರು ನಮ್ಮನ್ನ ಕಂಡ್ರ |1|

ಬಿಟ್ಟು ಹೊಂಟಾರ ಚಿಕ್ಕನಹಳ್ಳಿ ಈ ಪ್ರೀತಿಯ ಹೂಬಳ್ಳಿ.

ಮಾಸ್ತಾರಾಗಲು ಹೊಂಟೀರಪ್ಪ
ಕಾಣಿರಪ್ಪ ಮಕ್ಕಳನ್ನು ಪ್ರೀತಿಯಿಂದ
ಬಯ್ಯೋದು,ಹೊಡೆಯೋದು ನಿಮಗದು ಸಲ್ಲದು
ತಪ್ಪನ್ನ ಮಾಡೋದು ಬ್ಯಾಡ  |2|

ಬಿಟ್ಟು ಹೊಂಟಾರ ಈ ಊರ,ಆಗ್ಯಾದ ನಮಗ ಬೇಜಾರ.

ಎಲ್ರಿಗೂ ಗುರಿಯನ್ನ ನಾಲ್ಕು ಜನ ಒಪ್ಪೋ ಹಾಂಗ
ಎಲ್ರಿಗೂ ತೋರ್ಸಾಕ ಮಾಡ್ರಪ್ಪ ಮನಸ!
ಎಲ್ಲಾರೂ ಮೆಚ್ಚೋಹಾಂಗ ಹೇಳಿದ್ರ ಮಾತೊಂದ
ಕೇಳಬೇಕು ತಲೆ ತೂಗೋ ಹಾಂಗ  |3|

ಬಿಟ್ಟು ಹೊಂಟಾರ ಒಡನಾಟ ಮರೆತು ಬಿಟ್ಟಾರ ಹಾಸ್ಟೆಲ್‌ ಊಟ.

ಕೂಡಿ ಬಾಳೋ ಪಾಠ ಕಲ್ಸಿ ಮಾಡಿರಪ್ಪ ನಿಮ್ಮ ಕೆಲಸ
ನಮ್ಮ ದೇಶ ಏಳ್ಗೆ ಕಾಣೋ ಮಹಾ ಕೆಲಸ
ಜೊತೆಗೂಡಿ ದ್ವೇಷ ಮರೆಸಿ, ನಿಮ್ಮ ಕಾರ್ಯ ನೀವು ಮುಗಿಸಿ
ಬಾಳಿರೋ ಹಾಯಾಗಿ ಜಗದಾಗ.  |4|

ಬಿಟ್ಟು ಹೊಂಟಾರ ಚಿಕ್ಕನಹಳ್ಳಿ ಈ ಪ್ರೀತಿಯ ಹೂಬಳ್ಳಿ.


ಅವನು ಲಂಚಕ್ಕಾಗಿ ಇವನು ಮಂಚಕ್ಕಾಗಿ
ಅವನು ಸಂಚಿಗಾಗಿ ಇವನು ಕುಂಚಕ್ಕಾಗಿ
ಎಲ್ಲಾ ಬಡಿದಾಟ ಬದುಕಿನ ಹೋರಾಟ
ಎಲ್ಲಾ ಹೋರಾಟ ಬದುಕಿನ ಪರಿಪಾಠ

ಅವನು ಮೋಸಕ್ಕಾಗಿ ಇವನು ಸಹವಾಸಕ್ಕಾಗಿ
ಅವನು ಆಸೆಗಾಗಿ ಇವನು ಭಾಷೆಗಾಗಿ
ಎಲ್ಲಾ ನಲಿವುಗಳು ಬದುಕಿಗೆ ದಾರಿಗಳು
ಎಲ್ಲಾ ನೋವುಗಳು ಬದುಕಿಗೆ ಮುಳ್ಳುಗಳು

ಅವಳು ಪ್ರೀತಿಗಾಗಿ ಇವಳು ಗೆಳತಿಯಾಗಿ
ಅವಳು ಕಾಮಕ್ಕಾಗಿ ಇವಳು ಪ್ರೇಮಕ್ಕಾಗಿ
ಎಲ್ಲಾ ವಿಕಾರಗಳು ಜೀವನ ದಿಕ್ಕುಗಳು
ಎಲ್ಲಾ ರಾಗಗಳು ಬಾಳಿನ ರೋಗಗಳು.
ಹೂಂ! ಹೇಳಬೇಕೆನ್ನುವ ಕಥೆಗಳು ಸಾವಿರ
ಬರೆಯಬೇಕೆನ್ನುವ ಕವನಗಳು ಸಾವಿರ
ಲೋಕವೆಲ್ಲ ಹೀಗೆ ಸುಂದರ
ಪ್ರೀತಿಯೇ ಇಲ್ಲಿ ಪೂಜಾ ಮಂದಿರ.

ಸತ್ಯ ಹೋಗಿದೆ? ತ್ಯಾಗ ಹೇಗಿದೆ?
ಪ್ರೀತಿ ಅದು ಹೇಗಿದೆ?
ಮಾತು ಕೊಲ್ಲುತಿದೆ ಮೌನ ಮಾತಾಡುತಿದೆ
ಮಾತು ಕೊಲ್ಲುತಿದೆ ಮೌನ ಮಾತಾಡುತಿದೆ
ಉಸಿರಲ್ಲಿ ಮೌನ ತುಂಬಿದೆ
ಉಸಿರೆಲ್ಲ ಮೌನ ತಾ ತುಂಬಿದೆ...
 ಉಸಿರೆಲ್ಲ ಮೌನ ತಾ ತುಂಬಿದೆ...

ಈ ಪ್ರಾಣವಿರೋವರೆಗೂ ಜೀವನ ನಿಲ್ಲದು
ನೀರೆಲ್ಲ ಇರೋವರೆಗೂ ಕೆರೆಯದು ಬತ್ತದು
ಮಣ್ಣೆಲ್ಲ ಇರೋವರೆಗೂ ಭೂಮಿಯು ಅಳಿಯದು
ನೀತಿಯು ಇರೋವರೆಗೂ ಈ ವಿಶ್ವವು ನಿಲ್ಲದು
ಜಾತಿಗಳಿರೋವರೆಗೂ ಕೌರ್ಯವು ಮುಗಿಯದು
ಶಾಂತಿ ಇರದ ಹೊರತು ನೆಮ್ಮದಿ ದೊರೆಯದು
ಮಣ್ಣಲ್ಲಿ ಮಣ್ಣಾಗದ ಹೊರತು ಬಾಳ ಪಯಣ ಮುಗಿಯದು...

ಕಲ್ಲು ಕಲ್ಲುಗಳ ರಾಶಿಯ ನಡುವೆ
ಎತ್ತಲೂ ನೋಡಿರೆ ಮೌನವೇ
ನನ್ನ ಬಾಳ ಕಥೆಯು ಬೇಸರವೇ
ಶಾಂತಿ ತೀರ್ಥಕೆ ಬಂದಿಹೆ.

ಮಿನುಗುವ ತಾರೆಯು ಬಂದು ಕಾಣಲು
ಮೂಕ ಮರ್ಮರ ಕೇಳಿದೆ
ಸುತ್ತಲೆಲ್ಲ ಜನರ ಕೊರಳು
ಮೌನ ನದಿಗೆ ಹಾದಿದೆ.

ಕಾವ್ಯ.                                                                                                            01 ಆಗಸ್ಟ್‌ 2001.
~~~~~
ಕಾವ್ಯವಾಹಿನಿ . . ಕಲ್ಪನೆಯ ಜಲಧಾರಿಣಿ
ಈ ನನ್ನ ಭಾವನೆಗಳ ಸ್ಪೂರ್ತಿ ಹೊಂಗಿರಣೆ.
ಮೈಕೊಡವಿ ನಿಲ್ಲದೆ, ಹೊಂಗನಸು ಕಂಡರೂ,
ಮನಕೆ ದ್ರೋಹ ಮಾಡದೆ, ಮೌಢ್ಯಂಧಕಾರದಲಿ
ಮುಳುಗದೆ, ಪ್ರೇಮದಾs ಒಡಲಿಗೆ ಬಾ ಓ ಮನಸೇ!
ಸ್ನೇಹದ ಚಿತ್ತಾರ ಬರೆದು ಹಣತೆ
ಬೆಳಗಿದ ಓ ಹೃದಯ ಸಿಂಧುವೇ, ನನ್ನಂತರಾಳವ
ಶೋಧಿಸಿ...ಕುಳ್ಳಿರಿಸಿ ಹಾರದಿರು ಓ ಒಲವೇ!


ಜೊತೆಯಾದೆ ಜೊತೆಯಾದೆ
ನಿನ್ನವನೇ ನಾನಾದೆ...
ಈ ಪ್ರೇಮ ನಿನಗೆಂದೇ
ನೀಡೋಕೆ ನಾ ಬಂದೆ...
ನಿನಗೂ ನನಗೂ ಜೊತೆ ಮಾಡಿ
ದೂರ ಸರಿದಾ ಆ ಬ್ರಹ್ಮ-
ನಿನ್ನಲಿ ನಗುವಿನ ಮನೆ ಮಾಡಿ
ದಾರಿ ಬಿಟ್ಟನಮ್ಮ!
ನೀ ನನಗೇ ಸಿಗಲಿ ನಾ ನಿನಗೆ ಸಿಗಲಿ

ಯಾರಿಗೂ ಸಿಗಲೇ ಬಾರದೆಂದು-
ಯಾರ ಹಿಂದೆಯೂ ಬೀಳಲಿಲ್ಲ!
ನಿನ್ನ ಸನಿಹಕೆ ಬಂದ ಮೇಲೆ,
ಬೇರೆ ಯಾರನೂ ಬೇಡಲಿಲ್ಲ
ನಿನ್ನಲಿ ಅಂಥ ಮಾಯೆಯೇನು?!
ನಿನ್ನಲಿ ಅಂಥ ಛಾಯೆಯೇನು?!
ನಿನ್ನಲಿ ಅಂಥ ಪ್ರೀತಿಯೇನು?!
ಸವಿಯಲು ಹತ್ತಿರ ಬರುವೆನು ನಾನು.

ಯಾವ ಕವಿಯೂ ಬರೆಯದಾ ಕವನ
ನನ್ನ ಪಾಲಿಗೆ ನೀನೇ ಮೈನಾ...
ನಿನ್ನ ಒಡಲು ಒಲವಿನ ಕಡಲು
ನನಗೆ ಬೇಕು ಸಾವಿರ ಪಾಲು
ನಿನ್ನಲಿ ಅಂಥಹ ಆಸೆಯೇನು?!
ನಿನ್ನಲಿ ಅಂಥ ಭಾಷೆಯೇನು?!
ನಿನ್ನಲಿ ಅಂಥ ಪ್ರೇಮವೇನು?!
ಸವಿಯಲು ಬಂದೇ ಬರುವೆನು ನಾನು.


ಎದೆ ತುಂಬಿ ಹಾಡಾಗಿದೆ ಈ ದಿನ
ಒಲವಲ್ಲಿ ಗೂಡಾಗಿದೆ ಈ ಮನ
ಮಾತಲ್ಲಿ ಕತೆಯು, ಪ್ರೀತಿಯ ಲತೆಯು
ನನ್ನಲ್ಲಿ ಚಿಗುರೊಡೆದಿದೆ ಈ ಕ್ಷಣ
ಜೇನಂತೆ ಸವಿಯಾಗಿದೆ
ಓ ಹೋ ಹೋ ಹೋ... ನಿನ್ನ ಮನಸು ಬೇಕಾಗಿದೆ.

ಊಹೆಗೂ ನಿಲುಕದಾ ಈ ಪರಿಚಯ
ಊರಾಚೆಗೂ ನಿನ್ನ ನೆನಸಿದೆ
ಲೆಕ್ಕಕು ಸಿಗದಾ ಈ ದಿನಚರಿ
ನಿನ್ನ ಓಟವ ತಾ ಬೆರೆಸಿದೆ
ಈ ಲೋಕದಿ ನಿನ್ನ ಪ್ರೀತಿಯು
ಇತಿಹಾಸಕೆ ಅಧ್ಯಾಯವು
ಈ ಮಾಯೆಯ ಅಂಗೈಯಲಿ
ನಿನ್ನ ಆಸೆಯ ಚಿತ್ತಾರವು.

ಲೇಖಕನಾ ಲೇಖನಿಗೆ ಸಿಗದಂತಿದೆ
ನಿನ್ನ ರೂಪವು
ನಾವಿಕನಾ ದಿಕ್ಸೂಚಿಗೂ ಸಿಗದಂತಿದೆ
ನಿನ್ನ ದಾರಿಯು
ಆಕಾಶದಿ ನಿನ್ನ ತಾರೆಯು
ನನಗಾಗಿಯೇ ಹೊಳೆದಂತಿದೆ
ಹೂ ಮನಸ್ಸಿನ ಕರೆಯೋಲೆಯು
ನನಗೀಗ ಕಾದಂತಿದೆ.

No comments:

Post a Comment